ಆನೆಯೊಂದು ಖುಷಿಯಿಂದ ಡ್ಯಾನ್ಸ್ ಮಾಡಿದೆ ಎನ್ನಲಾದ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಈ ವಿಡಿಯೋ ಹಂಚಿಕೊಂಡಿದ್ದು, “ಕೇವಲ ಸನಾತನ ಧರ್ಮದಿಂದ ಮಾತ್ರ ಪ್ರಾಣಿಗಳನ್ನು ಖುಷಿಯಾಗಿಡಲು ಸಾಧ್ಯ” ಎಂದು ಬರೆದುಕೊಂಡಿದ್ದಾರೆ.
Only Sanatan Culture can keep animals happy. pic.twitter.com/5ObF0LqOsF
— Eminent Woke (@WokePandemic) February 2, 2024
ಎಬಿಪಿ ನ್ಯೂಸ್, ನ್ಯೂಸ್ 25 ಹಿಂದಿ, ಝೀ ನ್ಯೂಸ್ ಮಧ್ಯಪ್ರದೇಶ-ಛತ್ತೀಸ್ ಗಢ, ಟಿವಿ9 ಹಿಂದಿ ಸೇರಿದಂತೆ ಹಲವು ಮುಖ್ಯವಾಹಿನಿ ಮಾಧ್ಯಮಗಳು ಕೂಡ ಈ ವಿಡಿಯೋ ಹಂಚಿಕೊಂಡು ಆನೆ ಡ್ಯಾನ್ಸ್ ಮಾಡಿದ್ದಾಗಿ ಹೇಳಿವೆ.

ನ್ಯೂಸ್ 24 ಹಿಂದಿಯಲ್ಲಿ ಪ್ರಕಟಗೊಂಡ ಸುದ್ದಿ-ಲಿಂಕ್ ಇಲ್ಲಿದೆ

ಝೀ ನ್ಯೂಸ್ ಮಧ್ಯಪ್ರದೇಶ-ಛತ್ತೀಸ್‌ಗಢ ಸುದ್ದಿ ಪ್ರಕಟಿಸಿರುವುದು-ಲಿಂಕ್ ಇಲ್ಲಿದೆ

ಎಬಿಪಿ ನ್ಯೂಸ್ ಹಿಂದಿಯಲ್ಲಿ ಸುದ್ದಿ ಪ್ರಕಟಗೊಂಡಿರುವುದು-ಲಿಂಕ್ ಇಲ್ಲಿದೆ
ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದಲ್ಲಿ ನೋಡಲು ನಿಜವಾದ ಆನೆ ಡ್ಯಾನ್ಸ್ ಮಾಡಿದಂತೆ ಕಾಣುತ್ತಿದ್ದರೂ, ವಿಡಿಯೋ ಬಗ್ಗೆ ಸಂಶಯ ವ್ಯಕ್ತವಾದ ಹಿನ್ನೆಲೆ ನಾವು ಇದರ ಸತ್ಯಾಸತ್ಯತೆ ತಿಳಿಯುವ ಪ್ರಯತ್ನ ಮಾಡಿದ್ದೇವೆ.
ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ನಾವು ಈ ವಿಡಿಯೋ ಕುರಿತು ಹುಡುಕಾಡಿದಾಗ, ಇದೇ ರೀತಿಯಾದ ಹಲವು ಚಿತ್ರಗಳು ಮತ್ತು ವರದಿಗಳು ಕಂಡು ಬಂದಿವೆ. ಅನಿಲ್ ಆರ್ಟ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಕಾಣಿಸಿಕೊಂಡಿದ್ದು, ಅದನ್ನು ಪರಿಶೀಲಿಸಿದಾಗ ವಿಡಿಯೋದ ಅಸಲಿಯತ್ತು ಬಯಲಾಗಿದೆ.
ಅನಿಲ್ ಆರ್ಟ್ ಎಂಬ ಕೇರಳದ ಕಲಾವಿದರ ತಂಡ ಆನೆಗಳ ವೇಷವನ್ನು ಧರಿಸಿ ವಿವಿದಡೆಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಿದೆ. ಈ ತಂಡದಲ್ಲಿ ಆನೆಯ ವೇಷಧಾರಿಗಳೇ ಪ್ರಮುಖ ಆಕರ್ಷಣೆ. ಇಬ್ಬರು ಆನೆಯ ವೇಷಧಾರಿಗಳು ಚಂಡೆ, ವಾದ್ಯಕ್ಕೆ ಕುಣಿಯುತ್ತಾರೆ. ಈ ರೀತಿ ಕುಣಿದ ವಿಡಿಯೋವೊಂದು ವೈರಲ್ ಆಗಿದೆ. ಅದನ್ನು ಮಾಧ್ಯಗಳು ನಿಜವಾದ ಆನೆ ಡ್ಯಾನ್ಸ್ ಮಾಡಿದೆ ಎಂಬುವುದಾಗಿ ಸುಳ್ಳು ವರದಿ ಮಾಡಿವೆ.

ಅನಿಲ್ ಆರ್ಟ್ ಇನ್‌ಸ್ಟಾಗ್ರಾಂ ಖಾತೆಯನ್ನು ಪರಿಶೀಲಿಸಿದರೆ ಈ ವಿಡಿಯೋವನ್ನು ನೋಡಬಹುದು. ಲಿಂಕ್ ಇಲ್ಲಿದೆ
ಕೇರಳದ ತ್ರಿಶ್ಶೂರ್ ಜಿಲ್ಲೆಯ ಸ್ಥಳೀಯ ದೇವಸ್ಥಾನವೊಂದರಲ್ಲಿ ಪೂರಂ ಆಚರಣೆಯ ಭಾಗವಾಗಿ ಅಲ್ಲಿನ ಸೋಶಿಯಲ್ ಕ್ಲಬ್ ಎಲೆವೆನ್ಝ್ ಕಡವಲ್ಲೂರ್ (Elevenz Kadavallur) ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಲ್ಲಿ ಅನಿಲ್ ಆರ್ಟ್‌ನ ಕಲಾವಿದರು ಆನೆಯ ವೇಷ ಧರಿಸಿ ಡ್ಯಾನ್ಸ್ ಮಾಡಿದ್ದಾರೆ. ಹಾಗಾಗಿ ಇದು ನಿಜವಾದ ಆನೆ ಡ್ಯಾನ್ಸ್ ಮಾಡಿರುವುದು. ಸನಾತನ ಧರ್ಮದ ಪವಾಡ ಎಂಬ ಸಾಮಾಜಿಕ ಜಾಲತಾಣ ಸುದ್ದಿಗಳು ಸುಳ್ಳು.

ಕಳೆದ ನಾಲ್ಕು ದಿನಗಳ ಹಿಂದೆ, ಅಂದರೆ ಜನವರಿ 4, 2024ರಂದು ನಾವು ಮೇಲೆ ತಿಳಿಸಿದ Eminent Woke (Wokepandamic) ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಆಗಿತ್ತು. ಆಗ ಅದಕ್ಕೆ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಹಾಗೂ ಖ್ಯಾತ ಫ್ಯಾಕ್ಟ್‌ಚೆಕ್ಕರ್ ಮೊಹಮ್ಮದ್ ಝುಬೈರ್ ತಮಾಷೆಯ ಪ್ರತಿಕ್ರಿಯೆ ಕೊಟ್ಟಿದ್ದರು. “ವಿರೋಧಿಗಳು ಇದನ್ನು ಮನುಷ್ಯರು ಆನೆಯ ವೇಷ ಧರಿಸಿ ಡ್ಯಾನ್ಸ್ ಮಾಡಿರುವುದು ಎಂದು ಹೇಳಬಹುದು” ಎಂದಿದ್ದರು. ಈ ಮೂಲಕ ಆನೆ ಡ್ಯಾನ್ಸ್ ಮಾಡಿದೆ ಎಂಬುವುದು ಸುಳ್ಳು ಎಂದಿದ್ದರು.
ಝುಬೈರ್ ಅವರ ಈ ಪ್ರತಿಕ್ರಿಯೆಯನ್ನು Elevenz Kadavallur ಮತ್ತು anil arts ಜಂಟಿಯಾಗಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, “ಪೂರಂ ಹಬ್ಬಕ್ಕೆ Elevenz Kadavallur ಆಯೋಜಿಸಿದ್ದ ಕಲರ್‌ಫುಲ್ ವ್ಯವಸ್ಥೆಯ ವಿಡಿಯೋ 1.7 ಮಿಲಿಯನ್ ವೀಕ್ಷಣೆಯೊಂದಿಗೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗ್ತಿದೆ” ಎಂದು ಬರೆದುಕೊಂಡಿತ್ತು.

ಒಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳು ಮತ್ತು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ನಿಜವಾದ ಆನೆ ಡ್ಯಾನ್ಸ್ ಮಾಡಿರುವ ವಿಡಿಯೋ ಎಂಬ ಸುದ್ದಿಯು ಸುಳ್ಳು. ಡ್ಯಾನ್ಸ್ ಮಾಡಿರುವುದು ನಿಜವಾದ ಆನೆಯಲ್ಲ ಬದಲಾಗಿ, ಆನೆಯ ವೇಷ ಧರಿಸಿದ್ದ ಕಲಾವಿದರು ಎಂದು ಖಚಿತವಾಗಿದೆ.
ಇಲ್ಲಿ ಗಮನಾರ್ಹ ವಿಷಯವೆಂದರೆ, ರಾಷ್ಟ್ರೀಯ ಮಟ್ಟದ ಪ್ರಮುಖ ಮಾಧ್ಯಮಗಳು ಒಂದು ವೈರಲ್ ವಿಡಿಯೋವನ್ನು ಸರಿಯಾಗಿ ಪರಿಶೀಲನೆ ನಡೆಸದೆ ಜನರಿಗೆ ತಪ್ಪು ಮಾಹಿತಿ ನೀಡಿವೆ. ಇಂತಹ ಬೆಳವಣಿಗೆ ಅಪಾಯಕಾರಿ. ಆನೆಯ ವಿಡಿಯೋ ಸಮಾಜದಲ್ಲಿ ದೊಡ್ಡ ಮಟ್ಟದ ಪರಿಣಾಮ ಬೀರದಿದ್ದರೂ, ಇತರ ಗಂಭೀರ ವಿಷಯಗಳಲ್ಲಿ ಮಾಧ್ಯಮಗಳು ಹರಡುವ ಇಂತಹ ಸುಳ್ಳು ಸುದ್ದಿಗಳು ಸಮಾಜದ ಸ್ವಾಸ್ಥ್ಯ ಕೆಡಿಸುವ ಸಾಧ್ಯತೆಯಿದೆ.
Fact Check: ಮುಸ್ಲಿಮರಿಂದ ಹಿಂದೂ ಕುಟುಂಬದ ಹತ್ಯೆಯೆಂದು ಸುಳ್ಳು ಸುದ್ದಿ ಹಂಚಿಕೆ


