Homeಮುಖಪುಟಮಹಿಳೆಯರ ಶಬರಿಮಲೆ ಪ್ರವೇಶಕ್ಕೆ ಅನುಮತಿಸಿದ್ದ ತೀರ್ಪು ತಪ್ಪು : 9 ನ್ಯಾಯಾಧೀಶರ ಸುಪ್ರೀಂ ಕೋರ್ಟ್‌ ಪೀಠದ...

ಮಹಿಳೆಯರ ಶಬರಿಮಲೆ ಪ್ರವೇಶಕ್ಕೆ ಅನುಮತಿಸಿದ್ದ ತೀರ್ಪು ತಪ್ಪು : 9 ನ್ಯಾಯಾಧೀಶರ ಸುಪ್ರೀಂ ಕೋರ್ಟ್‌ ಪೀಠದ ಮುಂದೆ ಕೇಂದ್ರ ಸರ್ಕಾರ ಹೇಳಿಕೆ-ವರದಿ

- Advertisement -
- Advertisement -

ಶಬರಿಮಲೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಎಲ್ಲಾ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಅನುಮತಿ ನೀಡಿದ 2018ರ ತೀರ್ಪು ತಪ್ಪಾಗಿದೆ ಮತ್ತು ಅದನ್ನು ತಪ್ಪು ಕಾನೂನು ಎಂದು ಘೋಷಿಸಲು ಅರ್ಹವಾಗಿದೆ ಎಂಬುವುದಾಗಿ ಕೇಂದ್ರ ಸರ್ಕಾರ ಮಂಗಳವಾರ (ಏ.7) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ ಎಂದು ಕಾನೂನು ಸುದ್ದಿ ಸಂಸ್ಥೆ livelaw.in ವರದಿ ಮಾಡಿದೆ.

ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು 9 ನ್ಯಾಯಾಧೀಶರ ಪೀಠದ ಮುಂದೆ, 2018ರ ತೀರ್ಪನ್ನು ಕಾನೂನು ಆಧಾರದ ಮೇಲೆ ಮರುಪರಿಶೀಲಿಸುವ ಮತ್ತು ರದ್ದುಗೊಳಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

“ಇದು ತಪ್ಪಾಗಿ ನಿರ್ಧರಿಸಲ್ಪಟ್ಟಿದೆ ಮತ್ತು ಇದನ್ನು ತಪ್ಪು ಕಾನೂನು ಎಂದು ಘೋಷಿಸಲು ಅರ್ಹವಾಗಿದೆ ಎಂಬುದು ನನ್ನ ವಾದವಾಗಿದೆ” ಎಂದು ವಿಚಾರಣೆಯ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತಿಳಿಸಿದ್ದಾರೆ.

ಶಬರಿಮಲೆ ತೀರ್ಪಿನಲ್ಲಿ ಮಹಿಳೆಯರ ಪ್ರವೇಶದ ಮೇಲಿನ ನಿಷೇಧವು ಅಸ್ಪೃಶ್ಯತೆಗೆ ಸಮಾನವಾಗಿದೆ ಮತ್ತು ಸಂವಿಧಾನದ 17ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ತನ್ನ ಬಲವಾದ ಆಕ್ಷೇಪವಿದೆ ಎಂದು ಸಾಲಿಸಿಟರ್ ಜನರಲ್ ಹೇಳಿದ್ದಾರೆ. ಮಹಿಳೆಯರ ಪ್ರವೇಶದ ಮೇಲಿನ ನಿರ್ಬಂಧವು ಕೇವಲ ವಯಸ್ಸಿನ ಆಧಾರದ ಮೇಲೆ ಇತ್ತು ಎಂದು ಅವರು ವಾದಿಸಿದ್ದಾರೆ. ಅಯ್ಯಪ್ಪ ದೇವಾಲಯಗಳಲ್ಲಿ ಮಹಿಳೆಯರ ಸಾರ್ವತ್ರಿಕ ಹೊರಗಿಡುವಿಕೆ ಇಲ್ಲ. ಶಬರಿಮಲೆಯ ನಿರ್ಬಂಧವು ಅಲ್ಲಿರುವ ದೇವರ ವಿಶಿಷ್ಟ ಸ್ವರೂಪದಿಂದಾಗಿ ಇತ್ತು ಎಂದು ಅವರು ತಿಳಿಸಿದ್ದಾರೆ.

ಭಾರತದ ನಾಗರಿಕತೆಯ ಮೌಲ್ಯಗಳನ್ನು ಅರ್ಥಮಾಡಿಕೊಳ್ಳದೆ, ಪಾಶ್ಚಿಮಾತ್ಯರ ಪಿತೃಪ್ರಭುತ್ವ ಮತ್ತು ಲಿಂಗ ತಾರತಮ್ಯದ ಕಲ್ಪನೆಗಳನ್ನು ಭಾರತಕ್ಕೆ ಕುರುಡಾಗಿ ಅನ್ವಯಿಸಬಾರದು ಎಂದು ಕೂಡ ಸಾಲಿಸಿಟರ್ ಜನರಲ್ ಹೇಳಿದ್ದಾರೆ.

ವಿಧಿನಿಯಮ 25ರ ಅಡಿಯಲ್ಲಿ ಖಾತರಿಪಡಿಸಲಾದ ಸಮಾನ ಹಕ್ಕಿನ ಕುರಿತು ಮಾತನಾಡಿದ ಸಾಲಿಸಿಟರ್ ಜನರಲ್, ಇದನ್ನು ಧರ್ಮಗಳ ನಡುವಿನ ಸಮಾನತೆಯ ಅರ್ಥದಲ್ಲಿ ಅರ್ಥೈಸಿಕೊಳ್ಳಬೇಕು. ವಿಧಿನಿಯಮ 25ರ ಅಡಿಯಲ್ಲಿ ಲಿಂಗದ ವಿಷಯವು ಉದ್ಭವಿಸುವುದಿಲ್ಲ ಎಂದಿದ್ದಾರೆ.

ಭಕ್ತಿಯು ಲಿಂಗ ತಾರತಮ್ಯಕ್ಕೆ ಒಳಗಾಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ಐವರು ನ್ಯಾಯಾಧೀಶರ ಪೀಠವು, 2018ರಲ್ಲಿ 4:1 ಬಹುಮತದೊಂದಿಗೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಅನುಮತಿ ನೀಡಿ ತೀರ್ಪು ಕೊಟ್ಟಿತ್ತು.

ವಿಚಾರಣೆಯ ಸಮಯದಲ್ಲಿ, ಸಾಲಿಸಿಟರ್ ಜನರಲ್ ಅವರು ಸಂವಿಧಾನದ 25 ಮತ್ತು 26 ನೇ ವಿಧಿಗಳ ವ್ಯಾಖ್ಯಾನ ಮತ್ತು ಧಾರ್ಮಿಕ ಆಚರಣೆಗಳ ವಿಷಯಗಳಲ್ಲಿ ನ್ಯಾಯಾಂಗ ಹಸ್ತಕ್ಷೇಪದ ವ್ಯಾಪ್ತಿಗೆ ಸಂಬಂಧಿಸಿದ ವಿಶಾಲವಾದ ಸಾಂವಿಧಾನಿಕ ಪ್ರಶ್ನೆಗಳನ್ನು ಈ ಸಂವಿಧಾನ ಪೀಠದ ಮುಂದಿರುವ ಉಲ್ಲೇಖವು ಒಳಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಒಕ್ಕೂಟ ಸರ್ಕಾರದ ಸಲ್ಲಿಕೆಗಳನ್ನು ಕೇವಲ ಶಬರಿಮಲೆ ಪ್ರಕರಣದ ದೃಷ್ಟಿಕೋನದಿಂದ ಮಾತ್ರ ನೋಡಬಾರದು, ಏಕೆಂದರೆ ಇದು ಒಂದು ವಿಶಿಷ್ಟವಾದ (sui generis) ವಿಷಯವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ. ಅವರ ಪ್ರಕಾರ, ನ್ಯಾಯಾಲಯವು ಪ್ರಸ್ತುತ ಕಾನೂನಿನ ಮೂಲಭೂತ ಪ್ರಶ್ನೆಗಳನ್ನು ಮತ್ತು ನ್ಯಾಯಾಂಗ ನೀತಿಯನ್ನು ಪರಿಶೀಲಿಸುತ್ತಿದ್ದು, ಇದು ಕೇವಲ ಒಂದು ವಿವಾದಕ್ಕೆ ಸೀಮಿತವಾಗದೆ ಹೆಚ್ಚಿನ ವ್ಯಾಪ್ತಿಯ ಪರಿಣಾಮಗಳನ್ನು ಬೀರಬಹುದು.

“ಶಬರಿಮಲೆ ಪ್ರಕರಣವು ಒಂದು ವಿಶಿಷ್ಟವಾದ (Sui Generis) ವಿಷಯ. ಅಂದರೆ, ಇದಕ್ಕೆ ತನ್ನದೇ ಆದ ವಿಶೇಷ ಸಂಪ್ರದಾಯಗಳಿವೆ. ಆದ್ದರಿಂದ, ನಾನು ಕೇವಲ ಈ ಒಂದು ದೇವಸ್ಥಾನದ ಬಗ್ಗೆ ಮಾತ್ರ ಮಾತನಾಡದೆ, ಧಾರ್ಮಿಕ ವಿಚಾರಗಳಲ್ಲಿ ಕಾನೂನು ಹೇಗಿರಬೇಕು ಎಂಬ ದೊಡ್ಡ ಮಟ್ಟದ ಚರ್ಚೆಯ ಬಗ್ಗೆ ಮಾತನಾಡುತ್ತಿದ್ದೇನೆ. ಪ್ರಸ್ತುತ ನ್ಯಾಯಾಲಯವು ಧಾರ್ಮಿಕ ಆಚರಣೆಗಳಲ್ಲಿ ನ್ಯಾಯಾಂಗ ಎಷ್ಟು ಹಸ್ತಕ್ಷೇಪ ಮಾಡಬಹುದು ಎಂಬ ಮೂಲಭೂತ ಕಾನೂನುಗಳನ್ನು ರೂಪಿಸುತ್ತಿದೆ. ನಾನು ಈ ಸಾಮಾನ್ಯ ಕಾನೂನುಗಳ ಬಗ್ಗೆ ಚರ್ಚಿಸುವಾಗ, ಕೇವಲ ಶಬರಿಮಲೆಯ ಉದಾಹರಣೆಗೆ ಅಂಟಿಕೊಳ್ಳುವುದು ಸರಿಯಲ್ಲ. ಹಾಗೆಂದು ನಾನು ಶಬರಿಮಲೆ ತೀರ್ಪನ್ನು ಒಪ್ಪುತ್ತಿದ್ದೇನೆ ಎಂದರ್ಥವಲ್ಲ. 2018ರಲ್ಲಿ ಬಂದ ಆ ತೀರ್ಪು ಕಾನೂನಾತ್ಮಕವಾಗಿ ತಪ್ಪಾಗಿದೆ ಮತ್ತು ಅದನ್ನು ಬದಲಾಯಿಸಲೇಬೇಕು ಎಂಬುದು ನನ್ನ ಬಲವಾದ ವಾದವಾಗಿದೆ. ಶಬರಿಮಲೆಯ ವಿಚಾರವನ್ನು ನಾನು ಬೇರೆ ರೀತಿಯಲ್ಲಿ (ವಿವರವಾಗಿ) ಮಂಡಿಸುತ್ತೇನೆ. ಸದ್ಯಕ್ಕೆ ನನ್ನ ಗಮನವು ಸಂವಿಧಾನದ ವಿಧಿಗಳ (Article 25 & 26) ಸರಿಯಾದ ಅರ್ಥವನ್ನು ನ್ಯಾಯಾಲಯಕ್ಕೆ ವಿವರಿಸುವುದರ ಮೇಲಿದೆ” ಸಾಲಿಸಿಟರ್ ಜನರಲ್ ಹೇಳಿದ್ದಾರೆ.

2018ರಲ್ಲಿ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ ತೀರ್ಪು ಸರಿಯೇ ಅಥವಾ ತಪ್ಪೇ ಎಂಬ ಬಗ್ಗೆ (ಅಂದರೆ ಆ ನಿರ್ದಿಷ್ಟ ಪ್ರಕರಣದ ಮೆರಿಟ್ಸ್‌ ಬಗ್ಗೆ) ಈಗ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಬದಲಾಗಿ, ಈ ಪ್ರಕರಣದಿಂದ ಉದ್ಭವಿಸಿರುವ 7 ಪ್ರಮುಖ ಸಾಂವಿಧಾನಿಕ ಪ್ರಶ್ನೆಗಳಿಗೆ ಮಾತ್ರ ನಾವು ಉತ್ತರ ಕಂಡುಕೊಳ್ಳಲಿದ್ದೇವೆ ಎಂದಿದೆ.

ನವೆಂಬರ್ 2019 ರಲ್ಲಿ, ಶಬರಿಮಲೆ ತೀರ್ಪಿನ ವಿರುದ್ಧ ಸಲ್ಲಿಕೆಯಾದ ಮರುಪರಿಶೀಲನಾ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದ 5 ನ್ಯಾಯಾಧೀಶರ ಪೀಠವು ಕೆಲವು ಪ್ರಮುಖ ವಿಷಯಗಳನ್ನು 9 ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಿತು. ಇದಕ್ಕೆ ಕಾರಣವೇನೆಂದರೆ, ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ಈ ಹಿಂದೆ ನಡೆದಿದ್ದ ‘ಶಿರೂರು ಮಠ’ (7 ನ್ಯಾಯಾಧೀಶರ ಪೀಠ) ಮತ್ತು ‘ದರ್ಗಾ ಕಮಿಟಿ’ (5 ನ್ಯಾಯಾಧೀಶರ ಪೀಠ) ಪ್ರಕರಣಗಳ ತೀರ್ಪುಗಳ ನಡುವೆ ಕೆಲವು ಕಾನೂನಾತ್ಮಕ ವ್ಯತ್ಯಾಸಗಳು ಅಥವಾ ಅಸಂಗತತೆಗಳು ಕಂಡುಬಂದಿದ್ದವು.

9 ನ್ಯಾಯಾಧೀಶರ ಪೀಠ ರೂಪಿಸಿದ 7 ಪ್ರಶ್ನೆಗಳನ್ನು ಹೀಗಿವೆ..

(i) ಭಾರತದ ಸಂವಿಧಾನದ ವಿಧಿನಿಯಮ 25ರ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ವ್ಯಾಪ್ತಿ ಮತ್ತು ಪರಿಧಿ ಏನು?

(ii) ಭಾರತದ ಸಂವಿಧಾನದ ವಿಧಿನಿಯಮ 25ರ ಅಡಿಯಲ್ಲಿ ವ್ಯಕ್ತಿಗಳ ಹಕ್ಕುಗಳು ಮತ್ತು ವಿಧಿನಿಯಮ 26ರ ಅಡಿಯಲ್ಲಿ ಧಾರ್ಮಿಕ ಪಂಗಡಗಳ ಹಕ್ಕುಗಳ ನಡುವಿನ ಪರಸ್ಪರ ಸಂಬಂಧ (inter-play) ಏನು?

(iii) ಭಾರತದ ಸಂವಿಧಾನದ ವಿಧಿನಿಯಮ 26ರ ಅಡಿಯಲ್ಲಿ ಧಾರ್ಮಿಕ ಪಂಗಡವೊಂದಕ್ಕೆ ಇರುವ ಹಕ್ಕುಗಳು, ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯದ ಹೊರತಾಗಿ ಸಂವಿಧಾನದ 3ನೇ ಭಾಗದ (ಮೂಲಭೂತ ಹಕ್ಕುಗಳ) ಇತರ ನಿಬಂಧನೆಗಳಿಗೆ ಒಳಪಟ್ಟಿವೆಯೇ? 

(iv) ಭಾರತದ ಸಂವಿಧಾನದ 25 ಮತ್ತು 26 ನೇ ವಿಧಿಗಳ ಅಡಿಯಲ್ಲಿ ‘ನೈತಿಕತೆ’ (morality) ಎಂಬ ಪದದ ವ್ಯಾಪ್ತಿ ಮತ್ತು ವಿಸ್ತಾರವೇನು ಮತ್ತು ಅದು ‘ಸಾಂವಿಧಾನಿಕ ನೈತಿಕತೆ’ಯನ್ನು ಒಳಗೊಂಡಿದೆಯೇ? 

(v) ಭಾರತದ ಸಂವಿಧಾನದ ವಿಧಿನಿಯಮ 25ರಲ್ಲಿ ಉಲ್ಲೇಖಿಸಲಾದ ಧಾರ್ಮಿಕ ಆಚರಣೆಗೆ ಸಂಬಂಧಿಸಿದಂತೆ ನ್ಯಾಯಾಂಗ ವಿಮರ್ಶೆಯ (Judicial Review) ವ್ಯಾಪ್ತಿ ಮತ್ತು ವಿಸ್ತಾರವೇನು? 

(vi) ಭಾರತದ ಸಂವಿಧಾನದ ವಿಧಿನಿಯಮ 25 (2) (ಬಿ) ನಲ್ಲಿ ಕಂಡುಬರುವ “ಹಿಂದೂಗಳ ವಿಭಾಗಗಳು” (Sections of Hindus) ಎಂಬ ಪದಗುಚ್ಛದ ಅರ್ಥವೇನು? 

(vii) ಧಾರ್ಮಿಕ ಪಂಗಡ ಅಥವಾ ಧಾರ್ಮಿಕ ಗುಂಪಿಗೆ ಸೇರದ ವ್ಯಕ್ತಿಯು ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸುವ ಮೂಲಕ ಆ ಧಾರ್ಮಿಕ ಪಂಗಡ ಅಥವಾ ಧಾರ್ಮಿಕ ಗುಂಪಿನ ಆಚರಣೆಯನ್ನು ಪ್ರಶ್ನಿಸಬಹುದೇ? 

ಇಂದು ವಾದಗಳನ್ನು ಆರಂಭಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಸಂವಿಧಾನದ 25 ಮತ್ತು 26ನೇ ವಿಧಿಗಳಿಗೆ ಸಂಬಂಧಿಸಿದ ಸಂವಿಧಾನ ಸಭೆಯ ಚರ್ಚೆಗಳನ್ನು ನ್ಯಾಯಪೀಠದ ಗಮನಕ್ಕೆ ತಂದರು. ನ್ಯಾಯಾಂಗವು ರೂಪಿಸಿರುವ ‘ಅಗತ್ಯ ಧಾರ್ಮಿಕ ಆಚರಣೆಗಳ’ (essential religious practices) ಪರೀಕ್ಷೆಯು ದೋಷಪೂರಿತವಾಗಿದೆ ಎಂದು ಅವರು ವಾದಿಸಿದರು. ಅಲ್ಲದೆ, ಯಾವುದೇ ಧಾರ್ಮಿಕ ಆಚರಣೆಯ ಅಗತ್ಯತೆಯನ್ನು ನಿರ್ಧರಿಸುವುದು ನ್ಯಾಯಾಲಯಗಳ ಕೆಲಸವಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ವಿಧಿನಿಯಮ 25(2)(ಬಿ) ಅಡಿಯಲ್ಲಿ, ಸಾಮಾಜಿಕ ಸುಧಾರಣೆ ಅಥವಾ ಧಾರ್ಮಿಕ ಸಂಸ್ಥೆಗಳನ್ನು ಎಲ್ಲಾ ವರ್ಗದ ಜನರಿಗೆ ಮುಕ್ತಗೊಳಿಸುವ ಕಾನೂನು ರೂಪಿಸುವ ಅಧಿಕಾರವು ಶಾಸಕಾಂಗದ (legislature) ವ್ಯಾಪ್ತಿಗೆ ಬರುತ್ತದೆಯೇ ಹೊರತು, ನ್ಯಾಯಾಲಯಗಳದ್ದಲ್ಲ ತುಷಾರ್ ಮೆಹ್ತಾ ವಾದಿಸಿದ್ದು, ಧಾರ್ಮಿಕ ಆಚರಣೆಗಳಲ್ಲಿ ಬದಲಾವಣೆ ತರುವುದು ಚುನಾಯಿತ ಪ್ರತಿನಿಧಿಗಳ ಜವಾಬ್ದಾರಿಯಾಗಿದ್ದು, ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಇಂತಹ ಬದಲಾವಣೆಗಳನ್ನು ಮಾಡಬಾರದು ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಅವರ ನೇತೃತ್ವದ 9 ನ್ಯಾಯಾಧೀಶರ ಸಾಂವಿಧಾನಿಕ ಪೀಠ ಏಪ್ರಿಲ್ 7, 2026ರಂದು ಶಬರಿಮಲೆ ಪ್ರಕರಣದ ಮರುಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಆರಂಭಿಸಿದೆ. ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಬಿ. ವಿ. ನಾಗರತ್ನ, ಎಂ. ಎಂ. ಸುಂದರೇಶ್, ಅಹ್ಸಾನುದ್ದೀನ್ ಅಮಾನುಲ್ಲಾ, ಅರವಿಂದ್ ಕುಮಾರ್, ಅಗಸ್ಟೀನ್ ಜಾರ್ಜ್ ಮಸಿಹ್, ಪ್ರಸನ್ನ ಬಿ. ವರಾಳೆ, ಆರ್. ಮಹದೇವನ್ ಮತ್ತು ಜಾಯ್‌ಮಾಲ್ಯ ಬಾಗ್ಚಿ ಇದ್ದಾರೆ.

Courtesy : livelaw.in













ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಂಯಮ ಮುಗಿದಿದೆ’: ಟ್ರಂಪ್ ಬೆದರಿಕೆಗೆ ಜಗ್ಗದ ಇರಾನ್; ಪ್ರದೇಶವನ್ನು ಮೀರಿ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದ ಐಆರ್‌ಜಿಸಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನಿಗೆ ನೀಡಿದ್ದ ಗಡುವು ಕೆಲವೇ ಗಂಟೆಗಳು ಬಾಕಿ ಇರುವಾಗ, ಟ್ರಂಪ್ ಬೆದರಿಕೆಯನ್ನು ಧಿಕ್ಕರಿಸಿದ ಇರಾನ್ "ಸಂಯಮ ಮುಗಿದಿದೆ" ಎಂದು ಹೇಳಿದೆ ಮತ್ತು ಅದು ಈಗ ಈ ಪ್ರದೇಶದಲ್ಲಿನ...

ಒಡಿಶಾ| ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣ; ಬುಡಕಟ್ಟು ಜನಾಂಗ – ಪೊಲೀಸರ ನಡುವೆ ಘರ್ಷಣೆ

ಒಡಿಶಾದ ರಾಯಗಡ ಜಿಲ್ಲೆಯಲ್ಲಿ ಸಿಜಿಮಾಲಿ ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣದ ಬಗ್ಗೆ ಮಂಗಳವಾರ (ಏಪ್ರಿಲ್ 7) ಸ್ಥಳೀಯ ಬುಡಕಟ್ಟು ಜನಾಂಗದವರೊಂದಿಗಿನ ಘರ್ಷಣೆಯಲ್ಲಿ 40 ಭದ್ರತಾ ಸಿಬ್ಬಂದಿ ಸೇರಿದಂತೆ ಸುಮಾರು 50 ಜನರು ಗಾಯಗೊಂಡಿದ್ದಾರೆ. ಜಿಲ್ಲೆಯ...

ಕೇರಳದಲ್ಲಿ ಬಿಜೆಪಿ ಅಭ್ಯರ್ಥಿಯಿಂದ ‘ಲವ್ ಜಿಹಾದ್’ ಹೇಳಿಕೆ; ಜಿಲ್ಲಾಧಿಕಾರಿಯಿಂದ ವರದಿ ಕೇಳಿದ ಚುನಾವಣಾ ಆಯೋಗ

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ ಅಥವಾ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗದ ಗೆಲುವು ರಾಜ್ಯದಲ್ಲಿ "ಲವ್ ಜಿಹಾದ್" ಘಟನೆಗಳಿಗೆ ಕಾರಣವಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಪಿ ಕೆ ಕೃಷ್ಣದಾಸ್ ನೀಡಿದ ಹೇಳಿಕೆಯ...

ಮಣಿಪುರ: ಇಬ್ಬರು ಮಕ್ಕಳ ಹತ್ಯೆ ಖಂಡಿಸಿ ಇಂಫಾಲ್ ಕಣಿವೆಯಲ್ಲಿ ಪ್ರತಿಭಟನೆ; 5 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ

ಮಣಿಪುರ: ಕಣಿವೆಯ ಐದು ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಬ್ರಾಡ್‌ಬ್ಯಾಂಡ್, ವಿಎಸ್‌ಎಟಿಗಳು ಮತ್ತು ವಿಪಿಎನ್ ಸೇರಿದಂತೆ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಲು ಮಣಿಪುರ ಸರ್ಕಾರ ಮಂಗಳವಾರ ಆದೇಶಿಸಿದೆ. ಗೃಹ ಇಲಾಖೆಯ ಅಧಿಕೃತ...

ಶ್ರೀನಗರದಲ್ಲಿ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಸೇರಿದಂತೆ ಐವರ ಬಂಧನ; ಅಂತರರಾಜ್ಯ ಎಲ್‌ಇಟಿ ಮಾಡ್ಯೂಲ್ ಪತ್ತೆ 

ಶ್ರೀನಗರ: ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಂಗಳವಾರ ಶ್ರೀನಗರದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಅಂತರರಾಜ್ಯ ಮಾಡ್ಯೂಲ್ ಅನ್ನು ಭೇದಿಸಿದ್ದು, ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಸೇರಿದಂತೆ ಐದು...

ಟರ್ಕಿಯ ಇಸ್ತಾನ್‌ಬುಲ್‌ನಲ್ಲಿರುವ ಇಸ್ರೇಲಿ ರಾಯಭಾರ ಕಚೇರಿ ಬಳಿ ಗುಂಡಿನ ದಾಳಿ: ಮೂವರು ಸಾವು

ಇಸ್ತಾನ್‌ಬುಲ್‌ನಲ್ಲಿರುವ ಇಸ್ರೇಲಿ ಕಾನ್ಸುಲೇಟ್ ಕಟ್ಟಡದ ಬಳಿ ಮಂಗಳವಾರ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ, ಅಧಿಕಾರಿಗಳು ಆ ಪ್ರದೇಶವನ್ನು...

ತೆಲಂಗಾಣ ಸಿಎಂ ರೆಡ್ಡಿ ವಿರುದ್ಧ ಪಿಣರಾಯಿ ವಿಜಯನ್ ವಾಗ್ದಾಳಿ; ತೀವ್ರ ಸ್ವರೂಪ ಪಡೆದುಕೊಂಡ ವಾಕ್ಸಮರ

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ (ಏ.7) ವಾಗ್ದಾಳಿ ನಡೆಸಿದ್ದಾರೆ. ಇಬ್ಬರು ನಾಯಕರ ನಡುವಿನ ಮಾತಿನ ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಣ್ಣೂರಿನಲ್ಲಿ ನಡೆದ ಪತ್ರಿಕಾ ಸಂವಾದ...

ಹಿಮಂತ ಬಿಸ್ವಾ ಶರ್ಮಾ ಪತ್ನಿಯ ವಿರುದ್ಧ ‘ಹಲವು ಪಾಸ್‌ಪೋರ್ಟ್‌’ ಹೊಂದಿರುವ ಆರೋಪ : ಪವನ್ ಖೇರಾ ಮನೆಯಲ್ಲಿ ಶೋಧ ನಡೆಸಿದ ಅಸ್ಸಾಂ ಪೊಲೀಸರು

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಪ್ರಕರಣ ದಾಖಲಿಸಿದ ಬೆನ್ನಲ್ಲೇ, ಅಸ್ಸಾಂ ಪೊಲೀಸರು ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ಮನೆಯಲ್ಲಿ ಶೋಧ...

ಮಮತಾ ಬ್ಯಾನರ್ಜಿ ಅವರ ಟಿಎಂಸಿ ಕೇಂದ್ರದ ಹಣವನ್ನು ಪಕ್ಷದ ಚಟುವಟಿಕೆಗಳಿಗೆ ಬಳಸಿಕೊಂಡಿದೆ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕೇಂದ್ರ ನಿಧಿಯ ದುರುಪಯೋಗ ಮತ್ತು ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ತೀವ್ರ ಕುಸಿತವಾಗಿದೆ ಎಂದು...

ವಿದ್ಯುತ್ ಸ್ಥಾವರಗಳ ಸುತ್ತ ಮಾನವ ಸರಪಳಿ ರಚಿಸುವಂತೆ ಇರಾನಿನ ಯುವಕರಿಗೆ ಮನವಿ

ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆದರಿಕೆ ದಾಳಿಗಳಿಗೆ ಮುಂಚಿತವಾಗಿ ವಿದ್ಯುತ್ ಸ್ಥಾವರಗಳ ಸುತ್ತ ಮಾನವ ಸರಪಳಿಗಳನ್ನು ರಚಿಸುವಂತೆ ಇರಾನ್ ಸರ್ಕಾರ 'ಕ್ರೀಡಾಪಟುಗಳು, ಕಲಾವಿದರು, ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಅವರ...