HomeUncategorizedಅತಿಕ್ರಮಣ ತೆರವು, ಅಭಿವೃದ್ಧಿ ನೆಪದಲ್ಲಿ ಬುಲ್ಡೋಝರ್‌ ಕಾರ್ಯಾಚರಣೆ: 2022-23ರಲ್ಲಿ ಸಂತ್ರಸ್ತರೆಷ್ಟು?

ಅತಿಕ್ರಮಣ ತೆರವು, ಅಭಿವೃದ್ಧಿ ನೆಪದಲ್ಲಿ ಬುಲ್ಡೋಝರ್‌ ಕಾರ್ಯಾಚರಣೆ: 2022-23ರಲ್ಲಿ ಸಂತ್ರಸ್ತರೆಷ್ಟು?

- Advertisement -
- Advertisement -

ಮೋದಿ ಆಡಳಿತದ ಭಾರತದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ 2022 ಮತ್ತು 2023ರಲ್ಲಿ ಅತಿ ಹೆಚ್ಚು  ಮನೆಗಳನ್ನು ತೆರವುಗೊಳಿಸಲಾಗಿದ್ದು, ಈ ಒಂದು ವರ್ಷದ ಅವಧಿಯಲ್ಲಿ 7.4 ಲಕ್ಷ ಜನರನ್ನು ಬಲವಂತವಾಗಿ ತೆರವುಗೊಳಿಸಲಾಗಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ.

ವಕೀಲರ ಗುಂಪು ಹೌಸಿಂಗ್ ಮತ್ತು ಲ್ಯಾಂಡ್ ರೈಟ್ಸ್ ನೆಟ್‌ವರ್ಕ್ (ಎಚ್‌ಎಲ್‌ಆರ್‌ಎನ್) ಈ ಕುರಿತು ‘ಭಾರತದಲ್ಲಿ 2022- 2023ರಲ್ಲಿ ಬಲವಂತದ ತೆರವು’ ಎಂಬ ಶೀರ್ಷಿಕೆಯ ವರದಿಯನ್ನು ಬಿಡುಗಡೆ ಮಾಡಿದೆ. ವರದಿಯಲ್ಲಿ ದೇಶಾದ್ಯಂತ 1.53 ಲಕ್ಷ ಮನೆಗಳನ್ನು ನೆಲಸಮಗೊಳಿಸಲಾಗಿದೆ ಎಂದು ಕೂಡ ಉಲ್ಲೇಖಿಸಲಾಗಿದೆ. 23 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ದತ್ತಾಂಶ ಸಂಗ್ರಹಣೆಯ ಮೂಲಕ HLRN ಈ ವರದಿಯನ್ನು ಸಿದ್ದಪಡಿಸಿದ್ದು, ತೆರವು ಕಾರ್ಯಾಚರಣೆಗಳಿಂದ ಮನೆಗಳನ್ನು ಕಳೆದುಕೊಂಡ ಅಥವಾ ಮನೆಗಳಿಂದ ಸ್ಥಳಾಂತರಗೊಂಡ ವ್ಯಕ್ತಿಗಳ ನಿಜವಾದ ಸಂಖ್ಯೆಯು ಇನ್ನೂ ಹೆಚ್ಚಿರಬಹುದು ಎಂದು ಅಂದಾಜಿಸಿದೆ.

ಎಲ್ಲಾ ತೆರವು ಕಾರ್ಯಾಚರಣೆಯ ವೇಳೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳನ್ನು ಅಧಿಕಾರಿಗಳು ಅನುಸರಿಸಿಲ್ಲ. ತೆರವು ಕಾರ್ಯಚರಣೆಯ ವೇಳೆ ವ್ಯಾಪಕವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಅನೇಕ ನಿದರ್ಶನವು ತೆರವು ಕಾರ್ಯಾಚರಣೆಯನ್ನು ತೀವ್ರತೆ ಮತ್ತು ಕ್ರೂರತೆಯಿಂದ ಮಾಡಲಾಗಿದೆ ಎಂದು ವರದಿಯು ಉಲ್ಲೇಖಿಸಿದೆ.

‘ಭಾರತದಲ್ಲಿ 2022- 2023ರಲ್ಲಿ ಬಲವಂತದ ತೆರವು’ ಎಂಬ ಶೀರ್ಷಿಕೆಯ ವರದಿಯು ನ್ಯಾಯಾಲಯದ ಆದೇಶಗಳ ಮೂಲಕ ಬಲವಂತದ ತೆರವು ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಹೇಳುತ್ತದೆ. ವಿಶ್ವಸಂಸ್ಥೆಯ ವ್ಯಾಖ್ಯಾನದಂತೆ HLRN ಬಲವಂತದ ತೆರವನ್ನು ಗುರುತಿಸಿದೆ. ಬಲವಂತದ ತೆರವು- ವ್ಯಕ್ತಿಗಳು, ಕುಟುಂಬಗಳು ಅಥವಾ ಸಮುದಾಯಗಳ ಇಚ್ಛೆಗೆ ವಿರುದ್ಧವಾಗಿ ಶಾಶ್ವತ ಅಥವಾ ತಾತ್ಕಾಲಿಕವಾಗಿ ತೆರವು ಮಾಡುವುದನ್ನು ಗಮನಿಸಿದೆ.

HLRN ವರದಿಯ ಪ್ರಕಾರ, 2022 ಮತ್ತು 2023ರಲ್ಲಿ, ಸುಮಾರು 3 ಲಕ್ಷ ಜನರನ್ನು ನ್ಯಾಯಾಲಯದ ಆದೇಶಗಳ ಬಳಿಕ ಅವರ ಮನೆಗಳಿಂದ ತೆರವು ಮಾಡಲಾಗಿದೆ. 2022ರಲ್ಲಿ ನ್ಯಾಯಾಲಯದ ಆದೇಶಗಳು 33,360ಕ್ಕೂ ಹೆಚ್ಚು ಜನರ ತೆರವು ಕಾರ್ಯಾಚರಣೆಗೆ ಕಾರಣವಾಯಿತು ಮತ್ತು 2023ರಲ್ಲಿ ಈ ಅಂಕಿ ಅಂಶವು ಸುಮಾರು 2.6 ಲಕ್ಷವನ್ನು ತಲುಪಿದೆ ಎಂದು ವರದಿಯು ತಿಳಿಸಿದೆ.

ಈ ಹಿಂದೆ, ವಸತಿ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳಲ್ಲಿ ಪರಿಹಾರವನ್ನು ಒದಗಿಸಲು ನ್ಯಾಯಾಲಯಗಳು ರಚನಾತ್ಮಕವಾಗಿ ಕಾನೂನನ್ನು ವ್ಯಾಖ್ಯಾನಿಸಿವೆ, ಸುಪ್ರೀಂ ಕೋರ್ಟ್ ಮತ್ತು ಹಲವಾರು ರಾಜ್ಯ ಉಚ್ಚ ನ್ಯಾಯಾಲಯಗಳು ವಸತಿ ಅಥವಾ ಆಶ್ರಯದ ಹಕ್ಕನ್ನು ಸಮರ್ಥಿಸಿದೆ ಎಂದು ವರದಿಯು ಉಲ್ಲೇಖಿಸಿದೆ.

ಸುದಾಮ ಸಿಂಗ್ ವರ್ಸಸ್ ದೆಹಲಿ ಸರ್ಕಾರ (2010) ಮತ್ತು ಅಜಯ್ ಮಾಕೆನ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ (2019) ದಲ್ಲಿನ ಮಹತ್ವದ ತೀರ್ಪುಗಳು ಯಾವುದೇ ಬಲವಂತದ ತೆರವು ಕಾರ್ಯಾಚರಣೆ ನಡೆಸುವ ಮೊದಲು ಸಮೀಕ್ಷೆಯನ್ನು ನಡೆಸಲು ಮತ್ತು ಪುನರ್ವಸತಿಯನ್ನು ಒದಗಿಸುವ ಕರ್ತವ್ಯವನ್ನು ಅಧಿಕಾರಿಗಳು ವಹಿಸಬೇಕು. ಆದರೆ ಅದನ್ನು ಮಾಡಿಲ್ಲ ಎನ್ನುವುದು ಕಂಡು ಬಂದಿದೆ.

ವರದಿಯ ಪ್ರಕಾರ, 2022ರಲ್ಲಿ ದೇಶದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸುಮಾರು 178 ತೆರವು ಕಾರ್ಯಾಚರಣೆಗಳು ನಡೆದಿವೆ. ಇದರ ಪರಿಣಾಮವಾಗಿ 46,371 ಮನೆಗಳನ್ನು ಕೆಡವಲಾಯಿತು ಮತ್ತು 2.3ಲಕ್ಷ ಜನರನ್ನು ಬಲವಂತವಾಗಿ ಸ್ಥಳಾಂತರಿಸಲಾಗಿದೆ. 2023ರಲ್ಲಿ 146 ತೆರವು ಕಾರ್ಯಾಚರಣೆ ನಡೆದಿದೆ. ಇದರ ಪರಿಣಾಮವಾಗಿ 107, 499 ಮನೆಗಳನ್ನು ಕೆಡವಲಾಯಿತು ಮತ್ತು ಕನಿಷ್ಠ 5.15 ಲಕ್ಷ ಜನರನ್ನು ಬಲವಂತವಾಗಿ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದೆ. 2023ರ ಈ ಅಂಕಿ-ಅಂಶಗಳು ಕಳೆದ ಏಳು ವರ್ಷಗಳಲ್ಲಿ ದಾಖಲಾದ ಅತ್ಯಧಿಕ ಅಂಕಿ ಅಂಶವಾಗಿದೆ. ಈ ಅಂಕಿ-ಅಂಶಗಳು 2023ರಲ್ಲಿ ಪ್ರತಿದಿನ ಕನಿಷ್ಠ 294 ಮನೆಗಳ ಧ್ವಂಸ  ಮತ್ತು ಪ್ರತಿ ಗಂಟೆಗೆ 58 ಜನರ ಸ್ಥಳಾಂತರವನ್ನು ಬಿಂಬಿಸುತ್ತದೆ ಎಂದು HLRN ಲೆಕ್ಕಾಚಾರವು ಉಲ್ಲೇಖಿಸಿದೆ. ಆದರೆ 2022ರಲ್ಲಿ ಪ್ರತಿದಿನ ಕನಿಷ್ಠ 129 ಮನೆಗಳ ಧ್ವಂಸ  ಮತ್ತು ಪ್ರತಿ ಗಂಟೆಗೆ 25 ಜನರನ್ನು ತೆರವು  ಮಾಡಲಾಗಿದೆ ಎಂಬವುದನ್ನು ಅಂಕಿ-ಅಂಶಗಳು ಬಿಂಬಿಸುತ್ತದೆ ಎಂದು ವರದಿಯು ತಿಳಿಸಿದೆ.

ದೆಹಲಿಯ ತುಘಲಕಾಬಾದ್, ಅಹಮದಾಬಾದ್‌ನ ರಾಮ ಪಿರ್ ನೊ ಟೆಕ್ರೊ ಮತ್ತು ಫೈಜಾಬಾದ್-ನಯಾ ಘಾಟ್  ಗಳಲ್ಲಿನ ತೆರವು ಕಾರ್ಯಾಚರಣೆಯು ಜನರ ದೊಡ್ಡ ಗುಂಪಿನ ಮೇಲೆ ಪರಿಣಾಮವನ್ನು ಬೀರಿದೆ. HLRN ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ 59% ತೆರವು ಕಾರ್ಯಾಚರಣೆಯನ್ನು ‘ಸ್ಲಂ ಅಥವಾ ಭೂ ತೆರವು’ ಅಥವಾ ‘ಅತಿಕ್ರಮಣ’ ಅಥವಾ ‘ನಗರದ ಸೌಂದರ್ಯೀಕರಣ’ ನೆಪದಲ್ಲಿ ಮಾಡಲಾಗಿದೆ. 2023ರಲ್ಲಿ 2.9 ಲಕ್ಷಕ್ಕೂ ಹೆಚ್ಚು ಮತ್ತು 2022ರಲ್ಲಿ 1.43 ಲಕ್ಷಕ್ಕೂ ಹೆಚ್ಚು ಜನರನ್ನು ಈ ಉದ್ದೇಶದಿಂದ ತೆರವು ಮಾಡಲಾಗಿದೆ. ಇದಲ್ಲದೆ  ಸ್ಮಾರ್ಟ್ ಸಿಟಿ ಯೋಜನೆ, ಮೂಲಸೌಕರ್ಯ ಮತ್ತು ಇತರ ಅಭಿವೃದ್ಧಿ ಯೋಜನೆಯ ನೆಪದಲ್ಲಿ ತೆರವು ಕಾರ್ಯಾಚರಣೆಯನ್ನು ಮಾಡಲಾಗಿದೆ ಎಂದು ವರದಿಯು ತಿಳಿಸಿದೆ.

ಇದನ್ನು ಓದಿ: SFI ನಾಯಕ ಅಭಿಮನ್ಯು ಹತ್ಯೆ ಪ್ರಕರಣ: ನ್ಯಾಯಾಲಯದಿಂದ ದಾಖಲೆಗಳು ನಾಪತ್ತೆ!

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೈಲಿನಲ್ಲಿದ್ದ KPSC ಅಧ್ಯಕ್ಷರ ಭೇಟಿಯಾಗಿದ್ದೇಕೆ HDK? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ಅವರು ತಾರ್ಕಿಕ ಸ್ಪಷ್ಟನೆ ನೀಡುವ ಬದಲು, ಜಾರಿಕೊಳ್ಳುವ ರೀತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು...

ನೇಪಾಳ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1643 ಮಕ್ಕಳ ಪ್ರಾಣ

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 700ರ ಗಡಿ ದಾಟಿದೆ. 2,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರಕೃತಿ ತನ್ನ...

ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಹಿಂಪಡೆಯುವಿಕೆ ಪರಿಶೀಲನೆ: ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳನ್ನು ಪರಿಶೀಲಿಸಿ, ಅವುಗಳನ್ನು ಹಿಂಪಡೆಯುವ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಲು ಕರ್ನಾಟಕ ಸರ್ಕಾರವು ಆರು ಮಂದಿ ಸಚಿವರನ್ನೊಳಗೊಂಡ ಸಂಪುಟ ಉಪಸಮಿತಿಯನ್ನು ರಚಿಸಿದೆ. ಸರ್ಕಾರದ ಅಧಿಕೃತ...

ಉದ್ಯಾನವನ ನುಂಗುವ ಕಾಯ್ದೆ ತಿದ್ದುಪಡಿ : ಸರ್ಕಾರದ ವಿರುದ್ಧ ಸಿಡಿದೆದ್ದ ಬೆಂಗಳೂರಿಗರು

ಕರ್ನಾಟಕ ವಿಧಾನಮಂಡಲವು ಸರ್ಕಾರಿ ಉದ್ಯಾನವನಗಳು ಮತ್ತು ತೋಟಗಳ ಕೆಲವು ಭಾಗಗಳನ್ನು ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗಾಗಿ ಬಳಸಲು ಅನುಮತಿಸುವ ಕಾಯ್ದೆ ತಿದ್ದುಪಡಿಯನ್ನು ಅಂಗೀಕರಿಸಿದ ನಂತರ, ಬೆಂಗಳೂರಿನ ಉದ್ಯಾನವನಗಳು ಹೊಸ ರಾಜಕೀಯ ಮತ್ತು ಪರಿಸರ ವಿವಾದದ...

ನೇಪಾಳ–ಟಿಬೆಟ್ ಭೀಕರ ಪ್ರವಾಹ: ನೇಪಾಳದಲ್ಲಿ 734 ಸಾವು, 2,498 ಮಂದಿ ನಾಪತ್ತೆ; ಒಟ್ಟು ಸಾವಿನ ಸಂಖ್ಯೆ 750ಕ್ಕೆ ಏರಿಕೆ!

ನೇಪಾಳ–ಚೀನಾ ಗಡಿ ಪ್ರದೇಶದಲ್ಲಿ ಹಿಮನದಿ ಕುಸಿತದಿಂದ ಉಂಟಾದ ಭೀಕರ ಪ್ರವಾಹ ಮತ್ತು ಅವಶೇಷ ಪ್ರವಾಹದಲ್ಲಿ ನೇಪಾಳದಲ್ಲಿ ಇದುವರೆಗೆ 734 ಮಂದಿ ಮೃತಪಟ್ಟಿದ್ದು, 2,498 ಮಂದಿ ನಾಪತ್ತೆಯಾಗಿದ್ದಾರೆ. ಚೀನಾದ ಟಿಬೆಟ್ ಪ್ರದೇಶದಲ್ಲಿ 16 ಮಂದಿ...

“ಇಂತಹ ಸೌಹಾರ್ದತೆಯ ಮಾತುಗಳನ್ನು ಅಮೆರಿಕಾದಲ್ಲಲ್ಲ, ಭಾರತಕ್ಕೆ ಬಂದು ಇಲ್ಲಿನ ಜನರಿಗೆ ಹೇಳಿ!” – ಭಾಗವತ್‌ಗೆ ವಿರೋಧ ಪಕ್ಷಗಳ ಸವಾಲು

ನ್ಯೂಯಾರ್ಕ್/ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಅವರು ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ನೀಡಿರುವ ಸೌಹಾರ್ದತೆಯ ಹೇಳಿಕೆ ಈಗ ಭಾರತೀಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ವಿದೇಶಿ ಮಣ್ಣಿನಲ್ಲಿ ಮುಸ್ಲಿಂ ಸಮುದಾಯದ ಪರವಾಗಿ...

ಸ್ವದೇಶದಲ್ಲಿ ಹಿಂದೂ ರಾಷ್ಟ್ರ, ವಿದೇಶದಲ್ಲಿ ಒಳಗೊಳ್ಳುವಿಕೆ ಮಂತ್ರ : ಆರ್‌ಎಸ್‌ಎಸ್‌ ದ್ವಂದ್ವ ನಿಲುವು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ

"ಭಾರತದಲ್ಲಿ ಮುಸ್ಲಿಮರು ಇರಬಾರದು ಎನ್ನುವವನು ಹಿಂದೂ ಅಲ್ಲ" ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅಮೆರಿದಲ್ಲಿ ನೀಡಿರುವ ಹೇಳಿಕೆಯ ಸುತ್ತ ಭಾರೀ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ...

ಮಹಾರಾಷ್ಟ್ರ | ಬುಡಕಟ್ಟು ವಿದ್ಯಾರ್ಥಿಗಳ ಹೋರಾಟಕ್ಕೆ ಜಯ : ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಒಪ್ಪಿದ ಸರ್ಕಾರ

ಮಹಾರಾಷ್ಟ್ರದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಪಂಗಡದ (ಎಸ್‌ಟಿ) ಅಭ್ಯರ್ಥಿಗಳಿಗೆ ಆದ್ಯತೆ ಹಾಗೂ ವಸತಿ ಶಾಲೆಗಳ ಮೂಲಸೌಕರ್ಯ ಸುಧಾರಣೆಗೆ ಆಗ್ರಹಿಸಿ ಕಳೆದ 16 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಬುಡಕಟ್ಟು ವಿದ್ಯಾರ್ಥಿಗಳ ಸುದೀರ್ಘ ಹೋರಾಟಕ್ಕೆ...

ಖರ್ಗೆ ಭಾಷಣ ಸ್ಥಳದ ‘ಶುದ್ಧೀಕರಣ’: ಬಿಜೆಪಿ-RSS, ಸಂಘ ಪರಿವಾರದ ವಿಷಪೂರಿತ ಮನಸ್ಥಿತಿ ಮಾಜಿ ಸಿಎಂ ಸಿದ್ದರಾಮಯ್ಯ

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ, ಬಲಪಂಥೀಯ ಸಂಘಟನೆಯೊಂದು ಆ ಮೈದಾನದಲ್ಲಿ 'ಶುದ್ಧೀಕರಣ' ಕೈಗೊಂಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ...

ಸೋನಿಯಾ ಗಾಂಧಿ ಆತ್ಮಕಥೆ ವಿವಾದ | ಮೋದಿ, ಆರ್‌ಎಸ್‌ಎಸ್, ಚೀನಾ ನುಸುಳುವಿಕೆ ಕುರಿತ ಭಾಗಗಳನ್ನು ತೆಗೆದುಹಾಕಲು ಪೆಂಗ್ವಿನ್ ಇಂಡಿಯಾ ಕೋರಿತ್ತು : ಕಾಂಗ್ರೆಸ್ ಆರೋಪ

ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮತ್ತು ಅವರ ಅಧಿಕಾರಾವಧಿಯಲ್ಲಿ ನಡೆದ ಭಾರತೀಯ ಭೂಪ್ರದೇಶದ ಮೇಲಿನ ಚೀನಾದ ಆಕ್ರಮಣದ ನಿರ್ವಹಣೆಗೆ ಸಂಬಂಧಿಸಿದ ಭಾಗಗಳನ್ನು ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ "ಬೆಲಾಂಗಿಂಗ್: ಎ ಜರ್ನಿ...