HomeಅಂಕಣಗಳುSIRಹೈದರಾಬಾದ್‌ ಎಸ್‌ಐಆರ್ ಪ್ರಕ್ರಿಯೆ; ಸುಮಾರು 5,000 'ಫಾರ್ಮ್- 7' ಅರ್ಜಿ ಸಲ್ಲಿಕೆ

ಹೈದರಾಬಾದ್‌ ಎಸ್‌ಐಆರ್ ಪ್ರಕ್ರಿಯೆ; ಸುಮಾರು 5,000 ‘ಫಾರ್ಮ್- 7’ ಅರ್ಜಿ ಸಲ್ಲಿಕೆ

- Advertisement -
- Advertisement -

ತೆಲಂಗಾಣ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್), ಹೈದರಾಬಾದ್‌ನಲ್ಲಿ ಸುಮಾರು 5,000 ‘ಫಾರ್ಮ್ 7’ ಅರ್ಜಿಗಳು ಸಲ್ಲಿಕೆಯಾಗಿವೆ. ಎಲ್ಲಾ ಜಿಲ್ಲೆಗಳಿಗೆ ಹೋಲಿಸಿದರೆ ಇದು ಅತ್ಯಂತ ಹೆಚ್ಚಿನ ಸಂಖ್ಯೆಯಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ರಾಜ್ಯಾದ್ಯಂತ ಹಾಲಿ ಇರುವ ಮತದಾರರ ಹೆಸರುಗಳನ್ನು ತೆಗೆದುಹಾಕಲು (ಡಿಲೀಟ್) ಅಥವಾ ಹೊಸದಾಗಿ ಸೇರಿಸಲು ಪ್ರಸ್ತಾಪಿಸಲಾದ ಹೆಸರುಗಳಿಗೆ ಆಕ್ಷೇಪಣೆ ಸಲ್ಲಿಸಲು 28,753 ‘ಫಾರ್ಮ್ 7’ ಅರ್ಜಿಗಳನ್ನು ಸಲ್ಲಿಸಲಾಗಿದೆ.

‘ಫಾರ್ಮ್ 7’ ಸಲ್ಲಿಸಿದ ತಕ್ಷಣ ಮತದಾರರ ಹೆಸರು ರದ್ದಾಗುವುದಿಲ್ಲ

ಮತದಾರರ ವಿರುದ್ಧ ‘ಫಾರ್ಮ್ 7’ ಆಕ್ಷೇಪಣೆ ಸಲ್ಲಿಸಿದ ತಕ್ಷಣವೇ ಆ ವ್ಯಕ್ತಿಯ ಹೆಸರು ಮತದಾರರ ಪಟ್ಟಿಯಿಂದ ಸ್ವಯಂಚಾಲಿತವಾಗಿ ಡಿಲೀಟ್ ಆಗುವುದಿಲ್ಲ. ಈ ಆಕ್ಷೇಪಣೆಯನ್ನು ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ಪರಿಶೀಲಿಸಬೇಕಾಗುತ್ತದೆ.

ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸುವುದಕ್ಕೆ ಆಕ್ಷೇಪಣೆ ಎತ್ತಲು ಅಥವಾ ಹಾಲಿ ಇರುವ ಹೆಸರನ್ನು ತೆಗೆದುಹಾಕಲು ಮತದಾರರು ‘ಫಾರ್ಮ್ 7’ ಬಳಸಲು ಭಾರತೀಯ ಚುನಾವಣಾ ಆಯೋಗ (ಇಸಿಐ) ಅವಕಾಶ ನೀಡುತ್ತದೆ. ಈ ಫಾರ್ಮ್ ವ್ಯಕ್ತಿಯ ಸಾವು, ಶಾಶ್ವತ ಸ್ಥಳಾಂತರ, ನಕಲಿ ನೋಂದಣಿ, ವಯೋಮಿತಿ ಮೀರದಿರುವುದು ಮತ್ತು ವ್ಯಕ್ತಿ ಭಾರತೀಯ ಪ್ರಜೆಯಲ್ಲದಿರುವುದು ಸೇರಿದಂತೆ ಹಲವಾರು ಕಾರಣಗಳನ್ನು ಒಳಗೊಂಡಿರುತ್ತದೆ. ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಸಂಬಂಧಪಟ್ಟ ಇಆರ್‌ಒ ಅವರಿಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಇಸಿಐ ಹೇಳುತ್ತದೆ.

‘ಫಾರ್ಮ್ 7’ ಸಲ್ಲಿಕೆಯಾದ ತಕ್ಷಣವೇ ಮತದಾರರ ವಿರುದ್ಧ ಮಾಡಲಾದ ಆರೋಪ ನಿಜವೆಂದು ಸಾಬೀತಾಗುವುದಿಲ್ಲ. ಇದು ಚುನಾವಣಾ ಅಧಿಕಾರಿಗಳು ಆಕ್ಷೇಪಣೆ ಮತ್ತು ಬೆಂಬಲಿತ ದಾಖಲೆಗಳನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು ಮಾತ್ರ ಪ್ರಾರಂಭಿಸುತ್ತದೆ.

ಆಕ್ಷೇಪಣೆಯನ್ನು ಪರಿಶೀಲಿಸುವ ಇಆರ್‌ಒ

ಆಕ್ಷೇಪಣೆ ಸ್ವೀಕೃತಗೊಂಡ ನಂತರ, ವಿಷಯವು ಇಆರ್‌ಒ ಮುಂದೆ ಬರುತ್ತದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಆರೋಪ ಮತ್ತು ಅದಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಬಹುದು.

ಜನಪ್ರತಿನಿಧಿ ಕಾಯ್ದೆ (ಆರ್‌ಪಿಎ), 1950 ರ ಸೆಕ್ಷನ್ 22 ಮತದಾರರ ಪಟ್ಟಿಯಲ್ಲಿನ ನಮೂದುಗಳ ತಿದ್ದುಪಡಿ ಮತ್ತು ತೆಗೆದುಹಾಕುವಿಕೆಗೆ ಸಂಬಂಧಿಸಿದೆ. ಹೆಸರು ಡಿಲೀಟ್‌ಗೆ ನಿರ್ದಿಷ್ಟ ಕ್ರಮ ಕೈಗೊಳ್ಳುವ ಮೊದಲು, ಇಆರ್‌ಒ ಸಂಬಂಧಪಟ್ಟ ವ್ಯಕ್ತಿಗೆ ತನ್ನ ವಾದವನ್ನು ಮಂಡಿಸಲು ಸೂಕ್ತ ಅವಕಾಶವನ್ನು ನೀಡಬೇಕಾಗುತ್ತದೆ.

‘ಫಾರ್ಮ್ 7’ ಗೆ ಸಂಬಂಧಿಸಿದ ಇಸಿಐ ಮಾರ್ಗದರ್ಶಿಸೂತ್ರಗಳ ಪ್ರಕಾರ, ಆಕ್ಷೇಪಣೆ ಅಥವಾ ಹೆಸರು ತೆಗೆದುಹಾಕಲು ನೀಡಿದ ಕಾರಣವನ್ನು ಸಾಬೀತುಪಡಿಸುವ ಜವಾಬ್ದಾರಿಯು ಅರ್ಜಿ ಸಲ್ಲಿಸಿದವರ ಮೇಲಿರುತ್ತದೆ.

ಪರಿಶೀಲನೆ ಮತ್ತು ವಿಚರಣೆಯ ನಂತರ, ಹೆಸರು ತೆಗೆದುಹಾಕಲು ಕಾನೂನುಬದ್ಧ ಅಗತ್ಯತೆಗಳು ಪೂರೈಕೆಯಾಗಿವೆ ಎಂದು ಇಆರ್‌ಒ ತೀರ್ಮಾನಿಸಿದರೆ, ಆ ವ್ಯಕ್ತಿಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಬಹುದು.

ಬಾಧಿತ ವ್ಯಕ್ತಿಗೆ ಪರಿಹಾರ ಕಂಡುಕೊಳ್ಳುವ ಅವಕಾಶವಿರುತ್ತದೆ. ಜನಪ್ರತಿನಿಧಿ ಕಾಯ್ದೆ, 1950 ರ ಸೆಕ್ಷನ್ 24, ಸೆಕ್ಷನ್ 22 ಮತ್ತು 23 ರ ಅಡಿಯಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳ ವಿರುದ್ಧ ಮೇಲ್ಮನವಿ ಸಲ್ಲಿಸುವ ವ್ಯವಸ್ಥೆಯನ್ನು ಒದಗಿಸುತ್ತದೆ.

ಹೈದರಾಬಾದ್ ಮತ್ತು ಇತರ ಜಿಲ್ಲೆಗಳಲ್ಲಿ ಎಸ್‌ಐಆರ್ ವಿಚಾರಣೆ

ಸುಮಾರು 92.88 ಲಕ್ಷ ಮತದಾರರು 2002 ರ ಎಸ್‌ಐಆರ್‌ನೊಂದಿಗೆ ಮ್ಯಾಪ್ ಆಗಿರಲಿಲ್ಲ ಅಥವಾ ಅವರ ಗಣತಿ ನಮೂನೆಗಳಲ್ಲಿ ವ್ಯತ್ಯಾಸಗಳಿದ್ದವು.

ಇವರಲ್ಲಿ ಸುಮಾರು 55 ಲಕ್ಷ ಮತದಾರರನ್ನು ಈಗಾಗಲೇ ಮತದಾರರ ಪಟ್ಟಿಯಲ್ಲಿ ಸೇರಿಸಲು ಗುರುತಿಸಲಾಗಿದೆ. ಉಳಿದ ಮತದಾರರ ಅರ್ಜಿಗಳು ಎಸ್‌ಐಆರ್ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿವೆ.

ನೋಟಿಸ್ ಹಂತವು ನವೆಂಬರ್ 5 ರವರೆಗೆ ಮುಂದುವರಿಯಲಿದ್ದು, ಅಂತಿಮ ಪಟ್ಟಿಯನ್ನು ನವೆಂಬರ್ 6 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಆದರೆ, ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ‘ಫಾರ್ಮ್ 6’, ನಮೂದುಗಳ ತಿದ್ದುಪಡಿ ಅಥವಾ ನಿವಾಸ ಬದಲಾವಣೆಗಾಗಿ ‘ಫಾರ್ಮ್ 8’, ಅಥವಾ ಹಾಲಿ ಇರುವ ನಮೂದುಗಳನ್ನು ತೆಗೆದುಹಾಕಲು/ಹೊಸ ಸೇರ್ಪಡೆಗೆ ಆಕ್ಷೇಪಿಸಲು ‘ಫಾರ್ಮ್ 7’ ಭರ್ತಿ ಮಾಡಲು ಬಯಸುವವರು ಅಕ್ಟೋಬರ್ 7 ರವರೆಗೆ ಅರ್ಜಿ ಸಲ್ಲಿಸಬಹುದು.

‘ಫಾರ್ಮ್ 7’ ಸ್ವಯಂಚಾಲಿತವಾಗಿ ಹೆಸರು ತೆಗೆದುಹಾಕಲು ಕಾರಣವಾಗುವುದಿಲ್ಲ. ಬದಲಿಗೆ, ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಎಸ್‌ಐಆರ್ ಅವಧಿಯಲ್ಲಿ ಇಆರ್‌ಒಗಳು ವಿಚಾರಣೆ ನಡೆಸಿ, ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಮತದಾರರಿಂದ ಸ್ಪಷ್ಟನೆ ಕೋರಲಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಳಗಾವಿಯಲ್ಲಿ ಜೀವ ತೆಗೆಯುತ್ತಿರುವ ಗಾಳಿಪಟ ಮಾಂಜಾ ದಾರ: ಎರಡೇ ದಿನಗಳಲ್ಲಿ ಇಬ್ಬರು ಬಲಿ

ಗಾಳಿಪಟ ಹಾರಿಸುವ ಸಂಭ್ರಮವು ಬೆಳಗಾವಿ ನಗರದಲ್ಲಿ ಸಾರ್ವಜನಿಕರ ಜೀವಕ್ಕೆ ಭಾರಿ ಕಂಟಕವಾಗಿ ಪರಿಣಮಿಸಿದೆ. ನಗರದಲ್ಲಿ ಅಪಾಯಕಾರಿ ಮಾಂಜಾ ದಾರ ಮತ್ತು ಗಾಳಿಪಟದ ಹುಚ್ಚಾಟಕ್ಕೆ ಕೇವಲ ಎರಡೇ ದಿನಗಳಲ್ಲಿ ಇಬ್ಬರು ಪ್ರಾಣ ಕಳೆದುಕೊಂಡ ಭೀಕರ...

ಗ್ಯಾನೇಶ್ ಕುಮಾರ್ ವಿರುದ್ಧದ ಹಳೆಯ ಭ್ರಷ್ಟಾಚಾರದ ಕಡತ ತರಿಸಿಕೊಂಡ ಕೇರಳಂ ಸರ್ಕಾರ

ದೇಶಾದ್ಯಂತ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ವಿರೋಧಿಸಿ 'ಇಂಡಿಯಾ' (INDIA) ಒಕ್ಕೂಟವು ತೀವ್ರ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್...

‘ಬಿರಿಯಾನಿ ತಿನ್ನಲು ಹುಟ್ಟಿದವರು ಪ್ರಾಣಿಗಳು..’; ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ

"ಬಿರಿಯಾನಿ ತಿನ್ನಲು ಹುಟ್ಟಿದವರು ಪ್ರಾಣಿಗಳು," ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಗುರುವಾರ ಹೇಳಿದ್ದಾರೆ. ಭಗವಂತ ತಮ್ಮನ್ನು ಈ ಜಗತ್ತಿಗೆ ಈ ಖಾದ್ಯವನ್ನು ಸವಿಯಲು ಕಳುಹಿಸಿದ್ದಾನೆ ಎಂಬ ಕಾಂಗ್ರೆಸ್ ಸಂಸದ ರಕೀಬುಲ್...

ಎಸ್‌ಐಆರ್ ಅಕ್ರಮ ವಿರೋಧಿ ಪ್ರತಿಭಟನೆಗೆ ಪೊಲೀಸ್ ತಡೆ: ನವದೆಹಲಿಯಲ್ಲಿ ಸೆಕ್ಷನ್ 163 ಜಾರಿ, 11 ಮೆಟ್ರೋ ನಿಲ್ದಾಣ ಬಂದ್!

ಚುನಾವಣಾ ಆಯೋಗದ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಗಾಂಧಿ ಜಯಂತಿಯ ದಿನವಾದ ಇಂದು (ಅಕ್ಟೋಬರ್...

ಮತಹಕ್ಕು ನಿರಾಕರಣೆಗೆ 1924ರಲ್ಲೇ ಮಹಾತ್ಮ ಗಾಂಧೀಜಿ ನೀಡಿದ್ದ ಪ್ರತಿಕ್ರಿಯೆ ಇಂದಿಗೂ ಪ್ರಸ್ತುತ

ಭಾರತವು ತನ್ನ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೂಲಭೂತ ಮೌಲ್ಯಗಳನ್ನು ಹಾಗೂ ತನ್ನ ಶ್ರೇಷ್ಠ ನಾಯಕರು ಎತ್ತಿಹಿಡಿದ ತತ್ವಗಳನ್ನು ಕಳೆದುಕೊಳ್ಳುವ ಅಂಚಿನಲ್ಲಿದೆ. ನಮ್ಮ ಸಾಮೂಹಿಕ ಜೀವನದಲ್ಲಿ ಅವುಗಳನ್ನು ತಕ್ಷಣವೇ ರಕ್ಷಿಸಿ ಮರುಸ್ಥಾಪಿಸಬೇಕಾಗಿದೆ. ಗಾಂಧೀಜಿಯವರು ನಮಗೆ ಕೇವಲ...

ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಪಟ್ಟು: ಎಸ್‌ಐಆರ್ ಅಕ್ರಮ ಖಂಡಿಸಿ ‘ಇಂಡಿಯಾ’ ಮೈತ್ರಿಕೂಟದಿಂದ ಇಂದಿನಿಂದ ರಾಷ್ಟ್ರವ್ಯಾಪಿ ‘ಪ್ರಜಾಪ್ರಭುತ್ವ ರಕ್ಷಿಸಿ’ ಅಭಿಯಾನ!

ಚುನಾವಣಾ ಆಯೋಗದ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯ ಅಕ್ರಮಗಳು ಹಾಗೂ ಮತದಾರರ ಪಟ್ಟಿಯಿಂದ ಅರ್ಹ ನಾಗರಿಕರ ಹೆಸರು ರದ್ದುಗೊಳಿಸಿರುವುದನ್ನು ಖಂಡಿಸಿ 'ಇಂಡಿಯಾ' ಮೈತ್ರಿಕೂಟ ಮತ್ತು ವಿವಿಧ ಪ್ರಜಾಸತ್ತಾತ್ಮಕ ಸಂಘಟನೆಗಳು ಗಾಂಧಿ ಜಯಂತಿಯಾದ...

SIR: ಭಾಲ್ಕಿಯಲ್ಲಿ 3,244 ಮತದಾರರ ಹೆಸರು ಡಿಲೀಟ್‌ಗೆ ಸುಳ್ಳು ಫಾರಂ-7 ಸೃಷ್ಟಿ, 32 ಜನರ ವಿರುದ್ಧ FIR

ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯ ಹೆಸರಿನಲ್ಲಿ ಅರ್ಹ ಬಡವರು, ಅಲ್ಪಸಂಖ್ಯಾತರು ಹಾಗೂ ಅವಿದ್ಯಾವಂತ ಮತದಾರರ ಹೆಸರುಗಳನ್ನು ಯೋಜಿತವಾಗಿ ಡಿಲೀಟ್ ಮಾಡಲು ಹೊರಟ ಬೃಹತ್ ಜಾಲವೊಂದು ಬೀದರ್ ಜಿಲ್ಲೆಯಲ್ಲಿ ಬಯಲಾಗಿದೆ....

SIR ಅಕ್ರಮ : 13 ಕೋಟಿ ಮತದಾರರ ಹೆಸರು ಡಿಲೀಟ್‌ ವಿವಾದ ‘ವಿಶೇಷ ಸೇರ್ಪಡೆ ಅಭಿಯಾನ’ಕ್ಕೆ ಕೇಂದ್ರ ಚುನಾವಣಾ ಆಯೋಗದಿಂದ ತುರ್ತು ನಿರ್ದೇಶನ

ದೇಶಾದ್ಯಂತ ಜಾರಿಗೆ ತರಲಾದ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯ ಹೆಸರಿನಲ್ಲಿ ಕೋಟ್ಯಂತರ ಅರ್ಹ ಮತದಾರರ ಹೆಸರುಗಳನ್ನು ಏಕಾಏಕಿ ಪಟ್ಟಿಯಿಂದ ಕೈಬಿಟ್ಟಿರುವುದರ ವಿರುದ್ಧ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಕೇಂದ್ರ ಚುನಾವಣಾ ಆಯೋಗವು (ECI)...

‘ಎಸ್ಐಆರ್ ಬೇಡ..’ ರಾಷ್ಟ್ರೀಯ ವೇದಿಕೆ ಆರಂಭ; ಪ್ರಕ್ರಿಯೆ ರದ್ದುಗೊಳಿಸಿ ಹಳೆ ಮತದಾರರ ಪಟ್ಟಿ ಮರುಸ್ಥಾಪನೆಗೆ ಆಗ್ರಹ

ದೇಶದಲ್ಲಿ ನಡೆಯುತ್ತಿರುವ ಚುನಾವಣಾ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು ಮತದಾರರ ಮೇಲೆ ಉಂಟಾಗಿರುವ ಅದರ ಪರಿಣಾಮಗಳ ವಿರುದ್ಧ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಕರೆ ನೀಡಿರುವ ನಾಗರಿಕ ಸಂಘಟನೆಗಳು, ದೇಶದ ವಿವಿಧ ರಾಜ್ಯಗಳ...

ಬಿಜೆಪಿ-ಜೆಡಿಎಸ್ ಕಾರ್ಯಕರ್ತರಿಂದ ಅರ್ಹ ಮತದಾರರ ಹೆಸರು ಡಿಲೀಟ್‌ಗೆ ಅರ್ಜಿ; ಚುನಾವಣಾ ಕಚೇರಿ ಮುಂದೆ ಸಿಎಂ ಪ್ರತಿಭಟನೆ

ಅರ್ಹ ಮತದಾರರ ಹಸರು ಡಿಲೀಟ್‌ ಮಾಡುವಂತೆ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತತು ಫಾರ್ಮ್‌ - 7 ನೀಡಿದ್ದಾರೆ ಎಂದು ಆರೋಪಿಸಿರುವ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ...