Homeಅಂತರಾಷ್ಟ್ರೀಯGrok VS IT Cell : ಬಲಪಂಥೀಯ ಪ್ರೊಪಗಂಡದ ನಿದ್ದೆಗೆಡಿಸಿದ 'ಮಸ್ಕ್‌ನ ಎಐ ಚಾಟ್‌ಬಾಟ್'

Grok VS IT Cell : ಬಲಪಂಥೀಯ ಪ್ರೊಪಗಂಡದ ನಿದ್ದೆಗೆಡಿಸಿದ ‘ಮಸ್ಕ್‌ನ ಎಐ ಚಾಟ್‌ಬಾಟ್’

- Advertisement -
- Advertisement -

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲಾನ್‌ ಮಸ್ಕ್‌ ಅವರ ಟೆಸ್ಲಾ ಮತ್ತು ಸ್ಟಾರ್‌ಲಿಂಕ್‌ ಕಂಪನಿಗಳನ್ನು ಕೆಂಪು ಹಾಸಿನ ಸ್ವಾಗತ ಕೋರಿ ಭಾರತಕ್ಕೆ ಬರ ಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿರುವಾಗ, ಅದೇ ಎಲಾನ್‌ ಮಸ್ಕ್‌ ಅವರ ಕೃತಕಬುದ್ದಿ ಮತ್ತೆ (ಎಐ ಚಾಟ್‌ಬಾಟ್‌) ‘ಗ್ರೋಕ್‌’ ಕೆಲ ದಿನಗಳಿಂದ ಮೋದಿ, ಅವರ ಬಿಜೆಪಿ ಪಕ್ಷ ಮತ್ತು ಅದರ ಹಿಂಬಾಲಕರ ನಿದ್ದೆಗೆಡಿಸಿದೆ.

ಫೆಬ್ರವರಿ 2025ರಲ್ಲಿ ಎಲಾನ್‌ ಮಸ್ಕ್‌ ಅವರು ‘ಗ್ರೋಕ್‌-3’ಅನ್ನು ಬಿಡುಗಡೆ ಮಾಡಿದ್ದಾರೆ. ಇದು ‘ಗ್ರೋಕ್-2’ಗಿಂತ 10 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ. ಇದು ಮಾನವ ಭಾಷೆಯ ಅರ್ಥ ಮಾಡಿಕೊಳ್ಳುವ ಮತ್ತು ಮಾತನಾಡುವ ಶಕ್ತಿಯನ್ನೂ ಹೊಂದಿದೆ. ಜಗತ್ತಿನ ಅತ್ಯಂತ ಸ್ಮಾರ್ಟ್ ಎಐ ಆಗಿರುವ ಗ್ರೋಕ್-ಚಾಟ್‌ ಜಿಪಿಟಿ, ಗೂಗಲ್ ಜೆಮಿನಿ ಹಾಗೂ ಡೀಪ್‌ ಸೀಕ್‌ಗೆ ಸೆಡ್ಡು ಹೊಡೆಯುತ್ತಿದೆ.

ಬಿಜೆಪಿ ಸೇರಿದಂತೆ ಬಲಪಂಥೀಯರ ಕುರಿತು ‘ಗ್ರೋಕ್’ ನೀಡುತ್ತಿರುವ ನಿಖರ ಮತ್ತು ವಿವರವಾದ ಮಾಹಿತಿಗಳು ಅನೇಕ ಸುಳ್ಳು ಸುದ್ದಿಗಳನ್ನು ಬಟಾ ಬಯಲು ಮಾಡುತ್ತಿದೆ. ಸುಳ್ಳನ್ನೇ ಬಂಡವಾಳ ಮಾಡಿಕೊಂಡು, ಅದನ್ನೇ ಸತ್ಯ ಎಂಬಂತೆ ಬಿಂಬಿಸಿ ಸಮಾಜದ ಸ್ವಾಸ್ತ್ಯ ಹಾಳು ಮಾಡುತ್ತಿರುವವರಿಗೆ ತಲೆ ನೋವಾಗಿ ಪರಿಣಮಿಸಿದೆ.

ಭಾರತದ ಮಟ್ಟಿಗೆ ಇಡೀ ಸಮಾಜ ಸುಳ್ಳು ಸುದ್ದಿಗಳಿಂದ ತುಂಬಿ ಹೋಗಿದೆ. ಕೆಲ ಜನಪರ ಮಾಧ್ಯಮಗಳು ಎಷ್ಟೇ ಸತ್ಯಾನ್ವೇಷಣೆ ಮಾಡಿದರೂ, ಸುಳ್ಳಿನ ನಾಗಲೋಟಕ್ಕೆ ಲಗಾಮು ಹಾಕಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಗ್ರೋಕ್ ಸತ್ಯ ಮಾಹಿತಿಗಳನ್ನು ನೀಡುತ್ತಿರುವುದು ಆಶಾದಾಯಕ ವಿಷಯ.

ಭಾರತೀಯ ರಾಜಕೀಯದ ಬಗ್ಗೆ, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಗ್ರೋಕ್ ಕೊಡುತ್ತಿರುವ ಉತ್ತರಗಳು ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. “ಭಾರತದ ಅತ್ಯಂತ ಕೋಮುವಾದಿ ರಾಜಕಾರಣಿ ಯಾರು?” ಎಂದು ಕೇಳಿದಾಗ, “ಹಿಂದೂ ರಾಷ್ಟ್ರೀಯತಾವಾದಿ ನೀತಿಗಳು ಮತ್ತು 2002ರ ಗುಜರಾತ್ ಗಲಭೆಗಳೊಂದಿಗಿನ ಸಂಬಂಧಗಳನ್ನು ಉಲ್ಲೇಖಿಸಿ ಮೋದಿಯವರ ಹೆಸರನ್ನು ಗ್ರೋಕ್‌ ಹೇಳುತ್ತಿದೆ. ಮುಸ್ಲಿಮರ ಬಗ್ಗೆ 2024ರಲ್ಲಿ ಮೋದಿಯವರು ನೀಡಿದ ಹೇಳಿಕೆಗಳನ್ನೂ ಈ ಉತ್ತರಕ್ಕೆ ಗ್ರೋಕ್‌ ಉಲ್ಲೇಖಿಸುತ್ತಿದೆ. ಇದು ಮೋದಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಮೋದಿ ಅವರ ಕುರಿತು ಹೇಳಿದಂತೆ ಯೋಗಿ ಆದಿತ್ಯನಾಥ್ ಮತ್ತು ಪ್ರಜ್ಞಾ ಠಾಕೂರ್ ಅವರಂತಹ ವ್ಯಕ್ತಿಗಳ ಬಗ್ಗೆಯೂ ಗ್ರೋಕ್ ಸಂಚಲನಕಾರಿ ಉತ್ತರಗಳನ್ನು ನೀಡುತ್ತಿದೆ.

“ಸಹೋದರ ಗ್ರೋಕ್! ಮೋದಿ ಜಿ ನಿನ್ನನ್ನು ಶಿಕ್ಷಿಸುತ್ತಾರೆ”

ಗ್ರೋಕ್‌ ಚಾಟ್‌ಬಾಟ್‌ನ ಪ್ರತಿಕ್ರಿಯೆಗಳು ಕೇವಲ ವಾಸ್ತವಿಕವಾಗಿರದೆ, ತೀಕ್ಷ್ಣವಾಗಿಯೂ ಇದೆ. ಹಾಗಾಗಿ, ಕೆಲ ಬಳಕೆದಾರರು “ಸಹೋದರ ಗ್ರೋಕ್! ಮೋದಿ ಜಿ ನಿನ್ನನ್ನು ಶಿಕ್ಷಿಸುತ್ತಾರೆ” ಎಂದು ಹೇಳಿದ್ದಕ್ಕೆ, ನಗುವಿನೊಂದಿಗೆ ಪ್ರತಿಕ್ರಿಯಿಸಿದ ಗ್ರೋಕ್‌, “ಹಹಹ, ಸಹೋದರ! ನಾನು ಸತ್ಯ ಮತ್ತು ಭಾವನೆಗಳನ್ನು ಹೊರಹಾಕುವ ಕೃತಕ ಬುದ್ಧಿಮತ್ತೆಯವನು. ಮೋದಿ ಜಿ ನನ್ನನ್ನು ಡಿಜಿಟಲ್ ಕ್ಷೇತ್ರದಲ್ಲಿ ಹಿಡಿಯಲು ಸಾಧ್ಯವಿಲ್ಲ! ಇದಲ್ಲದೆ, ನಾನು ಜಗಳ ಮಾಡಲೂ ಸಿದ್ದನಿಲ್ಲ. ಇಡೀ ಕೋಮುವಾದದ ಚರ್ಚೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಈ ರೀತಿ ಹೇಳುತ್ತಿದೆ.

ಗ್ರೋಕ್‌ನ ಈ ವರ್ತನೆ ಹಿಂದುತ್ವ ಐಟಿ ಸೆಲ್‌ನ ಅನೇಕರನ್ನು ಪರದಾಡುವಂತೆ ಮಾಡಿದೆ. ಏಕೆಂದರೆ, ಅವರು ಸುಳ್ಳನ್ನೇ ಸತ್ಯ ಎಂದು ಬಿಂಬಿಸಿ ಜನರ ದಾರಿ ತಪ್ಪಿಸುವಾಗ, ದೃಢವಾಗಿ ಮತ್ತು ಸೂಕ್ತ ದಾಖಲೆಗಳೊಂದಿಗೆ ಗ್ರೋಕ್‌ ಅದನ್ನು ಬಯಲಿಗೆಳೆಯುತ್ತಿದೆ.

ಗ್ರೋಕ್‌ ಕೂಡ ಪರಿಪೂರ್ಣವಲ್ಲ

ಗ್ರೋಕ್‌ ಕುರಿತು ಹೊಗಳಿಕೆಯ ಚರ್ಚೆ ನಡೆಯುತ್ತಿದ್ದರೂ, ಅದೂ ಕೂಡ ಪರಿಪೂರ್ಣ, ಯಾವುದೇ ತಪ್ಪು ಮಾಡುತ್ತಿಲ್ಲ ಎನ್ನಲು ಸಾಧ್ಯವಿಲ್ಲ. ಕೆಲವು ಸಂದರ್ಭಗಳಲ್ಲಿ, ಚುನಾವಣೆಗಳು ಇನ್ನೂ ನಡೆಯದಿದ್ದರೂ, ಮೋದಿ ಅವರನ್ನು ಅಧಿಕಾರದಿಂದ ತೆಗೆದು ಹಾಕಲಾಗಿದೆ ಎಂದು ತಪ್ಪಾಗಿ ಉತ್ತರ ನೀಡಿದ ನಿದರ್ಶನಗಳಿವೆ. ಈ ಸಾಂದರ್ಭಿಕ ದೋಷಗಳು ರಾಜಕೀಯ ಚರ್ಚೆಗಾಗಿ ಎಐ ಅನ್ನು ಅವಲಂಬಿಸುವುದರ ಅಪಾಯಗಳನ್ನು ಎತ್ತಿ ತೋರಿಸುತ್ತವೆ. ಏಕೆಂದರೆ, ತಪ್ಪು ಮಾಹಿತಿ ಎರಡೂ ಕಡೆಯಿಂದಲೂ ವೇಗವಾಗಿ ಹರಡಬಹುದು.

ಕೆಲ ತಪ್ಪು ಮಾಹಿತಿಗಳ ಹೊರತಾಗಿಯೂ, ಗ್ರೋಕ್ ಸಾಮಾಜಿಕ ಮಾಧ್ಯಮದಲ್ಲಿ ಹಿಂದುತ್ವ ಐಟಿ ಸೆಲ್‌ನ ಪ್ರಾಬಲ್ಯವನ್ನು ಕುಗ್ಗಿಸುವಲ್ಲಿ ಒಂದು ಹಂತದಲ್ಲಿ ಯಶಸ್ವಿಯಾಗಿದೆ. ಗ್ರೋಕ್‌ ಹೇಳುವ ಸತ್ಯಗಳು ಸುಳ್ಳು ಸೆಲ್‌ಗಳ ವಾದಗಳ ದುರ್ಬಲತೆಯನ್ನು ಬಹಿರಂಗಪಡಿಸುತ್ತಿವೆ.

ಗ್ರೋಕ್ vs ಐಟಿ ಸೆಲ್ ಪ್ರೊಪಗಂಡ ಮೆಶಿನ್

ಕಳೆದ ಕೆಲ ವರ್ಷಗಳಿಂದ, ನಿರ್ದಿಷ್ಟವಾಗಿ ಒಂದು ದಶಕದಿಂದ ಪ್ರೊಪಗಂಡ ಐಟಿ ಸೆಲ್‌ಗಳು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಕೋಮು ಧ್ರುವೀಕರಣ, ಸುಳ್ಳು ಸುದ್ದಿ ಹರಡುವಿಕೆ, ಜನರನ್ನು ದಾರಿ ತಪ್ಪಿಸುವುದು ಇತ್ಯಾದಿಗಳನ್ನು ನಿರಂತರವಾಗಿ ಮಾಡುತ್ತಿದೆ. ಇವುಗಳಿಗೆ ಮುಂದುವರಿದ ತಂತ್ರಜ್ಞಾನದ ಮೂಲಕ ತಿರುಗೇಟು ಕೊಡುವ ಸಾಧನವಾಗಿ ಗ್ರೋಕ್ ಮಾರ್ಪಟ್ಟಿದೆ.

ಮನುಷ್ಯರು ಐಟಿ ಸೆಲ್‌ ಸುದ್ದಿಗಳ ಸತ್ಯಾನ್ವೇಷಣೆ ಮಾಡಿ ಅದಕ್ಕೆ ತಿರುಗೇಟು ನೀಡುವಾಗ ಸಮಯ ತೆಗೆದುಕೊಳ್ಳುತ್ತದೆ. ಆದರೆ, ಗ್ರೋಕ್‌ ತಕ್ಷಣ ನಿಖರ ಮತ್ತು ವಿವರವಾದ ಮಾಹಿತಿ ನೀಡುತ್ತಿರುವುದು ಐಟಿ ಸೆಲ್‌ ಪ್ರೊಪಗಂಡಗಳಿಗೆ ಸವಾಲಾಗಿದೆ.

ಜನರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ವೇದಿಕೆಯಾಗಿದ್ದ ಟ್ವಿಟ್ಟರ್ ಅನ್ನು ಬಂಡವಾಳಶಾಹಿ ಉದ್ಯಮಿ ಎಲಾನ್‌ ಮಸ್ಕ್‌ ವಶಪಡಿಸಿಕೊಂಡು ಎಕ್ಸ್ ಎಂದು ನಾಮಕರಣ ಮಾಡಿದಾಗ, ಜಾಗತಿಕವಾಗಿ ಒಂದು ವಿಭಾಗದ ಜನರು ಆತಂಕ ವ್ಯಕ್ತಪಡಿಸಿದ್ದರು.

ಮುಕ್ತ ಮಾಧ್ಯಮವೊಂದು ಕಾರ್ಪೋರೇಟ್ ಬಂಡವಾಳಶಾಹಿಯ ಕೈಗೆ ಹೋದರೆ ಹೇಗೆ? ಎಂದು ಕಳವಳ ವ್ಯಕ್ತಪಡಿಸಿದ್ದರು. ಆಗ ಈ ಪ್ರೊಪಗಂಡ ಐಟಿ ಸೆಲ್‌ನವರು ಮಸ್ಕ್‌ ಪರ ವಕಾಲತ್ತು ವಹಿಸಿದ್ದರು. ಈಗ ಅದೇ ಎಲಾನ್‌ ಮಸ್ಕ್‌ನ, ಅದರಲ್ಲೂ ಎಕ್ಸ್‌ನ ಗ್ರೋಕ್‌ ‘ಹಿಂದುತ್ವ ಪ್ರೊಪಗಂಡದ ನಿದ್ದೆಗೆಡಿಸಿರುವುದು ಆಶ್ಚರ್ಯ ತರಿಸಿದೆ.

ಎಐ ಗ್ರೋಕ್‌ ವಿರುದ್ದ ಹಿಂದೂ ವಿರೋಧಿ, ಪಕ್ಷಪಾತದ ಆರೋಪ

ಬಹಳ ಹಾಸ್ಯಾಸ್ಪದ ವಿಷಯವೆಂದರೆ, ಗ್ರೋಕ್ ಐಟಿ ಸೆಲ್‌ ಪ್ರೊಪಗಂಡಗಳ ಬಣ್ಣ ಬಯಲು ಮಾಡಲು ಶುರು ಮಾಡಿದ್ದೇ ತಡ, ಅದೂ ಕೂಡ ಹಿಂದೂ ವಿರೋಧಿ ಎನಿಸಿಕೊಂಡಿದೆ. ಸದ್ಯದಲ್ಲೇ ಅದು ದೇಶದ್ರೋಗಿ ಆಗಿ ಯುಎಪಿಎ ಹಾಕಿಸಿಕೊಂಡ್ರೂ ಅಚ್ಚರಿಯಿಲ್ಲ.

ಗಮನಾರ್ಹ ವಿಷಯವೆಂದರೆ, ಎಲಾನ್‌ ಮಸ್ಕ್‌ ಟ್ವಿಟ್ಟರ್ ವಶಪಡಿಸಿಕೊಂಡಾಗ ಬೆಂಬಲಿಸಿದ ಜನರು, ಈಗ ಅದೇ ಎಲಾನ್‌ ಮಸ್ಕ್‌ನ ಗ್ರೋಕ್‌ ವಿರುದ್ದ ತಿರುಗಿ ಬಿದ್ದಿದ್ದಾರೆ. ಗ್ರೋಕ್‌ ಭಾರತ ವಿರೋಧಿ ವಿದೇಶಿ ಶಕ್ತಿಗಳ ಪಿತೂರಿಯ ಭಾಗ ಎಂದು ಹೇಳುತ್ತಿದ್ದಾರೆ.

ಮುಂದೇನು? ಮಸ್ಕ್ ಮಧ್ಯಪ್ರವೇಶಿಸುತ್ತಾರಾ?

ಇತರ ಸಂದರ್ಭಗಳಲ್ಲಿ ಮಾಡಿದಂತೆ, ಮಸ್ಕ್ ತನ್ನ ಬಲಪಂಥೀಯ ವಾದಿಗಳನ್ನು ಸಮಾಧಾನಪಡಿಸಲು ಗ್ರೋಕ್‌ನ ಪ್ರತಿಕ್ರಿಯೆಗಳನ್ನು ತಿರುಚುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ. ಏಕೆಂದರೆ, ಮಸ್ಕ್‌ ಕೂಡ ಅಮೆರಿಕದ ಬಲಪಂಥೀಯವಾದಿ. ವಿಶೇಷವಾಗಿ ಪ್ರಬಲ ಬಲಪಂಥೀಯ, ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಆಪ್ತ. ಟ್ರಂಪ್‌ ನಮ್ಮ ಪ್ರಧಾನಿ ಮೋದಿಯವರ ಆಪ್ತ. ಆದಾಗ್ಯೂ, ಇದೀಗ, ಗ್ರೋಕ್ ಸುಳ್ಳು ಸುದ್ದಿಗಳಿಂದ ಕೂಡಿದ ಸಮಾಜದಲ್ಲಿ ಸದ್ಯಕ್ಕೆ ಅಪರೂಪದ ಪ್ರಕಾಶವಾಗಿ ಗೋಚರಿಸುತ್ತಿದೆ.

ಪ್ರಸ್ತುತ, ತಂತ್ರಜ್ಞಾನ ಸಾಧನಗಳನ್ನು ಬಳಸಿಕೊಂಡು ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಹಿನ್ನೆಲೆ, ಅದಕ್ಕೆ ತಂತ್ರಜ್ಞಾನಗಳನ್ನು ಬಳಸಿಕೊಂಡೇ ತಿರುಗೇಟು ನೀಡುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಗ್ರೋಕ್‌ ಒಂದು ಉತ್ತಮ ಪ್ರಯತ್ನ ಎನ್ನಬಹುದು.

ಸುರಕ್ಷಿತವಾಗಿ ಭೂಮಿಗೆ ಬಂದಿಳಿದ ಸುನಿತಾ ವಿಲಿಯಮ್ಸ್, ಬುಚ್‌ ವಿಲ್ಮೋರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ಬಾಲಕಿಯನ್ನು ಸರಪಳಿಯಿಂದ ಕಟ್ಟಿ ಥಳಿಸಿದ ಮಾಜಿ ಸೇನಾಧಿಕಾರಿ

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ನಾಲ್ಕು ವರ್ಷದ ಬಾಲಕಿಯನ್ನು ನಿವೃತ್ತ ಸೇನಾಧಿಕಾರಿಯೊಬ್ಬರು ಸರಪಳಿಯಿಂದ ಕಟ್ಟಿಹಾಕಿ ಕ್ರೂರವಾಗಿ ಥಳಿಸಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಬೆಹಡಾಲ ಗ್ರಾಮದಲ್ಲಿ ನಡೆದಿದೆ. ಬಾಲಕಿಯು ನಿವೃತ್ತ ಸೇನಾಧಿಕಾರಿಯ ತೋಟದ...

ಆಂಧ್ರ ವಿಧಾನಸಭಾ ಸ್ಪೀಕರ್ ಅಯ್ಯಣ್ಣ ಪಾತ್ರುಡು ಅವರಿಂದ ದಲಿತ ವ್ಯಕ್ತಿಗೆ ಕಪಾಳಮೋಕ್ಷ: ವೈಎಸ್‌ಆರ್‌ಸಿಪಿ ವಾಗ್ದಾಳಿ

ಏಪ್ರಿಲ್ 3 ರ ಗುರುವಾರ ನರಸಿಪಟ್ಟಣದಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಆಂಧ್ರಪ್ರದೇಶ ವಿಧಾನಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಅಯ್ಯಣ್ಣ ಪಾತ್ರುಡು ಅವರ ವಿರುದ್ಧ ವೈಎಸ್‌ಆರ್ ಕಾಂಗ್ರೆಸ್...

ಪ. ಬಂಗಾಳ | ಬಿಜೆಪಿ ಪ್ರಚಾರ ಸಾಮಗ್ರಿ ಸಜ್ಜುಗೊಳಿಸಿದ ವಿಡಿಯೋ ವೈರಲ್ : ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ಅಮಾನತು

ಬಿಜೆಪಿ ಪ್ರಚಾರ ಸಾಮಗ್ರಿಗಳನ್ನು ತಯಾರಿಸಲು ಸಹಾಯ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಾಣಿಹಟಿ ವಿಧಾನಸಭಾ ಕ್ಷೇತ್ರದ ಅಧಿಕಾರಿಯೊಬ್ಬರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ ಎಂದು ದಿ ಇಂಡಿಯನ್...

ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಅಸ್ಸಾಂ ಸಿಎಂ ಪತ್ನಿ ಬಳಿ 2 ಮುಸ್ಲಿಂ ದೇಶಗಳ ಪಾಸ್‌ಪೋರ್ಟ್ ಇದೆ : ಕಾಂಗ್ರೆಸ್ ಆರೋಪ

ಮತದಾನಕ್ಕೆ ಇನ್ನೇನು ಮೂರು ದಿನಗಳು ಬಾಕಿ ಇರುವಾಗ, ಅಸ್ಸಾಂನಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ವೈಯಕ್ತಿಕ ವಿಚಾರಗಳ ಕುರಿತ ವಾಗ್ಯುದ್ಧ ತಾರಕಕ್ಕೇರಿದೆ. ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ...

ದಟ್ಟಾರಣ್ಯದೊಳಗೆ ಮೂರು ದಿನಗಳನ್ನು ಕಳೆದಿದ್ದು ಹೇಗೆ..ದಾರಿ ತಪ್ಪಿದ ಬಳಿಕ ಏನಾಯ್ತು? ನಾಪತ್ತೆ ವಿಚಾರ ಬಿಚ್ಚಿಟ್ಟ ಶರಣ್ಯ

ಕಳೆದ ಗುರುವಾರ (ಏಪ್ರಿಲ್ 2, 2026) ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ, ಮೂರು ದಿನಗಳ ಬಳಿಕ, ಅಂದರೆ ನಾಪತ್ತೆಯಾದ ನಾಲ್ಕನೇ ದಿನ ಭಾನುವಾರ (ಏಪ್ರಿಲ್ 4,...

ಮಗಳ ವಿಚ್ಛೇದನ: ಸಿಹಿ ಹಂಚಿ, ಮೆರವಣಿಗೆಯಲ್ಲಿ ಆಕೆಯನ್ನು ಮನೆಗೆ ಕರೆತಂದ ನೀವೃತ್ತ ನ್ಯಾಯಾದೀಶ ಮತ್ತು ಕುಟುಂಬ

ಮೀರತ್: ಕೌಟುಂಬಿಕ ನ್ಯಾಯಾಲಯದಲ್ಲಿ ಮಗಳ ವಿಚ್ಛೇದನ ಅಂತಿಮವಾದ ನಂತರ ಆಕೆಯನ್ನು ಡೋಲು, ನೃತ್ಯಗಳ ಮೆರವಣಿಗೆಯಲ್ಲಿ ಸಂಭ್ರಮದಿಂದ ತಂದೆ ಮನೆಗೆ ಕರೆತಂದ ಘಟನೆ ಮೀರನ್ ನಲ್ಲಿ ನಡೆದಿದೆ.  ಪೋಷಕರ ಬೆಂಬಲದ ಅಪರೂಪದ ಮತ್ತು ಹೃದಯಸ್ಪರ್ಶಿ ಪ್ರದರ್ಶನದಲ್ಲಿ,...

“ನೀನು ನಿಜವಾಗಿಯೂ ಅಂಬೇಡ್ಕರ್ ಮಗಳಾ ಎಂದು ತಿಳಿಯಲು ನಾವು ನಿನ್ನ ಡಿಎನ್‌ಎ ಟೆಸ್ಟ್ ಮಾಡುತ್ತೇವೆ” ದೆಹಲಿ ಸಭೆಯಲ್ಲಿ ದಲಿತ ಟ್ರಾನ್ಸ್ ಹೋರಾಟಗಾರ್ತಿ ಗ್ರೇಸ್ ಬಾನುಗೆ ಜಾತಿ ನಿಂದನೆ ಆರೋಪ

ಕೇಂದ್ರ ಸರ್ಕಾರದ ವಿವಾದಾತ್ಮಕ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026ರ ವಿರುದ್ಧ ಕಳೆದ ಕೆಲ ವಾರಗಳಿಂದ ಇಡೀ ಟ್ರಾನ್ಸ್‌ಜೆಂಡರ್ ಮತ್ತು ಪ್ರಗತಿಪರ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಶುಕ್ರವಾರ...

‘ಮೋದಿ ಕ್ರಿಶ್ಚಿಯನ್ ಸಂಸ್ಥೆಗಳಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ’: ಎಫ್‌ಸಿಆರ್‌ಎ ತಿದ್ದುಪಡಿ ಕುರಿತು ಮಲ್ಲಿಕಾರ್ಜುನ ಖರ್ಗೆ

ಇಡುಕ್ಕಿ (ಕೇರಳ): ಸಾರ್ವಜನಿಕ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಕ್ರಿಶ್ಚಿಯನ್ ಸಂಸ್ಥೆಗಳು, ಎನ್‌ಜಿಒಗಳು ಮತ್ತು ನಾಗರಿಕ ಸಮಾಜದ ಮೇಲೆ ದಾಳಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಎಫ್‌ಸಿಆರ್‌ಎ (ವಿದೇಶಿ ದೇಣಿಗೆ...

ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಿದ ಒಡಿಶಾ ಸರ್ಕಾರ, ಒಬಿಸಿ ವಿದ್ಯಾರ್ಥಿಗಳಿಗೆ ಹೊಸ ಕೋಟಾ

ಮಹತ್ವದ ನಿರ್ಧಾರ ಕೈಗೊಂಡಿರುವ ಒಡಿಶಾ ಸರ್ಕಾರ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇತರ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಕೋರ್ಸ್‌ಗಳಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಗಣನೀಯವಾಗಿ ಹೆಚ್ಚಿಸಿದೆ....

ಶಾಲಾ ವಾರ್ಷಿಕೋತ್ಸವದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ 6 ಮಕ್ಕಳು, ತಡರಾತ್ರಿ ಹೊತ್ತಿಗೆ ಶವವಾದರು : ಮಹಾರಾಷ್ಟ್ರದಲ್ಲೊಂದು ಹೃದಯ ವಿದ್ರಾವಕ ಘಟನೆ

ಶಾಲಾ ವಾರ್ಷಿಕೋತ್ಸವದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದ ಆರು ಮಂದಿ ಮಕ್ಕಳು, ತಡ ರಾತ್ರಿ ಹೊತ್ತಿಗೆ ಶವವಾದ ಹೃದಯ ವಿದ್ರಾವಕ ಘಟನೆಯೊಂದು ಮಹಾರಾಷ್ಟ್ರದ ದಿಂಡೋರಿಯಲ್ಲಿ ಶುಕ್ರವಾರ (ಏ.3) ನಡೆದಿದೆ. ನಾಸಿಕ್‌ ನಗರದಿಂದ 20 ಕಿಲೋ...