Homeಅಂತರಾಷ್ಟ್ರೀಯಸಿಕ್ಕ ಸಿಕ್ಕ ದೇಶಗಳ ಮೇಲೆ ದಾಳಿ ನಡೆಸುತ್ತಿರುವ ಟ್ರಂಪ್ : ಅಧ್ಯಕ್ಷರ ಯುದ್ದೋನ್ಮಾದಕ್ಕೆ ಲಗಾಮು ಹಾಕಲು...

ಸಿಕ್ಕ ಸಿಕ್ಕ ದೇಶಗಳ ಮೇಲೆ ದಾಳಿ ನಡೆಸುತ್ತಿರುವ ಟ್ರಂಪ್ : ಅಧ್ಯಕ್ಷರ ಯುದ್ದೋನ್ಮಾದಕ್ಕೆ ಲಗಾಮು ಹಾಕಲು ಮುಂದಾದ ಯುಎಸ್ ಕಾಂಗ್ರೆಸ್

- Advertisement -
- Advertisement -

“ನಾನು ಶಾಂತಿದೂತ, ವಿಶ್ವ ಶಾಂತಿಯ ರಾಯಭಾರಿ, ಹಲವು ದೇಶಗಳ ನಡುವಿನ ಸಂಘರ್ಷಗಳನ್ನು ನಿಲ್ಲಿಸಿ ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡಿರುವ ನನಗೆ ‘ನೊಬೆಲ್ ಶಾಂತಿ ಪ್ರಶಸ್ತಿ’ ಕೊಡಿ” ಎನ್ನುತ್ತಲೇ, ಸಿಕ್ಕ ಸಿಕ್ಕ ದೇಶಗಳ ಮೇಲೆ ದಾಳಿ ಮಾಡಿಸುತ್ತಾ ಸಾವಿರಾರು ಜೀವಗಳನ್ನು ಬಲಿ ಪಡೆಯುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ದೋನ್ಮಾದಕ್ಕೆ ಲಗಾಮು ಹಾಕಲು ಅಮೆರಿಕ ಕಾಂಗ್ರೆಸ್ (ಸಂಸತ್ತು) ಪ್ರಯತ್ನ ನಡೆಸುತ್ತಿದೆ.

ತಮ್ಮ ಅಧ್ಯಕ್ಷನ ಹುಚ್ಚುತನದಿಂದ ಅಮಾಯಗಳು ಜೀವಗಳು ಬಲಿಯಾಗುತ್ತಿರುವುದು ಅಮೆರಿಕದ ಕೆಲ ಜೀವಪರ ಸಂಸದರಿಗೆ ನೋವುಂಟು ಮಾಡಿದೆ. ಆದರೆ, ಅವರು ನೇರವಾಗಿ ಇದರ ವಿರುದ್ದ ಮಾತನಾಡಲೋ, ಇನ್ನೊಂದು ಸಂತ್ರಸ್ತ ದೇಶದ ಪರ ನಿಲ್ಲಲೋ ಸಾಧ್ಯವಾಗುತ್ತಿಲ್ಲ. ತಮ್ಮ ಮನಸ್ಸಿನಲ್ಲಿ ಮುಗ್ದ ಜೀವಗಳು ಬಲಿಯಾಗುತ್ತಿರುವ ಬೇಸರ ಇದ್ದರೂ..ಅಮೆರಿಕ ದೇಶದ ಜನಪ್ರತಿನಿಧಿಗಳಾಗಿರುವ ಅವರು, ಯುದ್ಧದ ಸಂದರ್ಭದಲ್ಲಿ ತಮ್ಮ ದೇಶದ ಪರ ನಿಲ್ಲಬೇಕಾದ ಅನಿವಾರ್ಯತೆ ಇದೆ.

ಹಾಗಾಗಿ, ಯುದ್ಧದಿಂದ ದೇಶದ ಆರ್ಥಿಕತೆ ಮೇಲೆ ಬೀರುವ ಪರಿಣಾಮ ಮತ್ತು ಕೆಲ ತಾಂತ್ರಿಕ ನೆಪಗಳನ್ನು ಮುಂದಿಟ್ಟುಕೊಂಡು ಟ್ರಂಪ್‌ ಅಧಿಕಾರಕ್ಕೆ ಕಡಿವಾಣ ಹಾಕುವ ಪ್ರಯತ್ನದಲ್ಲಿದ್ದಾರೆ.

ಅಮೆರಿಕದ ಸಂವಿಧಾನದ ಪ್ರಕಾರ, ಯುದ್ಧ ಘೋಷಿಸುವ ಅಧಿಕಾರ ಸಂಸತ್ತಿಗೆ ಇದೆ. ಆದರೆ, ಈಗ ಅಧ್ಯಕ್ಷರು ‘ರಾಷ್ಟ್ರೀಯ ಭದ್ರತೆ’ಯ ಹೆಸರಿನಲ್ಲಿ ದಾಳಿ ನಡೆಸಲು ತನಗಿರುವ ಅಧಿಕಾರವನ್ನು ದುರುಪಯೋಗಡಿಸಿಕೊಳ್ಳುತ್ತಿದ್ದಾರೆ ಎನ್ನುವುದು ಸಂಸದರ ಆರೋಪವಾಗಿದೆ. ಇದನ್ನು ವಿರೋಧಿಸಿ ಸಂಸದರು ಹೊಸ ನಿರ್ಣಯವನ್ನು ಮುಂದಿಟ್ಟಿದ್ದಾರೆ.

1973ರ ‘ವಾರ್ ಪವರ್ಸ್ ಆಕ್ಟ್’ ಅಡಿಯಲ್ಲಿ, ಅಧ್ಯಕ್ಷರು ಸೈನ್ಯವನ್ನು ಬಳಸಿದ 48 ಗಂಟೆಗಳ ಒಳಗೆ ಸಂಸತ್ತಿಗೆ ಮಾಹಿತಿ ನೀಡಬೇಕು ಮತ್ತು 60 ದಿನಗಳ ಒಳಗೆ ಅನುಮತಿ ಪಡೆಯಬೇಕು.

ಹಲವು ದಶಕಗಳ ಹಿಂದೆ (1991 ಮತ್ತು 2002 ರಲ್ಲಿ) ಇರಾಕ್ ಯುದ್ಧಕ್ಕಾಗಿ ನೀಡಲಾಗಿದ್ದ ‘ಮಿಲಿಟರಿ ಬಳಕೆಯ ಅಧಿಕಾರ’ವನ್ನು ಅಧ್ಯಕ್ಷರು ಈಗಲೂ ಬಳಸುತ್ತಿದ್ದಾರೆ. ಇದನ್ನು ರದ್ದುಗೊಳಿಸಲು ಸಂಸತ್ತು ಪ್ರಯತ್ನಿಸುತ್ತಿದೆ.

ಸಂಸತ್ತಿನ ಅನುಮತಿ ಇಲ್ಲದೆ ಇರಾನ್ ಸೇರಿದಂತೆ ಇತರ ಯಾವುದೇ ದೇಶಗಳ ವಿರುದ್ಧ ಯಾವುದೇ ಮಿಲಿಟರಿ ಕ್ರಮ ಕೈಗೊಳ್ಳದಂತೆ ಅಧ್ಯಕ್ಷರನ್ನು ತಡೆಯುವುದು ಇದರ ಉದ್ದೇಶವಾಗಿದೆ.

ಡೆಮೋಕ್ರಾಟ್ ಪಕ್ಷದ ನಾಯಕರು ಮತ್ತು ಕೆಲವು ರಿಪಬ್ಲಿಕನ್ ಸಂಸದರು (ಉದಾಹರಣೆಗೆ ಥಾಮಸ್ ಮಾಸ್ಸಿ) ಅಧ್ಯಕ್ಷರ ಅಧಿಕಾರಕ್ಕೆ ಲಗಾಮು ಹಾಕುವುದನ್ನು ಬೆಂಬಲಿಸುತ್ತಿದ್ದಾರೆ. ಅನಗತ್ಯ ಯುದ್ಧದಿಂದ ಅಮೆರಿಕದ ಆರ್ಥಿಕತೆ ಮತ್ತು ಸೈನಿಕರಿಗೆ ತೊಂದರೆಯಾಗುತ್ತದೆ ಎಂದು ಇವರು ಹೇಳಿದ್ದಾರೆ.

ಆದರೆ, ಅಧ್ಯಕ್ಷರ ಬೆಂಬಲಿಗರು ಇದನ್ನು ವಿರೋಧಿಸುತ್ತಿದ್ದಾರೆ. ಇರಾನ್‌ನ ಪರಮಾಣು ಬೆದರಿಕೆಯನ್ನು ತಡೆಯಲು ಅಧ್ಯಕ್ಷರಿಗೆ ಸಂಪೂರ್ಣ ಅಧಿಕಾರ ಇರಬೇಕು ಎಂಬುದು ಇವರ ವಾದವಾಗಿದೆ.

ಸಂಸತ್ತು ಅಧ್ಯಕ್ಷರ ಪರಮಾಧಿಕಾರದ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದರೂ, ಅಧ್ಯಕ್ಷರು ಅದನ್ನು ತಮ್ಮ ‘ವೀಟೋ’ ಅಧಿಕಾರ ಬಳಸಿ ತಡೆಹಿಡಿಯುವ ಸಾಧ್ಯತೆ ಹೆಚ್ಚಿದೆ. ಅದನ್ನು ಮೀರಿ ಕಾನೂನು ಜಾರಿಗೆ ತರಲು ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ.

ಸಂಸದರಾದ ರೋ ಖನ್ನಾ ಮತ್ತು ಥಾಮಸ್ ಮಾಸ್ಸಿ ಅವರು ಮಂಡಿಸಿದ ಜಂಟಿ ನಿರ್ಣಯದ ಮೇಲೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಚರ್ಚೆ ಪೂರ್ಣಗೊಂಡಿದೆ. ಈ ನಿರ್ಣಯವು ಇರಾನ್ ಮೇಲೆ ಯಾವುದೇ ಮುಂದಿನ ದಾಳಿ ನಡೆಸುವ ಮೊದಲು ಕಾಂಗ್ರೆಸ್‌ನಿಂದ ಹಣಕಾಸಿನ ಅನುಮೋದನೆ ಮತ್ತು ಅಧಿಕೃತ ಯುದ್ಧ ಘೋಷಣೆಯನ್ನು ಕಡ್ಡಾಯಗೊಳಿಸುತ್ತದೆ.

ವೈಟ್ ಹೌಸ್ ಈಗಾಗಲೇ ಈ ನಿರ್ಣಯದ ವಿರುದ್ಧ ಎಚ್ಚರಿಕೆ ನೀಡಿದೆ. ಒಂದು ವೇಳೆ ಸಂಸತ್ತು ಈ ಮಿತಿಯನ್ನು ಅಂಗೀಕರಿಸಿದರೂ, ಅಧ್ಯಕ್ಷರು ತಮ್ಮ ‘ವೀಟೋ’ ಅಧಿಕಾರ ಬಳಸಿ ಅದನ್ನು ರದ್ದುಗೊಳಿಸುವುದಾಗಿ ತಿಳಿಸಿದ್ದಾರೆ. ಇದನ್ನು ಮೀರಿ ಕಾನೂನು ಜಾರಿಗೆ ತರಲು ಸಂಸತ್ತಿನ ಎರಡೂ ಸದನಗಳಲ್ಲಿ 2/3 ಬಹುಮತದ ಅಗತ್ಯವಿದೆ, ಇದು ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಕಷ್ಟಕರವಾಗಿದೆ.

ಕೆಲವು ಕಾನೂನು ತಜ್ಞರು ಮತ್ತು ಸಂಸದರು ಈ ವಿಷಯವನ್ನು ಸುಪ್ರೀಂ ಕೋರ್ಟ್‌ಗೆ ಕೊಂಡೊಯ್ಯಲು ಸಿದ್ಧತೆ ನಡೆಸುತ್ತಿದ್ದಾರೆ. “ಅಧ್ಯಕ್ಷರು ಸಂಸತ್ತಿನ ಅನುಮತಿ ಇಲ್ಲದೆ ಯುದ್ಧ ಸದೃಶ ಸನ್ನಿವೇಶ ಸೃಷ್ಟಿಸುವುದು ಸಂವಿಧಾನ ಬಾಹಿರ” ಎಂಬುದು ಇವರ ಆರೋಪವಾಗಿದೆ.

ಯುರೋಪಿಯನ್ ಒಕ್ಕೂಟ ಮತ್ತು ವಿಶ್ವಸಂಸ್ಥೆ ಅಮೆರಿಕದ ಈ ಆಂತರಿಕ ಬೆಳವಣಿಗೆಯನ್ನು ಗಮನಿಸುತ್ತಿವೆ. ಅಮೆರಿಕದ ಸಂಸತ್ತು ಅಧ್ಯಕ್ಷರ ಅಧಿಕಾರವನ್ನು ನಿಯಂತ್ರಿಸಿದರೆ ಮಾತ್ರ ಮಧ್ಯಪ್ರಾಚ್ಯದಲ್ಲಿ ದೊಡ್ಡ ಮಟ್ಟದ ಯುದ್ಧವನ್ನು ತಪ್ಪಿಸಬಹುದು ಎಂಬುದು ಮಿತ್ರ ರಾಷ್ಟ್ರಗಳ ಅಭಿಪ್ರಾಯವಾಗಿದೆ.

ಸಂಸದರಾದ ರೋ ಖನ್ನಾ ಮತ್ತು ಥಾಮಸ್ ಮಾಸ್ಸಿ ಅವರು ಈ ವಾರವೇ ತಮ್ಮ ನಿರ್ಣಯದ ಮೇಲಿನ ಸಂಸತ್ತಿನಲ್ಲಿ ಮತದಾನಕ್ಕೆ ಒತ್ತಾಯಿಸುತ್ತಿದ್ದಾರೆ. ಅಧ್ಯಕ್ಷರು ಸಂಸತ್ತಿನ ಅನುಮತಿ ಇಲ್ಲದೆ ಯುದ್ಧ ಮುಂದುವರಿಸಬಾರದು ಎಂಬುದು ನಿರ್ಣಯದ ಉದ್ದೇಶ.

ಅಧ್ಯಕ್ಷರು ಈ ಯಾವುದೇ ಮಿತಿಯನ್ನು ಒಪ್ಪಿಕೊಳ್ಳುವ ಸಾಧ್ಯತೆ ಇಲ್ಲ. ಅವರು ತಮ್ಮ ವಿಶೇಷ ಅಧಿಕಾರ ಬಳಸಿ ಈ ನಿರ್ಣಯವನ್ನು ತಡೆಹಿಡಿಯಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಯನಾಡ್ ಭೂಕುಸಿತ; ಪುನರ್ವಸತಿ ಕಾರ್ಯದಲ್ಲಿ ಸಂತ್ರಸ್ತರಿಗೆ 229 ಮನೆಗಳನ್ನು ಹಸ್ತಾಂತರಿಸಿದ ಕೇರಳ ಸರ್ಕಾರ, ಐಯುಎಂಎಲ್

ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಬೃಹತ್ ಭೂಕುಸಿತದ ಸುಮಾರು ಎರಡು ವರ್ಷಗಳ ನಂತರ, ರಾಜ್ಯ ಸರ್ಕಾರವು ಭಾನುವಾರ ಕಲ್ಪೆಟ್ಟಾದ ಪುನರ್ವಸತಿ ಪಟ್ಟಣದಲ್ಲಿ ಸಂತ್ರಸ್ತರಿಗೆ ಮನೆಗಳನ್ನು ಹಸ್ತಾಂತರಿಸಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ₹299...

ಬೆಂಗಳೂರು | ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ : ಮತ್ತೆ ಮೂವರ ಬಂಧನ

ಬೆಂಗಳೂರಿನ ಜಕ್ಕೂರು ಬಳಿಯ ವಿಲ್ಲಾವೊಂದರಲ್ಲಿ ತಮಿಳುನಾಡಿನ 19 ವರ್ಷದ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಅಮೃತಹಳ್ಳಿ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದು, ಈ ಮೂಲಕ ಬಂಧಿತರ ಸಂಖ್ಯೆ...

ಇಸ್ರೇಲ್-ಅಮೆರಿಕ ದಾಳಿ: ಇರಾನ್‌ನ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಹತ್ಯೆ

ಇಸ್ರೇಲ್ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಶನಿವಾರ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ. ಈ ದಾಳಿಯು ಟೆಹ್ರಾನ್‌ನ ಈಶಾನ್ಯ ನರ್ಮಕ್ ಜಿಲ್ಲೆಯಲ್ಲಿರುವ ಅಹ್ಮದಿನೆಜಾದ್...

ಇಸ್ರೇಲ್-ಇರಾನ್ ಕಾಳಗಕ್ಕೆ ಹಿಝ್ಬುಲ್ಲಾ ಎಂಟ್ರಿ : ಐಡಿಎಫ್‌ ದಾಳಿಗೆ ಬೈರುತ್‌ನಲ್ಲಿ 10 ಸಾವು

ಅಮೆರಿಕ, ಇಸ್ರೇಲ್, ಇರಾನ್ ಮತ್ತು ಗಲ್ಫ್ ರಾಷ್ಟ್ರಗಳ ನಡುವಿನ ಸಂಘರ್ಷಕ್ಕೆ ಈಗ ಹಿಝ್ಬುಲ್ಲಾ ಎಂಟ್ರಿಯಾಗಿದೆ. ಇಸ್ರೇಲ್ ಮತ್ತು ಲೆಬನಾನ್‌ನ ಹಿಝ್ಬುಲ್ಲಾ ನಡುವಿನ ಕಾಳಗ ಸೋಮವಾರ (ಮಾ.2) ತೀವ್ರಗೊಂಡಿದೆ. ಇಸ್ರೇಲ್ ಪಡೆಗಳು ಹಿಝ್ಬುಲ್ಲಾವನ್ನು ಗುರಿಯಾಗಿಸಿಕೊಂಡು ಲೆಬನಾನ್...

ಎಸ್‌ಐಆರ್ ಬಡವರ ವಿರುದ್ಧದ ‘ಅಘೋಷಿತ ಯುದ್ಧ’: ಶಿವಸುಂದರ್

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಡವರ ವಿರುದ್ದದ 'ಅಘೋಷಿತ ಯುದ್ದ'ವಾಗಿದೆ. ಇದು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರನ್ನು ಗುರಿಯಾಗಿಸಿಕೊಂಡಿದೆ ಚಿಂತಕ ಶಿವಸುಂದರ್ ಹೇಳಿದರು. ಕಲಬುರಗಿ...

‘ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಯ ಸಾರ ಮತ್ತು ಶೈಲಿ ಎರಡಕ್ಕೂ ರಾಷ್ಟ್ರವು ಭಾರಿ ಬೆಲೆ ತೆರುತ್ತಿದೆ’: ಕಾಂಗ್ರೆಸ್

ನವದೆಹಲಿ: ಇರಾನ್ ಮೇಲೆ ನಡೆದ ಯುದ್ಧಕ್ಕೆ ಸರ್ಕಾರದ ಪ್ರತಿಕ್ರಿಯೆಯು ಭಾರತದ ಮೌಲ್ಯಗಳು, ತತ್ವಗಳು ಮತ್ತು ಹಿತಾಸಕ್ತಿಗಳಿಗೆ ಮಾಡಿದ ದ್ರೋಹವಾಗಿದೆ ಎಂದು ಕಾಂಗ್ರೆಸ್ ಭಾನುವಾರ ಹೇಳಿದೆ, ಪ್ರಧಾನಿ ನರೇಂದ್ರ ಮೋದಿಯವರ ವಿದೇಶಾಂಗ ನೀತಿಯ ಸಾರ...

ಬಂಗಾಳ ಎಸ್‌ಐಆರ್| ಮುಸ್ಲಿಂ ಬಹುಸಂಖ್ಯಾತ ಮುರ್ಷಿದಾಬಾದ್-ಮಾಲ್ಡಾದಲ್ಲಿ ಅತ್ಯಧಿಕ ಮತದಾರರ ಪರಿಶೀಲನೆ ಬಾಕಿ

ರಾಜ್ಯದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ಚುನಾವಣಾ ಆಯೋಗ ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿಯ ಪ್ರಕಾರ, ಪಶ್ಚಿಮ ಬಂಗಾಳದ ಮುಸ್ಲಿಂ ಪ್ರಾಬಲ್ಯದ ಮುರ್ಷಿದಾಬಾದ್ ಮತ್ತು ಮಾಲ್ಡಾ ಜಿಲ್ಲೆಗಳಲ್ಲಿ ದಾಖಲೆಗಳ ಪರಿಶೀಲನೆಗೆ...

‘ಪ್ರಜಾಪ್ರಭುತ್ವ ಜಗತ್ತಿನ ನಾಯಕರು, ಸಾರ್ವಭೌಮ ರಾಷ್ಟ್ರದ ನಾಯಕನನ್ನು ಹತ್ಯೆ ಮಾಡಿದ್ದು ಹೇಯ ಕೃತ್ಯ’: ಖಮೇನಿ ಹತ್ಯೆಗೆ ಪ್ರಿಯಾಂಕ ಗಾಂಧಿ ಖಂಡನೆ

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾನುವಾರ ತೀವ್ರವಾಗಿ ಖಂಡಿಸಿದ್ದಾರೆ. "ಪ್ರಜಾಪ್ರಭುತ್ವ ಜಗತ್ತಿನ ನಾಯಕರು ಎಂದು ಕರೆಯಲ್ಪಡುವವರು" ಸಾರ್ವಭೌಮ ರಾಷ್ಟ್ರದ ನಾಯಕತ್ವವನ್ನು ಗುರಿಯಾಗಿಸಿಕೊಂಡು...

ದುಬೈ-ಅಬುಧಾಬಿ ಮೇಲೆ ದಾಳಿ; ಇರಾನ್‌ಗೆ ಯುಎಇ ಎಚ್ಚರಿಕೆ

ಇರಾನ್ ತನ್ನ ನೆರೆಹೊರೆಯವರನ್ನು ಗುರಿಯಾಗಿಸಿಕೊಳ್ಳಬಾರದು ಎಂದು ಯುಎಇ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರ ಅನ್ವರ್ ಗರ್ಗಶ್ ಎಚ್ಚರಿಕೆ ನೀಡಿದ್ದಾರೆ. "ಗಲ್ಫ್ ರಾಷ್ಟ್ರಗಳ ವಿರುದ್ಧ ಇರಾನ್ ಆಕ್ರಮಣವು ತಪ್ಪು ಲೆಕ್ಕಾಚಾರವಾಗಿದೆ. ಇದೇ ಬೆಳವಣಿಗೆ ನಿರ್ಣಾಯಕ ಹಂತದಲ್ಲಿ ಇರಾನ್...

ಇರಾನ್‌ ಹಂಗಾಮಿ ಸರ್ವೋಚ್ಚ ನಾಯಕರಾಗಿ ಅಯಾತೊಲ್ಲ ಅಲಿರೆಝಾ ಅರಾಫಿ ನೇಮಕ

ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಹಿನ್ನೆಲೆ, ಹಿರಿಯ ಧರ್ಮಗುರು ಅಯತೊಲ್ಲಾ ಅಲಿರೆಝಾ ಅರಾಫಿ ಅವರು ಇರಾನ್‌ನ ಹಂಗಾಮಿ ಸರ್ವೋಚ್ಚ ನಾಯಕರಾಗಿ ಆಯ್ಕೆ ಮಾಡಲಾಗಿದೆ ಎಂದು ಸರ್ಕಾರಿ-ಸಂಯೋಜಿತ...