Homeಮುಖಪುಟಎನ್‌ಸಿಇಆರ್‌ಟಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ 'ಸೆಂಗೋಲ್‌' ಸೇರ್ಪಡೆ

ಎನ್‌ಸಿಇಆರ್‌ಟಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ‘ಸೆಂಗೋಲ್‌’ ಸೇರ್ಪಡೆ

- Advertisement -
- Advertisement -

ನೂತನ ಸಂಸತ್ ಭವನದಲ್ಲಿ ಸ್ಥಾಪಿಸಲಾದ ಸೆಂಗೋಲ್‌ (ರಾಜದಂಡ) ಈಗ ಎನ್‌ಸಿಇಆರ್‌ಟಿಯ 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ಭಾಗವಾಗಿದೆ. ಪಠ್ಯಪುಸ್ತಕವು ಇದನ್ನು “ಆಡಳಿತ ಮತ್ತು ಉತ್ತಮ ಆಡಳಿತದ ಸಾಂಸ್ಕೃತಿಕ ಸಂಕೇತ” ಎಂದು ಬಣ್ಣಿಸಿದ್ದು, ಇದರ ಪರಂಪರೆಯನ್ನು ಚೋಳರ ಕಾಲಕ್ಕೆ ಸಂಯೋಜಿಸಿದೆ.

ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾದ ಆರು ತಿಂಗಳ ನಂತರ, “ಅಂಡರ್‌ಸ್ಟ್ಯಾಂಡಿಂಗ್ ಸೊಸೈಟಿ: ಇಂಡಿಯಾ ಆಂಡ್ ಬಿಯಾಂಡ್-ಪಾರ್ಟ್ 2” ಶೀರ್ಷಿಕೆಯ ಪುಸ್ತಕವನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು. ಈ ಪಠ್ಯಪುಸ್ತಕದ ಮೊದಲ ಭಾಗವನ್ನು ಜೂನ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೇ 28, 2023 ರಂದು ನೂತನ ಸಂಸತ್ ಭವನದ ಲೋಕಸಭಾ ಸ್ಪೀಕರ್ ಪೀಠದ ಪಕ್ಕದಲ್ಲಿರುವ ಗಾಜಿನ ಕವರ್‌ನಲ್ಲಿ ಐತಿಹಾಸಿಕ ಸೆಂಗೋಲ್‌ ರಾಜದಂಡವನ್ನು ಸ್ಥಾಪಿಸಿದ್ದರು.

“ಆಡಳಿತ ಮತ್ತು ಉತ್ತಮ ಆಡಳಿತದ ಸಾಂಸ್ಕೃತಿಕ ಸಂಕೇತವಾದ ಸೆಂಗೋಲ್‌ ಅನ್ನು 2023 ರಲ್ಲಿ ಭಾರತದ ನೂತನವಾಗಿ ಉದ್ಘಾಟನೆಗೊಂಡ ಸಂಸತ್ ಭವನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ಥಾಪಿಸಿದರು. ಧರ್ಮಬದ್ಧ ಆಡಳಿತದ ಸಂಕೇತವಾಗಿ ಸೆಂಗೋಲ್‌ ಅನ್ನು ಬಳಸುವ ಪರಂಪರೆಯು ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದೆ ಚೋಳ ರಾಜವಂಶದ ಆಳ್ವಿಕೆಯ ಅವಧಿಯಲ್ಲಿ ಪ್ರಾರಂಭವಾಯಿತು” ಎಂದು ಪಠ್ಯಪುಸ್ತಕದಲ್ಲಿದೆ.

ಸ್ವಾತಂತ್ರ್ಯದ ಸಮಯದಲ್ಲಿ ಅಧಿಕಾರ ಹಸ್ತಾಂತರದೊಂದಿಗೆ ಸೆಂಗೋಲ್‌ ಹೊಂದಿದ್ದ ಸಂಬಂಧವನ್ನು ಕೂಡ ಈ ಅಧ್ಯಾಯ ಉಲ್ಲೇಖಿಸುತ್ತದೆ.

“ಭಾರತದ ಸ್ವಾತಂತ್ರ್ಯದ ನೆನಪಿಗಾಗಿ, ಆಗಸ್ಟ್ 15, 1947 ರ ಮಧ್ಯರಾತ್ರಿಯ ಸಮಯದಲ್ಲಿ, ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರು ತಮಿಳುನಾಡಿನ ಅಧೀನಮ್ ಸಂತರ ಜಿಲ್ಲೆ (ಹಳೆಯ ಶೈವ ಪರಂಪರೆ) ಯಿಂದ ಸೆಂಗೋಲ್‌ ಅನ್ನು ಸ್ವೀಕರಿಸಿದರು” ಎಂದು ಅದರಲ್ಲಿ ತಿಳಿಸಲಾಗಿದೆ.

2023 ರಲ್ಲಿ ನೂತನ ಸಂಸತ್ ಭವನದ ಉದ್ಘಾಟನೆಯ ಸಂದರ್ಭದಲ್ಲಿ ಲೋಕಸಭೆಯಲ್ಲಿ ಮಾತನಾಡಿದ್ದ ಮೋದಿ, 1947 ರ ಸೆಂಗೋಲ್‌ ರಾಜಾಜಿ ಮತ್ತು ಅಧೀನಮ್‌ಗಳ ಮಾರ್ಗದರ್ಶನದಲ್ಲಿ ನಡೆದ ಅಧಿಕಾರ ಹಸ್ತಾಂತರದ ಸಂಕೇತವಾಗಿದೆ ಎಂದು ಹೇಳಿದ್ದರು.

ಆದರೆ, ಬ್ರಿಟಿಷರು ಭಾರತಕ್ಕೆ ಅಧಿಕಾರ ಹಸ್ತಾಂತರಿಸಿದ್ದರ ಸಂಕೇತವಾಗಿ ಈ ರಾಜದಂಡವನ್ನು ನೀಡಲಾಗಿತ್ತು ಎಂದು ಲಾರ್ಡ್ ಮೌಂಟ್‌ಬ್ಯಾಟನ್, ಸಿ. ರಾಜಗೋಪಾಲಚಾರಿ ಮತ್ತು ಜವಾಹರಲಾಲ್ ನೆಹರೂ ಹೇಳಿರುವ ಯಾವುದೇ ದಾಖಲಿತ ಸಾಕ್ಷ್ಯಗಳಿಲ್ಲ ಎಂದು ಕಾಂಗ್ರೆಸ್ ಪ್ರತಿಪಾದಿಸುತ್ತಾ ಬಂದಿದೆ.

ಸಂಸ್ಕೃತಿ ಸಚಿವಾಲಯದ ಪ್ರಕಾರ, ಪ್ರಾಚೀನ ತಮಿಳು ನಾಗರಿಕತೆಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಆಳವಾಗಿ ಬೇರೂರಿರುವ ಸೆಂಗೋಲ್‌, ರಾಜಕೀಯ ಅಧಿಕಾರವು ಧರ್ಮದ ತತ್ವಗಳಿಂದ ಮಾರ್ಗದರ್ಶಿಸಲ್ಪಡುವ ಭಾರತದ ಶಾಶ್ವತ ಮೌಲ್ಯಗಳ ಭವ್ಯ ಸಂಕೇತವಾಗಿ ನಿಲ್ಲುತ್ತದೆ ಎಂದು ವಾದಿಸಿದೆ.

“ಒಮ್ಮೆ ತಮಿಳು ಅರಸರ ಪಟ್ಟಾಭಿಷೇಕದ ವಿಧಿವಿಧಾನಗಳಲ್ಲಿ ಪ್ರಮುಖ ಭಾಗವಾಗಿದ್ದ ಸೆಂಗೋಲ್‌, ಕೇವಲ ಒಂದು ಆಚರಣೆಯ ವಸ್ತುವಾಗಿರದೆ ಆಳುವವನಿಗೆ ನೀಡಲಾಗುವ ನೈತಿಕ ಜವಾಬ್ದಾರಿಗಳ ಕನ್ನಡಿಯಾಗಿತ್ತು. ಈ ಪವಿತ್ರ ಪರಂಪರೆಯನ್ನು 1947 ರಲ್ಲಿ ಭಾರತದ ಸ್ವಾತಂತ್ರ್ಯದ ಮುನ್ನಾದಿನದಂದು ಮರುಜೀವಗೊಳಿಸಲಾಯಿತು, ಆಗ ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ಸೆಂಗೋಲ್‌ ಅನ್ನು ಶ್ರದ್ಧಾಪೂರ್ವಕವಾಗಿ ಹಸ್ತಾಂತರಿಸಲಾಯಿತು” ಎಂದು ಸಚಿವಾಲಯವು ವಿವರಣೆಯಲ್ಲಿ ತಿಳಿಸಿದೆ.

ಉಮ್ಮಿಡಿ ಬಂಗಾರು ಚೆಟ್ಟಿ ಅವರಿಂದ ಕರಕುಶಲವಾಗಿ ರೂಪುಗೊಂಡು, ತಿರುವಾಡುತುರೈ ಅಧೀನಮ್‌ನ ಪೂಜ್ಯ ಸಂತರ ಆಶೀರ್ವಾದದೊಂದಿಗೆ ಪವಿತ್ರಗೊಳಿಸಲ್ಪಟ್ಟ ಸೆಂಗೋಲ್‌, ವಸಾಹತುಶಾಹಿ ಆಡಳಿತದಿಂದ ಸಾರ್ವಭೌಮ ಭಾರತಕ್ಕೆ ಅಧಿಕಾರ ಹಸ್ತಾಂತರಗೊಂಡಿದ್ದಕ್ಕೆ “ನಾಗರಿಕತೆಯ ಬೇರುಗಳನ್ನು ಹೊಂದಿರುವ” ಸಂಕೇತವಾಗಿತ್ತು ಎಂದು ಸಚಿವಾಲಯ ಹೇಳಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR | ಫಾರಂ-8ರ ಬದಲು ಫಾರಂ-6 ಸಲ್ಲಿಸುವಂತೆ ಒತ್ತಡ : ಒಂದೇ ಕುಟುಂಬದ 6 ಜನರ ವೋಟ್ ಡಿಲೀಟ್; ಚುನಾವಣಾ ಆಯೋಗಕ್ಕೆ ಬಾಂಬೆ ಹೈಕೋರ್ಟ್ ತಪರಾಕಿ

ಗೋವಾದ ಸಾಂತಾ ಕ್ರೂಝ್ ಮತಕ್ಷೇತ್ರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಸಂದರ್ಭದಲ್ಲಿ, ಒಂದು ಕುಟುಂಬದ ಆರು ಸದಸ್ಯರು ತಮ್ಮ ವಿಳಾಸ ಬದಲಾವಣೆಯನ್ನು ತಿಳಿಸಲು 'ಫಾರ್ಮ್ 8' ಸಲ್ಲಿಸಿದ್ದರೂ ಸಹ, ಮತದಾರರ ಪಟ್ಟಿಯಿಂದ...

ಚುನಾವಣಾ ಆಯೋಗದ ವಿರುದ್ಧ ವ್ಯಂಗ್ಯಚಿತ್ರ: ಸತೀಶ್ ಆಚಾರ್ಯ Instagram ಖಾತೆಗೆ ಭಾರತದಲ್ಲಿ ನಿರ್ಬಂಧ; ಮಂಜುಲ್‌ಗೂ ತಡೆ

ನವದೆಹಲಿ: ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಯ ಕುರಿತು ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ್ದ ರಾಜಕೀಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ Instagram ಖಾತೆಗೆ ಭಾರತದಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ. ಇದೇ ವೇಳೆ ಮತ್ತೊಬ್ಬ...

ಎಸ್‌ಐಆರ್ ಹಾಗೂ ಚುನಾವಣಾ ಆಯೋಗದ ಅಕ್ರಮ ಖಂಡಿಸಿ ‘ಇಂಡಿಯಾ’ ಮೈತ್ರಿಕೂಟದ ರಾಷ್ಟ್ರವ್ಯಾಪಿ ಅಭಿಯಾನ: ಪ್ರಜಾಪ್ರಭುತ್ವ ರಕ್ಷಣೆಗೆ ವಿಪಕ್ಷಗಳಿಂದ 6 ಪ್ರಮುಖ ಬೇಡಿಕೆಗಳು!

ಚುನಾವಣಾ ಆಯೋಗದ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯ ಅಕ್ರಮಗಳು, 'ಫಾರ್ಮ್ 6' ನಮೂನೆಯಲ್ಲಿ ಸಾಫ್ಟ್‌ವೇರ್ ಮೂಲಕ ತಂದಿದ್ದ ಅಡೆತಡೆಗಳು ಹಾಗೂ ಮತದಾರರ ಪಟ್ಟಿಯಿಂದ ಅರ್ಹರ ಹೆಸರು ರದ್ದುಗೊಳಿಸಿರುವ ಕ್ರಮಗಳನ್ನು ಖಂಡಿಸಿ 'ಇಂಡಿಯಾ'...

ಮ್ಯಾನ್ಮಾರ್‌ನಲ್ಲಿ ಜನನಿಬಿಡ ಮಾರುಕಟ್ಟೆ ಮೇಲೆ ವೈಮಾನಿಕ ದಾಳಿ: 50ಕ್ಕೂ ಹೆಚ್ಚು ಸಾವು; ಗಡೀಪಾರು ನಿಲ್ಲಿಸಲು ಮಲೇಷ್ಯಾಕ್ಕೆ ವಿಶ್ವಸಂಸ್ಥೆ ಕರೆ

ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಜನನಿಬಿಡ ಮಾರುಕಟ್ಟೆಯ ಮೇಲೆ ನಡೆದ ಮಿಲಿಟರಿ ವೈಮಾನಿಕ ದಾಳಿಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ವೋಲ್ಕರ್ ಟರ್ಕ್ ತೀವ್ರವಾಗಿ ಖಂಡಿಸಿದ್ದಾರೆ. ಕ್ಯುಕ್ತಾವ್ ಪಟ್ಟಣದಲ್ಲಿ ನಡೆದ ಈ ದಾಳಿಯಲ್ಲಿ ಮಹಿಳೆಯರು...

ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಶಿಕ್ಷಣ ಕ್ಷೇತ್ರದಲ್ಲಿ RSS ಕಾರ್ಯಸೂಚಿಗಳನ್ನು ತಡೆಯುವಂತೆ ಖರ್ಗೆ-ರಾಹುಲ್ ಸೂಚನೆ

ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಶಿಕ್ಷಣ ಕ್ಷೇತ್ರದಲ್ಲಿ ಆರ್‌ಎಸ್‌ಎಸ್ ಹಾಗೂ ಸಂಘ ಪರಿವಾರದ ವಿಭಜಕ ಮತ್ತು ಕೋಮು ಕಾರ್ಯಸೂಚಿಯನ್ನು ಜಾರಿಗೆ ತರುವುದನ್ನು ತಕ್ಷಣವೇ ತಡೆಯಬೇಕು ಹಾಗೂ ಸಂಪೂರ್ಣ ವಿದ್ಯಾರ್ಥಿ ಕೇಂದ್ರಿತ, ಜಾತ್ಯತೀತ ಶಿಕ್ಷಣ ನೀತಿಗಳನ್ನು...

Mangaluru| MRPLನಲ್ಲಿ ಭಾರಿ ಸ್ಫೋಟ: 8 ಮಂದಿಗೆ ಗಾಯ, ಕಂಪಿಸಿದ ಜೋಕಟ್ಟೆಯ ಮನೆಗಳು-ಅಂಗನವಾಡಿ

ಮಂಗಳೂರು ನಗರದ ಹೊರವಲಯದ ಜೋಕಟ್ಟೆ ಬಳಿ ಇರುವ ಮಂಗಳೂರು ರಿಫೈನರಿ ಅಂಡ್‌ ಪೆಟ್ರೋಕೆಮಿಕಲ್ಸ್‌‌ ಲಿಮಿಟೆಡ್‌ (MRPL) ಸಂಸ್ಥೆಯ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ (ಸಿಎಚ್‌ಟಿ) ಬುಧವಾರ ಮಧ್ಯಾಹ್ನ 12:15 ರ ಸುಮಾರಿಗೆ ಭಾರಿ...

ಎಸ್‌ಐಆರ್ ಪೂರ್ಣಗೊಂಡ ರಾಜ್ಯಗಳ ಫಾರ್ಮ್-6 ರಲ್ಲಿನ ‘ಸ್ವಘೋಷಣೆ’ ನಿಯಮಕ್ಕೆ ಬ್ರೇಕ್‌; ವಿವಾದದ ಬೆನ್ನಲ್ಲೇ ಚುನಾವಣಾ ಆಯೋಗದ ನಿರ್ಧಾರ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪೂರ್ಣಗೊಂಡಿರುವ ರಾಜ್ಯಗಳಲ್ಲಿ, ಆನ್‌ಲೈನ್ ಮತದಾರರ ನೋಂದಣಿ 'ಫಾರ್ಮ್ 6' ರಲ್ಲಿದ್ದ ಹೆಚ್ಚುವರಿ ಎಸ್‌ಐಆರ್-ಸಂಬಂಧಿತ ಸ್ವಯಂಘೋಷಣಾ ಪತ್ರವನ್ನು ಚುನಾವಣಾ ಆಯೋಗವು ಹಿಂಪಡೆದಿದೆ. ಈ ನಿಯಮವು ಎಸ್‌ಐಆರ್...

‘ಇವಿಎಂ ಬಿಜೆಪಿ ಬಳಸುವ ಸಾಧನ’: ಬ್ಯಾಲೆಟ್ ಪೇಪರ್‌ಗೆ ಮರಳಲು ಖರ್ಗೆ ಒತ್ತಾಯ; ಗ್ಯಾನೇಶ್ ಕುಮಾರ್ ವಿರುದ್ಧ ವಾಗ್ದಾಳಿ

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಕಾಂಗ್ರೆಸ್ ಮತ್ತು ಕೇಂದ್ರದ ಆಡಳಿತಾರೂಢ ಬಿಜೆಪಿ ನಡುವಿನ ರಾಜಕೀಯ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ, ಕಾಂಗ್ರೆಸ್ ಅಧ್ಯಕ್ಷ...

‘ಮಹಿಳೆಯರೇ ಪರಿಸ್ಥಿತಿ ಬದಲಿಸುತ್ತಾರೆ’: ಸುರಕ್ಷತೆ ಹೆಸರಿನಲ್ಲಿ ನಿರ್ಬಂಧ, ಅತ್ಯಾಚಾರ, ಲಿಂಗಾಧಾರಿತ ಹಿಂಸೆ ವಿರುದ್ಧ ದೆಹಲಿ ವಿದ್ಯಾರ್ಥಿನಿಯರ ಪ್ರತಿಭಟನೆ

ನವದೆಹಲಿ: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಮರುಕಳಿಸುತ್ತಿರುವ ಬೆನ್ನಲ್ಲೇ, ಮಹಿಳೆಯರ ಸುರಕ್ಷತೆಯ ಹೆಸರಿನಲ್ಲಿ ಅವರ ಸ್ವಾತಂತ್ರ್ಯ ಮತ್ತು ಚಲನವಲನದ ಮೇಲೆಯೇ ನಿರ್ಬಂಧ ಹೇರುವ ಕ್ರಮಗಳ ವಿರುದ್ಧ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಬೀದಿಗಿಳಿದು...

ಉಮರ್ ಖಾಲಿದ್ – ಶಾರ್ಜೀಲ್ ಇಮಾಮ್ ಅವರ ಮೂರನೇ ಜಾಮೀನು ಅರ್ಜಿಯನ್ನೂ ತಿರಸ್ಕರಿಸಿದ ದೆಹಲಿ ಹೈಕೋರ್ಟ್‌

2020ರ ಈಶಾನ್ಯ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಠಿಣ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿತರಾಗಿರುವ ವಿದ್ಯಾರ್ಥಿ ಹೋರಾಟಗಾರರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಯನ್ನು...