Homeದಲಿತ್ ಫೈಲ್ಸ್ಶಾಖಾಪುರ ದಲಿತರ ಮೇಲಿನ ಹಲ್ಲೆ ಪ್ರಕರಣ: ಸಿಎಂ, ಗೃಹ ಸಚಿವರಿಗೆ ಪತ್ರ, ಅಗ್ನಿವೀರನ ಬೆನ್ನಿಗೆ ನಿಂತ...

ಶಾಖಾಪುರ ದಲಿತರ ಮೇಲಿನ ಹಲ್ಲೆ ಪ್ರಕರಣ: ಸಿಎಂ, ಗೃಹ ಸಚಿವರಿಗೆ ಪತ್ರ, ಅಗ್ನಿವೀರನ ಬೆನ್ನಿಗೆ ನಿಂತ ಭಾರತೀಯ ಸೇನೆ

- Advertisement -
- Advertisement -

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಖಾಪುರ ಗ್ರಾಮದಲ್ಲಿ ದಲಿತ ಸಮುದಾಯದವರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಭಾರತೀಯ ಸೇನೆ ತೀವ್ರವಾಗಿ ಪರಿಗಣಿಸಿದೆ. ದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಗ್ನಿವೀರ ಯೋಧ ಶಿವಕುಮಾರ್ ತಳವಾರ ಅವರ ಕುಟುಂಬಕ್ಕೆ ತಕ್ಷಣವೇ ಸೂಕ್ತ ಪೊಲೀಸ್ ರಕ್ಷಣೆ ಒದಗಿಸುವಂತೆ ಕೋರಿ ಭಾರತೀಯ ಸೇನೆಯು ರಾಜ್ಯದ ಮುಖ್ಯಮಂತ್ರಿ, ಗೃಹ ಸಚಿವರು, ಯಾದಗಿರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ (SP) ಅಧಿಕೃತ ಪತ್ರ ಬರೆದಿದೆ.

ಘಟನೆಯ ಹಿನ್ನೆಲೆ ಏನು?

ಆಗಸ್ಟ್ 1 ರಂದು ಶಾಖಾಪುರ ಗ್ರಾಮದಲ್ಲಿ ಮೃತರೊಬ್ಬರ ಅಂತ್ಯಕ್ರಿಯೆಗೆ ಗುಂಡಿ (ಕುಣಿ) ಅಗೆಯುವ ವಿಷಯಕ್ಕೆ ಸಂಬಂಧಿಸಿದಂತೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿತ್ತು. ಈ ವೇಳೆ ಅಗ್ನಿವೀರ ಶಿವಕುಮಾರ್ ತಳವಾರ ಅವರ ತಾಯಿ, ಮಾವ ಹಾಗೂ ದಲಿತ ಸಮುದಾಯದ ಇತರ ಕೆಲವರ ಮೇಲೆ ಮೇಲ್ವರ್ಗದವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಗಡಿಯಲ್ಲಿ ಕರ್ತವ್ಯದಲ್ಲಿದ್ದ ಯೋಧ ಶಿವಕುಮಾರ್, ಘಟನೆಯಿಂದ ಮನನೊಂದು ಸೆಲ್ಫಿ ವಿಡಿಯೋ ಹಂಚಿಕೊಂಡಿದ್ದರು. “ನಾನು ದೇಶದ ಗಡಿಯಲ್ಲಿ ದೇಶ ಕಾಯುತ್ತಿದ್ದೇನೆ, ಆದರೆ ಹುಟ್ಟೂರಿನಲ್ಲಿ ನನ್ನ ಕುಟುಂಬಕ್ಕೆ ರಕ್ಷಣೆ ಇಲ್ಲದಂತಾಗಿದೆ” ಎಂದು ಭಾವುಕರಾಗಿ ತಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

17 ಮಂದಿ ವಿರುದ್ಧ ಎಫ್‌ಐಆರ್ ದಾಖಲಾದರೂ ಬಂಧಿಸಿಲ್ಲ:

ಈ ಕೃತ್ಯಕ್ಕೆ ಸಂಬಂಧಿಸಿದಂತೆ ಸುರಪುರ ಪೊಲೀಸ್ ಠಾಣೆಯಲ್ಲಿ 17 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೆ ಪ್ರಕರಣ ದಾಖಲಾಗಿ ಹಲವು ದಿನಗಳು ಕಳೆದರೂ ಒಬ್ಬೇ ಒಬ್ಬ ಆರೋಪಿಯನ್ನೂ ಪೊಲೀಸರು ಬಂಧಿಸಿಲ್ಲ ಎಂದು ದಲಿತ ಸಂಘಟನೆಗಳು ಕಟುವಾಗಿ ಟೀಕಿಸಿವೆ. ಪೊಲೀಸರ ವಿಳಂಬ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿರುವ ದಲಿತ ಮುಖಂಡರು ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ಕಟ್ಟುನಿಟ್ಟಿನ ತನಿಖೆಯ ಭರವಸೆ ನೀಡಿದ ಎಸ್ಪಿ:

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಪೃಥ್ವಿಕ್ ಶಂಕರ್, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಆದರೆ, ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲೇ ಇರದ ಕೆಲವರ ಹೆಸರುಗಳನ್ನು ದೂರಿನಲ್ಲಿ ಸೇರಿಸಲಾಗಿದೆ ಎಂಬ ಮಾಹಿತಿ ನಮಗೆ ಲಭ್ಯವಾಗಿದೆ. ಈ ಎಲ್ಲಾ ಆಯಾಮಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ತನಿಖೆಯ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಆದರೆ ಸಾಕಷ್ಟು ಪ್ರತಿಭಟನೆಗಳನ್ನು ನಡೆಸಿದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ಇದರಿಂದ ನಮಗೆ ಕಾನೂನಿನ ಮೇಲಿದ್ದ ಭರವಸೆಯೇ ಕಡಿಮೆಯಾಗುತ್ತಿದೆ. ಸರ್ಕಾರ ಕೂಡಲೇ ಆರೋಪಿಗಳನ್ನು ಬಂಧಿಸಿ ನಮಗೆ ನ್ಯಾಯ ಒದಗಿಸಬೇಕು ಎಂದು ದಲಿತ ಮುಖಂಡ ಮಲ್ಲಿಕಾರ್ಜುನ ಕ್ರಾಂತಿ ಒತ್ತಾಯಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಯಚೂರು ದಲಿತ ದೌರ್ಜನ್ಯ: ಪ್ರಕರಣಗಳನ್ನು CIDಗೆ ಒಪ್ಪಿಸುವಂತೆ ಆಗ್ರಹಿಸಿ ಗೃಹ ಸಚಿವರನ್ನು ಭೇಟಿಯಾದ ನಿಯೋಗ

ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ದಲಿತರ ಮೇಲೆ ಸಾಲು ಸಾಲು ದೌರ್ಜನ್ಯ, ಕೊಲೆ ಹಾಗೂ ಅತ್ಯಾಚಾರದಂತಹ ಭೀಕರ ಕೃತ್ಯಗಳು ಹೆಚ್ಚಾಗುತ್ತಿರುವುದನ್ನು ತೀವ್ರವಾಗಿ ಖಂಡಿಸಿ, ದಲಿತ ಹಕ್ಕುಗಳ ಹೋರಾಟಗಾರರ ಹಾಗೂ ಪ್ರಮುಖ ಮುಖಂಡರ ನಿಯೋಗವು ಗೃಹ...

ಶಾರ್ಜೀಲ್ ಇಮಾಮ್‌ಗೆ 7 ದಿನಗಳ ಮಧ್ಯಂತರ ಜಾಮೀನು ಮಂಜೂರು

ವಿದ್ಯಾರ್ಥಿ ಹೋರಾಟಗಾರ ಶಾರ್ಜೀಲ್ ಇಮಾಮ್‌ಗೆ ಅವರ ಸೋದರಸಂಬಂಧಿಯ ಮದುವೆಯಲ್ಲಿ ಪಾಲ್ಗೊಳ್ಳಲು ದೆಹಲಿ ನ್ಯಾಯಾಲಯವು ಏಳು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಜಾಮೀನು ಅಕ್ಟೋಬರ್ 4 ರಿಂದ ಅಕ್ಟೋಬರ್ 10 ರವರೆಗೆ ಇರಲಿದೆ...

ಎಬಿವಿಪಿ ಒತ್ತಡಕ್ಕೆ ಮುಸ್ಲಿಂ ಪ್ರಾಧ್ಯಾಪಕಿ ರಾಜೀನಾಮೆ; ಕಾಲೇಜು ಆವರಣ ‘ಶುದ್ಧೀಕರಣ’ ಮಾಡಿದ ಬಲಪಂಥೀಯ ಗುಂಪು

ಕೋಲ್ಕತ್ತಾದ ಸುರೇಂದ್ರನಾಥ ಕಾಲೇಜಿನ ಮುಸ್ಲಿಂ ಪ್ರಾಧ್ಯಾಪಕಿ ಮೊಹಮ್ಮದಿ ತರನ್ನುಮ್ ಅವರನ್ನು ಹಾಜರಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 11ರಂದು ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದೆ. ಇದಾದ ಬಳಿಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು...

SIR ಪರಿಶೋಧ ಹಾಗೂ ಪ್ರತಿರೋಧ ಪ್ರವಾಸಕ್ಕೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಚಾಲನೆ: ಸಿಪಿಐ(ಎಂ) ಬೆಂಬಲ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ 'SIR ವಿರೋಧಿ ಕರ್ನಾಟಕ', ನಾಗರಿಕ ಮತಕಾವಲು ಸಮಿತಿ, ಜಾತ್ಯತೀತ ಪಕ್ಷಗಳು ಹಾಗೂ ವಿವಿಧ ನಾಗರಿಕ ಸಂಘಟನೆಗಳ...

ಪಶ್ಚಿಮ ಬಂಗಾಳ: ಸರ್ಕಾರದ ಜೊತೆ ಇರಬೇಕಾದರೆ ಎಲೆಕ್ಷನ್ ‘ಟೆಸ್ಟ್’ನಲ್ಲಿ ಗೆಲ್ಲಿ, ಮುಸ್ಲಿಮರಿಗೆ ಸುವೇಂದು ಅಧಿಕಾರಿ ಎಚ್ಚರಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ನಂದಿಗ್ರಾಮ ಮತ್ತು ರೆಜಿನಗರ ಕ್ಷೇತ್ರಗಳ ಮುಂಬರುವ ಉಪಚುನಾವಣೆಯನ್ನು ಅಲ್ಪಸಂಖ್ಯಾತರಿಗೆ ಒಂದು ‘ಪರೀಕ್ಷೆ’ ಎಂದು ಕರೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ವಿವಾದ ಹಾಗೂ ಕಳವಳಕ್ಕೆ ಕಾರಣವಾಗಿದೆ....

ಮಹಿಳೆಯರ ಮೇಲಿನ ದಾಳಿಗಳು ಮತ್ತಷ್ಟು ಹಿಂಸಾತ್ಮಕವಾಗುತ್ತಿವೆ: ಪ್ರಿಯಾಂಕಾ ಗಾಂಧಿ

ದೆಹಲಿ ಮತ್ತು ಬಿಹಾರದಲ್ಲಿ ಮಹಿಳೆಯರ ಮೇಲೆ ಇತ್ತೀಚೆಗೆ ನಡೆದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಳವಳ ವ್ಯಕ್ತಪಡಿಸಿದ್ದು, ಇಂತಹ ದಾಳಿಗಳು ಹೆಚ್ಚಾಗುತ್ತಿರುವುದು ಮಾತ್ರವಲ್ಲದೆ ಇನ್ನಷ್ಟು ಹಿಂಸಾತ್ಮಕವಾಗುತ್ತಿವೆ...

ಜಮುಯಿ ಅಪ್ರಾಪ್ತರ ಮೇಲಿನ ದೌರ್ಜನ್ಯ ಪ್ರಕರಣ: ಎನ್‌ಕೌಂಟರ್ ಬಳಿಕ ಪ್ರಮುಖ ಆರೋಪಿ ನಂದನ್ ಯಾದವ್ ಬಂಧನ; 7 ಮಂದಿಯಲ್ಲಿ 5 ಮಂದಿ ವಶಕ್ಕೆ

ಪಾಟ್ನಾ: ಬಿಹಾರದ ಜಮುಯಿ ಜಿಲ್ಲೆಯಲ್ಲಿ ಕೋಚಿಂಗ್‌ ತರಗತಿಯಿಂದ ಮನೆಗೆ ಮರಳುತ್ತಿದ್ದ ಅಪ್ರಾಪ್ತ ಬಾಲಕಿ ಮತ್ತು ಬಾಲಕನನ್ನು ತಡೆದು ಹಲ್ಲೆ ಮಾಡಿ, ಕಿರುಕುಳ ನೀಡಿದ ಪ್ರಕರಣದಲ್ಲಿ ಪೊಲೀಸರು ಪ್ರಮುಖ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ....

ಬಿಹಾರ|ಸಭ್ಯ ರೀತಿಯಲ್ಲಿ ಅನೈತಿಕ ಪೊಲೀಸ್‌ಗಿರಿ ಮಾಡಿ: ಬಿಜೆಪಿ ಸಚಿವೆ ಶ್ರೇಯಸಿ ಸಿಂಗ್

ಬಿಹಾರದ ಜಮುಯಿ ಜಿಲ್ಲೆಯಲ್ಲಿ ಯುವಕ ಮತ್ತು ಯುವತಿಗೆ ಗುಂಪೊಂದು ಸಾರ್ವಜನಿಕವಾಗಿ ಕಿರುಕುಳ ನೀಡಿದ ಘಟನೆಯನ್ನು ಖಂಡಿಸುವ ಭರದಲ್ಲಿ, ‘ಅನೈತಿಕ ಪೊಲೀಸ್‌ಗಿರಿಯನ್ನು ಹೆಚ್ಚು ಸಭ್ಯ ಮತ್ತು ಘನತೆಯುತ ರೀತಿಯಲ್ಲಿ ಮಾಡಬಹುದು’ ಎಂದು ಬಿಹಾರದ ಬಿಜೆಪಿ...

ಭೋಪಾಲ್: ಮಕ್ಕಳ ಸಾವಿನ ಬಗ್ಗೆ ವರದಿ ಮಾಡುತ್ತಿದ್ದಾಗ ಪೊಲೀಸರು ಹೋಟೆಲ್‌ಗಳಿಂದ ಹೊರಹಾಕಿದರು ಎಂದು ಖ್ಯಾತ ಯೂಟ್ಯೂಬರ್ ಕಾವ್ಯ ಕರ್ನಾಟಕ್ ಆರೋಪ

ಭೋಪಾಲ್: ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ಮಕ್ಕಳ ಸಾವಿನ ಕುರಿತು ವರದಿ ಮಾಡಲು ತೆರಳಿದ್ದ ತಮ್ಮ ತಂಡವನ್ನು ಎರಡು ಹೋಟೆಲ್‌ಗಳಿಂದ ಹೊರಹೋಗುವಂತೆ ಒತ್ತಾಯಿಸಲಾಯಿತು. ಪೊಲೀಸರು ಹೋಟೆಲ್‌ಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ದೆಹಲಿಯಿಂದ ಬಂದ ಪತ್ರಕರ್ತರನ್ನು ಅಲ್ಲಿಂದ...

DELHI SIR |’ನೋಟಿಸ್‌ಗಳನ್ನು ಯಾಂತ್ರಿಕವಾಗಿ ನೀಡಿದಂತಿದೆ, ಲಾಜಿಕಲ್ ಡಿಸ್ಕ್ರಿಪೆನ್ಸಿ ಬಗ್ಗೆ ಸ್ಪಷ್ಟನೆ ಅಗತ್ಯ : ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌

ದೆಹಲಿಯ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಮಯದಲ್ಲಿ ಮತದಾರರಿಗೆ ನೀಡಲಾದ ನೋಟಿಸ್‌ಗಳು 'ಬಹುತೇಕ ಯಾಂತ್ರಿಕವಾಗಿ' ಜಾರಿಯಾದಂತೆ ಕಂಡುಬರುತ್ತಿವೆ ಮತ್ತು 'ತಾರ್ಕಿಕ ವ್ಯತ್ಯಾಸ'ವನ್ನು ಗುರುತಿಸಲು ಬಳಸಲಾದ ಆಧಾರದ ಬಗ್ಗೆ ಸ್ಪಷ್ಟೀಕರಣದ ಅಗತ್ಯವಿದೆ...