Homeಮುಖಪುಟ’ಪ್ರಜಾಪ್ರಭುತ್ವ ಪ್ರಶ್ನಿಸುವ ಹಕ್ಕು ನೀಡಿದೆ’: ಭೋಜ್‌ಪುರಿ ಗಾಯಕಿ ಹಾಡುಗಳು ವೈರಲ್

’ಪ್ರಜಾಪ್ರಭುತ್ವ ಪ್ರಶ್ನಿಸುವ ಹಕ್ಕು ನೀಡಿದೆ’: ಭೋಜ್‌ಪುರಿ ಗಾಯಕಿ ಹಾಡುಗಳು ವೈರಲ್

ಕುತೂಹಲಕಾರಿ ವಿಷಯವೆಂದರೆ ಬಿಜೆಪಿಯ 'ಬಿಹಾರ ಮೇ ಈ ಬಾ' ಹಾಡು ನೇಹಾ ಸಿಂಗ್ ರಾಥೋಡ್ ಅವರ ಹಳೆಯ ಹಾಡು 'ಬಿಹಾರ ಮೇ ಕಾ ಬಾ' ಹಾಡಿಗೆ ಪ್ರತಿಕ್ರಿಯೆಯಾಗಿತ್ತು

- Advertisement -
- Advertisement -

ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆ ಭಾರತೀಯ ಜನತಾ ಪಕ್ಷವು ತನ್ನ ಪ್ರಚಾರ ಗೀತೆ ‘ಬಿಹಾರ ಮೇ ಈ ಬಾ’ ಬಿಡುಗಡೆ ಮಾಡಿದೆ. ಇದಕ್ಕೆ ಪ್ರತಿರೋಧ ಒಡ್ಡುವಂತಹ ಹಾಡುಗಳನ್ನು ಸಂಯೋಜಿಸಿ ಭೋಜ್‌ಪುರಿ ಗಾಯಕಿ ನೇಹಾ ಸಿಂಗ್ ರಾಥೋಡ್ ಬಿಡುಗಡೆ ಮಾಡಿದ್ದು, ಈ ಹಾಡುಗಳು ವೈರಲ್ ಆಗಿವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಗ್ಗೆ ವಿಮರ್ಶೆ ಮಾಡಿ ಹಾಡಿರುವ ಭೋಜ್‌ಪುರಿ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, “ಪ್ರಜಾಪ್ರಭುತ್ವ ನಮಗೆ ಸರ್ಕಾರವನ್ನು ಪ್ರಶ್ನಿಸುವ ಹಕ್ಕು ನೀಡಿದೆ. ನಾನದನ್ನೂ ಮಾಡುತ್ತಿದ್ದೇನೆ ಅಷ್ಟೇ” ಎನ್ನುತ್ತಾರೆ 23 ವರ್ಷದ ಗಾಯಕಿ ನೇಹಾ ಸಿಂಗ್ ರಾಥೋಡ್.

ನೇಹಾ ಸಿಂಗ್ ರಾಥೋಡ್ ಅವರ ಹೊಸ ಹಾಡು ವಾಸ್ತವವಾಗಿ ಅವರ ಹಿಂದಿನ ಹಾಡು ‘ಬಿಹಾರ ಮೇ ಕಾ ಬಾ (ಬಿಹಾರದಲ್ಲಿ ಏನಿದೆ)’ ಎಂಬ ಶೀರ್ಷಿಕೆಯ ವಿಸ್ತೃತ ಆವೃತ್ತಿಯಾಗಿದೆ. ಈ ಮೂಲಕ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.

ಅಕ್ಟೋಬರ್ 13 ರಂದು ಬಿಜೆಪಿ ಪಕ್ಷದ ಐಟಿ ಸೆಲ್ ಬಿಡುಗಡೆ ಮಾಡಿದ ಬಿಜೆಪಿಯ ‘ಬಿಹಾರ ಮೇ ಇ ಬಾ (ಇದು ಬಿಹಾರದಲ್ಲಿದೆ)’ ಗೀತೆಗೆ ಪ್ರತಿಕ್ರಿಯಿಸುವುದು ಹೊಸ ಹಾಡನ್ನು ಬಿಡುಗಡೆ ಮಾಡುವ ಹಿಂದಿನ ಆಲೋಚನೆಯಾಗಿತ್ತು. ಕುತೂಹಲಕಾರಿ ವಿಷಯವೆಂದರೆ ಬಿಜೆಪಿಯ ‘ಬಿಹಾರ ಮೇ ಈ ಬಾ’ ಹಾಡು ನೇಹಾ ಸಿಂಗ್ ರಾಥೋಡ್ ಅವರ ಹಳೆಯ ಹಾಡು ‘ಬಿಹಾರ ಮೇ ಕಾ ಬಾ’ ಹಾಡಿಗೆ ಪ್ರತಿಕ್ರಿಯೆಯಾಗಿತ್ತು.

ಇದನ್ನೂ ಓದಿ: ಪಿಸ್ತೂಲ್-ಪೆಟ್ರೋಲ್-ಫಾರ್ಮಾ-ಡ್ರಗ್-ಡಾಲರ್ ಪ್ರಪಂಚವನ್ನು ನಿಯಂತ್ರಿಸುತ್ತಿರುವ ಪಂಚ ಅಸ್ತ್ರಗಳು!

‘ಲಾ ಸುನಾ ಜಬಾಬ್, ಕಾ ಬಾ ಬಿಹಾರ ಮೇ’ ಎಂಬ ಹಾಡಿನಲ್ಲಿ, ಬಿಹಾರದ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳು, ಸ್ಟ್ರೆಚರ್‌ಗಳು, ಔಷಧಿಗಳು, ಆಂಬುಲೆನ್ಸ್‌ಗಳು ಮತ್ತು ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳ ಕೊರತೆಯನ್ನು ನೇಹಾ ಉಲ್ಲೇಖಿಸಿದ್ದಾರೆ.

ತಮ್ಮ ಹಾಡುಗಳಲ್ಲಿ ಎನ್‌ಡಿಎ ಸರ್ಕಾರವನ್ನು ಟೀಕಿಸಿ, ನಾಯಕರು ಕೇವಲ ಭರವಸೆಗಳನ್ನು ನೀಡುತ್ತಾರೆ. ಆದರೆ ಅವುಗಳನ್ನು ಈಡೆರಿಸುವುದಿಲ್ಲ ಎಂದಿದ್ದಾರೆ. ಇವರಿಗೆ ಬಡ ಜನರೊಂದಿಗೆ ಯಾವುದೇ ಸಂಬಂಧವಿಲ್ಲ, ನಾಯಕರು ಅಧಿಕಾರದಲ್ಲಿರಲು ಬಯಸುತ್ತಾರೆ ಎಂದು ನೇಹಾ ಹೇಳುತ್ತಾರೆ.

ನೇಹಾ ಅವರ ಈ ಹಾಡುಗಳು 2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಧಕ್ಕೆ ತರುತ್ತದೆ ಎಂದು ಪಾಟ್ನಾ ಮೂಲದ ರಾಜಕೀಯ ವಿಶ್ಲೇಷಕ ಸರೋಜ್ ಯಾದವ್ ಹೇಳಿದ್ದಾರೆ.

“ಗಾಯಕರು ಮತ್ತು ಕವಿಗಳು ಸಾಮಾನ್ಯವಾಗಿ ಆಡಳಿತ ಸರ್ಕಾರದ ಬಗ್ಗೆ ವಿಮರ್ಶಾತ್ಮಕವಾಗಿರುತ್ತಾರೆ. ಬಹುಶಃ ವಿಶ್ವದಲ್ಲೇ ದೊಡ್ಡದಾಗಿದೆ ಎಂದು ಹೇಳಿಕೊಳ್ಳುವ ರಾಜಕೀಯ ಪಕ್ಷ ಬಿಜೆಪಿ ಈ ಗಾಯಕಿಗೆ ಉತ್ತರಿಸಿದ್ದು ಬಹುಶಃ ಮೊದಲ ಬಾರಿಗೆ ಎನ್ನುತ್ತಾರೆ ಯಾದವ್.

ಇದನ್ನೂ ಓದಿ: ಕಾರ್ಪೋರೇಟ್‌ಗಳ ಮುದ್ದಿನ ಪಕ್ಷ; 7 ವರ್ಷಗಳಲ್ಲಿ ಅತೀ ಹೆಚ್ಚು ದೇಣಿಗೆ ಪಡೆದ BJP

ಆದರೆ, ನೇಹಾ ಸಿಂಗ್ ರಾಥೋಡ್ ಅವರ ಸ್ನೇಹಿತರು ಆಗಾಗ್ಗೆ ಆಕೆಗೆ ಅಪಾಯ ಉಂಟಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 2017 ರಲ್ಲಿ ಬೆಂಗಳೂರಿನಲ್ಲಿರುವ ತನ್ನ ಮನೆಯ ಬಾಗಿಲಲ್ಲಿ ದುರ್ಷ್ಕಮಿಗಳ ಗುಂಡಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶರಂತೆ ನಿನ್ನನ್ನು ಕೊನೆಗೊಳಿಸಬಹುದು ಎಂದು ಹಲವು ಸ್ನೇಹಿತರು ಎಚ್ಚರಿಸಿದ್ದಾರೆ ಎನ್ನುತ್ತಾರೆ.

 

ಇಂತಹ ಹೇಳಿಕೆಗಳು ಹೆಚ್ಚಿನ ಜನರನ್ನು ಹೆದರಿಸುತ್ತವೆ. ಆದರೆ ರಾಥೋಡ್ ತನ್ನ ಸ್ನೇಹಿತರ ಎಚ್ಚರಿಕೆಯ ಮಾತುಗಳನ್ನು ಅಭಿನಂದನೆಗಳಾಗಿ ತೆಗೆದುಕೊಳ್ಳುತ್ತಾರೆ.

ಬಿಹಾರ-ಉತ್ತರ ಪ್ರದೇಶ ಗಡಿಯಲ್ಲಿರುವ ಜಂದಾಹ ಎಂಬ ಪುಟ್ಟ ಹಳ್ಳಿಯಲ್ಲಿ ವಾಸಿಸುವ ನೇಹಾ ಸಿಂಗ್ ರಾಥೋಡ್, 2019 ರಲ್ಲಿ ಪದವಿ ಮುಗಿಸಿದ ನಂತರ ಜಾನಪದ ಗೀತೆಗಳನ್ನು ಹಾಡಲು ಪ್ರಾರಂಭಿಸಿದರು.  ಆಕೆಯ ಯೂಟ್ಯೂಬ್ ಚಾನೆಲ್ ಧಾರೋಹರ್‌ಗೆ 95 ಸಾವಿರ ಜನ ಚಂದಾದಾರರಾಗಿದ್ದಾರೆ. ಅವರ ಫೇಸ್‌ಬುಕ್ ಪುಟ ಮತ್ತು ಟ್ವಿಟರ್ ಖಾತೆ ಕೂಡ ಅಷ್ಟೇ ಜನಪ್ರಿಯವಾಗಿವೆ. ಅವರ ಅಭಿಮಾನಿಗಳಲ್ಲಿ ಚಲನಚಿತ್ರ ನಿರ್ಮಾಪಕರು, ಪತ್ರಕರ್ತರು, ಮಾಜಿ ಅಧಿಕಾರಿಗಳು ಮತ್ತು ವಿರೋಧ ಪಕ್ಷದ ರಾಜಕಾರಣಿಗಳು ಸೇರಿದ್ದಾರೆ. ಹಳ್ಳಿಗಾಡು ಮತ್ತು ಬಂಡಾಯ ನೇಹಾ ಸಿಂಗ್ ರಾಥೋಡ್‌ನ ಹಾಡುಗಳ ವಿಶಿಷ್ಟ ಲಕ್ಷಣವಾಗಿದೆ.


ಇದನ್ನೂ ಓದಿ: ಅಂಬೇಡ್ಕರ್ ಜೀವನಾಧಾರಿತ “ಮಹಾನಾಯಕ” ಧಾರಾವಾಹಿ ನಿಲ್ಲಿಸುವಂತೆ ಬೆದರಿಕೆ: ರಾಘವೇಂದ್ರ ಹುಣಸೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...