Homeಫ್ಯಾಕ್ಟ್‌ಚೆಕ್FACT CHECK : ರಾಹುಲ್‌ ಗಾಂಧಿ ಭಾರತದವರೇ? ಅಥವಾ ಪಾಕಿಸ್ತಾನದವರೇ? ಎಂದು ಅಮೆರಿಕದ ಜನತೆ ಕೇಳಿರುವುದು...

FACT CHECK : ರಾಹುಲ್‌ ಗಾಂಧಿ ಭಾರತದವರೇ? ಅಥವಾ ಪಾಕಿಸ್ತಾನದವರೇ? ಎಂದು ಅಮೆರಿಕದ ಜನತೆ ಕೇಳಿರುವುದು ನಿಜಾನಾ?

- Advertisement -
- Advertisement -

ಲೋಕಸಭೆಯ ಪ್ರತಿ ಪಕ್ಷ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇತ್ತೀಚೆಗೆ ಮೂರು ದಿನಗಳ ಕಾಲ ಅಮೆರಿಕಕ್ಕೆ ಭೇಟಿ ನೀಡಿದ್ದರು. ಈ ಬೆನ್ನಲ್ಲೇ ಸುದ್ದಿ ಪತ್ರಿಕೆಯನ್ನು ಹೋಲುವ ಫೋಟೋವೊಂದು ವೈರಲ್ ಆಗಿದೆ.

ಅದರಲ್ಲಿ “ರಾಹುಲ್ ಗಾಂಧಿ ಭಾರತದಿಂದ ಬಂದವರಾ? ಪಾಕಿಸ್ತಾನದವರಾ? ಎಂದು ಅಮೆರಿಕನ್ನರು ಕೇಳುತ್ತಿದ್ದಾರೆ” ಎಂದು ಶೀರ್ಷಿಕೆ ಕೊಡಲಾಗಿದೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಅದನ್ನು ಹಂಚಿಕೊಂಡು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ವೃತ್ತ ಪತ್ರಿಕೆಯ ವರದಿ ಎಂದು ಹೇಳಿಕೊಂಡಿದ್ದಾರೆ.

ನಿವೃತ್ತ ಮೇಜರ್ ಜನರಲ್ ಹರ್ಷಾ ಕಾಕರ್ ಅವರು ಸೆಪ್ಟೆಂಬರ್ 10ರಂದು ಎಕ್ಸ್‌ನಲ್ಲಿ ಫೋಟೋ ಹಂಚಿಕೊಂಡು “ಅಮೆರಿಕನ್ನರು ರಾಹುಲ್ ಗಾಂಧಿ ಭಾರತದವರಾ..ಪಾಕಿಸ್ತಾನದವರಾ? ಎಂದು ತಿಳಿಯಲು ಬಯಸುತ್ತಿದ್ದಾರೆ. ಯಾವ ವ್ಯಕ್ತಿ ತನ್ನ ಸ್ವಂತ ಮನೆಯನ್ನು ಹಾಳು ಮಾಡಲು ವಿದೇಶಕ್ಕೆ ಹೋಗುತ್ತಾನೆ? ಜಗತ್ತಿನಲ್ಲೇ ಕೇಳಿಲ್ಲ. ಈ ವ್ಯಕ್ತಿಯನ್ನು ಹೊರತು. ಕಾಂಗ್ರೆಸ್, ಸ್ಯಾಮ್ ಪಿತ್ರೋಡಾ, ಮಲ್ಲಿಕಾರ್ಜುನ ಖರ್ಗೆ, ಸುಪ್ರಿಯಾ ಶ್ರೀನಾಟೆ, ಜೈರಾಮ್ ರಮೇಶ್ ಇದು ಕಾಂಗ್ರೆಸ್ ಪದ್ದತಿ ಎಂದು ಒಪ್ಪಿಕೊಳ್ಳುತ್ತೀರಾ? ಎಂದು ಬರೆದುಕೊಂಡಿದ್ದರು.

ಈ ಸುದ್ದಿ ಬರೆಯುವ ಹೊತ್ತಿಗೆ (ಸೆ.13, 12.17pm) ಪೋಸ್ಟ್ 5 ಲಕ್ಷದ 22 ಸಾವಿರ ವೀಕ್ಷಣೆ ಪಡೆದಿತ್ತು. 6 ಸಾವಿರಕ್ಕೂ ಅಧಿಕ ಜನರು ರಿಟ್ವೀಟ್ ಮಾಡಿದ್ದರು.

ಹರ್ಷಾ ಕಾಕರ್ ಅವರು ಹಾಕಿರುವ ರೀತಿಯದ್ದೇ ಪೋಸ್ಟ್ ಅನ್ನು ಮತ್ತೊಂದು ವೆರಿಫೈಡ್ ಎಕ್ಸ್ ಖಾತೆ ರಿನಿತಿ ಚಟರ್ಜಿ ಪಾಂಡೆ (@mainRiniti)ಯಲ್ಲಿ ಸೆಪ್ಟೆಂಬರ್ 11, 2024ರಂದು ಹಂಚಿಕೊಳ್ಳಲಾಗಿತ್ತು.

ಅದೇ ಪೋಟೋವನ್ನು ನೀತು ಗಾರ್ಗ್ (@NeetuGarg6)ಎಂಬ ಎಕ್ಸ್‌ ಖಾತೆಯಲ್ಲಿ ಸೆಪ್ಟೆಂಬರ್ 11ರಂದು ಹಂಚಿಕೊಳ್ಳಲಾಗಿತ್ತು. ನೀತು ಗಾರ್ಗ್ ಬಯೋ ಪ್ರಕಾರ, ಅವರು ಬಿಜೆಪಿ ಮಹಿಳಾ ಮೋರ್ಚಾ ಜೊತೆ ಸಂಪರ್ಕ ಹೊಂದಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಎಕ್ಸ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ.

ಈ ಹಿಂದೆಯೂ ಫೋಟೋ ವೈರಲ್ ಆಗಿತ್ತು

ರಾಹುಲ್ ಗಾಂಧಿ ಕಳೆದ ವರ್ಷವೂ ಯುಎಸ್‌ಗೆ ಭೇಟಿ ನೀಡಿದ್ದರು. ಮೇ 2023 ರಲ್ಲಿ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾಷಣ ಮಾಡಿದ್ದರು. ಆಗ ಹಲವಾರು ಬಿಜೆಪಿ ನಾಯಕರು ರಾಹುಲ್ ಗಾಂಧಿಯ ಭಾಷಣದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಅವರು (ರಾಹುಲ್ ಗಾಂಧಿ) ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂದೂ ಕೆಲವರು ಹೇಳಿದ್ದರು. ಆಗಲೂ ಇದೇ ಪತ್ರಿಕೆಯ ಫೋಟೋ ವೈರಲ್ ಆಗಿತ್ತು.

ಎಕ್ಸ್‌ ಬಳಕೆದಾರ ಜನ್ಮಜಿತ್ ಸಿನ್ಹಾ (@JSinha007) ಅವರು ಜೂನ್ 21,2023 ರಂದು ಸ್ಪಷ್ಟವಾದ ಪತ್ರಿಕೆಯ ವರದಿಯ ಫೋಟೋ ಹಂಚಿಕೊಂಡಿದ್ದರು. ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಪತ್ರಿಕೆ ಈ ವರದಿಯನ್ನು ಪ್ರಕಟಿಸಿದೆ. ರಾಹುಲ್ ಗಾಂಧಿ ಭಾರತದ ಶತ್ರುವಿನ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಬರೆದುಕೊಂಡಿದ್ದರು.

ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ನಾಯಕಿ ಸಾಧ್ವಿ ಪ್ರಾಚಿ (@Sadhvi_prachi) ಅವರು ಜೂನ್ 19, 2023 ರಂದು ಫೋಟೋ ಹಂಚಿಕೊಂಡಿದ್ದರು. ಅವರ ಪೋಸ್ಟ್‌ 1.35 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.

ಫ್ಯಾಕ್ಟ್‌ಚೆಕ್ : ವೈರಲ್ ಫೋಟೋ ಕುರಿತು ಸತ್ಯಾಸತ್ಯತೆ ಪರಿಶೀಲಿಸಲು, ಮೊದಲು ನಾವು ಪೋಟೋವನ್ನು ಸರಿಯಾಗಿ ಪರಿಶೀಲಿಸಿದ್ದೇವೆ. ಈ ವೇಳೆ ಸಾಮಾನ್ಯ ಸುದ್ದಿ ಪತ್ರಿಕೆಗಳಿಗಿಂತ ಅದು ಭಿನ್ನವಾಗಿ ಖಂಡಿದೆ. ಅಕ್ಷರ ತಪ್ಪುಗಳು, ವಾಕ್ಯಗಳ ಹೊಂದಾಣಿಕೆ ಸೇರಿದಂತೆ ಹಲವು ಅಂಶಗಳು ನಮಗೆ ವ್ಯತಿರಿಕ್ತವಾಗಿ ಕಂಡು ಬಂದಿದೆ.

ಫೋಟೋದಲ್ಲಿ ರಾಹುಲ್ ಗಾಂಧಿಯ ಹೆಸರನ್ನು ತಪ್ಪಾಗಿ ಬರೆಯಲಾಗಿದೆ. ಅವರು ಭಾಷಣ ಮಾಡಿರುವ ಸ್ಥಳ ‘ಸಾಂಟಾ ಕ್ಲಾಸ್, ಕ್ಯಾಲಿಫೋರ್ನಿಯಾ’ ಎಂದು ಉಲ್ಲೇಖಿಸಲಾಗಿದೆ. ಆದರೆ, ರಾಹುಲ್ ಗಾಂಧಿ ಇತ್ತೀಚೆಗೆ ಭಾಷಣ ಮಾಡಿರುವುದು ‘ಸಾಂಟಾ ಕ್ಲಾರಾ, ಕ್ಯಾಲಿಫೋರ್ನಿಯಾ’ದಲ್ಲಾಗಿದೆ. ಇನ್ನೂ ಪತ್ರಿಕೆಯ ಎಡ ಭಾಗದಲ್ಲಿ ಅರ್ಧ ಹಿಂದಿ ಪದ ಕಂಡು ಬಂದಿದೆ. ಹಾಗಾಗಿ, ಅದು ನಿಜವಾದ ಪತ್ರಿಕಾ ವರದಿಯಾ? ಎಂಬ ಶಂಕೆ ವ್ಯಕ್ತವಾಗಿದೆ.

ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹಾಕಿ ನಾವು ಸರ್ಚ್ ಮಾಡಿದ್ದೇವೆ. ಈ ವೇಳೆ ವಿವೇಕ್ ಪಾಂಡೆ (INDIVivekPandey_) ಎಕ್ಸ್‌ ಖಾತೆಯಲ್ಲಿ ಅದೇ ರೀತಿಯ ಹಿಂದಿ ಭಾಷೆಯ ಪತ್ರಿಕೆಯ ಫೋಟೋವನ್ನು ಜೂನ್ 5, 2023ರಂದು ಪೋಸ್ಟ್ ಮಾಡಿರುವುದು ಕಂಡು ಬಂದಿದೆ.

ಗೂಗಲ್ ಟ್ರಾನ್ಸ್‌ಲೇಟ್ ಬಳಸಿ ಹಿಂದಿ ಪೋಟೋವನ್ನು ಇಂಗ್ಲಿಷ್‌ಗೆ ಭಾಷಾಂತರ ಮಾಡಿದಾಗ, ಅದು ವೈರಲ್ ಫೋಟೋಗೆ ಸಾಮ್ಯತೆ ಇರುವುದು ಕಂಡು ಬಂದಿದೆ. ಈ ಮೂಲಕ ಸ್ಯಾನ್ ಫ್ರಾನ್ಸಿಸ್ಕೋ ಪತ್ರಿಕೆಯ ವರದಿ ಎನ್ನಲಾದ ಫೋಟೋ ಹಿಂದಿ ವರದಿಯೊಂದರ ಅನುವಾದ ಆವೃತ್ತಿ ಎಂಬುವುದು ನಮಗೆ ಖಚಿತವಾಗಿದೆ. ಆದರೆ, ಆ ಹಿಂದಿ ವರದಿ ನಕಲಿಯಾಗಿದೆ. ಅಂತಹ ಯಾವುದೇ ವರದಿ, ಯಾವುದೇ ಪತ್ರಿಕೆಗಳಲ್ಲಿ ಕಂಡು ಬಂದಿಲ್ಲ.

ಒಟ್ಟಿನಲ್ಲಿ, ರಾಹುಲ್ ಗಾಂಧಿ ಕುರಿತು ವೈರಲ್ ಆಗುತ್ತಿರುವ ಪತ್ರಿಕೆಯ ವರದಿ ನಕಲಿಯಾಗಿದೆ. ಅದು ಯಾವುದೇ ಅಧಿಕೃತ ಪತ್ರಿಕೆಯ ವರದಿ ಅಲ್ಲ. ಹಿಂದಿ ಭಾಷೆಯಲ್ಲಿ ಯಾರೋ ನಕಲಿ ವರದಿ ಸೃಷ್ಟಿಸಿದ್ದರು. ಅದನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ಪ್ರತಿಯನ್ನು ಹಲವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : FACT CHECK : ರಾಜ್ಯದ ಹಲವೆಡೆ ರಾತ್ರಿ ಹೊತ್ತು ಸಿಂಹಗಳ ಓಡಾಟ…ವೈರಲ್ ವಿಡಿಯೋಗಳ ಅಸಲಿಯತ್ತೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 7.5% ಮೀಸಲಾತಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಬಲ ತುಂಬುವ ನಿಟ್ಟಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡಾ 7.5 ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ಪಶ್ಚಿಮ ಬಂಗಾಳದ ಪ್ರವಾಸೋದ್ಯಮ ಜಾಹೀರಾತಿನಲ್ಲಿ ಐಫೆಲ್ ಟವರ್, ಈಜಿಪ್ಟ್ ಪಿರಮಿಡ್: ಆದರೆ ಬಂಗಾಳವೇ ನಾಪತ್ತೆ!

ಪಶ್ಚಿಮ ಬಂಗಾಳವನ್ನು ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಮುನ್ನೆಲೆಗೆ ತರುವ ಉದ್ದೇಶದಿಂದ ಬಿಡುಗಡೆ ಮಾಡಲಾದ ರಾಜ್ಯದ ಹೊಸ ಪ್ರವಾಸೋದ್ಯಮ ಜಾಹೀರಾತು ಈಗ ತೀವ್ರ ಟೀಕೆ ಹಾಗೂ ಅಪಹಾಸ್ಯಕ್ಕೆ ಈಡಾಗಿದೆ. ಈ ಜಾಹೀರಾತನ್ನು ಒಮ್ಮೆ ಗಮನಿಸಿದರೆ...

ಅಮೆರಿಕದಲ್ಲಿ ಮೋಹನ್‌ ಭಾಗವತ್ ಸೌಹಾರ್ದತೆ ಮಾತು; ಮಹಾರಾಷ್ಟ್ರದ ಗಾರ್ಬಾ-ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಮರಿಗೆ ನಿಷೇಧ ಹೇರಿದ ವಿಎಚ್‌ಪಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ನ್ಯೂಯಾರ್ಕ್‌ನಲ್ಲಿ ಮಾಡಿದ ಭಾಷಣದಲ್ಲಿ ಧಾರ್ಮಿಕ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಪ್ರತಿಯೊಂದು ಸಮುದಾಯದ ಗುರುತಿನ ರಕ್ಷಣೆ ಕುರಿತು ಮಾತನಾಡಿದ ಕೆಲವೇ ದಿನಗಳ...

ಸೈಬರ್ ವಂಚನೆಗೊಳಗಾದ ಸಂತ್ರಸ್ತರಿಗೆ ನೆರವು: ಕರ್ನಾಟಕದಲ್ಲಿ ಶೀಘ್ರವೇ ‘ಇ-ಶೂನ್ಯ ಎಫ್‌ಐಆರ್’ ಜಾರಿ

ಸೈಬರ್ ವಂಚನೆಗೊಳಗಾದ ಸಂತ್ರಸ್ತರು ಇನ್ನು ಮುಂದೆ ದೂರು ದಾಖಲಿಸಲು ಪೊಲೀಸ್ ಠಾಣೆಗಳಿಗೆ ಅಲೆಯಬೇಕಿಲ್ಲ. ಸೈಬರ್ ಅಪರಾಧ ಪ್ರಕರಣಗಳ ಎಫ್‌ಐಆರ್ ದಾಖಲಾತಿಯನ್ನು ಚುರುಕುಗೊಳಿಸುವ ಹಾಗೂ ಜನಸ್ನೇಹಿಯಾಗಿಸುವ ಉದ್ದೇಶದಿಂದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ...

ತಲೆ ಮರೆಸಿಕೊಂಡಿದ್ದ ಸ್ವತಂತ್ರ ಭಾರದ್ವಾಜ್‌ ಅರೆಸ್ಟ್ : ಪೋಕ್ಸೋ ಅಡಿ ಮತ್ತೊಂದು ಪ್ರಕರಣ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಜುಲೈನಲ್ಲಿ ನಡೆದ ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಝಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಹಿಂದುತ್ವ ಸೋಶಿಯಲ್ ಮೀಡಿಯಾ 'ಇನ್‌ಫ್ಲುಯೆನ್ಸರ್' ಸ್ವತಂತ್ರ...

ಆರ್‌ಎಸ್ಎಸ್ ಬೆಂಬಲಿತ ಗುಂಪುಗಳಿಂದ ದೇಣಿಗೆ ಸ್ವೀಕರಿಸದಿರಲು ಅಮೆರಿಕದ ರಾಜಕಾರಣಿಗಳಿಂದ ಪ್ರತಿಜ್ಞೆ

ಅಮೆರಿಕದ ಸುಮಾರು 90 ಜನಪ್ರತಿನಿಧಿಗಳು ಮತ್ತು ರಾಜಕೀಯ ಅಭ್ಯರ್ಥಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (RSS) ಬೆಂಬಲಿತ ಗುಂಪುಗಳಿಂದ ರಾಜಕೀಯ ದೇಣಿಗೆಗಳನ್ನು ಸ್ವೀಕರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಹಿಂದುತ್ವ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್...

KPSC ಪರೀಕ್ಷಾ ಅಕ್ರಮ: ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ರಾಜಕೀಯ ಪಕ್ಷ ನೋಡದೆ ನಿರ್ದಾಕ್ಷಿಣ್ಯ ಕ್ರಮ – ಸಚಿವ ಪ್ರಿಯಾಂಕ್ ಖರ್ಗೆ

ಕೆಪಿಎಸ್‌ಸಿ (KPSC) ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿದ್ದು, ಇದರಲ್ಲಿ ಭಾಗಿಯಾಗಿರುವ ಯಾರನ್ನೇ ಆಗಲಿ ರಕ್ಷಿಸುವ ಪ್ರಶ್ನೆಯೇ ಇಲ್ಲ. ಆರೋಪಿಗಳು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅಥವಾ ಯಾವುದೇ ರಾಜಕೀಯ ಪಕ್ಷಕ್ಕೆ...

ಉತ್ತರ ಪ್ರದೇಶ: ಸಹಾರನ್‌ಪುರ ಕಲೆಕ್ಟರೇಟ್ ಮಸೀದಿ ಧ್ವಂಸ, ‘ಬುಲ್ಡೋಜರ್ ರಾಜಕಾರಣ’ಕ್ಕೆ ವಿಪಕ್ಷಗಳಿಂದ ಖಂಡನೆ!

ಸಹಾರನ್‌ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಸಹಾರನ್‌ಪುರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿದ್ದ ಮಸೀದಿಯನ್ನು ಶನಿವಾರ (ಸೆಪ್ಟೆಂಬರ್ 5) ಮುಂಜಾನೆ ಭಾರಿ ಪೊಲೀಸ್ ಭದ್ರತೆಯೊಂದಿಗೆ ಬುಲ್ಡೋಜರ್ ಬಳಸಿ ಧ್ವಂಸಗೊಳಿಸಲಾಗಿದೆ. ಈ ಕಾರ್ಯಾಚರಣೆಗೆ ವ್ಯಾಪಕ ಆಕ್ರೋಶ...

ಗೌರಿ ಹತ್ಯೆಯಾಗಿ 9 ವರ್ಷ : ಹೋರಾಟಗಾರರು-ಒಡನಾಡಿಗಳಿಂದ ಗೌರವ ನಮನ

ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್‌ ಅವರ 9ನೇ ವರ್ಷದ ಹುತಾತ್ಮ ದಿನದ ಅಂಗವಾಗಿ ಇಂದು (ಸೆ.5) ಬೆಳಿಗ್ಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಅವರ ಸಮಾಧಿ ಬಳಿ ‘ಗೌರಿ ನಮನ ಕಾರ್ಯಕ್ರಮ‘ ನಡೆಯಿತು. ಗೌರಿ ಅವರ...

ರಾಯಚೂರಿನಲ್ಲಿ ದಲಿತರ ಸರಣಿ ಕೊಲೆ: ಸಂತ್ರಸ್ತರ ಮನೆಗೆ ಸಚಿವ ಕೆ.ಎಚ್. ಮುನಿಯಪ್ಪ ಭೇಟಿ

ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ದಲಿತರ ಮೇಲಿನ ಸರಣಿ ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳು ಜನಾಕ್ರೋಶಕ್ಕೆ ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಅವರು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ...