Homeಮುಖಪುಟಯುಪಿ ವಿಧಾನಸಭೆ ಚುನಾವಣೆಗೆ ಓವೈಸಿ-ಆಝಾದ್ ಮೈತ್ರಿ : ಸಿಎಂ ಅಭ್ಯರ್ಥಿ ಘೋಷಣೆ

ಯುಪಿ ವಿಧಾನಸಭೆ ಚುನಾವಣೆಗೆ ಓವೈಸಿ-ಆಝಾದ್ ಮೈತ್ರಿ : ಸಿಎಂ ಅಭ್ಯರ್ಥಿ ಘೋಷಣೆ

- Advertisement -
- Advertisement -

ವಿಧಾನಸಭೆ ಚುನಾವಣೆಗೆ ಮುನ್ನ ಉತ್ತರ ಪ್ರದೇಶದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮತ್ತು ಚಂದ್ರಶೇಖರ್ ಆಝಾದ್ ಅವರ ಆಝಾದ್ ಸಮಾಜ ಪಕ್ಷ (ಕಾನ್ಶಿರಾಮ್) ಜೊತೆಗೂಡಿ ‘ಸಾಮಾಜಿಕ್ ಪರಿವರ್ತನ್ ಮೋರ್ಚಾ’ ಎಂಬ ಹೊಸ ಮೈತ್ರಿಕೂಟ ರಚಿಸಿದೆ.

ಗುರುವಾರ (ನ.12) ಲಕ್ನೋದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಇಬ್ಬರು ನಾಯಕರು ಈ ಬಗ್ಗೆ ಘೋಷಣೆ ಮಾಡಿದ್ದಾರೆ.

ಆಝಾದ್ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಓವೈಸಿ, ತಮ್ಮ ಪಕ್ಷ ಮತ್ತು ಆಝಾದ್ ಅವರ ಎಎಸ್‌ಪಿ (ಕಾನ್ಶಿರಾಂ) ನಡುವಿನ ಮೈತ್ರಿಯು, ಉತ್ತರ ಪ್ರದೇಶದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳುವುದನ್ನು ತಡೆಯಲು ಪ್ರಯತ್ನಿಸಲಿವೆ ಎಂದು ಹೇಳಿದ್ದಾರೆ.

“ಉತ್ತರ ಪ್ರದೇಶದಲ್ಲಿ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಇದೊಂದು ಪ್ರಬಲ ಪರ್ಯಾಯವಾಗಲಿದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ” ಎಂದಿದ್ದಾರೆ.

ಈ ಮೈತ್ರಿಕೂಟವು ಜಾತಿ ಭೇದವಿಲ್ಲದೆ ಹಿಂದುಳಿದ ಮತ್ತು ದಲಿತ ಸಮುದಾಯಗಳು, ಹಾಗೂ ಶೋಷಿತ ಮತ್ತು ಅಂಚಿನಲ್ಲಿರುವ ವರ್ಗಗಳಿಗೆ ಸಂಬಂಧಿಸಿದ ವಿಷಯಗಳ ಮೇಲೆ ಗಮನಹರಿಸಲಿದೆ ಎಂದು ಓವೈಸಿ ತಿಳಿಸಿದ್ದಾರೆ. ರಾಜಕೀಯ ಪಕ್ಷಗಳು ಈ ಸಮುದಾಯಗಳನ್ನು ಇಲ್ಲಿಯವರೆಗೆ ಕೇವಲ ‘ವೋಟ್ ಬ್ಯಾಂಕ್‌’ಗಳಾಗಿ ಮಾತ್ರ ಬಳಸಿಕೊಂಡಿವೆ ಎಂದು ದೂರಿದ್ದಾರೆ.

ಶಿಕ್ಷಣ ವ್ಯವಸ್ಥೆಯ ಹದಗೆಡುತ್ತಿರುವ ಸ್ಥಿತಿ, ರಾಜ್ಯದ ಯುವಜನರಲ್ಲಿನ ನಿರುದ್ಯೋಗ ಮತ್ತು ರೈತರು ಎದುರಿಸುತ್ತಿರುವ ಸಮಸ್ಯೆಗಳಂತಹ ವಿಷಯಗಳನ್ನು ಮೋರ್ಚಾ ಪ್ರಸ್ತಾಪಿಸಲಿದೆ ಎಂದು ತಿಳಿಸಿದ್ದಾರೆ.

“ನಮ್ಮ ಸಹೋದರ ಚಂದ್ರಶೇಖರ್ ಆಝಾದ್ ಅವರು ಎಸ್‌ಪಿಎಂನ ಮುಖ್ಯ ಅಧ್ಯಕ್ಷರಾಗಿರುತ್ತಾರೆ ಮತ್ತು ಉತ್ತರ ಪ್ರದೇಶದಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುತ್ತಾರೆ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ” ಎಂದು ಓವೈಸಿ ಹೇಳಿದ್ದಾರೆ.

ಮೈತ್ರಿಕೂಟದ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಎರಡೂ ಪಕ್ಷಗಳು ಒಟ್ಟಾಗಿ ಕೆಲಸ ಮಾಡುತ್ತವೆ ಎಂದು ಹೇಳಿದ ಓವೈಸಿ, ಮೈತ್ರಿಕೂಟದ ಗೆಲುವು ಎಂದರೆ ಅದು ಉತ್ತರ ಪ್ರದೇಶದ ಜನರ ಗೆಲುವೇ ಆಗಿರುತ್ತದೆ ಎಂದಿದ್ದಾರೆ.

ನವೆಂಬರ್ 26ರಂದು ನಿಗದಿಯಾಗಿರುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಅದನ್ನು ಯಶಸ್ವಿಗೊಳಿಸುವಂತೆ ಓವೈಸಿ ಜನರಿಗೆ ಮನವಿ ಮಾಡಿದ್ದು, ಇದು ರಾಜ್ಯದಲ್ಲಿ ಸಾಮಾಜಿಕ ಬದಲಾವಣೆಗಾಗಿ ನಡೆಯುವ ಚಳುವಳಿಯ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಬಿಜೆಪಿ ಮತ್ತು ಇತರ ರಾಜಕೀಯ ಪಕ್ಷಗಳತ್ತ ಟೀಕಾಪ್ರಹಾರ ನಡೆಸಿದ ಓವೈಸಿ, ಆ ಪಕ್ಷಗಳು ಹಳೆಯ ರಾಜಕೀಯವನ್ನು ಪ್ರತಿನಿಧಿಸುತ್ತವೆ, ಆದರೆ ‘ಸಾಮಾಜಿಕ ಪರಿವರ್ತನ ಮೋರ್ಚಾ’ ಭವಿಷ್ಯದತ್ತ ಗಮನಹರಿಸಲಿದೆ ಎಂದಿದ್ದಾರೆ.

“ನಾವು ಭವಿಷ್ಯಕ್ಕಾಗಿ ರಾಜಕೀಯ ಮಾಡುತ್ತೇವೆ. ಉತ್ತಮ ಭವಿಷ್ಯವನ್ನು ರೂಪಿಸಲು ಉತ್ತರ ಪ್ರದೇಶದ ಜನರು ಚಂದ್ರಶೇಖರ್ ಆಝಾದ್ ಅವರೊಂದಿಗೆ ಕೈಜೋಡಿಸುತ್ತಾರೆ ಎಂದು ನಾವು ಭಾವಿಸುತ್ತೇವೆ” ಎಂದು ಓವೈಸಿ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಲು, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಈ ಮೈತ್ರಿಕೂಟದ ಬೆಂಬಲದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದರೆ, ಅವರಿಗಾಗಿ ಮೈತ್ರಿಕೂಟದ ಬಾಗಿಲು ತೆರೆದಿರುತ್ತದೆ ಎಂದು ಆಝಾದ್ ತಿಳಿಸಿದ್ದಾರೆ.

ಈ ಮೈತ್ರಿಕೂಟವನ್ನು ‘ಮೂರನೇ ರಂಗ’ ಎಂದು ಬಣ್ಣಿಸುವುದನ್ನು ತಳ್ಳಿಹಾಕಿದ ಆಝಾದ್, ಇದು ಸಮಾಜದ ವಂಚಿತ, ಶೋಷಿತ ಮತ್ತು ಅಂಚಿನಲ್ಲಿರುವ ವರ್ಗಗಳಿಗೆ ಒಂದು ರಾಜಕೀಯ ವೇದಿಕೆಯಾಗಬಲ್ಲದು ಎಂದು ಹೇಳಿದ್ದಾರೆ.

“ಜನರು ಇದನ್ನು ಮೂರನೇ ರಂಗ ಎಂದು ಕರೆಯುತ್ತಿದ್ದಾರೆ, ಆದರೆ ಇದೇನೂ ಮೂರನೇ ರಂಗವಲ್ಲ. ಇದು ‘ಸಾಮಾಜಿಕ್ ಪರಿವರ್ತನ್ ಮೋರ್ಚಾ’ (ಸಾಮಾಜಿಕ ಪರಿವರ್ತನಾ ಮೋರ್ಚಾ). ಇದರ ಆಳವನ್ನು ನೀವು ಅರ್ಥಮಾಡಿಕೊಂಡರೆ, ಇದೇ ಮೊದಲ ರಂಗ ಎಂಬುದು ನಿಮಗೆ ಅರಿವಾಗುತ್ತದೆ” ಎಂದಿದ್ದಾರೆ.

ಈ ಮೈತ್ರಿಕೂಟವು ದುರ್ಬಲ ಮತ್ತು ವಂಚಿತ ಸಮುದಾಯಗಳನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿದೆ. ಅಲ್ಲದೆ, ಈ ಸಮುದಾಯಗಳು ತಮ್ಮ ಚುನಾವಣಾ ಬಲವನ್ನು ಬಳಸಿಕೊಂಡು ರಾಜಕೀಯ ಅಧಿಕಾರವನ್ನು ಪಡೆಯಲು ಮತ್ತು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಹಾಯ ಮಾಡುವುದು ಇದರ ಉದ್ದೇಶವಾಗಿದೆ ಎಂದು ಆಝಾದ್ ಹೇಳಿದ್ದಾರೆ. ಬಿ.ಆರ್. ಅಂಬೇಡ್ಕರ್ ಅವರನ್ನು ಉಲ್ಲೇಖಿಸಿದ ಅವರು, ಜನರ ಸಮಸ್ಯೆಗಳನ್ನು ಬಗೆಹರಿಸಲು ರಾಜಕೀಯ ಅಧಿಕಾರವೇ ಒಂದು ‘ಮಾಸ್ಟರ್ ಕೀ’ (ಪ್ರಮುಖ ಸಾಧನ) ಎಂದು ಬಣ್ಣಿಸಿದ್ದಾರೆ.

ತಮ್ಮದೇ ಆದ ರಾಜಕೀಯ ಸಂಘಟನೆಗಳನ್ನು ಹೊಂದಿರದ ಸಮುದಾಯಗಳು, ತಮ್ಮ ಜನಸಂಖ್ಯೆ ಎಷ್ಟೇ ಇದ್ದರೂ, ತಮ್ಮ ಹಿತಾಸಕ್ತಿಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಿಕೊಳ್ಳಲಾರವು ಎಂದು ಆಝಾದ್ ಹೇಳಿದ್ದಾರೆ.

ಅಂಬೇಡ್ಕರ್ ಅವರು ‘ಶೆಡ್ಯೂಲ್ಡ್ ಕ್ಯಾಸ್ಟ್ಸ್ ಫೆಡರೇಶನ್’, ‘ಇಂಡಿಯನ್ ಲೇಬರ್ ಪಾರ್ಟಿ’ ಮತ್ತು ‘ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ’ ಸೇರಿದಂತೆ ವಿವಿಧ ರಾಜಕೀಯ ಸಂಘಟನೆಗಳನ್ನು ರೂಪಿಸಿದ್ದನ್ನು ಉಲ್ಲೇಖಿಸಿದ ಆಝಾದ್, ಅಸ್ತಿತ್ವದಲ್ಲಿದ್ದ ರಾಜಕೀಯ ಪಕ್ಷಗಳು ಅಂಚಿನಲ್ಲಿರುವ ಸಮುದಾಯಗಳನ್ನು ಸಮರ್ಪಕವಾಗಿ ಪ್ರತಿನಿಧಿಸುವುದಿಲ್ಲ ಎಂಬುದನ್ನು ಅಂಬೇಡ್ಕರ್ ಅರಿತುಕೊಂಡಿದ್ದರು ಎಂದಿದ್ದಾರೆ.

ಅಂಚಿನಲ್ಲಿರುವ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ, ಬಡತನವನ್ನು ನಿವಾರಿಸುವ ಮತ್ತು ಅವರ ಮೇಲಿನ ದೌರ್ಜನ್ಯಗಳನ್ನು ತಡೆಯುವ ಭರವಸೆಗಳನ್ನು ಈಡೇರಿಸುವಲ್ಲಿ ಸತತವಾಗಿ ಅಧಿಕಾರದಲ್ಲಿದ್ದ ಸರ್ಕಾರಗಳು ವಿಫಲವಾಗಿವೆ ಎಂದು ಆಝಾದ್ ದೂರಿದ್ದಾರೆ.

ಉತ್ತರ ಪ್ರದೇಶದಲ್ಲಿ ಎಐಎಂಐಎಂ ಪಕ್ಷದ ಚುನಾವಣಾ ಉಪಸ್ಥಿತಿ ಸೀಮಿತವಾಗಿದ್ದರೂ, ಅಲ್ಪಸಂಖ್ಯಾತ ಸಮುದಾಯದ ಕೆಲವು ವರ್ಗಗಳಲ್ಲಿ ಓವೈಸಿ ಪ್ರಭಾವ ಹೊಂದಿದ್ದಾರೆ. ಇತ್ತ ಆಝಾದ್ ಅವರು ಯುವ ದಲಿತ ಮತದಾರರ ನಡುವೆ ತಮ್ಮ ಬೆಂಬಲದ ನೆಲೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎನ್‌ವಿಡಿಯಾ ಸಿಇಒ ವೈಯಕ್ತಿಕ ಸಂಬಂಧ ವಿವಾದ: ‘ಗೂಢಚಾರಿಕೆ ನಿರೂಪಣೆಗಳನ್ನು ಸೃಷ್ಟಿಸಿ ತಾಂತ್ರಿಕ ದಿಗ್ಬಂಧನ ಹೇರಬೇಡಿ’: ಅಮೆರಿಕಕ್ಕೆ ಚೀನಾ ಎಚ್ಚರಿಕೆ

ಅಮೆರಿಕವು ಚೀನಾದ ತಾಂತ್ರಿಕ ಪ್ರಗತಿಗೆ ಕಡಿವಾಣ ಹಾಕಲು ಗೂಢಚಾರಿಕೆಯ ಆರೋಪಗಳನ್ನು ನೆಪವಾಗಿ ಬಳಸುತ್ತಿದೆ ಎಂದು ಆರೋಪಿಸಿರುವ ಚೀನಾ, ಇಂತಹ ನಿರೂಪಣೆಗಳನ್ನು ಸೃಷ್ಟಿಸುವುದನ್ನು ನಿಲ್ಲಿಸುವಂತೆ ಅಮೆರಿಕವನ್ನು ಒತ್ತಾಯಿಸಿದೆ. ಎನ್‌ವಿಡಿಯಾ (Nvidia) ಸಿಇಒ ಜೆನ್ಸನ್ ಹುವಾಂಗ್...

ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದ ನಾರ್ವೆ ಪತ್ರಕರ್ತೆಯ ಭಾರತ ಭೇಟಿಗೆ ತಡೆ : ಕೊನೆ ಕ್ಷಣದಲ್ಲಿ ವೀಸಾ ರದ್ದು

ಕಳೆದ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನಾರ್ವೆಗೆ ಭೇಟಿ ನೀಡಿದ್ದಾಗ, ಅವರಿಗೆ ಪ್ರಶ್ನೆ ಕೇಳಿ ಸುದ್ದಿಯಾಗಿದ್ದ ಅಲ್ಲಿನ ಪತ್ರಕರ್ತೆ ಹೆಲ್ಲೆ ಲಿಂಗ್ ಅವರ ಭಾರತ ಭೇಟಿಗೆ ಕೊನೆ ಕ್ಷಣದಲ್ಲಿ ತಡೆಯೊಡ್ಡಲಾಗಿದೆ ಎಂದು...

ಸ್ಥಳೀಯರ ಹೋರಾಟಕ್ಕೆ ಸಂದ ಜಯ: ‘ನಮ್ಮ ಮೆಟ್ರೋ’ ಪಿಂಕ್ ಲೈನ್‌ನ 3 ನಿಲ್ದಾಣಗಳ ಹೆಸರು ಬದಲಾವಣೆಗೆ ಕೇಂದ್ರದಿಂದ ಅನುಮೋದನೆ!

ಬೆಂಗಳೂರು: 'ನಮ್ಮ ಮೆಟ್ರೋ' ಗುಲಾಬಿ ಮಾರ್ಗದ (Pink Line) ಎಲಿವೇಟೆಡ್‌ ಕಾರಿಡಾರ್‌ನ ಮೂರು ಪ್ರಮುಖ ನಿಲ್ದಾಣಗಳ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ...

ಗಾಝಾದ ನಾಸರ್ ಆಸ್ಪತ್ರೆಯ ಮೇಲೆ ಇಸ್ರೇಲ್‌ನಿಂದ ವೈಮಾನಿಕ ದಾಳಿ : ಕನಿಷ್ಠ 6 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ

ದಕ್ಷಿಣ ಗಾಝಾದ ನಾಸರ್ ಆಸ್ಪತ್ರೆಯ ಕಟ್ಟಡವೊಂದರ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಖಾನ್ ಯೂನಿಸ್‌ನಲ್ಲಿರುವ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಮೇಲೆ ದಾಳಿ...

ಮುಸ್ಲಿಂ ದಂಪತಿಗೆ ನಿಂದನೆ; ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಅಮಾನತು

ತಪ್ಪಾಗಿ ಬೇರೆ ಬಸ್ ಹತ್ತಿ ಇಳಿದ ಇಬ್ಬರು ಪ್ರಯಾಣಿಕರ ವಿರುದ್ಧ ಕೋಮುವಾದಿ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾದ ವೈರಲ್ ವಿಡಿಯೋ ಆಧರಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ) ಬಸ್ ಕಂಡಕ್ಟರ್ ಒಬ್ಬರನ್ನು...

ನೊಂದವರ ದನಿಯಾಗಿ, ಶೋಷಿತರ ಹೋರಾಟದ ಶಕ್ತಿಯಾಗಿ ಬೆಳೆದ ಶಿವರಾಮ ಮೋಘ: ಡಾ. ಪಿ. ನಂದಕುಮಾರ್

ಭಾರತದ ಸಾಂಸ್ಕೃತಿಕ ಚರಿತ್ರೆಯಲ್ಲಿ ಹೈದರಾಬಾದ್ ಕರ್ನಾಟಕ’ (ಕಲ್ಯಾಣ ಕರ್ನಾಟಕ) ಪ್ರದೇಶಕ್ಕೆ ವಿಶೇಷವಾದ ಸ್ಥಾನವಿದೆ. ಹಲವು ಸಾಂಸ್ಕೃತಿಕ ವಿಶೇಷತೆಯನ್ನು ಒಳಗೊಂಡಿರುವ ಈ ಪ್ರದೇಶವು ಕಲೆ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿದೆ. ಶ್ರೀವಿಜಯ...

ಅರ್ಜೆಂಟೀನಾದ ನೌಕಾಪಡೆ -ವಾಯುಪಡೆಯನ್ನು ‘ಭಯೋತ್ಪಾದಕ ಸಂಸ್ಥೆಗಳು’ ಎಂದು ಘೋಷಿಸಿದ ಇರಾನ್‌

ಅರ್ಜೆಂಟೀನಾದ ನೌಕಾಪಡೆ ಮತ್ತು ವಾಯುಪಡೆಯನ್ನು ಇರಾನ್ ಸರ್ಕಾರವು ಭಯೋತ್ಪಾದಕ ಸಂಸ್ಥೆಗಳು ಎಂದು ಘೋಷಿಸಿದ್ದು, ಈ ವರ್ಷದ ಆರಂಭದಲ್ಲಿ ಟೆಹ್ರಾನ್‌ನ 'ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್' (ಐಆರ್ ಜಿಸಿ) ಅನ್ನು ಕಪ್ಪುಪಟ್ಟಿಗೆ ಸೇರಿಸುವ ಬ್ಯೂನಸ್...

ಎಸ್‌ಐಆರ್ ಅವಧಿಯಲ್ಲಿ ಕೈಬಿಡಲಾದ ವ್ಯಕ್ತಿಗಳ ಗುರುತಿನ ಚೀಟಿ ಸಂಖ್ಯೆ ಮರುಸ್ಥಾಪನೆ ಕೋರಿ ಅರ್ಜಿ

ಭಾರತೀಯ ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು (ಎಸ್‌ಐಆರ್) ಪ್ರಶ್ನಿಸಿರುವ ಇಬ್ಬರು ಅರ್ಜಿದಾರರು, ತಮ್ಮ ಪರಿಷ್ಕೃತ ಪರಿಹಾರ ಪ್ರಕ್ರಿಯೆಯನ್ನು ಕೇವಲ ಏಳು ರಾಜ್ಯಗಳಿಗೆ ಸೀಮಿತಗೊಳಿಸುವ ಬದಲು, ಕರಡು ಪಟ್ಟಿಯಿಂದ ಕೈಬಿಡಲಾದ...

ಜಮ್ಮು ಕಾಶ್ಮೀರ : CRPF ತುಕಡಿ ಮೇಲೆ ಭಯೋತ್ಪಾದಕರಿಂದ ಗುಂಡಿನ ದಾಳಿ ; ಮೂವರು ಯೋಧರಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ (ನ.11) ನಡೆದ ಭಯೋತ್ಪಾದಕ ದಾಳಿಯಲ್ಲಿ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್‌ನ (ಸಿಆರ್‌ಪಿಎಫ್‌)ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಜಿಲ್ಲೆಯ ಚೆಕ್‌ಪಾಯಿಂಟ್ ಒಂದರಲ್ಲಿ ನಿಯೋಜನೆಗೊಂಡಿದ್ದ ಭದ್ರತಾ...

‘ಮಾಲಿನ್ಯ ಹೆಚ್ಚಾದರೆ ಕಡಿಮೆಯಾಗುತ್ತದೆ, ಚಿಂತೆ ಏಕೆ?’: ಪಟಾಕಿ ಸಿಡಿಸುವುದನ್ನು ಸಮರ್ಥಿಸಿಕೊಂಡ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ: ದೇಶದ ಹಲವು ನಗರಗಳಲ್ಲಿ ವಾಯುಮಾಲಿನ್ಯ ಜನರ ಜೀವಕ್ಕೆ ಕಂಟಕವಾಗುತ್ತಿರುವ ಬೆನ್ನಲ್ಲೇ, ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ಸಮರ್ಥಿಸಿಕೊಂಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ತೀವ್ರ ಚರ್ಚೆಗೆ...