Homeಮುಖಪುಟ“free Kashmir” ಅದು ಹೇಗೆ ದೇಶದ್ರೋಹ? - ಬಿ.ಟಿ ವೆಂಕಟೇಶ್

“free Kashmir” ಅದು ಹೇಗೆ ದೇಶದ್ರೋಹ? – ಬಿ.ಟಿ ವೆಂಕಟೇಶ್

ಕಳ್ಳನೇ ಆಗಿರಲಿ, ಕೊಲೆಗಾರನೇ ಆಗಿರಲಿ, ಅತ್ಯಾಚಾರವೇ ಮಾಡಿರಲಿ, ದೌರ್ಜನ್ಯ ಮಾಡಿರಲಿ, ಮೋಸ ಮಾಡಿರಲಿ, ಭ್ರಷ್ಟನಾಗಿರಲಿ., ಪ್ರತಿಯೊಬ್ಬನಿಗೂ ತನ್ನ ಆಯ್ಕೆಯ ವಕೀಲನನ್ನು ನೇಮಿಸಿಕೊಳ್ಳುವ ಹಕ್ಕಿದೆ.

- Advertisement -
- Advertisement -

‘ಹೀಗೂ ಉಂಟೇ’ ಅನ್ನುವ ಕಾರ್ಯಕ್ರಮ ಟೀವಿಲಿ ನೀವು ನೋಡಿರುತ್ತೀರಿ. ನೋಡಿಲ್ಲವಾದಲ್ಲಿ ಅಟ್ಲೀಸ್ಟ್ ಕೇಳಿರುತ್ತೀರಿ. ಇಂದು ದೇಶಾದ್ಯಂತ ರಾಜಕೀಯ ದಿವಾಳಿಕೋರತನ ಒಂದು ಕಡೆಯಾದರೆ, ಇನ್ನೊಂದೆಡೆ ಜನರ ಭುಗಿಲೆದ್ದ ಆಕ್ರೋಶ. ಈ ದೇಶವನ್ನೆಂದೂ ಒಡೆಯಲು ಬಿಡೆವೆಂಬ ಹಠ. ಇಂದು ದೇಶದ ಮೂಲೆಮೂಲೆಯಲ್ಲಿಯೂ ಕಿವಿಗೆ ಅಪ್ಪಳಿಸುತ್ತಿದೆ. ಮಾರಿಕೊಂಡುಹೋದ ಮೀಡಿಯಾ, ಮಾರಿಕೊಳ್ಳಲೆಂದೇ ಇರುವ ಜನಪ್ರತಿನಿಧಿಗಳು, ಜನರ ಹೋರಾಟ ಮುಗಿಲಿಗೇರಿದೆ. ಈ ಸುನಾಮಿಯನ್ನು ಹಿಡಿದಿಡಲು ದೇಶದ ಆಡಳಿತ ಪೊಲೀಸರನ್ನು ಛೂಬಿಟ್ಟಿದೆ. ಅವರಿಗಿಷ್ಟಬಂದಂತೆ ಕೊಲೆ, ಸುಲಿಗೆ, ಮಾರಣಹೋಮ ಉತ್ತರ ಪ್ರದೇಶದಲ್ಲಾದರೆ, ಸಾಕಷ್ಟು ಕಡೆ ಜನರ ಮೇಲೆ ಇಲ್ಲದ ಕೇಸುಗಳನ್ನು ಜಡಿಯಲಾಗುತ್ತಿದೆ. ಬೆಂಗಳೂರಲ್ಲೂ ಈಗಾಗಲೇ ಸಾಕಷ್ಟು ಯುವಕ-ಯುವತಿಯರ ಮೇಲೆ ಮೊಕದ್ದಮೆಗಳನ್ನು ಹೂಡಲಾಗಿದೆ. ಇಂದು ಜನಪರ ವಕೀಲರಿಗೆ ಕೊರತೆಯಿಲ್ಲ, ಎಲ್ಲರಿಗೂ ಬೇಲ್ ಪಡೆಯಲಾಗಿದೆ.

ಜೆಎನ್‍ಯುನಲ್ಲಿ ಪೊಲೀಸರ ಸುಪರ್ದಿಯಲ್ಲಿ ನಡೆದ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರದ ವಿರುದ್ಧದ ಹೋರಾಟ ದೇಶದ ಮೂಲೆಮೂಲೆ ತಲುಪಿದೆ. ಶಹೀನ್‍ಬಾಗ್ ದೆಹಲಿಯಲ್ಲಿ ಮಾತ್ರವಲ್ಲದೇ ದೇಶದೆಲ್ಲೆಡೆ ತಲೆ ಎತ್ತುತ್ತಿವೆ. ಮೈಸೂರಿನಲ್ಲಿಯೂ ಅತ್ಯಂತ ಶಾಂತಿಯುತವಾದ ಪ್ರತಿಭಟನೆ ಎಲ್ಲರ ಗಮನ ಸೆಳೆದಿತ್ತು. ಯಾವುದಾದರೊಂದು ಕಾರಣಕ್ಕಾಗಿ ಕಾಯುತ್ತಿದ್ದ ಮಾರಿಕೊಂಡುಹೋದ ಮೀಡಿಯಾ ನಳಿನಿ ಬಾಲಕುಮಾರ್ ಹಿಡಿದಿದ್ದ “free Kashmir”ಪೋಸ್ಟರನ್ನು ತೋರಿಸಿ ದೇಶವನ್ನೇ ಒಡೆದುಬಿಟ್ಟಳೆಂಬಂತೆ ತೋರಿಸಿದ್ದಾರೆ. ಆ ವಿಡಿಯೋ ಆಧಾರದಲ್ಲಿ ಹುಡುಗಿಯ ಮೇಲೆ ದೇಶದ್ರೋಹದ ಮೊಕದ್ದಮೆಯನ್ನು ಪೊಲೀಸರು ಹೂಡಿದ್ದು ಈ ದೇಶದ ಆಡಳಿತ ಹೇಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂಬ ವಿಷಯ ಎಲ್ಲರಿಗೂ ಕಾಣುತ್ತಿದೆ.

ಈ ದೇಶದಲ್ಲಿ ಅತ್ಯಂತ ಸುಲಭವಾಗಿ ಬಳಕೆಯಾಗುವ ಕಾನೂನು “ದೇಶದ್ರೋಹ”. ಯಾವುದೇ ವಿಷಯಕ್ಕಾಗಲಿ ಆಡಳಿತ ವರ್ಗವನ್ನು ವಿಮರ್ಶಿಸಿದರೆ ಅದು ಯಾರೇ ಆಗಲೀ ‘ದೇಶದ್ರೋಹ’ ಎಂಬ ಪಟ್ಟ ಕಟ್ಟಲಾಗುತ್ತದೆ. ಯು.ಆರ್ ಅನಂತಮೂರ್ತಿಯಾಗಲೀ, ಗೌರಿಯಾಗಲೀ, ಈ ಕೆಲದಿನಗಳ ಹಿಂದೆಯಷ್ಟೇ ದೇಶದ ಇತಿಹಾಸತಜ್ಞ ರಾಮಚಂದ್ರ ಗುಹಾ ಆಗಲಿ… ಎಲ್ಲರ ಮೇಲೂ ಕೂರಿಸವ ಸುಲಭವಾದ ಗೂಬೆಯದು.
ಮೈಸೂರಿನ ಪೊಲೀಸರು ಹೀಗೆ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಮುಂಚೆ ಮಾನವ ಹಕ್ಕು ಹೋರಾಟಗಾರ್ತಿ ಪ್ರೊ. ರತಿರಾವ್‍ರನ್ನು ಕಾಡಿದ್ದನ್ನು ನೋಡಿದ್ದೇವೆ.

ನಳಿನಿ ಬಾಲಕುಮಾರ್ ಹಿಡಿದ ಪೋಸ್ಟರ್‍ನಲ್ಲಿದ್ದ “free Kashmir”ಅದು ಹೇಗೆ ದೇಶದ್ರೋಹವಾಯಿತು? ಆ ವಿಷಯವನ್ನು ಸುಪ್ರೀಂಕೋರ್ಟಿನವರು ಹೇಳಿಲ್ಲವೇ? ಕಾಶ್ಮಿರ ಜನರ ಮೇಲೆ ಹೇರಿರುವ ನಿರ್ಬಂಧ, ನಡೆಯುತ್ತಿರುವ ಹಿಂಸೆಯ ಬಗ್ಗೆ ಇಡೀ ಪ್ರಪಂಚವೇ ಭಾರತದ ಸರ್ಕಾರವನ್ನು ಪ್ರಶ್ನಿಸುತ್ತಿದೆ. ಫೋನಿಲ್ಲದೇ, ಇಂಟರ್‍ನೆಟ್ ಇಲ್ಲದೇ, ಯಾವುದೇ ಸಂಪರ್ಕವಿಲ್ಲದೇ ಈ ದೇಶದ ಒಂದು ಇಡೀ ರಾಜ್ಯವನ್ನು ಬಂಧಿಸಿರುವ ವಿಷಯದ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್‍ನಲ್ಲಿ ಪ್ರಕರಣದ ವಾದ ನಡೆಯುತ್ತಿದೆ.

CAA, NRC ಹಾಗೂ NPRವಿರುದ್ಧದ ಯಾವುದೇ ಪ್ರತಿಭಟನೆಯನ್ನು ಸಹಿಸದ ಸ್ಥಿತಿಯನ್ನು ನಾವು ನೋಡುತ್ತಿದ್ದೇವೆ. ನಳಿನಿ ಬಾಲಕುಮಾರ್ ಮೇಲೆ ಹಾಕಿದ ಮೊಕದ್ದಮೆಯೂ ಅದೇ ರೀತಿಯದು. ಒಂದು ರೀತಿ ಮಿಕ್ಕ ಪ್ರತಿಭಟನಾಕಾರರಿಗೆ ಎಚ್ಚರಿಸುವ ಮಾರ್ಗ.

ದುರಂತವೆಂದರೆ ಮೊಕದ್ದಮೆ ದಾಖಲಿಸಿದ ಮೇಲೆ ಮೈಸೂರು ವಕೀಲರ ಸಂಘ ತೆಗೆದುಕೊಂಡ ನಿರ್ಣಯ. ನಳಿನಿಗೆ ಯಾರೂ ಮೈಸೂರಿನಲ್ಲಿ ವಕಾಲತ್ತು ಹಾಕುವುದಿಲ್ಲವೆಂಬ ತೀರ್ಮಾನ. ವಕೀಲರ ಸಂಘಗಳ ಇಂಥಾ ನಿಲುವು ಇದು ಹೊಸತೇನಲ್ಲ. ತಿಂಗಳ ಹಿಂದೆಯಷ್ಟೇ ಹೈದರಾಬಾದ್ ಅತ್ಯಾಚಾರ ಮತ್ತು ಕೊಲೆಯ ಪ್ರಕರಣದಲ್ಲಿ ಹೈದರಾಬಾದ್, ಮೆಹಬೂಬ್‍ನಗರ್ ಮತ್ತಿತರ ಜಿಲ್ಲೆಗಳ ವಕೀಲರ ಸಂಘಗಳು ಆರೋಪಿಗಳಿಗೆ ನಾವು ವಕಾಲತ್ತು ಹಾಕುವುದಿಲ್ಲವೆಂಬ ತೀರ್ಮಾನಗಳನ್ನು ತೆಗೆದುಕೊಂಡಿದ್ದವು. ಅದೆಷ್ಟು ಸರಿ? ಈ ದೇಶದ ಸಂವಿಧಾನ ಹೇಳುತ್ತದೆ “ಯಾವುದೇ ವ್ಯಕ್ತಿಯ ವಿರುದ್ಧ ಅಪರಾಧ ಸಾಬೀತಾಗದ ಹೊರತು ಶಿಕ್ಷಿಸಲಾಗದು ಹಾಗೂ ಯಾವುದೇ ಆರೋಪಿಗೆ ತನ್ನ ಆಯ್ಕೆಯ ವಕೀಲರನ್ನು ನೇಮಿಸಿಕೊಳ್ಳುವ ಹಕ್ಕನ್ನು ಕೊಡಲಾಗಿದೆ.”

ಈ ದೇಶದ ಪ್ರತಿಯೊಬ್ಬ ವಕೀಲ ‘ಯಾವುದೇ ಭೇದ-ಭಾವ ಮಾಡದೇ, ತಾರತಮ್ಯ ತೋರದೇ ವೃತ್ತಿ ನಡೆಸುವುದಾಗಿ’ ಪ್ರಮಾಣವಚನ ಮಾಡಿರುತ್ತಾರೆ. ಇವು ಪ್ರಜಾಸತ್ತೆಯನ್ನು ನಿರ್ಧರಿಸುವ ಬುನಾದಿಗಳು. ಕಳ್ಳನೇ ಆಗಿರಲಿ, ಕೊಲೆಗಾರನೇ ಆಗಿರಲಿ, ಅತ್ಯಾಚಾರವೇ ಮಾಡಿರಲಿ, ದೌರ್ಜನ್ಯ ಮಾಡಿರಲಿ, ಮೋಸ ಮಾಡಿರಲಿ, ಭ್ರಷ್ಟನಾಗಿರಲಿ., ಪ್ರತಿಯೊಬ್ಬನಿಗೂ ತನ್ನ ಆಯ್ಕೆಯ ವಕೀಲನನ್ನು ನೇಮಿಸಿಕೊಳ್ಳುವ ಹಕ್ಕಿದೆ.

ಅಜ್ಮಲ್ ಕಸಬ್‍ನಂಥಾ ಆತಂಕವಾದಿಗೂ ಆಯ್ಕೆಯ ವಕೀಲನನ್ನು ನೇಮಿಸಿ, ವಿಚಾರಣೆ ನಡೆಸಿ, ತೀರ್ಪನ್ನು ಕೊಟ್ಟು, ಮೇಲ್ಮನವಿಗೆ ಅವಕಾಶ ಮಾಡಿಕೊಟ್ಟು ಕೊನೆಯಲ್ಲಿ ಶಿಕ್ಷೆ ನೀಡಲಾಯಿತು. ವಕೀಲರ ಸಂಘಗಳು ಈ ರೀತಿ ತೀರ್ಮಾನ ತೆಗೆದುಕೊಳ್ಳುವುದು ಸಮಂಜಸವಲ್ಲವೆಂದು ಈ ದೇಶದ ನುರಿತ ನ್ಯಾಯಾಧೀಶರು, ನ್ಯಾಯವಾದಿಗಳು ಸಾಕಷ್ಟು ಸಲ ಹೇಳಿದ್ದಾರೆ.

ಇಂದು ನಳಿನಿಗೆ 170ಕ್ಕೂ ಹೆಚ್ಚು ವಕೀಲರು ಬೇರೆಬೇರೆ ಜಿಲ್ಲೆಗಳಿಂದ ಮೈಸೂರಿಗೆ ಬಂದು ಆಕೆಗೆ ಬೆಂಬಲವಾಗಿ ನಿಂತಿದ್ದು ಒಂದು ಆರೋಗ್ಯಪೂರ್ಣ ಬದಲಾವಣೆಯಾಗಿದೆ. ಈ ದೇಶದಲ್ಲಿ ಉನ್ನಾವ್ ರೇಪ್ ಪ್ರಕರಣದ ಆರೋಪಿಗೆ, ಕಥುವಾ ಹಸುಗೂಸಿನ ರೇಪ್ ಆರೋಪಿಗಳಿಗೆ, ಗಣಿ ಹಗರಣಗಳ ಆರೋಪಿಗಳಿಗೆ, ದೇಶ ಲೂಟಿಮಾಡಿ ರಕ್ತ ಹೀರಿಹೋದ ನೀರವ್ ಮೋದಿಗಳಿಗೆ, ವಿಜಯ್ ಮಲ್ಯರುಗಳಿಗೆ, ಮೆಹುಲ್ ಚೋಕ್ಸಿಗಳಿಗೆ, ನೂರಾರು ರಾಜಕಾರಣಿಗಳಿಗೆ ವಕಾಲತ್ತು ವಹಿಸಲು ಇಲ್ಲದ ತಕರಾರು ಒಂದು ಚಿಕ್ಕ ಪೋಸ್ಟರ್ ಇಡಿಗೆ ಹುಡುಗಿಗೆ ಅಂಥಾ ಸಹಾಯ ನೀಡುವುದಿರಲಿ ಹಿಂಜರಿಕೆ ತೋರಿದ್ದು ಎಷ್ಟು ಸಮಂಜಸ?

ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರ ಮೂಲಭೂತ ಹಕ್ಕು. ಪ್ರಜಾಸತ್ತೆ ಮೂಲಸ್ತಂಭವದು. ಅದರಿಂದಲೇ ನಮ್ಮ ಎಲೆಕ್ಷನ್ ಸಾಧ್ಯ. ಅದರಿಂದಲೇ ನನ್ನ ನೀತಿಗಳು, ನಮ್ಮ ಪತ್ರಿಕೋದ್ಯಮ, ನಮ್ಮ ವೃತ್ತಿಯ ಆಯ್ಕೆಯ ಸ್ವಾತಂತ್ರ್ಯ, ನಮ್ಮ ಧರ್ಮಶ್ರದ್ಧೆಯ ಸ್ವಾತಂತ್ರ್ಯ, ನಮ್ಮ ಸಂಘಜೀವನದ ಸ್ವಾತಂತ್ರ್ಯ ಸಾಧ್ಯವಾಗಿರುವುದು. ಅದಕ್ಕಾಗಿಯೇ ಇಂದು ಹೋರಾಟ ನಡೆಯುತ್ತಿರುವುದು. ಅದು ಕೇವಲ CAA, NRC ಹಾಗೂ NPR ವಿರುದ್ಧ ಮಾತ್ರವೆಂದು ತಿಳಿದುಕೊಂಡರೇ ಅದು ಅಪ್ಪಟ ಮೂರ್ಖತನ.

(ಲೇಖಕರು ಪ್ರಗತಿಪರ ಚಿಂತಕರು ಮತ್ತು ಬೆಂಗಳೂರು ಹೈಕೋರ್ಟ್ ವಕೀಲರು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: 43ಲಕ್ಷದಲ್ಲಿ ನೋಟಿಸ್ ತಲುಪಿರುವುದು 25ಲಕ್ಷ ಜನರಿಗೆ ಮಾತ್ರ, ಬಾಕಿ 18ಲಕ್ಷ ಜನರಿಗೆ ಇನ್ನು ನೋಟಿಸ್ಸೇ ತಲುಪಿಲ್ಲ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಆಡಳಿತಾತ್ಮಕ ಗೊಂದಲ ಹಾಗೂ ಯಾಂತ್ರಿಕ ಲೋಪಗಳ ಜಾಲದಲ್ಲಿ ಸಿಲುಕಿಬಿದ್ದಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶವೇ ಆಯೋಗದ...

ಕಾಳಿಘಾಟ್‌ನಲ್ಲಿ ‘ಮೀನಿನ ಪ್ರಸಾದ’ ಸ್ವೀಕರಿಸಿದ ಸುವೇಂದು ಅಧಿಕಾರಿ; ಬಾಗೇಶ್ವರ್ ಬಾಬಾ ‘ಮಾಂಸಾಹಾರ’ ವಿವಾದಕ್ಕೆ ಹೊಸ ತಿರುವು!

ದುರ್ಗಾ ಪೂಜೆ ಸಂದರ್ಭದಲ್ಲಿ ಮೀನು–ಮಾಂಸ ಸೇವನೆ ಕುರಿತು ಬಾಗೇಶ್ವರ್ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿರುವ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕಾಳಿಘಾಟ್ʼನ ಕಾಳಿ ದೇವಸ್ಥಾನದಲ್ಲಿ...

ಎಸ್‌ಐಆರ್‌: ಹೈದರಾಬಾದ್, ಸಿಕಂದರಾಬಾದ್‌ನಲ್ಲಿ ಲಕ್ಷಾಂತರ ಮತದಾರರ ಹೆಸರು ಅಳಿಸುವಿಕೆ; 2029ರ ಚುನಾವಣೆಗೂ ಮುನ್ನ ಗಂಭೀರ ಆತಂಕ

ಹೈದರಾಬಾದ್: ತೆಲಂಗಾಣದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಭಾರೀ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿರುವುದು ಮುಂದಿನ ಚುನಾವಣೆಯ ರಾಜಕೀಯ ಲೆಕ್ಕಾಚಾರಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ಹುಟ್ಟುಹಾಕಿದೆ....

9/11 ದಾಳಿಗೆ 25 ವರ್ಷ: ‘ಭಯೋತ್ಪಾದನೆ ವಿರುದ್ಧದ ಯುದ್ಧ’ ಮತ್ತು ಕುಸಿದ ಪ್ರಜಾಪ್ರಭುತ್ವದ ಮೌಲ್ಯಗಳು

ನ್ಯೂಯಾರ್ಕ್‌ನ ಪ್ರತಿಷ್ಠಿತ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಗಳ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಗೆ ಇಂದಿಗೆ ಭರ್ತಿ 25 ವರ್ಷಗಳು ತುಂಬಿವೆ. ಈ ಕಾಲು ಶತಮಾನದ ಅವಧಿಯಲ್ಲಿ 'ಭಯೋತ್ಪಾದನೆ ವಿರುದ್ಧದ ಜಾಗತಿಕ...

‘ಈ ಪ್ರಕ್ರಿಯೆಯೇ ಶಿಕ್ಷೆಯಾಗಿದೆ’: ಉಮರ್ ಖಾಲಿದ್ ದೀರ್ಘ ಜೈಲುವಾಸದ ಬಗ್ಗೆ ಮಾಜಿ ನ್ಯಾಯಮೂರ್ತಿ ದೀಪಕ್ ಗುಪ್ತಾ ತೀವ್ರ ಟೀಕೆ

ನವದೆಹಲಿ: ಮಾನವ ಹಕ್ಕುಗಳ ಕಾರ್ಯಕರ್ತ, ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ದೀರ್ಘಕಾಲದ ವಿಚಾರಣಾಪೂರ್ವ ಬಂಧನ, ಎಲ್ಗರ್ ಪರಿಷತ್ ಪ್ರಕರಣದ ಆರೋಪಿಗಳ ವರ್ಷಗಳ ಜೈಲುವಾಸ ಹಾಗೂ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಂಗದ...

‘ದೇಶವಿರೋಧಿ ಮನಸ್ಥಿತಿಯಲ್ಲ’: ಜಿ.ಎನ್. ಸಾಯಿಬಾಬಾ ಸ್ಮರಣೆ ಪ್ರಕರಣದಲ್ಲಿ ‘ಟಿಸ್’ ಮಾಜಿ ವಿದ್ಯಾರ್ಥಿಗೆ ಜಾಮೀನು!

ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ದಿವಂಗತ ಜಿ.ಎನ್. ಸಾಯಿಬಾಬಾ ಅವರ ಸ್ಮರಣಾರ್ಥ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (TISS) ಕ್ಯಾಂಪಸ್‌ನಲ್ಲಿ ನಡೆದ ಅನುಮತಿರಹಿತ ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ವಿದ್ಯಾರ್ಥಿ...

ಜನಾಕ್ರೋಶದ ನಡುವೆಯೇ ಎಸ್ಐಆರ್ ಸಮರ್ಥಿಸಿಕೊಂಡ ಮುಖ್ಯ ಚುನಾವಣಾ ಆಯುಕ್ತ: ‘ರಾಜಕೀಯ ದಾಳಿಗಳಿಂದ ಆಯೋಗ ವಿಚಲಿತವಾಗದು’ ಎಂದ ಜ್ಞಾನೇಶ್ ಕುಮಾರ್

ಅಹಮದಾಬಾದ್: ದೇಶದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು ಹಾಗೂ ವಿವಿಧ ವಲಯಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...

ಕರ್ನಾಟಕ ಎಸ್ಐಆರ್: ಹೆಸರಿನ ಸಣ್ಣ ವ್ಯತ್ಯಾಸಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ನೋಟಿಸ್; ‘ಸುಳ್ಳು ಮಾಹಿತಿ ನೀಡಿದರೆ ಜೈಲು’ ಎಂಬ ಬೆದರಿಕೆ

ಮೈಸೂರು: ಸುಮಾರು ಮೂರೂವರೆ ದಶಕಗಳ ಕಾಲ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿ, ಸ್ವತಃ ಚುನಾವಣಾ ಪ್ರಕ್ರಿಯೆಯ ಜವಾಬ್ದಾರಿಯುತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರೇ ಇದೀಗ ತಮ್ಮ...

SIR : ತಾಯಿಯೊಂದಿಗೆ ಮ್ಯಾಪಿಂಗ್ ಮಾಡಿದರೂ ಅಜ್ಜನ ವಯಸ್ಸಿನ ವ್ಯತ್ಯಾಸದ ನೆಪ ಹೇಳಿ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ದಿನಕ್ಕೊಂದು ವಿಲಕ್ಷಣ ಹಾಗೂ ಯಾಂತ್ರಿಕ ದೋಷಗಳನ್ನು ಹೊರಹಾಕುತ್ತಿದ್ದು, ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಲು ಬಯಸುವ ನೈಜ ಮತದಾರರನ್ನು ಆತಂಕಕ್ಕೆ ತಳ್ಳುತ್ತಿದೆ. ಬ್ಯಾಟರಾಯನಪುರ...

ಬ್ಯಾಂಕ್ ಮುಷ್ಕರ: ದೇಶಾದ್ಯಂತ ಶಾಖಾ ಸೇವೆಗಳಿಗೆ ಅಡಚಣೆ; ವಾರಾಂತ್ಯ, ಗಣೇಶ ಚತುರ್ಥಿಯಿಂದ ಹಲವು ದಿನ ಸೇವೆ ವ್ಯತ್ಯಯ 

ನವದೆಹಲಿ: ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿರುವ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಸೆಪ್ಟೆಂಬರ್ 11ರಂದು (ಇಂದು) ನಡೆಯುತ್ತಿದ್ದು, ದೇಶದಾದ್ಯಂತ ಬ್ಯಾಂಕ್ ಗ್ರಾಹಕರ ಸಾಮಾನ್ಯ ಸೇವೆಗಳ ಮೇಲೆ ಪರಿಣಾಮ ಬೀರುವ...