Homeಅಂತರಾಷ್ಟ್ರೀಯಭಾರತ ಬಿಟ್ಟು 16 ವರ್ಷಗಳ ಬಳಿಕ ಬ್ರಿಟಿಷ್ ಪೌರತ್ವ ಪಡೆದ ಲಲಿತ್ ಮೋದಿ: ‘ಗಾಡ್ ಸೇವ್...

ಭಾರತ ಬಿಟ್ಟು 16 ವರ್ಷಗಳ ಬಳಿಕ ಬ್ರಿಟಿಷ್ ಪೌರತ್ವ ಪಡೆದ ಲಲಿತ್ ಮೋದಿ: ‘ಗಾಡ್ ಸೇವ್ ದಿ ಕಿಂಗ್’ ಎಂದು ಘೋಷಣೆ!

- Advertisement -
- Advertisement -

ಭಾರತದಲ್ಲಿ ಅಕ್ರಮ ಹಣ ವರ್ಗಾವಣೆ, ಹಣಕಾಸು ಅವ್ಯವಹಾರಗಳು ಮತ್ತು ಐಪಿಎಲ್ ಸಂಬಂಧಿತ ಆರೋಪಗಳಡಿ ಜಾರಿ ನಿರ್ದೇಶನಾಲಯ (ED) ಸೇರಿದಂತೆ ತನಿಖಾ ಸಂಸ್ಥೆಗಳಿಗೆ ಬೇಕಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮಾಜಿ ಅಧ್ಯಕ್ಷ ಲಲಿತ್ ಮೋದಿ, ತಾವು ಅಧಿಕೃತವಾಗಿ ಬ್ರಿಟಿಷ್ ಪೌರತ್ವವನ್ನು ಪಡೆದುಕೊಂಡಿರುವುದಾಗಿ ಘೋಷಿಸಿದ್ದಾರೆ. ಭಾರತ ತೊರೆದು ಬರೋಬ್ಬರಿ 16 ವರ್ಷಗಳ ಬಳಿಕ ಈ ಬೆಳವಣಿಗೆ ನಡೆದಿದೆ.

ಬ್ರಿಟನ್ ದೊರೆ ಕಿಂಗ್ ಚಾರ್ಲ್ಸ್-III ಅವರ ಜನ್ಮದಿನವಾದ ಶನಿವಾರ (ನವೆಂಬರ್ 14, 2026) ಪ್ರತಿಷ್ಠಿತ ಆಕ್ಸ್‌ಫರ್ಡ್ ಯೂನಿಯನ್‌ನಲ್ಲಿ ಭಾಷಣ ಮಾಡಿದ ಬೆನ್ನಲ್ಲೇ ಲಲಿತ್ ಮೋದಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ (X) ಈ ವಿಷಯವನ್ನು ಹಂಚಿಕೊಂಡಿದ್ದಾರೆ. “ಹೆಮ್ಮೆಯ ಕ್ಷಣ, ಹೊಸ ಅಧ್ಯಾಯ” ಎಂದು ಬರೆದುಕೊಂಡಿರುವ ಅವರು, ಸೆಪ್ಟೆಂಬರ್ 15, 2026ರಂದು ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ತಾವು ಬ್ರಿಟಿಷ್ ಪೌರತ್ವ ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ. ಬ್ರಿಟನ್ ಹಲವು ವರ್ಷಗಳಿಂದ ತಮ್ಮ ಮನೆಯಾಗಿದ್ದು, ಅಲ್ಲಿನ ಜನರು, ಸಂಸ್ಥೆಗಳು, ಸಂಪ್ರದಾಯ ಮತ್ತು ಮೌಲ್ಯಗಳನ್ನು ತಾವು ಆಳವಾಗಿ ಗೌರವಿಸುವುದಾಗಿ ಹೇಳಿರುವ ಮೋದಿ, “ಗಾಡ್ ಸೇವ್ ದಿ ಕಿಂಗ್!” ಎಂದು ಪೋಸ್ಟ್ ಮಾಡಿದ್ದಾರೆ.

2008ರಲ್ಲಿ ಐಪಿಎಲ್ ಹುಟ್ಟುಹಾಕುವ ಮೂಲಕ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದ್ದ ಲಲಿತ್ ಮೋದಿ, 2009ರಲ್ಲಿ ಭಾರತದ ಸಾರ್ವತ್ರಿಕ ಚುನಾವಣೆಯ ಕಾರಣ ಇಡೀ ಟೂರ್ನಿಯನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಿ ಯಶಸ್ವಿಯಾಗಿದ್ದರು. ಆದರೆ, 2010ರ ಐಪಿಎಲ್ ಫೈನಲ್ ನಂತರ ಪುಣೆ ಮತ್ತು ಕೊಚ್ಚಿ ತಂಡಗಳ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಅಕ್ರಮ ಹಾಗೂ ದುರ್ನಡತೆಯ ಆರೋಪದಡಿ ಬಿಸಿಸಿಐ ಅವರನ್ನು ಅಮಾನತುಗೊಳಿಸಿತ್ತು. ಆಂತರಿಕ ತನಿಖೆಯ ಬಳಿಕ 2013ರಲ್ಲಿ ಬಿಸಿಸಿಐ ಅವರಿಗೆ ಆಜೀವ ನಿಷೇಧ ಹೇರಿತ್ತು. 2010ರಲ್ಲಿ ಭಾರತ ತೊರೆದ ಮೋದಿ ಅಂದಿನಿಂದ ಲಂಡನ್‌ನಲ್ಲಿ ನೆಲೆಸಿದ್ದಾರೆ.

ಜಾರಿ ನಿರ್ದೇಶನಾಲಯ (ED) ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ವಿಶೇಷ ನ್ಯಾಯಾಲಯವು 2015ರಲ್ಲಿ ಲಲಿತ್ ಮೋದಿ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಿತ್ತು. ಭಾರತ-ಬ್ರಿಟನ್ ಪರಸ್ಪರ ಕಾನೂನು ನೆರವು ಒಪ್ಪಂದದಡಿ (MLAT) ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಭಾರತೀಯ ತನಿಖಾ ಸಂಸ್ಥೆಗಳು ಪ್ರಯತ್ನ ನಡೆಸುತ್ತಿದ್ದರೂ, ಇಲ್ಲಿಯವರೆಗೆ ಹಸ್ತಾಂತರ ಪ್ರಕ್ರಿಯೆ ಸಾಧ್ಯವಾಗಿಲ್ಲ.

ವಿಶೇಷವೆಂದರೆ, 2025ರಲ್ಲಿ ಅವರು ದ್ವೀಪರಾಷ್ಟ್ರ ವನುವಾಟು ಪೌರತ್ವ ಪಡೆಯಲು ಪ್ರಯತ್ನಿಸಿದ್ದರು (ನಂತರ ಅದು ರದ್ದಾಗಿತ್ತು). 2025ರ ಡಿಸೆಂಬರ್‌ನಲ್ಲಿ ಉದ್ಯಮಿ ವಿಜಯ್ ಮಲ್ಯ ಅವರೊಂದಿಗೆ ವೀಡಿಯೊವೊಂದರಲ್ಲಿ ಕಾಣಿಸಿಕೊಂಡಿದ್ದ ಲಲಿತ್ ಮೋದಿ, “ನಾವಿಬ್ಬರೂ ಅತಿ ದೊಡ್ಡ ಪರಾರಿಕಾರರು” ಎಂದು ಹೇಳಿಕೊಂಡಿದ್ದರು. ಆದರೆ 2026ರ ಜುಲೈನಲ್ಲಿ ಸುದ್ದಿಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ತಾವು ಭಾರತದಿಂದ ಪರಾರಿಯಾಗಿದ್ದಲ್ಲ ಮತ್ತು ತಮ್ಮ ವಿರುದ್ಧ ಯಾವುದೇ ಅಪರಾಧ ಸಾಬೀತಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.

ಭಾರತೀಯ ಸಂವಿಧಾನದಲ್ಲಿ ದ್ವಿಪೌರತ್ವಕ್ಕೆ ಅವಕಾಶವಿಲ್ಲದ ಕಾರಣ, ಬ್ರಿಟಿಷ್ ಪೌರತ್ವ ಸ್ವೀಕಾರದೊಂದಿಗೆ ಅವರ ಭಾರತೀಯ ಪೌರತ್ವ ರದ್ದಾಗಲಿದೆ. ಇದೀಗ ಅವರು ಅಧಿಕೃತವಾಗಿ ಬ್ರಿಟನ್ ಪ್ರಜೆಯಾಗಿರುವುದರಿಂದ ಭಾರತಕ್ಕೆ ಅವರನ್ನು ಹಸ್ತಾಂತರಿಸುವ ಕಾನೂನು ಪ್ರಕ್ರಿಯೆ ಇನ್ನಷ್ಟು ಜಟಿಲವಾಗುವ ಸಾಧ್ಯತೆಯಿದೆ. ಆರ್ಥಿಕ ಅಪರಾಧ ಆರೋಪಿಗಳನ್ನು ದೇಶಕ್ಕೆ ಮರಳಿ ಕರೆತರುವ ಸರ್ಕಾರದ ಭರವಸೆಗಳ ನಡುವೆಯೂ, 16 ವರ್ಷಗಳಿಂದ ತನಿಖಾ ಸಂಸ್ಥೆಗಳಿಗೆ ಅವರನ್ನು ಕರೆತರಲು ಸಾಧ್ಯವಾಗದಿರುವುದು ರಾಜಕೀಯ ಮತ್ತು ಕಾನೂನು ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ ಎಸ್‌ಐಆರ್ : ನೋಟಿಸ್ ನೀಡಲಾಗಿದ್ದ ಶೇ.99ಕ್ಕೂ ಹೆಚ್ಚು ಮತದಾರರ ಮರು ಸೇರ್ಪಡೆ

ಮಹಾರಾಷ್ಟ್ರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಸಂದರ್ಭದಲ್ಲಿ ನೋಟಿಸ್ ಜಾರಿಗೊಳಿಸಲಾಗಿದ್ದ 1.2 ಕೋಟಿ ಮತದಾರರ ಪೈಕಿ ಶೇಕಡಾ 99ಕ್ಕಿಂತ ಹೆಚ್ಚು ಮಂದಿಯನ್ನು ಮತ್ತೆ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಹಿಂದೂಸ್ತಾನ್...

ಆರ್‌ಎಸ್‌ಎಸ್‌ ನಂಟಿರುವ ನಿಗಮ ಮಂಡಳಿ ನೇಮಕಾತಿದಾರರಿಗೆ ಎಚ್ಚರಿಕೆ: ರಾಜೀನಾಮೆ ನೀಡದಿದ್ದರೆ ಸರ್ಕಾರದಿಂದಲೇ ನೇಮಕಾತಿ ರದ್ದು: ಬಿ.ಕೆ. ಹರಿಪ್ರಸಾದ್

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಮಂಡಳಿಗಳು ಮತ್ತು ನಿಗಮಗಳಿಗೆ ನಿರ್ದೇಶಕರು ಹಾಗೂ ಸದಸ್ಯರನ್ನಾಗಿ ನೇಮಕಗೊಂಡಿರುವ ಆರ್‌ಎಸ್‌ಎಸ್‌ ಸಂಪರ್ಕ ಹೊಂದಿರುವ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಸರ್ಕಾರವೇ ಅವರ ನೇಮಕಾತಿಗಳನ್ನು...

ಪ್ಯಾಲೆಸ್ಟೀನಿಯನ್ನರ ಸಂಪನ್ಮೂಲ ಶೋಷಣೆ ನಿಲ್ಲಿಸುವಂತೆ ಇಸ್ರೇಲ್‌ಗೆ 151 ದೇಶಗಳ ಆಗ್ರಹ: ನಿರ್ಣಯಕ್ಕೆ ಬೆಂಬಲ ಸೂಚಿಸಿದ ಭಾರತ

ಪ್ಯಾಲೆಸ್ಟೀನಿಯನ್ನರ ಭೂಮಿ, ನೀರು ಮತ್ತು ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಇಸ್ರೇಲ್‌ನ ಕ್ರಮಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂಬ ಮಹತ್ವದ ನಿರ್ಣಯಕ್ಕೆ ಭಾರತ ಸೇರಿದಂತೆ 151 ರಾಷ್ಟ್ರಗಳು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಬೆಂಬಲ...

ಈಶಾ ಯೋಗ ಕೇಂದ್ರದ ಸ್ವಯಂಸೇವಕ ನಾಪತ್ತೆ ಪ್ರಕರಣ: ಸಿಬಿ-ಸಿಐಡಿ ತನಿಖೆಗೆ ಮದ್ರಾಸ್ ಹೈಕೋರ್ಟ್ ಆದೇಶ!

ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಜಗ್ಗಿ ವಾಸುದೇವ್ ಅವರ ಈಶಾ ಯೋಗ ಕೇಂದ್ರದ ಸ್ವಯಂಸೇವಕರೊಬ್ಬರು ನಾಪತ್ತೆಯಾಗಿರುವ ಪ್ರಕರಣದ ತನಿಖೆಯಲ್ಲಿ ಸ್ಥಳೀಯ ಪೊಲೀಸರು ತೋರಿರುವ ದೀರ್ಘಕಾಲದ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಮದ್ರಾಸ್ ಹೈಕೋರ್ಟ್, ತನಿಖೆಯನ್ನು ಸಿಬಿ-ಸಿಐಡಿಗೆ (CB-CID)...

ಅಸ್ಸಾಂ : 1983ರ ಗಲಭೆ ವೇಳೆ ನಿರಾಶ್ರಿತರಾಗಿದ್ದ 132 ಬಂಗಾಳಿ ಮುಸ್ಲಿಂ ಕುಟುಂಬಗಳ ಮನೆಗಳನ್ನು ಧ್ವಂಸಗೊಳಿಸಿದ ಬಿಜೆಪಿ ಸರ್ಕಾರ

ಅಸ್ಸಾಂನ ಲಖಿಂಪುರದಲ್ಲಿ ಅಧಿಕಾರಿಗಳು ಶುಕ್ರವಾರ (ನ.13) 132 ಬಂಗಾಳಿ ಮುಸ್ಲಿಂ ಕುಟುಂಬಗಳ ಮನೆಗಳನ್ನು ಕೆಡವಿದ್ದಾರೆ. 1983ರಲ್ಲಿ ರಾಜ್ಯದಾದ್ಯಂತ ನಡೆದ ಗಲಭೆಗಳ ಸಂದರ್ಭದಲ್ಲಿ ನಿರಾಶ್ರಿತರಾದಾಗಿನಿಂದ ಈ ಕುಟುಂಬಗಳು ಬೊಗಿನದಿಯ ಸರ್ಕಾರಿ ಭೂಮಿಯೊಂದರಲ್ಲಿ ವಾಸಿಸುತ್ತಿದ್ದವು. ತಮ್ಮ ಹಿಂದೂ...

ತೆಲಂಗಾಣ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆಗೆ ಚಾಲನೆ

'ತೆಲಂಗಾಣ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆ'ಗೆ ಶನಿವಾರ (ನ.14) ಹೈದರಾಬಾದ್‌ನಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಎ....

ಸಾಮಾನ್ಯ ಕ್ಷೇತ್ರವೇ ಸಾಮರ್ಥ್ಯದ ಪರೀಕ್ಷೆಯೇ? ಮೀಸಲು ಕ್ಷೇತ್ರದ ಗೆಲುವನ್ನು ಪ್ರಶ್ನಿಸುವವರ ಸಂವಿಧಾನಾತ್ಮಕ ಅರಿವು ಎಷ್ಟಿದೆ?

ಮೀಸಲಾತಿಯನ್ನು ಸಂವಿಧಾನ ನೀಡಿದ ಹಕ್ಕು ಎಂದು ಒಪ್ಪಿಕೊಳ್ಳಲು ಹಿಂದೇಟು ಹಾಕುವವರು ಪರಿಶಿಷ್ಟ ಜಾತಿಯ ನಾಯಕರಿಗೆ ಮಾತ್ರ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸವಾಲು ಹಾಕುತ್ತಿರುವುದು ಯಾವ ರೀತಿಯ ಪ್ರಜಾಪ್ರಭುತ್ವದ ಮನೋಭಾವ? ಭಾರತದ ರಾಜಕೀಯದಲ್ಲಿ ಪರಿಶಿಷ್ಟ...

ಭಾರತ್ ಸಮ್ಮಿಟ್‌ನ 115 ಭಾಷಣಕಾರರಿಗೆ ಭಾರತ ಪ್ರವೇಶ ನಿರಾಕರಣೆ : ವೀಸಾ ವಿಚಾರ ‘ಸಾರ್ವಭೌಮ ಅಧಿಕಾರ’ ಎಂದ ವಿದೇಶಾಂಗ ಸಚಿವಾಲಯ

ಆರಂಭದಲ್ಲಿ ಅನುಮತಿ ನೀಡಿದ ನೀಡಿದ್ದರೂ, ಕಾಂಗ್ರೆಸ್ ಪಕ್ಷದ 'ಭಾರತ್ ಸಮ್ಮಿಟ್'ನಲ್ಲಿ ಭಾಗವಹಿಸಬೇಕಿದ್ದ ಮೂರನೇ ಒಂದಕ್ಕಿಂತ ಹೆಚ್ಚು ವಿದೇಶಿ ಭಾಷಣಕಾರರ ಭಾರತ ಪ್ರವೇಶಿಸಕ್ಕೆ ತಡೆಯೊಡ್ಡಲಾಗಿದೆ. ಈ ಕುರಿತು ತನ್ನ ಮೊದಲ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ...

ಗ್ರಾಮ ದೇವತೆ, ದೇವಸ್ಥಾನದ ಜಾಗ, ಸಾರ್ವಜನಿಕ ರಸ್ತೆ ಕಬಳಿಕೆ ಆರೋಪ; ಬಿಹಾರದ ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್ ಕುಟುಂಬದ ಒತ್ತುವರಿ ಜಾಗ ತೆರವುಗೊಳಿಸಿದ ಅಧಿಕಾರಿಗಳು!

ಜಾನಪದ ಗಾಯಕಿ ಹಾಗೂ ಬಿಹಾರದ ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್ ಅವರ ಕುಟುಂಬವು ದರ್ಭಂಗಾ ಜಿಲ್ಲೆಯಲ್ಲಿ ಸರ್ಕಾರಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಕಾಂಪೌಂಡ್ ಗೋಡೆಯನ್ನು ಸ್ಥಳೀಯ ಆಡಳಿತವು ಗುರುವಾರ ತೆರವುಗೊಳಿಸಿದೆ. 'ದಿ...

ಜಿಬಿಎ ಚುನಾವಣೆ ಗಡುವು ವಿಸ್ತರಣೆಗೆ ಸುಪ್ರೀಂ ಕೋರ್ಟ್ ಅನುಮತಿ ಕೋರಿದ ಕರ್ನಾಟಕ ಚುನಾವಣಾ ಆಯೋಗ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ವಿಧಿಸಿರುವ ಗಡುವನ್ನು ಒಂದು ತಿಂಗಳ ಕಾಲ ವಿಸ್ತರಿಸುವಂತೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ....