Homeಮುಖಪುಟಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ; ಮುಂಬೈನ ಶಿವಾಜಿ ಪಾರ್ಕ್‌ಗೆ ಹರಿದುಬಂದ ಪ್ರತಿಭಟನಾಕಾರರು

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ; ಮುಂಬೈನ ಶಿವಾಜಿ ಪಾರ್ಕ್‌ಗೆ ಹರಿದುಬಂದ ಪ್ರತಿಭಟನಾಕಾರರು

- Advertisement -
- Advertisement -

ಮುಂಬೈನಲ್ಲಿ ಧರಣಿ ಸತ್ಯಾಗ್ರಹ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದರೂ ಸಹ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಕಾಕ್ರಾಚ್ ಜನತಾ ಪಾರ್ಟಿ’ (ಸಿಜೆಪಿ) ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ಶುಕ್ರವಾರ (ಅ.2) ಶಿವಾಜಿ ಪಾರ್ಕ್ ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.

ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ನಿರ್ಧಾರ ಹಾಗೂ ಆದೇಶಗಳ ಬಗ್ಗೆ ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು 10 ತಿಂಗಳಲ್ಲಿ ಕನಿಷ್ಠ 14 ಬಾರಿ ತಮ್ಮ ಆಕ್ಷೇಪಗಳನ್ನು ದಾಖಲಿಸಿದ್ದಾರೆ. ಅದರಲ್ಲಿ ಕೆಲವು ಆದೇಶಗಳು ತಮ್ಮ ಗಮನಕ್ಕೆ ಬಾರದೇ ಹೊರಡಿಸಲಾಗಿದೆ ಎಂದು ಇತ್ತೀಚಿನ ಮಾಧ್ಯಮ ವರದಿಗಳು ಬಹಿರಂಗಪಡಿಸಿದ ನಂತರ, ಸಿ‌ಜೆ‌‌ಪಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಈ ಪ್ರತಿಭಟನೆಯನ್ನು ಘೋಷಿಸಿತ್ತು.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಸುತ್ತಮುತ್ತಲಿನ ದಾದರ್ ಪ್ರದೇಶದಲ್ಲಿ ಸಂಚಾರ ವ್ಯವಸ್ಥೆಗೆ ಯಾವುದೇ ತೊಂದರೆಯಾಗದಂತೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಿ‌ಇ‌ಸಿ ಅವರನ್ನು ಗುರಿಯಾಗಿಸಿಕೊಂಡ ಮೀಮ್‌ಗಳು, ಚಲನಚಿತ್ರ ಸಂಭಾಷಣೆಗಳು ಮತ್ತು ಘೋಷಣೆಗಳು ಕಂಡುಬಂದವು. ಪ್ರತಿಭಟನಾಕಾರರು “ಜ್ಞಾನು, ನಿನಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ವಾ”, “ಗ್ಯಾನೇಶ್ ಬ್ರೋ, ಜಸ್ಟ್ ರಿಸೈನ್” ಮತ್ತು “ಗದ್ದಾರ್ ಗ್ಯಾನು ಮಸ್ಟ್ ಗೋ” ಎಂಬ ಫಲಕಗಳನ್ನು ಹಿಡಿದಿದ್ದರು. ಸಿ‌ಜೆ‌ಪಿ ತನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ “ಗ್ಯಾನೇಶ್ ಬ್ರೋ! ಜಸ್ಟ್ ರಿಸೈನ್ ಯಾ” ಎಂದು ಟ್ವೀಟ್ ಮಾಡಿದೆ.

ಹರಿದುಬಂದ ಬೆಂಬಲ

ಪ್ರತಿಭಟನಾ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿರುವ ದೃಶ್ಯಗಳನ್ನು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಸಿ‌ಜೆ‌ಪಿ, “ಮುಂಬೈ ಏನೋ ಹೊಸತಕ್ಕೆ ಸಾಕ್ಷಿಯಾಗುತ್ತಿದೆ. ಜೈ ಮಹಾರಾಷ್ಟ್ರ!” ಎಂದು ಪೋಸ್ಟ್ ಮಾಡಿದೆ.

ಮತ್ತೊಂದು ಪೋಸ್ಟ್‌ನಲ್ಲಿ, ಪ್ರತಿಭಟನೆಯ ವೇಳೆ ಬಂಧನಕ್ಕೊಳಗಾಗುವ ಯಾರಿಗಾದರೂ ಕಾನೂನು ನೆರವು ನೀಡುವುದಾಗಿ ತಿಳಿಸಿದೆ. “ಹಲೋ ಕಾಕ್ರಾಚ್‌ಗಳೇ, ಮುಂಬೈ ಕಾನೂನು ತಂಡ ಸಂಪೂರ್ಣ ಸಜ್ಜಾಗಿದೆ,” ಎಂದು ಅದು ಹೇಳಿದೆ.

ಹಿರಿಯ ನಟ ಪ್ರಕಾಶ್ ರಾಜ್ ಎಕ್ಸ್‌ನಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಎಲ್ಲರಿಗೂ ಗಾಂಧಿ ಜಯಂತಿಯ ಶುಭಾಶಯ ಕೋರಿದ ಅವರು, “…ಕೆಲವು ಗೂಂಡಾಗಳು ಎಸ್‌ಐಆರ್ (ಎಸ್‌ಐಆರ್) ಮೂಲಕ ನಮ್ಮ ಪೌರತ್ವವನ್ನು, ನಮ್ಮ ಪ್ರಜಾಪ್ರಭುತ್ವವನ್ನು ಕೊಲ್ಲಲು ಯತ್ನಿಸುತ್ತಿದ್ದಾರೆ. ಈ ದೇಶದ ಯುವಕರು, ನಾಗರಿಕ ಸಮಾಜ ಮತ್ತು ಕಾಕ್ರಾಚ್‌ಗಳು ಇದಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ…” ಎಂದಿದ್ದಾರೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ

ಹಿರಿಯ ನಟ ನಸೀರುದ್ದೀನ್ ಶಾ ತಮ್ಮನ್ನು ಭೇಟಿಯಾದ ವಿಡಿಯೋವನ್ನು ಸಿ‌ಜೆ‌ಪಿ ಸಂಚಾಲಕ ಅಭಿಜೀತ್ ದಿಪ್ಕೆ ಹಂಚಿಕೊಂಡಿದ್ದಾರೆ. ನಸೀರುದ್ದೀನ್ ಶಾ ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸುತ್ತವೆಯಾದರೂ, ದಿಪ್ಕೆ ಹಂಚಿಕೊಂಡ ವಿಡಿಯೋದಿಂದ ಅದು ಸ್ಪಷ್ಟವಾಗಿಲ್ಲ. ವಿಡಿಯೋದಲ್ಲಿ ನಸೀರ್ ಅವರು ದಿಪ್ಕೆ ಮಾಡುತ್ತಿರುವ ಕೆಲಸಕ್ಕೆ ಧನ್ಯವಾದ ಹೇಳುತ್ತಿರುವುದು ಮತ್ತು ನಟನ ಭೇಟಿಯಿಂದ ಅತಿಯಾದ ಸಂತಸ ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ.

ರಾಷ್ಟ್ರಪಿತ ಗಾಂಧೀಜಿಯವರ ಜಯಂತಿಯ ಅಂಗವಾಗಿ ದಿಪ್ಕೆ ದಕ್ಷಿಣ ಮುಂಬೈನಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.

ಪ್ರತಿಭಟನೆಗೆ ಸ್ಥಳೀಯರ ಅಸಮಾಧಾನ

ಈ ಪ್ರತಿಭಟನೆಯಿಂದ ಉಂಟಾದ ಪರಿಸ್ಥಿತಿಯ ಬಗ್ಗೆ ಕೆಲವು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಈ ಯೋಜಿತ ಪ್ರತಿಭಟನೆಯು ನಮ್ಮ ಪ್ರದೇಶದ ಶಾಂತಿ ಮತ್ತು ದೈನಂದಿನ ಜೀವನಕ್ಕೆ ಭಂಗ ತರುತ್ತಿದೆ. ಅವರು ಬಲವಂತವಾಗಿ ಹೋರಾಟ ಮಾಡಲು ಯತ್ನಿಸುತ್ತಿದ್ದಾರೆ, ವಸತಿ ಪ್ರದೇಶದಲ್ಲಿ ಇಂತಹ ಪ್ರತಿಭಟನೆಗಳಿಗೆ ಅನುಮತಿ ನೀಡಬಾರದು” ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನಾಕಾರರನ್ನು ಬಂಧಿಸುವಂತೆ ಸಿಎಂ ಫಡ್ನವೀಸ್‌ಗೆ ಅಭಿಜೀತ್ ಸವಾಲು

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಶಿವಾಜಿ ಪಾರ್ಕ್‌ನಲ್ಲಿ ಜಮಾಯಿಸಿರುವ ಪ್ರತಿಭಟನಾಕಾರರನ್ನು ಬಂಧಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಸಿ‌ಜೆ‌ಪಿ (ಕಾಕ್ರಾಚ್ ಜನತಾ ಪಾರ್ಟಿ) ನಾಯಕ ಅಭಿಜೀತ್...

ಕರ್ನಾಟಕ ಎಸ್‌ಐಆರ್‌ನಲ್ಲಿ ಫಾರ್ಮ್ 7 ದುರುಪಯೋಗ ಆರೋಪ: ಖಾಸಗಿ ವ್ಯಕ್ತಿಗಳ ಆಕ್ಷೇಪಣೆ ಸ್ಥಗಿತಕ್ಕೆ ಸಚಿವ ರಿಜ್ವಾನ್ ಅರ್ಷದ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ನಡುವೆಯೇ ಫಾರ್ಮ್ 7 ಬಳಸಿ ಮತದಾರರ ಹೆಸರುಗಳನ್ನು ಅಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆರೋಪ ಮತ್ತಷ್ಟು ತೀವ್ರಗೊಂಡಿದೆ. ರಾಜ್ಯ...

ಗಾಂಧಿ ಜಯಂತಿಯಂದೇ ಗಾಂಧಿ ಹತ್ಯೆ ಸಂಭ್ರಮಿಸುವ ವಿಕೃತ ವಿಡಿಯೋ ಪೋಸ್ಟ್ ಮಾಡಿದ ಹಿಂದುತ್ವ ವೇದಿಕೆ  ‘ದಿ ಜೈಪುರ ಡೈಲಾಗ್ಸ್’

ನವದೆಹಲಿ: ಗಾಂಧಿ ಜಯಂತಿಯಂದೇ ಮಹಾತ್ಮ ಗಾಂಧಿಯವರ ಹತ್ಯೆಯನ್ನು ಸಂಭ್ರಮಿಸುವ ರೀತಿಯ ವೀಡಿಯೊವೊಂದನ್ನು ಹಂಚಿಕೊಂಡಿರುವ ಆರೋಪಕ್ಕೆ ಹಿಂದುತ್ವಕ್ಕೆ ಸಂಬಂಧಿಸಿದ ಡಿಜಿಟಲ್ ವೇದಿಕೆ ‘ದಿ ಜೈಪುರ ಡೈಲಾಗ್ಸ್’ ತೀವ್ರ ಟೀಕೆಗೆ ಗುರಿಯಾಗಿದೆ. ಅಕ್ಟೋಬರ್ 2ರಂದು ಗಾಂಧಿ...

ಫೇಸ್‌ಬುಕ್ ಪೋಸ್ಟ್ ವಿವಾದ: ಉದ್ಯಮಿ ದೂರು ಆಧರಿಸಿ ‘ಮೊಹಮ್ಮದ್’ ದೀಪಕ್ ಬಂಧನ; ಕೋಟ್‌ದ್ವಾರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್

ಉತ್ತರಾಖಂಡದ ಕೋಟ್‌ದ್ವಾರದಲ್ಲಿ ಫೇಸ್‌ಬುಕ್ ಪೋಸ್ಟ್‌ಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಸ್ಥಳೀಯ ಉದ್ಯಮಿ ಸಂಜೀವ್ ಟೋಂಕ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ದೀಪಕ್ ಕುಮಾರ್ ಅವರನ್ನು ಅಕ್ಟೋಬರ್ 1ರಂದು ಬಂಧಿಸಿದ್ದಾರೆ.  ಜನವರಿ 26ರಂದು ಮುಸ್ಲಿಂ...

ದಾಖಲೆ ಇಲ್ಲದ ಮಾತ್ರಕ್ಕೆ ಜಾನುವಾರು ಸಾಗಾಟ ‘ವಧೆಗಾಗಿ’ ಎಂದು ಊಹಿಸಲಾಗದು: ಸುಪ್ರೀಂ ಕೋರ್ಟ್

ಜಾನುವಾರುಗಳನ್ನು ಸಾಗಿಸುವಾಗ ಸೂಕ್ತ ದಾಖಲೆಗಳು ಇಲ್ಲ ಎಂಬ ಏಕೈಕ ಕಾರಣಕ್ಕಾಗಿ ಅವುಗಳನ್ನು ವಧೆಯ ಉದ್ದೇಶಕ್ಕಾಗಿಯೇ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. 32 ಎತ್ತುಗಳನ್ನು ವಧೆಗಾಗಿ...

ಬೆಳಗಾವಿಯಲ್ಲಿ ಜೀವ ತೆಗೆಯುತ್ತಿರುವ ಗಾಳಿಪಟ ಮಾಂಜಾ ದಾರ: ಎರಡೇ ದಿನಗಳಲ್ಲಿ ಇಬ್ಬರು ಬಲಿ

ಗಾಳಿಪಟ ಹಾರಿಸುವ ಸಂಭ್ರಮವು ಬೆಳಗಾವಿ ನಗರದಲ್ಲಿ ಸಾರ್ವಜನಿಕರ ಜೀವಕ್ಕೆ ಭಾರಿ ಕಂಟಕವಾಗಿ ಪರಿಣಮಿಸಿದೆ. ನಗರದಲ್ಲಿ ಅಪಾಯಕಾರಿ ಮಾಂಜಾ ದಾರ ಮತ್ತು ಗಾಳಿಪಟದ ಹುಚ್ಚಾಟಕ್ಕೆ ಕೇವಲ ಎರಡೇ ದಿನಗಳಲ್ಲಿ ಇಬ್ಬರು ಪ್ರಾಣ ಕಳೆದುಕೊಂಡ ಭೀಕರ...

ಗ್ಯಾನೇಶ್ ಕುಮಾರ್ ವಿರುದ್ಧದ ಹಳೆಯ ಭ್ರಷ್ಟಾಚಾರದ ಕಡತ ತರಿಸಿಕೊಂಡ ಕೇರಳಂ ಸರ್ಕಾರ

ದೇಶಾದ್ಯಂತ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ವಿರೋಧಿಸಿ 'ಇಂಡಿಯಾ' (INDIA) ಒಕ್ಕೂಟವು ತೀವ್ರ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್...

‘ಬಿರಿಯಾನಿ ತಿನ್ನಲು ಹುಟ್ಟಿದವರು ಪ್ರಾಣಿಗಳು..’; ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ

"ಬಿರಿಯಾನಿ ತಿನ್ನಲು ಹುಟ್ಟಿದವರು ಪ್ರಾಣಿಗಳು," ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಗುರುವಾರ ಹೇಳಿದ್ದಾರೆ. ಭಗವಂತ ತಮ್ಮನ್ನು ಈ ಜಗತ್ತಿಗೆ ಈ ಖಾದ್ಯವನ್ನು ಸವಿಯಲು ಕಳುಹಿಸಿದ್ದಾನೆ ಎಂಬ ಕಾಂಗ್ರೆಸ್ ಸಂಸದ ರಕೀಬುಲ್...

ಹೈದರಾಬಾದ್‌ ಎಸ್‌ಐಆರ್ ಪ್ರಕ್ರಿಯೆ; ಸುಮಾರು 5,000 ‘ಫಾರ್ಮ್- 7’ ಅರ್ಜಿ ಸಲ್ಲಿಕೆ

ತೆಲಂಗಾಣ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್), ಹೈದರಾಬಾದ್‌ನಲ್ಲಿ ಸುಮಾರು 5,000 ‘ಫಾರ್ಮ್ 7’ ಅರ್ಜಿಗಳು ಸಲ್ಲಿಕೆಯಾಗಿವೆ. ಎಲ್ಲಾ ಜಿಲ್ಲೆಗಳಿಗೆ ಹೋಲಿಸಿದರೆ ಇದು ಅತ್ಯಂತ ಹೆಚ್ಚಿನ ಸಂಖ್ಯೆಯಾಗಿದೆ. ಮಾಧ್ಯಮ ವರದಿಗಳ...

ಎಸ್‌ಐಆರ್ ಅಕ್ರಮ ವಿರೋಧಿ ಪ್ರತಿಭಟನೆಗೆ ಪೊಲೀಸ್ ತಡೆ: ನವದೆಹಲಿಯಲ್ಲಿ ಸೆಕ್ಷನ್ 163 ಜಾರಿ, 11 ಮೆಟ್ರೋ ನಿಲ್ದಾಣ ಬಂದ್!

ಚುನಾವಣಾ ಆಯೋಗದ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಗಾಂಧಿ ಜಯಂತಿಯ ದಿನವಾದ ಇಂದು (ಅಕ್ಟೋಬರ್...