Homeಕರ್ನಾಟಕನಿರ್ದೇಶಕರ ಕೊಠಡಿ ಬಿಟ್ಟುಕೊಡದೆ ದಲಿತ ಅಧಿಕಾರಿಗೆ ಕಿರುಕುಳ; ದೂರದರ್ಶನ ಕಚೇರಿ ಕಾರಿಡಾರ್‌ನಲ್ಲಿ ಕುಳಿತು ಕೆಲಸ ಮಾಡುತ್ತಿರುವ...

ನಿರ್ದೇಶಕರ ಕೊಠಡಿ ಬಿಟ್ಟುಕೊಡದೆ ದಲಿತ ಅಧಿಕಾರಿಗೆ ಕಿರುಕುಳ; ದೂರದರ್ಶನ ಕಚೇರಿ ಕಾರಿಡಾರ್‌ನಲ್ಲಿ ಕುಳಿತು ಕೆಲಸ ಮಾಡುತ್ತಿರುವ ಭಾಗ್ಯವಾನ್

- Advertisement -
- Advertisement -

ಬೆಂಗಳೂರು ದೂರದರ್ಶನ ಕೇಂದ್ರಕ್ಕೆ ಉಪ ಮಹಾನಿರ್ದೇಶಕರಾಗಿ (ಕಾರ್ಯಕ್ರಮ ವಿಭಾಗ) ಕಳೆದ ಮೂರು ತಿಂಗಳ ಹಿಂದೆ ದಲಿತ ಸಮುದಾಯಕ್ಕೆ ಸೇರಿದ ಅಧಿಕಾರಿ ಭಾಗ್ಯವಾನ್ ಎಂಬುವವರನ್ನು ನೇಮಿಸಲಾಗಿದೆ. ಆದರೆ, ನಿರ್ದೇಶಕರಿಗೆ ಮೀಸಲಾಗಿರುವ ಕೊಠಡಿಯನ್ನು ಅವರಿಗೆ ನೀಡದೆ, ಸಿಬಿಐ ತನಿಖೆ ಎದುರಿಸುತ್ತಿರುವ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಕಿರುಕುಳ ನೀಡುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೀದರ್ ಮೂಲದ ಭಾಗ್ಯವಾನ್ ಅವರು ದಲಿತ ಸಮುದಾಯಕ್ಕೆ ಸೇರಿರುವ ಕನ್ನಡಿಗ ಅಧಿಕಾರಿಯಾಗಿದ್ದಾರೆ. ಕೇಂದ್ರ ಸರ್ಕಾರ ಸ್ವಾಮ್ಯದ ದೂರದರ್ಶನ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಅಧಿಕಾರಿಯಾಗಿ ಕಳೆದ 26 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಕಳೆದ ನಲ್ವತ್ತು ವರ್ಷಗಳಿಂದ ಕಾರ್ಯಕ್ರಮ ನಿರ್ದೇಶಕರಿಗೆಂದು ಮೀಸಲಿಟ್ಟಿದ್ದ ಕೊಠಡಿಯನ್ನು ಅವರಿಗೆ ನೀಡದೆ, ಕೆಲಸ ಮಾಡಲು ಅಗತ್ಯವಿರುವ ಕಂಪ್ಯೂಟರ್ ಸಹ ಒದಗಿಸದೆ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ‘ನಾನುಗೌರಿ.ಕಾಮ್’ ಪ್ರತಿನಿಧಿ ಜತೆಗೆ ಮಾತನಾಡಿದ ಅವರು, “ಚಂದನ ವಾಹಿನಿ ಕಾರ್ಯಕ್ರಮ ವಿಭಾಗದ ನಿರ್ದೇಶಕನಾಗಿ ನಾನು ಇಲ್ಲಿಗೆ ಬಂದು ಮೂರು ತಿಂಗಳಾಗಿದೆ; ನಾನು ಬಂದಾಗ ಇಲ್ಲಿನ ಇಂಜಿನಿಯರ್ ಮಂಗಲಗಿ ಎಂಬುವರಿಗೆ ಕಾರ್ಯಕ್ರಮ ವಿಭಾಗದ ಹೆಚ್ಚುವರಿ ಜವಾಬ್ದಾರಿ ನೀಡಿದ್ದರು. ಮೂಲತಃ ಅವರು ಇಂಜಿನಿಯರ್ ಆಗಿದ್ದು, ಚೆನ್ನೈ ಅಥವಾ ನಮ್ಮ ರೇಡಿಯೋ ವಿಭಾಗದಲ್ಲಿ ಅವರಿಗಾಗಿಯೇ ಮೀಸಲಿರುವ ಎರಡು ಪ್ರತ್ಯೇಕ ಕೊಠಡಿಗಳಿದ್ದು ಅಲ್ಲಿ ಕೂರಬೇಕು. ಅದೆಲ್ಲಾ ಬಿಟ್ಟು ಅವರು ದೂರದರ್ಶನದ ನಿರ್ದೇಶಕರಿಗೆ ಮೀಸಲಿರುವ ಕಚೇರಿಯಲ್ಲಿ ಪಟ್ಟುಹಿಡಿದು ಕುಳಿತಿದ್ದಾರೆ” ಎಂದರು.

“ನಿರ್ದೇಶಕರ ಹುದ್ದೆ ಖಾಲಿ ಇದ್ದಾಗ ಕುಳಿತುಕೊಳ್ಳಲಿ ಪರವಾಗಿಲ್ಲ.. ನಾನು ಅಧಿಕಾರ ವಹಿಸಿಕೊಂಡ ನಂತರವಾದರೂ ಕಚೇರಿ ಬಿಟ್ಟುಕೊಡಬೇಕಿತ್ತು. ಆದರೆ, ಅವರು ಬಿಟ್ಟುಕೊಡುತ್ತಿಲ್ಲ. ಅವರಿಗೆ ಬೆಂಬಲವಾಗಿ ನಮ್ಮ ವಿಭಾಗದ ಮುಖ್ಯಸ್ಥರಾದ ಮಾಧವರೆಡ್ಡಿಯವರು ನಿಂತಿದ್ದಾರೆ. ಈ ಬಗ್ಗೆ ಕೇಳಿದರೆ, ‘ಅವರು ಬಿಟ್ಟುಕೊಡದಿದ್ದರೆ ನಾನೇನು ಮಾಡಲಿ’ ಎನ್ನುತ್ತಾರೆ. ಮಂಗಲಗಿ ಅವರನ್ನು ಕೇಳಿದರೆ ‘ಮಾಧವರೆಡ್ಡಿಯವರನ್ನು ಕೇಳಿ’ ಎನ್ನುತ್ತಾರೆ. ಕಳೆದ ಮೂರು ತಿಂಗಳಿನಿಂದ ನನಗೆ ಇದೇ ರೀತಿಯ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ನಮ್ಮ ಮೇಲಾಧಿಕಾರಿಗಳಿಗೆ ಪತ್ರ ಬರೆದರೂ ಅವರಿಂದಲೂ ಈವರೆಗೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಎಷ್ಟೇ ಪ್ರಯತ್ನ ಮಾಡಿದರೂ ನಿರ್ದೇಶಕರಿಗೆ ಮೀಸಲಿರುವ ಕಚೇರಿಯಲ್ಲಿ ಕುಳಿತುಕೊಳ್ಳಲು ಬಿಡುತ್ತಿಲ್ಲ. ನನಗಾಗಿ ಮೀಸಲಿರುವ ಕೊಠಡಿ ಬಿಟ್ಟು, ಬೇರೆ ಯಾವುದೋ ಒಂದು ಕೊಠಡಿ ಕೊಡುತ್ತಿದ್ದಾರೆ. ಆದರೆ, ನಾನು ಅದನ್ನು ಬೇಡ ಎಂದು ತಿರಸ್ಕರಿಸಿದ್ದೇನೆ. ಆ ಕೊಠಡಿಯನ್ನೂ ನನಗೆ ಮೂರು ತಿಂಗಳ ನಂತರ ಅಧಿಕೃತವಾಗಿ ನೀಡಿದ್ದಾರೆ” ಎಂದು ತಮಗಾಗಿರುವ ಅನ್ಯಾಯದ ಬಗ್ಗೆ ಅವರು ವಿವರಿಸಿದರು.

ಕಚೇರಿ ಕಾರಿಡಾರ್‌ನಿಂದಲೆ ಕಾರ್ಯನಿರ್ವಹಣೆ

“ಕಳೆದ ಮೂರು ತಿಂಗಳಿನಿಂದ ನಾನು ಕಚೇರಿಯ ಕಾರಿಡಾರ್‌ನಲ್ಲೇ ಕೂತು ಕೆಲಸ ಮಾಡುತ್ತಿದ್ದೇನೆ. ಸಂದರ್ಶಕರು ಕಾಯುವ (ವಿಸಿಟರ್ಸ್‌ ವೇಯ್ಟಿಂಗ್ ಹಾಲ್) ಹಾಲ್‌ನಲ್ಲೇ ಕುಳಿತು ಕಚೇರಿ ಕೆಲಸ ಮಾಡುತ್ತಿದ್ದೇನೆ. ಕಂಪ್ಯೂಟರ್ ಸೇರಿದಂತೆ ನನ್ನ ಕೆಲಸಕ್ಕೆ ಅನುಕೂಲವಾಗುವಂತ ಯಾವುದೇ ಅಗತ್ಯ ವಸ್ತುಗಳನ್ನು ಒದಗಿಸಿಲ್ಲ. ಸಹೋದ್ಯೋಗಿಗಳ ಬಳಿ ಮನವಿ ಮಾಡಿಕೊಂಡು, ಪ್ರತಿದಿನ ಒಬ್ಬೊಬ್ಬರ ಕಂಪ್ಯೂಟರ್ ಬಳಸಿಕೊಂಡು ಕೆಲಸ ಮಾಡುತ್ತಿದ್ದೇನೆ; ಪ್ರತಿನಿತ್ಯ ನನ್ನ ಕೆಲಸವನ್ನು ಮುಗಿಸಿಯೇ ಮನೆಗೆ ತೆರಳುತ್ತಿದ್ದೇನೆ” ಎಂದರು.

“ಈ ಮುಂಚೆ ನಾನು ದೂರದರ್ಶನ ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದೆ; ಅಲ್ಲಿಂದ ಬಡ್ತಿ ಪಡೆದು ಬೆಂಗಳೂರು ಕೇಂದ್ರದಲ್ಲಿ ಕಾರ್ಯಕ್ರಮ ವಿಭಾಗದ ಮುಖ್ಯಸ್ಥನಾಗಿದ್ದೇನೆ. ಕಳೆದ 26 ವರ್ಷದಿಂದ ದೂರದರ್ಶನದಲ್ಲಿ ಕೆಲಸ ಮಾಡುತ್ತಿದ್ದು, ದಲಿತ ಎನ್ನುವ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಅದೇ ಉದ್ದೇಶಕ್ಕೆ, ಎಲ್ಲರೂ ನನಗೆ ಕಚೇರಿ ನೀಡಬಾರದು ಎಂದು ನಿರ್ಧರಿಸಿದ್ದಾರೆ; ಎಲ್ಲ ರೀತಿಯ ನಿಯಮಗಳನ್ನು ಅವರು ಉಲ್ಲಂಘಿಸಿದ್ದಾರೆ” ಎಂದು ಅವರು ಬೇಸರ ಹೊರಹಾಕಿದರು.

“ನನಗೆ ಕಿರುಕುಳ ನೀಡುತ್ತಿರುವ ಇಬ್ಬರೂ ಅಧಿಕಾರಿಗಳ ವಿರುದ್ಧ ಸಿಬಿಐ ವಿಚಾರಣೆ ನಡೆಸುತ್ತಿದೆ. ನಮ್ಮ ದೂರದರ್ಶನ ನಿಯಮಗಳ ಪ್ರಕಾರ, ವಿಚಾರಣೆಗೆ ಒಳಪಟ್ಟಿರುವ ಯಾವುದೇ ಅಧಿಕಾರಿಗೆ ಹುದ್ದೆ ನೀಡಬಾರದು ಎಂದು ಹೇಳುತ್ತದೆ. ಆದರೆ, ಅವರಿಗೆ ಹೆಚ್ಚುವರಿಯಾಗಿ ಮೂರುಮೂರು ಜವಾಬ್ದಾರಿ ನೀಡಿದ್ದಾರೆ” ಎಂದು ವಿವರಿಸಿದರು.

“ಇಡೀ ದೇಶಕ್ಕೆ ಕಾರ್ಯಕ್ರಮ ವಿಭಾಗದ ನಿರ್ದೇಶಕನಾಗಿರುವ ಡೆಪ್ಯೂಟಿ ಡೈರೆಕ್ಟರ್ ಜನರಲ್ ನಾನೊಬ್ಬನೆ; ಅದು ಬಿಟ್ಟು ಈ ವಿಭಾಗಕ್ಕೆ ಸಂಬಂಧ ಇಲ್ಲದವರಿಗೆಲ್ಲಾ ಹೆಚ್ಚುವರಿ ಚಾರ್ಜ್‌ ನೀಡಿದ್ದಾರೆ. ಅವರಿಗೆ ದೂರದರ್ಶನದ ಅನುಭವವೇ ಇಲ್ಲ; ಆದರೂ ನನ್ನ ಕೆಲಸವನ್ನು ಅವರು ಮಾಡುತ್ತಿದ್ದಾರೆ. ನಾನು ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಓದಿ ಕೆಲಸ ಪಡೆದುಕೊಂಡಿದ್ದೇನೆ. ಕಾರ್ಯಕ್ರಮ ನಿರ್ದೇಶಕರಿಗೆ ಮೀಸಲಿರುವ ಕೊಠಡಿಯನ್ನು ನನಗೆ ಬಿಟ್ಟುಕೊಡಬೇಕು; ಕಳೆದ ನಲವತ್ತು ವರ್ಷಗಳಿಂದ ಆ ಕಚೇರಿ ನಿರ್ದೇಶಕರಿಗೆ ಮೀಸಲಿತ್ತು ಎನ್ನುವುದಕ್ಕೆ ಎಲ್ಲರ ಬಳಿ ಸಾಕಷ್ಟು ಪುರಾವೆಗಳಿವೆ. ನಾನು ಕೇಳಿದರೆ ಒಬ್ಬರ ಮೇಲೆ ಒಬ್ಬರು ಹೇಳುತ್ತಾ ದಿನದೂಡುತ್ತಿದ್ದಾರೆ” ಎಂದರು.

“ತಳ ಹಂತದ ಸಹೋದ್ಯೋಗಿಗಳು ನನಗೆ ವರದಿ ಮಾಡಿಕೊಳ್ಳುತ್ತಿದ್ದಾರೆ, ಅದಕ್ಕಾಗಿಯೇ ‘ಕಾರ್ಯಕ್ರಮ ಮುಖ್ಯಸ್ಥರು’ ಎಂದು ಅಸ್ಥಿತ್ವದಲ್ಲೇ ಇಲ್ಲದ ಹುದ್ದೆಯೊಂದನ್ನು ನನಗೆ ನೀಡಿದ್ದಾರೆ. ನಾನೇ ಮುಖ್ಯಸ್ಥ ಆಗಿರುವುದರಿಂದ ಅಂತ ಹುದ್ದೆಯನ್ನು ನಿರ್ದೇಶಕರಿಗಿಂತ ಕೆಳಗಿರುವ ಅಧಿಕಾರಿಗಳಿಗೆ ಕೊಡಬಹುದು; ನನಗೆ ಕೊಡುವುದಕ್ಕೆ ಬರುವುದಿಲ್ಲ” ಎಂದು ಭಾಗ್ಯವಾನ್ ವಿವರಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದೂರದರ್ಶನ ವಿಭಾಗದ ಮುಖ್ಯಸ್ಥರಾದ ಮಾದವರೆಡ್ಡಿ, “ಕೊಠಡಿ ನೀಡಿಲ್ಲ ಎಂಬುದು ಸುಳ್ಳು, ಈ ಬಗ್ಗೆ ಅವರನ್ನೇ ಕೇಳಬೇಕು. ನಾನು ನಿಯಮಗಳಂತೆ ನಡೆದುಕೊಳ್ಳುತ್ತಿದ್ದೇನೆ” ಎಂದು ಹೇಳಿದ ಅವರು, ‘ಮೀಟಿಂಗ್‌ನಲ್ಲಿದ್ದೇನೆ’ ಎಂದು ತರಾತುರಿಯಲ್ಲಿ ಕರೆ ಕಡಿತಗೊಳಿಸಿದರು.

ಇದನ್ನೂ ಓದಿ; ಸ್ಟ್ಯಾನ್‌ ಸ್ವಾಮಿ ಸಾವಿನ ಕುರಿತು ತನಿಖೆಗೆ ಒತ್ತಾಯಿಸಿ ಅಮೆರಿಕ ಸಂಸತ್‌ನಲ್ಲಿ ನಿರ್ಣಯ ಮಂಡನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...

ಪತ್ರಕರ್ತ- ಚಿತ್ರ ನಿರ್ಮಾಪಕ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರನ್ನು ವಕ್ತಾರರನ್ನಾಗಿ ನೇಮಿಸಿದ ಸಿಜೆಪಿ

ಆನ್‌ಲೈನ್ ಸೆನ್ಸೇಷನ್ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಪ್ರಸ್ತಾಪಿಸಿದ ಪ್ರತಿಭಟನೆಗೆ ಮುಂಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಮೂವರು ವಕ್ತಾರರ ಹೆಸರನ್ನು ಘೋಷಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅಭಿಜೀತ್...

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...