HomeUncategorizedತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

- Advertisement -
- Advertisement -

‘ಮಳೆ ನಿಂತರೂ ಮರದ ಹನಿ ನಿಲ್ಲಲ್ಲ’ ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು ಈ ಮಾತಿಗೆ ಇನ್ನಷ್ಟು ಪುಷ್ಟಿ ನೀಡುವಂತೆ ಮಾಡುತ್ತದೆ. ಮೇ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿ, ಮತದಾನದ ಪ್ರಕ್ರಿಯೆಯೆಂಬ ಮಳೆ ನಿಂತಿದೆ. ಜನಾದೇಶ ಸ್ಪಷ್ಟವಾಗಿ ಬಂದಿದ್ದರೂ, ಅದರ ನಂತರದ ಸರ್ಕಾರ ರಚನೆಯ ಹನಿಗಳು ನಿಲ್ಲದೆ ಕುತೂಹಲ ಮೂಡಿಸಿದೆ.

108 ಸ್ಥಾನಗಳನ್ನು ಗೆದ್ದ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ತಮಿಳಗ ವೆಟ್ರಿ ಕಳಗಂ (TVK), 118 ರ ಬಹುಮತವನ್ನು ತಲುಪಲು ಕನಿಷ್ಠ 10 ಸ್ಥಾನಗಳ ಅಗತ್ಯವಿತ್ತು. ಕಾಂಗ್ರೆಸ್‌ನ 5 ಸ್ಥಾನಗಳೊಂದಿಗೆ, ವಿಜಯ್ ಗೆದ್ದ ಎರಡು ಸ್ಥಾನಗಳಲ್ಲಿ ಒಂದನ್ನು ಹೊರತುಪಡಿಸಿದರೆ, ಸಂಖ್ಯೆ 112 ಆಗಲಿದೆ. ಬಹುಮತ ಸಾಬೀತುಪಡಿಸಲು ಟಿವಿಕೆಗೆ ಇನ್ನೂ 6 ಸ್ಥಾನಗಳ ಅಗತ್ಯವಿದೆ. ಸಿಪಿಐ-2 ಮತ್ತು ಸಿಪಿಐ(ಎಂ)-2 ಬೆಂಬಲ ಸೂಚಿಸಿದರೆ ಒಟ್ಟು ಸಂಖ್ಯೆ 116 ಆಗುತ್ತದೆ. ಇನ್ನು 2 ಸ್ಥಾನ ಗೆದ್ದಿರುವ ವಿಸಿಕೆ ತಮಿಳಗ ವೆಟ್ರಿ ಕಳಗಂ (TVK) ಗೆ ಬೆಂಬಲ ನೀಡಿದರೆ ಸರ್ಕಾರ ರಚನೆಯ ಕಸರತ್ತು ಸುಲಭವಾಗುತ್ತದೆ.

ಅನುಮಾನಗಳಿಗೆ ಕಾರಣವಾಗುತ್ತಿರುವ ರಾಜ್ಯಪಾಲರ ನಡೆ

ತಮಿಳುನಾಡು ವಿಧಾನಸಭೆಯ ಒಟ್ಟು ಸ್ಥಾನಗಳು 234. ಸರ್ಕಾರ ರಚಿಸಲು ಬೇಕಾದ ಕನಿಷ್ಠ ಬಹುಮತ 118. ಆದರೆ ವಿಜಯ್ ಅವರ ಟಿವಿಕೆ ಪಕ್ಷವು 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆಯಾದರೂ, ಬಹುಮತಕ್ಕೆ ಇನ್ನೂ 10 ಸ್ಥಾನಗಳ ಕೊರತೆಯಿದೆ. ರಾಜ್ಯಪಾಲರ ಪ್ರಕಾರ, ಕೇವಲ ಅತಿ ದೊಡ್ಡ ಪಕ್ಷವಾದ ಮಾತ್ರಕ್ಕೆ ಸರ್ಕಾರ ರಚಿಸಲು ಸಾಧ್ಯವಿಲ್ಲ, ಸದನದಲ್ಲಿ ವಿಶ್ವಾಸ ಸಾಬೀತುಪಡಿಸುವಷ್ಟು ಸಂಖ್ಯಾಬಲದ ಖಚಿತ ಪುರಾವೆ ಬೇಕು ಎಂದಿದ್ದಾರೆ.

ಬೆಂಬಲ ಪತ್ರದ ತಾಂತ್ರಿಕ ಸಮಸ್ಯೆಯ ನೆಪ: ಕಾಂಗ್ರೆಸ್ ಮತ್ತು ಇತರರು ಬೆಂಬಲ ನೀಡುವ ಭರವಸೆ ನೀಡಿದ್ದರೂ, ವಿಜಯ್ ಅವರು ಆ ಪಕ್ಷಗಳ ಶಾಸಕರ ಸಹಿ ಇರುವ ಅಧಿಕೃತ ‘ಬೆಂಬಲ ಪತ್ರ’ವನ್ನು (Letter of Support) ರಾಜ್ಯಪಾಲರಿಗೆ ಸಲ್ಲಿಸಿಲ್ಲ ಎನ್ನಲಾಗಿದೆ. ಸಂವಿಧಾನದ ಪ್ರಕಾರ, ಮೈತ್ರಿಕೂಟದ ಬೆಂಬಲದ ಮೇಲೆ ಸರ್ಕಾರ ರಚಿಸುವಾಗ ಪ್ರತಿಯೊಬ್ಬ ಬೆಂಬಲಿತ ಶಾಸಕನ ಸಹಿ ಕಡ್ಡಾಯವಾಗಿರುತ್ತದೆ. ಪ್ರಸ್ತುತ ವಿಜಯ್ ಅವರ ಬಳಿ 112 ಶಾಸಕರ ಬೆಂಬಲ ಮಾತ್ರ ಇದೆ ಎಂದು ಮೂಲಗಳು ತಿಳಿಸಿವೆ (ಬಹುಮತಕ್ಕೆ 118 ಬೇಕು).

ಆದರೆ ಸಹಿ ಕಡ್ಡಾಯವೇ?

ವಿಶ್ವಾಸದ ಆಧಾರ: ವಿಜಯ್ ಅವರು “ನನ್ನ ಬಳಿ ಇಷ್ಟು ಮಂದಿಯ ಬೆಂಬಲವಿದೆ” ಎಂದು ಹೇಳಿದಾಗ, ಅವರ ಮೇಲೆ ನಂಬಿಕೆಯಿಟ್ಟು ಅವಕಾಶ ನೀಡುವುದು ರಾಜ್ಯಪಾಲರ ಕರ್ತವ್ಯ. ಆದರೆ, “ಮ್ಯಾಜಿಕ್ ನಂಬರ್” (118) ಗಿಂತ ಕಡಿಮೆ ಸ್ಥಾನಗಳಿದ್ದಾಗ, ರಾಜ್ಯಪಾಲರು “ಖಚಿತತೆ”ಗಾಗಿ ಬೆಂಬಲ ಪತ್ರವನ್ನು ಕೇಳುತ್ತಾರೆ. ಆದರೆ ಸಹಿ ಕಡ್ಡಾಯವಲ್ಲ ಯಾವುದೇ ಕಾನೂನು ಅಥವಾ ಸಂವಿಧಾನದ ವಿಧಿಯು ಶಾಸಕರ ಸಹಿ ಇರುವ ಪಟ್ಟಿಯನ್ನು ನೀಡುವುದು ಕಡ್ಡಾಯ ಎಂದು ಹೇಳುವುದಿಲ್ಲ.

ರಾಜ್ಯಪಾಲರು ಯಾರಿಗೆ ಬಹುಮತವಿದೆ ಎಂದು ರಾಜಭವನದ ಒಳಗಡೆ ನಿರ್ಧರಿಸುವಂತಿಲ್ಲ. ಬಹುಮತದ ಪರೀಕ್ಷೆಯು ಕೇವಲ ವಿಧಾನಸಭೆಯ ಒಳಗಡೆ (On the floor of the House) ನಡೆಯಬೇಕು. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆಯನ್ನು ಮೊದಲು ಆಹ್ವಾನಿಸಿ, ಅವರಿಗೆ ಬಹುಮತ ಸಾಬೀತುಪಡಿಸಲು ಸಮಯ ನೀಡುವುದು ಸಾಂವಿಧಾನಿಕ ಸಂಪ್ರದಾಯ ಮತ್ತು ರಾಜ್ಯಪಾಲರ ಕರ್ತವ್ಯ

“ರಾಜ್ಯಪಾಲರು 118 ಜನರ ಸಹಿ ಬೇಕು ಎಂದು ಹಠ ಹಿಡಿಯುವುದು ಅಸಂವಿಧಾನಿಕ. ಅತಿ ದೊಡ್ಡ ಪಕ್ಷವನ್ನು ಮೊದಲು ಕರೆದು ವಿಶ್ವಾಸ ಮತ ಯಾಚಿಸಲು ಅವಕಾಶ ಕೊಡಬೇಕು. ಸಹಿ ಸಂಗ್ರಹಿಸುವುದು ಅಥವಾ ಶಾಸಕರನ್ನು ರಾಜ್ಯಪಾಲರ ಮುಂದೆ ಪರೇಡ್ ಮಾಡಿಸುವುದು ಪ್ರಜಾಪ್ರಭುತ್ವದ ಘನತೆಗೆ ತಕ್ಕುದಲ್ಲ.” ಎನ್ನುತ್ತಾರೆ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ.

ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ನಾಲ್ಕು ದಿನ ಕಳೆದರೂ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷಕ್ಕೆ ಸರ್ಕಾರ ರಚಿಸಲು ಆಹ್ವಾನ (ಈ ಲೇಖನವನ್ನು ನೀವು ಓದುವ ವೇಳೆಗೆ ಸರ್ಕಾರ ರಚಿಸುವ ಹಾದಿ ಸುಗಮವೂ ಆಗಿರಲೂಬಹುದು) ಸಿಗದಿರುವುದು ಈಗ ಹಲವು ಸಾಂವಿಧಾನಿಕ ಪ್ರಶ್ನೆಗಳ ಜೊತೆಗೆ ‘ರಾಜಕೀಯ ಪಿತೂರಿ’ಯ ಶಂಕೆಯನ್ನೂ ಹುಟ್ಟುಹಾಕಿದೆ.

ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಟಿವಿಕೆಗೆ ಆಹ್ವಾನ ನೀಡಲು ವಿಳಂಬ ಮಾಡುತ್ತಿರುವುದು ಕೇವಲ ‘ಸಂಖ್ಯಾಬಲ’ದ ಕಾರಣಕ್ಕೋ ಅಥವಾ ಇದರ ಹಿಂದೆ ದೆಹಲಿಯ ‘ದೂರದರ್ಶನ’ವಿದೆಯೇ ಎಂಬ ಚರ್ಚೆ ಜೋರಾಗಿದೆ. 108 ಸ್ಥಾನಗಳನ್ನು ಗೆದ್ದಿರುವ ವಿಜಯ್‌ಗೆ ಕಾಂಗ್ರೆಸ್‌ನ 5 ಶಾಸಕರು ಮತ್ತು ಎಡಪಕ್ಷಗಳ ಬೆಂಬಲ ಸೇರಿದರೂ 118ರ ಗಡಿ ತಲುಪಲು ಕಷ್ಟವಾಗುತ್ತಿದೆ. ಈ ‘ಸಣ್ಣ ಅಂತರ’ವನ್ನೇ ಬಳಸಿಕೊಂಡು ಕೇಂದ್ರದ ಆಣತಿಯಂತೆ ರಾಜ್ಯಪಾಲರು ಬಿಕ್ಕಟ್ಟು ಸೃಷ್ಟಿಸುತ್ತಿದ್ದಾರೆಯೇ ಎಂಬ ವಾದಕ್ಕೆ ಪುಷ್ಟಿ ಸಿಗುತ್ತಿದೆ.

ಎನ್.ಡಿ.ಎ (NDA) ಮಿತ್ರಪಕ್ಷವಾಗಿರುವ ಎಐಎಡಿಎಂಕೆ (AIADMK) ಜೊತೆ ಟಿವಿಕೆ ಮೈತ್ರಿ ಮಾಡಿಕೊಳ್ಳುವಂತೆ ತೆರೆಮರೆಯ ಒತ್ತಡಗಳು ನಡೆಯುತ್ತಿವೆ. ವಿಜಯ್ ಅವರು ಜಾತ್ಯತೀತ ನಿಲುವಿನ ಕಾಂಗ್ರೆಸ್ ಜೊತೆ ಗುರುತಿಸಿಕೊಳ್ಳಲು ಬಯಸಿದ್ದಾರೆ. ಆದರೆ, ಬಿಜೆಪಿಗೆ ತಮಿಳುನಾಡಿನಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಎಐಎಡಿಎಂಕೆ ಮತ್ತು ಟಿವಿಕೆ ಒಂದಾಗುವುದು ಅನಿವಾರ್ಯವಾಗಿದೆ. ಈ ಮೈತ್ರಿಗೆ ವಿಜಯ್ ಒಪ್ಪುವವರೆಗೆ ರಾಜ್ಯಪಾಲರು ಆಹ್ವಾನ ನೀಡದೆ ಕಾಲಹರಣ ಮಾಡುತ್ತಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ಗಂಭೀರ ಆರೋಪ.

ಕರ್ನಾಟಕ, ತೆಲಂಗಾಣ ಮತ್ತು ಈಗ ತಮಿಳುನಾಡು – ಈ ರಾಜ್ಯಗಳಲ್ಲಿ ಬಿಜೆಪಿ ನೇರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಾಗದಿದ್ದಾಗ, ರಾಜ್ಯಪಾಲರನ್ನು ಬಳಸಿಕೊಂಡು ಸರ್ಕಾರದ ಹಾದಿಗೆ ಮುಳ್ಳು ಹರಡುವುದು ಅಥವಾ ಮೈತ್ರಿ ಬದಲಿಸುವಂತೆ ಒತ್ತಡ ಹೇರುವುದು ಒಂದು ‘ಪ್ಯಾಟರ್ನ್’ ಆಗಿ ಬದಲಾಗಿದೆ. ತಮಿಳುನಾಡಿನಲ್ಲಿ ವಿಜಯ್ ಅನಿವಾರ್ಯವಾಗಿ ಬಿಜೆಪಿಯ ಮಿತ್ರಪಕ್ಷಗಳ ಮೊರೆ ಹೋಗುವಂತೆ ಮಾಡುವಲ್ಲಿ ಕೇಂದ್ರದ ಚಾಣಕ್ಯ ನೀತಿ ಕೆಲಸ ಮಾಡುತ್ತಿದೆ ಎಂಬ ಶಂಕೆ ದಟ್ಟವಾಗಿದೆ.

ವಿಜಯ್ ಅವರ ಪಕ್ಷವನ್ನು ಆಹ್ವಾನಿಸಿ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಅವಕಾಶ ನೀಡುವುದೇ ಸರಿಯಾದ ಕ್ರಮ. ಆದರೆ, ರಾಜ್ಯಪಾಲರು ‘ಖಚಿತವಾದ ಬಹುಮತ’ ಇಲ್ಲದ ಸರ್ಕಾರ ರಚನೆಯಿಂದ ಮುಂದೆ ಮತ್ತೊಂದು ಬಿಕ್ಕಟ್ಟು ಎದುರಾಗಬಹುದು ಎಂಬ ನೆಪವೊಡ್ಡಿ ವಿಳಂಬ ಮಾಡುತ್ತಿದ್ದಾರೆ. ಇದು ಮೇಲ್ನೋಟಕ್ಕೆ ‘ಸಾಂವಿಧಾನಿಕ ಜಾಗರೂಕತೆ’ಯಂತೆ ಕಂಡರೂ, ಒಳಗೊಳಗೆ ಇದು ‘ರಾಜಕೀಯ ತಂತ್ರ’ದಂತೆ ಕಾಣುತ್ತಿದೆ

ಒಂದು ಪಕ್ಷಕ್ಕೆ ಕೆಲವೇ ಸ್ಥಾನಗಳ ಕೊರತೆಯಿರುವಾಗ ಆ ಪಕ್ಷಕ್ಕೆ ಮೊದಲ ಅವಕಾಶ ನೀಡುವುದು ಸಂವಿಧಾನಿಕ ಸಂಪ್ರದಾಯ. ವಿಳಂಬ ಮಾಡುವುದು ಕೇವಲ ‘ಕುದುರೆ ವ್ಯಾಪಾರ’ಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ಗಂಭೀರತೆಯೂ ರಾಜ್ಯಪಾಲರಿಗೆ ಅರ್ಥವಾಗುತ್ತಿಲ್ಲವೋ ಅಥವಾ ದೆಹಲಿಯಿಂದ ಬರಬಹುದಾದ ಸಂದೇಶಕ್ಕೆ ಕಾಯುತ್ತಿದ್ದಾರೋ ಎಂಬುದು ಯಕ್ಷ ಪ್ರಶ್ನೆಯೇನಲ್ಲ.

ಸದ್ಯ ರಾಜ್ಯಪಾಲರ ಒಪ್ಪಿಗೆ

ತಮಿಳುನಾಡಿನಲ್ಲಿ ಸ್ಥಿರ ಸರ್ಕಾರ ರಚಿಸಲು ಅಗತ್ಯವಿರುವ 118 ಬಹುಮತ ಸಂಖ್ಯೆಗಳನ್ನು ವಿಜಯ್ ನೇತೃತ್ವದ ಟಿವಿಕೆ ಶುಕ್ರವಾರ ಪಡೆಯುವಲ್ಲಿ ಯಶಸ್ವಿಯಾಗಿದೆ. ಮೂರನೇ ಬಾರಿಗೆ ಲೋಕಭವನಕ್ಕೆ ತೆರಳಿ ರಾಜ್ಯಪಾಲರಿಗೆ ಬೆಂಬಲದ ಪತ್ರವನ್ನು ನೀಡಿದ್ದಾರೆ. ಹೀಗಾಗಿ, ಇಂದು ಮುಖ್ಯಮಂತ್ರಿಯಾಗಿ ವಿಜಯ್‌ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಹೆಚ್ಚಾಗಿದೆ. ಈ ನಡುವೆ ಟಿವಿಕೆ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಸರ್ಕಾರ ರಚನೆಗೆ ರಾಜ್ಯಪಾಲರು ಹಸಿರು ನಿಶಾನೆ ತೋರಿದ್ದು, ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ಪದಗ್ರಹಣ ಮಾಡಲಿದ್ದಾರೆ.

ಸಿನಿಮಾ ಪರದೆಯ ಮೇಲೆ ವಿಲನ್ಗಳನ್ನು ಸದೆಬಡಿಯುವ ವಿಜಯ್‌ಗೆ, ಮುಂಬರುವ ವಾಸ್ತವ ರಾಜಕಾರಣ ಸವಾಲಾಗಿ ಪರಿಣಮಿಸಿವೆ. ಈ ಸರ್ಕಸ್‌ನಲ್ಲಿ ವಿಜಯ್ ಗೆಲ್ಲುತ್ತಾರೋ ಅಥವಾ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿಯುತ್ತಾರೋ ಎನ್ನುವುದು ತಮಿಳುನಾಡಿನ ಮುಂದಿನ ಐದು ವರ್ಷಗಳ ಭವಿಷ್ಯವನ್ನು ನಿರ್ಧರಿಸಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...

ಬಿಹಾರ-ಬಂಗಾಳದ ಬಳಿಕ ಕರ್ನಾಟಕದ ಸರತಿ; ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

ಭಾಗ-1 ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಜಾರಿ ಮಾಡಿದ ಹಿಂದಿನ ದುರುದ್ದೇಶ ಬಿಹಾರದ ಬಳಿಕ ಈಗ ಪಶ್ಚಿಮ ಬಂಗಾಳದಲ್ಲಿ ಸಾಬೀತಾಗಿದೆ. ಹಿಂದಿನ ಚುನಾವಣೆಗಳಲ್ಲಿ ಕಡಿಮೆ...

ವಿಜಯ್ ಪಕ್ಷದ ಗೆಲುವಿಗೆ ಕಾರಣವಾದ ಡಿಎಂಕೆ-ಎಐಎಡಿಎಂಕೆ ಪಕ್ಷದ ವಲಸೆ ನಾಯಕರು

50 ವರ್ಷಗಳಿಂದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಎಂಬ ಎರಡು ದ್ರಾವಿಡ ಪಕ್ಷಗಳ ಅಧಿಪತ್ಯದಲ್ಲಿದ್ದ ತಮಿಳು ಮಣ್ಣಿನಲ್ಲಿ ಈಗ ಮಹತ್ವದ ಬದಲಾವಣೆ ಗಾಳಿ ಬೀಸಿದೆ. ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ...