Homeಮುಖಪುಟಎಸ್‌ಐಆರ್ ಪೂರ್ಣಗೊಂಡ ರಾಜ್ಯಗಳ ಫಾರ್ಮ್-6 ರಲ್ಲಿನ 'ಸ್ವಘೋಷಣೆ' ನಿಯಮಕ್ಕೆ ಬ್ರೇಕ್‌; ವಿವಾದದ ಬೆನ್ನಲ್ಲೇ ಚುನಾವಣಾ ಆಯೋಗದ...

ಎಸ್‌ಐಆರ್ ಪೂರ್ಣಗೊಂಡ ರಾಜ್ಯಗಳ ಫಾರ್ಮ್-6 ರಲ್ಲಿನ ‘ಸ್ವಘೋಷಣೆ’ ನಿಯಮಕ್ಕೆ ಬ್ರೇಕ್‌; ವಿವಾದದ ಬೆನ್ನಲ್ಲೇ ಚುನಾವಣಾ ಆಯೋಗದ ನಿರ್ಧಾರ

- Advertisement -
- Advertisement -

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪೂರ್ಣಗೊಂಡಿರುವ ರಾಜ್ಯಗಳಲ್ಲಿ, ಆನ್‌ಲೈನ್ ಮತದಾರರ ನೋಂದಣಿ ‘ಫಾರ್ಮ್ 6’ ರಲ್ಲಿದ್ದ ಹೆಚ್ಚುವರಿ ಎಸ್‌ಐಆರ್-ಸಂಬಂಧಿತ ಸ್ವಯಂಘೋಷಣಾ ಪತ್ರವನ್ನು ಚುನಾವಣಾ ಆಯೋಗವು ಹಿಂಪಡೆದಿದೆ. ಈ ನಿಯಮವು ಎಸ್‌ಐಆರ್ ಪ್ರಕ್ರಿಯೆಯ ಸಮಯದಲ್ಲಿ ಮಾತ್ರ ಅನ್ವಯಿಸುತ್ತದೆ ಎಂದು ಚುನಾವಣಾ ಆಯೋಗ ತೀರ್ಮಾನಿಸಿದ ಕೆಲವು ದಿನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಈ ಹೊಸ ಸ್ವಘೋಷಣಾ ಪತ್ರದಲ್ಲಿ, ಹೊಸದಾಗಿ ಅರ್ಜಿ ಸಲ್ಲಿಸುವ ಮತದಾರರು ತಮ್ಮನ್ನು ಅಥವಾ ತಮ್ಮ ಪೋಷಕರನ್ನು/ಅಜ್ಜ-ಅಜ್ಜಿಯಂದಿರನ್ನು ಹಿಂದಿನ ತೀವ್ರ ಪರಿಷ್ಕರಣೆಯ ಸಮಯದಲ್ಲಿ ತಯಾರಿಸಲಾದ ಮತದಾರರ ಪಟ್ಟಿಗೆ ಲಿಂಕ್ ಮಾಡುವ ವಿವರಗಳನ್ನು ಒದಗಿಸುವುದು ಕಡ್ಡಾಯವಾಗಿತ್ತು. ಪ್ರಸ್ತುತ ಎಸ್‌ಐಆರ್ ಪ್ರಕ್ರಿಯೆ ಚಾಲ್ತಿಯಲ್ಲಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಪತ್ರವು ಆಯೋಗದ ಇಸಿಐನೆಟ್ ಪೋರ್ಟಲ್‌ನಲ್ಲಿ ಇಂದಿಗೂ ಲಭ್ಯವಿದೆ.

ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡಿರುವ ರಾಜ್ಯಗಳಲ್ಲಿ, ಈ ಹೆಚ್ಚುವರಿ ಸ್ವಘೋಷಣಾ ಪತ್ರವನ್ನು ಇಸಿಐನೆಟ್ ಆ್ಯಪ್ ಮತ್ತು ಪೋರ್ಟಲ್‌ನಿಂದ ಹಾಗೂ ಆಯಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳ ಪೋರ್ಟಲ್‌ಗಳಿಂದ ತೆಗೆದುಹಾಕಲಾಗಿದೆ. ಪರಿಣಾಮವಾಗಿ, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಬಯಸುವ ಅರ್ಜಿದಾರರು ಈಗ ‘ಎಲೆಕ್ಟರ್ಸ್ ರೂಲ್ಸ್, 1960’ ರ ಅಡಿಯಲ್ಲಿ ನಿಗದಿಪಡಿಸಲಾದ ಶಾಸನಬದ್ಧ ‘ಫಾರ್ಮ್ 6’ ಅನ್ನು ಮಾತ್ರ ಭರ್ತಿ ಮಾಡಿದರೆ ಸಾಕಾಗುತ್ತದೆ.

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರನ್ನೊಳಗೊಂಡ ಪೂರ್ಣ ಪ್ರಮಾಣದ ಆಯೋಗವು ಸೆಪ್ಟೆಂಬರ್ 26 ರಂದು ನಡೆಸಿದ ಸಭೆಯ ನಂತರ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಸಭೆಯ ನಂತರ ಪ್ರತಿಕ್ರಿಯಿಸಿದ್ದ ಚುನಾವಣಾ ಆಯೋಗ, ಫಾರ್ಮ್ 6 ರ ಜೊತೆ ಲಗತ್ತಿಸಲಾದ ಸ್ವಘೋಷಣಾ ಪತ್ರವು ಎಸ್‌ಐಆರ್ ಪ್ರಕ್ರಿಯೆಗೆ ಮಾತ್ರ ಸೀಮಿತವಾಗಿದ್ದು, “ಎಸ್‌ಐಆರ್ ಅಲ್ಲದ ಅವಧಿಯಲ್ಲಿ ನಿಯಮಗಳ ಪ್ರಕಾರ (ಎಲೆಕ್ಟರ್ಸ್ ರೂಲ್ಸ್, 1960) ಅನ್ವಯವಾಗುವ ಫಾರ್ಮ್‌ಗಳನ್ನೇ ಬಳಸಲಾಗುತ್ತದೆ” ಎಂದು ಸ್ಪಷ್ಟಪಡಿಸಿತ್ತು.

ಫಾರ್ಮ್ 6 ರಲ್ಲಿ ಮಾಡಲಾದ ಮಾರ್ಪಾಡುಗಳ ಕುರಿತು ಆಯುಕ್ತರಾದ ಸಂಧು ಮತ್ತು ಜೋಶಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದರೆಂಬ ವಿಷಯ ಹೊರಬಿದ್ದ ನಂತರ ಈ ವಿಚಾರವು ವಿವಾದಕ್ಕೆ ಕಾರಣವಾಗಿತ್ತು.

ಅರ್ಹ ನಾಗರಿಕರು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಸಲ್ಲಿಸುವ ಶಾಸನಬದ್ಧ ಅರ್ಜಿಯೇ ಫಾರ್ಮ್ 6. ನಿಯಮಗಳನ್ನು ತಿದ್ದುಪಡಿ ಮಾಡದೆ ‘ಎಲೆಕ್ಟರ್ಸ್ ರೂಲ್ಸ್, 1960’ ರ ಅಡಿಯಲ್ಲಿ ನಿಗದಿಪಡಿಸಲಾದ ಫಾರ್ಮ್ ಅನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬ ಆಧಾರದ ಮೇಲೆ ಜೋಶಿ ಅವರು ಈ ಬದಲಾವಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸಂಧು ಅವರು ಕೂಡ ಜೋಶಿ ಅವರ ಅಭಿಪ್ರಾಯವನ್ನು ಬೆಂಬಲಿಸಿದ್ದರು.

ಇಸಿಐನೆಟ್‌ನಲ್ಲಿ ಆನ್‌ಲೈನ್ ಫಾರ್ಮ್ 6 ಪ್ರಕ್ರಿಯೆಯಲ್ಲಿ ಎಸ್‌ಐಆರ್ ಸಂಬಂಧಿತ ಸ್ವಘೋಷಣಾ ಪತ್ರವನ್ನು ಸೇರಿಸಿದ ನಂತರವೂ ಸಂಧು ಅವರು ಮತ್ತೊಮ್ಮೆ ಆಕ್ಷೇಪ ವ್ಯಕ್ತಪಡಿಸಿ, ಈ ಬದಲಾವಣೆಯು “ಅನಧಿಕೃತ/ಅಕ್ರಮ” ಎಂದು ಹೇಳಿ, ಈ ನಿಯಮ ತೆಗೆದುಹಾಕುವಂತೆ ಆಗ್ರಹಿಸಿದ್ದರು.

ಆದರೆ ಸಾರ್ವಜನಿಕ ಪ್ರಕಟಣೆಗಳಲ್ಲಿ ಚುನಾವಣಾ ಆಯೋಗವು ಫಾರ್ಮ್ 6 ಅನ್ನು ತಿದ್ದುಪಡಿ ಮಾಡಲಾಗಿಲ್ಲ, ಬದಲಿಗೆ ಸ್ವಘೋಷಣಾ ಪತ್ರವು ಎಸ್‌ಐಆರ್‌‌ಗೆ ಮಾತ್ರ ಸಂಬಂಧಿಸಿದ ಹೆಚ್ಚುವರಿ ಅಗತ್ಯತೆಯಾಗಿತ್ತು ಎಂದು ಪ್ರತಿಪಾದಿಸಿದೆ. ಅಲ್ಲದೆ, ಬಿಹಾರ ಎಸ್‌ಐಆರ್ ಕುರಿತ ತನ್ನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಕೂಡ ಈ ಸ್ವಘೋಷಣಾ ಪತ್ರವನ್ನು ಎತ್ತಿಹಿಡಿದಿತ್ತು ಎಂದೂ ಸ್ಪಷ್ಟಪಡಿಸಿದೆ.

ಎಸ್‌ಐಆರ್‌ಗೆ ಸಂಬಂಧಿಸಿದ ನಿರ್ಧಾರಗಳು ಮತ್ತು ಆದೇಶಗಳು ತಮ್ಮ ಗಮನಕ್ಕೆ ತರದೆ ಅಥವಾ ಶಿಫಾರಸು ಇಲ್ಲದೆ ಹೊರಡಿಸಲಾಗಿದೆ ಎಂದು ಕಳೆದ 10 ತಿಂಗಳುಗಳಲ್ಲಿ ಸಂಧು ಮತ್ತು ಜೋಶಿ ಅವರು ಕನಿಷ್ಠ 14 ಬಾರಿ ಅಧಿಕೃತ ದಾಖಲೆಗಳಲ್ಲಿ ಆಕ್ಷೇಪಿಸಿದ್ದಾರೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದ ನಂತರ ಸೆಪ್ಟೆಂಬರ್ 26 ರ ಈ ನಿರ್ಧಾರಗಳು ಹೊರಬಿದ್ದಿವೆ.

ಸೆಪ್ಟೆಂಬರ್ 26 ರಂದು ನೀಡಿದ ಹೇಳಿಕೆಯಲ್ಲಿ, ಎಸ್‌ಐಆರ್‌ಗೆ ಸಂಬಂಧಿಸಿದ ಆದೇಶಗಳು ಮೂವರೂ ಚುನಾವಣಾ ಆಯುಕ್ತರ ಸರ್ವಾನುಮತದ ಒಪ್ಪಿಗೆಯನ್ನು ಹೊಂದಿವೆ ಎಂದು ಆಯೋಗವು ಸಮರ್ಥಿಸಿಕೊಂಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಆಯೋಗದ ವಿರುದ್ಧ ವ್ಯಂಗ್ಯಚಿತ್ರ: ಸತೀಶ್ ಆಚಾರ್ಯ Instagram ಖಾತೆಗೆ ಭಾರತದಲ್ಲಿ ನಿರ್ಬಂಧ; ಮಂಜುಲ್‌ಗೂ ತಡೆ

ನವದೆಹಲಿ: ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಯ ಕುರಿತು ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ್ದ ರಾಜಕೀಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ Instagram ಖಾತೆಗೆ ಭಾರತದಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ. ಇದೇ ವೇಳೆ ಮತ್ತೊಬ್ಬ...

ಎಸ್‌ಐಆರ್ ಹಾಗೂ ಚುನಾವಣಾ ಆಯೋಗದ ಅಕ್ರಮ ಖಂಡಿಸಿ ‘ಇಂಡಿಯಾ’ ಮೈತ್ರಿಕೂಟದ ರಾಷ್ಟ್ರವ್ಯಾಪಿ ಅಭಿಯಾನ: ಪ್ರಜಾಪ್ರಭುತ್ವ ರಕ್ಷಣೆಗೆ ವಿಪಕ್ಷಗಳಿಂದ 6 ಪ್ರಮುಖ ಬೇಡಿಕೆಗಳು!

ಚುನಾವಣಾ ಆಯೋಗದ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯ ಅಕ್ರಮಗಳು, 'ಫಾರ್ಮ್ 6' ನಮೂನೆಯಲ್ಲಿ ಸಾಫ್ಟ್‌ವೇರ್ ಮೂಲಕ ತಂದಿದ್ದ ಅಡೆತಡೆಗಳು ಹಾಗೂ ಮತದಾರರ ಪಟ್ಟಿಯಿಂದ ಅರ್ಹರ ಹೆಸರು ರದ್ದುಗೊಳಿಸಿರುವ ಕ್ರಮಗಳನ್ನು ಖಂಡಿಸಿ 'ಇಂಡಿಯಾ'...

ಮ್ಯಾನ್ಮಾರ್‌ನಲ್ಲಿ ಜನನಿಬಿಡ ಮಾರುಕಟ್ಟೆ ಮೇಲೆ ವೈಮಾನಿಕ ದಾಳಿ: 50ಕ್ಕೂ ಹೆಚ್ಚು ಸಾವು; ಗಡೀಪಾರು ನಿಲ್ಲಿಸಲು ಮಲೇಷ್ಯಾಕ್ಕೆ ವಿಶ್ವಸಂಸ್ಥೆ ಕರೆ

ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಜನನಿಬಿಡ ಮಾರುಕಟ್ಟೆಯ ಮೇಲೆ ನಡೆದ ಮಿಲಿಟರಿ ವೈಮಾನಿಕ ದಾಳಿಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ವೋಲ್ಕರ್ ಟರ್ಕ್ ತೀವ್ರವಾಗಿ ಖಂಡಿಸಿದ್ದಾರೆ. ಕ್ಯುಕ್ತಾವ್ ಪಟ್ಟಣದಲ್ಲಿ ನಡೆದ ಈ ದಾಳಿಯಲ್ಲಿ ಮಹಿಳೆಯರು...

ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಶಿಕ್ಷಣ ಕ್ಷೇತ್ರದಲ್ಲಿ RSS ಕಾರ್ಯಸೂಚಿಗಳನ್ನು ತಡೆಯುವಂತೆ ಖರ್ಗೆ-ರಾಹುಲ್ ಸೂಚನೆ

ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಶಿಕ್ಷಣ ಕ್ಷೇತ್ರದಲ್ಲಿ ಆರ್‌ಎಸ್‌ಎಸ್ ಹಾಗೂ ಸಂಘ ಪರಿವಾರದ ವಿಭಜಕ ಮತ್ತು ಕೋಮು ಕಾರ್ಯಸೂಚಿಯನ್ನು ಜಾರಿಗೆ ತರುವುದನ್ನು ತಕ್ಷಣವೇ ತಡೆಯಬೇಕು ಹಾಗೂ ಸಂಪೂರ್ಣ ವಿದ್ಯಾರ್ಥಿ ಕೇಂದ್ರಿತ, ಜಾತ್ಯತೀತ ಶಿಕ್ಷಣ ನೀತಿಗಳನ್ನು...

ಎನ್‌ಸಿಇಆರ್‌ಟಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ‘ಸೆಂಗೋಲ್‌’ ಸೇರ್ಪಡೆ

ನೂತನ ಸಂಸತ್ ಭವನದಲ್ಲಿ ಸ್ಥಾಪಿಸಲಾದ ಸೆಂಗೋಲ್‌ (ರಾಜದಂಡ) ಈಗ ಎನ್‌ಸಿಇಆರ್‌ಟಿಯ 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ಭಾಗವಾಗಿದೆ. ಪಠ್ಯಪುಸ್ತಕವು ಇದನ್ನು "ಆಡಳಿತ ಮತ್ತು ಉತ್ತಮ ಆಡಳಿತದ ಸಾಂಸ್ಕೃತಿಕ ಸಂಕೇತ" ಎಂದು...

Mangaluru| MRPLನಲ್ಲಿ ಭಾರಿ ಸ್ಫೋಟ: 8 ಮಂದಿಗೆ ಗಾಯ, ಕಂಪಿಸಿದ ಜೋಕಟ್ಟೆಯ ಮನೆಗಳು-ಅಂಗನವಾಡಿ

ಮಂಗಳೂರು ನಗರದ ಹೊರವಲಯದ ಜೋಕಟ್ಟೆ ಬಳಿ ಇರುವ ಮಂಗಳೂರು ರಿಫೈನರಿ ಅಂಡ್‌ ಪೆಟ್ರೋಕೆಮಿಕಲ್ಸ್‌‌ ಲಿಮಿಟೆಡ್‌ (MRPL) ಸಂಸ್ಥೆಯ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ (ಸಿಎಚ್‌ಟಿ) ಬುಧವಾರ ಮಧ್ಯಾಹ್ನ 12:15 ರ ಸುಮಾರಿಗೆ ಭಾರಿ...

‘ಇವಿಎಂ ಬಿಜೆಪಿ ಬಳಸುವ ಸಾಧನ’: ಬ್ಯಾಲೆಟ್ ಪೇಪರ್‌ಗೆ ಮರಳಲು ಖರ್ಗೆ ಒತ್ತಾಯ; ಗ್ಯಾನೇಶ್ ಕುಮಾರ್ ವಿರುದ್ಧ ವಾಗ್ದಾಳಿ

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಕಾಂಗ್ರೆಸ್ ಮತ್ತು ಕೇಂದ್ರದ ಆಡಳಿತಾರೂಢ ಬಿಜೆಪಿ ನಡುವಿನ ರಾಜಕೀಯ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ, ಕಾಂಗ್ರೆಸ್ ಅಧ್ಯಕ್ಷ...

‘ಮಹಿಳೆಯರೇ ಪರಿಸ್ಥಿತಿ ಬದಲಿಸುತ್ತಾರೆ’: ಸುರಕ್ಷತೆ ಹೆಸರಿನಲ್ಲಿ ನಿರ್ಬಂಧ, ಅತ್ಯಾಚಾರ, ಲಿಂಗಾಧಾರಿತ ಹಿಂಸೆ ವಿರುದ್ಧ ದೆಹಲಿ ವಿದ್ಯಾರ್ಥಿನಿಯರ ಪ್ರತಿಭಟನೆ

ನವದೆಹಲಿ: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಮರುಕಳಿಸುತ್ತಿರುವ ಬೆನ್ನಲ್ಲೇ, ಮಹಿಳೆಯರ ಸುರಕ್ಷತೆಯ ಹೆಸರಿನಲ್ಲಿ ಅವರ ಸ್ವಾತಂತ್ರ್ಯ ಮತ್ತು ಚಲನವಲನದ ಮೇಲೆಯೇ ನಿರ್ಬಂಧ ಹೇರುವ ಕ್ರಮಗಳ ವಿರುದ್ಧ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಬೀದಿಗಿಳಿದು...

ಉಮರ್ ಖಾಲಿದ್ – ಶಾರ್ಜೀಲ್ ಇಮಾಮ್ ಅವರ ಮೂರನೇ ಜಾಮೀನು ಅರ್ಜಿಯನ್ನೂ ತಿರಸ್ಕರಿಸಿದ ದೆಹಲಿ ಹೈಕೋರ್ಟ್‌

2020ರ ಈಶಾನ್ಯ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಠಿಣ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿತರಾಗಿರುವ ವಿದ್ಯಾರ್ಥಿ ಹೋರಾಟಗಾರರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಯನ್ನು...

Mysore| SIR ವಿರುದ್ಧ ಸರ್ಕಾರ ವಿಶೇಷ ಅಧಿವೇಶನ ನಡೆಸಲಿ: ಪ್ರಕಾಶ್ ರಾಜ್

ಕೇಂದ್ರ ಚುನಾವಣಾ ಆಯೋಗವು ಜಾರಿಗೆ ತಂದಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಿಂದಾಗಿ ರಾಜ್ಯದಲ್ಲಿ ಲಕ್ಷಾಂತರ ಬಡ ಹಾಗೂ ಅರ್ಹ ಮತದಾರರ ಹಕ್ಕು ಕಸಿಯಲಾಗುತ್ತಿದ್ದು, ಈ ಅನ್ಯಾಯದ ವಿರುದ್ಧ ನಾಗರಿಕ ಸಂಘಟನೆಗಳು ಸಂಗ್ರಹಿಸಿರುವ...