Homeರಾಜಕೀಯಕುಮಾರಸ್ವಾಮಿ ಪಾಕ್ ಪರವಂತೆ!: ಇದು ಟೈಮ್ಸ್ ನೌ ಹಬ್ಬಿಸಿದ ಹಸೀ ಸುಳ್ಳು

ಕುಮಾರಸ್ವಾಮಿ ಪಾಕ್ ಪರವಂತೆ!: ಇದು ಟೈಮ್ಸ್ ನೌ ಹಬ್ಬಿಸಿದ ಹಸೀ ಸುಳ್ಳು

- Advertisement -
- Advertisement -

ಮಿಥ್ಯ: ಕರ್ನಾಟಕದ ಮುಖ್ಯಮಂತ್ರಿ ಪುಲ್ವಾಮ ವಿಷಯವಾಗಿ ಮಾತನಾಡುವಾಗ ಪಾಕಿಸ್ತಾನದ ಪರ ಮಾತಾಡಿಬಿಟ್ಟರಂತೆ! ಇದು ಟೈಮ್ಸ್ ನೌ ಎಂಬ ಚಾನೆಲ್ಲಿನ ಎಕ್ಸ್‌ಕ್ಲೂಸಿವ್ ವರದಿ. ಈ ಚಾನೆಲ್ ಪ್ರಕಾರ, ಪಾಕಿಸ್ತಾನವನ್ನು ಒಂದು ಭಯೋತ್ಪಾದಕ ದೇಶ ಅಂತ ಘೋಷಿಸಬೇಕಲ್ಲ ಎಂಬ ಪ್ರಶ್ನೆಗೆ ಕುಮಾರಸ್ವಾಮಿ ಉತ್ತರಿಸಲು ನಿರಾಕರಿಸಿದರಂತೆ! ’ಮೊದಲು ನಮ್ಮ ದೇಶದಲ್ಲಿನ ಭಯೋತ್ಪಾದಕ ಸಮಸ್ಯೆಯನ್ನು ಸಾಲ್ವ್ ಮಾಡಿಕೊಳ್ಳೋಣ’ ಅಂದರಂತೆ.

ಕುಮಾರಸ್ವಾಮಿ ವಿರುದ್ಧ ಟೈಮ್ಸ್ ನೌ ಅಪಪ್ರಚಾರ

ಇದನ್ನೇ ಇಟ್ಟುಕೊಂಡು ಮೊನ್ನೆ ಟೈಮ್ಸ್ ನೌ ಅರ್ಧ ಘಂಟೆ ಬ್ರೇಕಿಂಗ್ ಹೊಡೆಯಿತು. ಅದರಲ್ಲಿ ಅದು ಪದೇಪದೇ ’ಕಾಂಗ್ರೆಸ್‌ನ ಮೈತ್ರಿ ಪಕ್ಷದ ಕುಮಾರಸ್ವಾಮಿ’ ಎಂದು ಒತ್ತಿ ಒತ್ತಿ ಹೇಳುತ್ತಲೇ ಇತ್ತು! ಇಷ್ಟಕ್ಕೇ ಕಾಯುತ್ತಿದ್ದ ಭಕ್ತರು ಈ ಕ್ಲಿಪ್ ಇಟ್ಟುಕೊಂಡು ಜಾಲತಾಣಗಳಲ್ಲಿ ತಮ್ಮ ನಿತ್ಯದ ’ದಂಧೆ’ ಶುರು ಹಚ್ಚಿಕೊಂಡಿದ್ದಾರೆ.
ಸತ್ಯ: ಕುಮಾರಸ್ವಾಮಿ ಹಾಗೆಲ್ಲ ಹೇಳುವುದು ಸಾಧ್ಯವೇ ಇಲ್ಲ ಎಂಬುದು ಕನ್ನಡಿಗರಿಗೆ ಗೊತ್ತು. ಕುಮಾರಸ್ವಾಮಿ ಕನ್ನಡದಲ್ಲಿ ಹೇಳಿದ್ದನ್ನು ಆ ಚಾನೆಲ್‌ನ ವರದಿಗಾರ/ರ್ತಿ ತಪ್ಪಾಗಿ ಅನುವಾದ ಮಾಡಿದರಾ? ಪ್ರಶ್ನೆ ಅಷ್ಟು ಸರಳವಾಗಿಲ್ಲ. ಟೈಮ್ಸ್ ನೌ ಮತ್ತು ರಿಪಬ್ಲಿಕ್ ಟಿವಿಗಳಿಗೆ ಹೀಗೆಲ್ಲ ತಿರುಚಿ ಒದರುವುದೇ ಒಂದು ದಂಧೆ. ಅವೆಲ್ಲ ಬಿಜೆಪಿಯ ಪೇಯ್ಡ್ ಚಾನೆಲ್‌ಗಳು.

ಕುಮಾರಸ್ವಾಮಿ ಹೇಳಿದ್ದಿಷ್ಟೇ:
’ಪುಲ್ವಾಮಾದ ಮಾಸ್ಟರ್‌ಮೈಂಡ್‌ನನ್ನು ಹೊಡೆದು ಹಾಕಿದ್ದು ಒಳ್ಳೆಯದೇ, ಆದರೆ ಆ ಸೈನಿಕರ ಸಾವಿನ ನೋವು ಹಾಗೇ ಇದೆ. ಇಂಥದ್ದು ಸಂಭವಿಸದಂತೆ ನಾವೆಲ್ಲ ಎಚ್ಚರ ವಹಿಸಬೇಕು. ಅದು ಸರ್ಕಾರದ ಜವಾಬ್ದಾರಿ…. ’

ಟೈಮ್ಸ್ ನೌ ವಿರುದ್ಧ ಕನ್ನಡಿಗರ ಆಕ್ರೋಶ

’ಪಾಕಿಸ್ತಾನವನ್ನು ಭಯೋತ್ಪಾದಕ ದೇಶ ಎಂದು ಘೋಷಿಸಿವುದು ಒಂದು ಭಾಗವಷ್ಟೇ. ಅದಕ್ಕಿಂತ ಮುಖ್ಯವಾಗಿ ಈ ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ನಾಶ ಮಾಡಬೇಕು. ಅದನ್ನು ಗನ್ ಬಳಸಿಯೋ ಅಥವಾ ಅವರನ್ನು ವಿಶ್ವಾಸಕ್ಕೆ ತಂದುಕೊಂಡೋ ಮಾಡಬೇಕು. ಅದು ಕೇಂದ್ರದ ಜವಾಬ್ದಾರಿ…’ ಎಲ್ಲೂ ಕುಮಾರಸ್ವಾಮಿ ಪಾಕ್ ಪರ ಮಾತನಾಡಿಯೇ ಇಲ್ಲ.

ಇದೆಲ್ಲವನ್ನೂ ಕುಮಾರಸ್ವಾಮಿ ಕನ್ನಡದಲ್ಲೇ ಹೇಳಿದ್ದಾರೆ. ಆದರೆ ’ಅನುವಾದ’ದ ದ ಸಮಸ್ಯೆಯಿಂದ ಟೈಮ್ಸ್ ನೌ ತಪ್ಪು ಮಾಡಿತೇ? ಇಲ್ಲ, ಖಂಡಿತ ಇಲ್ಲ. ಅದು ಬಿಜೆಪಿ ಪರ ಅಲೆ ಸೃಷ್ಟಿಸಲು ಎಂತಹ ಹೀನ ಕೆಲಸಕ್ಕೂ ರೆಡಿ. ಅದು ಬೇಕೆಂತಲೇ ಇದನ್ನು ಮಾಡಿದೆ-ಅದರ ಪೇಮೇಂಟ್ ಹೆಚ್ಚಿಸಿಕೊಳ್ಳಲು! ಹಲವಾರು ಕನ್ನಡಿಗರು, ’ನಿಮಗೆ ಅನುವಾದವೇ ಗೊತ್ತಿಲ್ಲವಾ?’ ಎಂದು ಉಗಿದ ಮೇಲಷ್ಟೇ ಟೈಮ್ಸ್ ನೌ ಎಲ್ಲ ಮುಚ್ಚಿಕೊಂಡು ಆ ಸುದ್ದಿಯನ್ನು ಡ್ರಾಪ್ ಮಾಡಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....