Homeಕರ್ನಾಟಕಗುಂಡ್ಲುಪೇಟೆ: ಗ್ರಾ.ಪಂ ಚುನಾವಣೆ ವಿಜಯೋತ್ಸವ ನೆಪದಲ್ಲಿ ದಲಿತ ಕೇರಿಗೆ ನುಗ್ಗಿ ಹಲ್ಲೆ

ಗುಂಡ್ಲುಪೇಟೆ: ಗ್ರಾ.ಪಂ ಚುನಾವಣೆ ವಿಜಯೋತ್ಸವ ನೆಪದಲ್ಲಿ ದಲಿತ ಕೇರಿಗೆ ನುಗ್ಗಿ ಹಲ್ಲೆ

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋಲು ಗೆಲುವು ಅಲ್ಲ ಎನ್ನಬಾರದು. ಆಯ್ಕೆಯಾದವರು ಆಯ್ಕೆಯಾಗದವರು ಎನ್ನಬೇಕು ಎನ್ನುತ್ತಾರೆ ಕೃಷ್ಣಮೂರ್ತಿ ಚಮರಂ.

- Advertisement -
- Advertisement -

ಗ್ರಾಮ ಪಂಚಾಯಿತಿ ಚುನಾವಣೆ ಮುಗಿದು ಈಗ ಫಲಿತಾಂಶವೂ ಬಹತೇಕ ಹೊರಬಿದ್ದಾಗಿದೆ. ಆಯ್ಕೆಯಾದವರು ಸಂಭ್ರಮಾಚರಣೆಯಲ್ಲಿ ಮುಳುಗಿ ಹೋಗಿದ್ದಾರೆ. ಆದರೆ ಈ ಸಂಭ್ರಮಾಚರಣೆ ತನ್ನ ಗೆಲುವಿಗೆ ಸೀಮಿತವಾಗಿರಬೇಕೇ ವಿನಃ ಮತ್ತೊಬ್ಬರ ಸೋಲನ್ನು ಅಣಕಿಸುವಂತಿರಬಾರದು. ಮುಖ್ಯವಾಗಿ ಅದು ಹಾನಿಕಾರಕವಾಗಿಯಂತೂ ಇರಲೇಬಾರದು. ಆದರೆ ಇಲ್ಲೊಂದು ಪ್ರಕರಣದಲ್ಲಿ, ಗೆದ್ದವರು ತನ್ನ ಸಂಭ್ರಮಾಚರಣೆಯ ಪ್ರಯುಕ್ತ ಸೋತವರ ಮನೆಗೆ ನುಗ್ಗಿ ದಾಂಧಲೆ ಮಾಡಿ ಅಲ್ಲಿರುವವರ ಮೇಲೆ ಹಲ್ಲೆ ಮಾಡಿರುವ ಘಟನೆ ಗುಂಡ್ಲುಪೇಟೆಯ ಗ್ರಾಮವೊಂದರಲ್ಲಿ ನಡೆದಿದೆ.

ಗುಂಡ್ಲುಪೇಟೆ ತಾಲೋಕಿನ ಹೊಂಗಳ್ಳಿ ಗ್ರಾಮದಲ್ಲಿ ವೀರಶೈವ ಸಮುದಾಯಕ್ಕೆ ಸೇರಿದ ಅಭ್ಯರ್ಥಿಯೊಬ್ಬರು ದಲಿತ ಅಭ್ಯರ್ಥಿಯ ಎದುರು ಸ್ಪರ್ಧಿಸಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಆದರೆ ಈ ಆಯ್ಕೆಯಾದ ಮೇಲ್ಜಾತಿಯವರ ಸಂಭ್ರಮಾಚರಣೆ ದಲಿತರ ಕೇರಿಗೆ ನುಗ್ಗಿ ಪಟಾಕಿ ಸಿಡಿಸಿ ಸಂಭ್ರಮಿಸುವ ಮಟ್ಟಕ್ಕೆ ತಲುಪಿತ್ತು. ಇದರಿಂದ ಗಲಭೆ ಆರಂಭವಾಗಿ, ಜಾತಿನಿಂದನೆ ಮಾಡಿ, ಅಂಬೇಡ್ಕರ್‌ ಭಾವಚಿತ್ರವಿರುವ ಬ್ಯಾನರ್‌ ಮೇಲೆ ಚಪ್ಪಲಿ ಎಸೆದು ನಿಂದಿಸಿ, ಮಕ್ಕಳು ಮಹಿಳೆಯರು ಎನ್ನದೇ ಅವರ ಮೇಲೂ ಹಲ್ಲೆ ನಡೆಸಲಾಗಿದೆ.

ಇಂತಹ ವಿಕೃತ ಘಟನೆಗಳು ನಮ್ಮ ಕಣ್ಣೆದುರಿಗೆ ಸಾಕಷ್ಟಿವೆ. ಇವುಗಳಿಗೆ ಕಾರಣ ಏನೆಂಬುದನ್ನು ಹೋರಾಟಗಾರರು ಮತ್ತು ಚಿಂತಕರಾದ ಕೃಷ್ಣಮೂರ್ತಿ ಚಮರಂ ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ಆಗ ’ತುಕುಡೆ ಗ್ಯಾಂಗ್’, ಈಗ ಕೃಷಿಕರು: ಸಂಸದೆ ಶೋಭಾ ಕರಂದ್ಲಾಜೆಯ ಇಬ್ಬಂದಿತನ

ನಾನುಗೌರಿ.ಕಾಂ ಜೊತೆ ಮಾತನಾಡಿದ ಕೃಷ್ಣಮೂರ್ತಿ, “ಚುನಾವಣೆಗಳು ಯಾವುದೇ ಇರಲಿ. ಅಲ್ಲಿ ಆಯ್ಕೆಯಾದವರು ಮತ್ತು ಆಯ್ಕೆಯಾಗದವರು ಎಂಬುದಷ್ಟೇ ಮಾನದಂಡ. ಅದು ಸೋಲು ಗೆಲುವು ಎಂಬುದಲ್ಲ. ನಮ್ಮ ಪರಿಭಾಷೆಯೇ ಸರಿಯಿಲ್ಲ. ಆಯ್ಕೆಯಾದವರು ಸಂಭ್ರಮಿಸಬೇಕು. ಆದರೆ ಆ ಸಂಭ್ರಮದಲ್ಲಿ ಆಯ್ಕೆಯಾಗದವರು, ಆಯ್ಕೆಯಾಗದವರ ಬೆಂಬಲಿಗರು ಎಲ್ಲರ ಮೇಲೂ ಸಂಭ್ರಮದ ನೆಪದಲ್ಲಿ ಸಮರ ಸಾರುವುದು ಈಗ ಎಲ್ಲೆಡೆ ವ್ಯಾಪಕವಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆಗಳು ನಿಜಕ್ಕೂ ರಣರಂಗವೇ ಆಗಿವೆ. ಚುನಾವಣಾ ವ್ಯವಸ್ಥೆ ಜನರನ್ನು ಛಿದ್ರಛಿದ್ರಗೊಳಿಸುತ್ತಿರುವುದು ಆತಂಕಕಾರಿ ಬೆಳವಣಿಗೆ” ಎಂದು ಆತಂಕ ವ್ಯಕ್ತಪಡಿಸಿದರು.

“ಇಂದಿನ ಈ ಪರಿಸ್ಥಿತಿಗೆ ನಮ್ಮ ನಡುವಿನ ಮಾಧ್ಯಮಗಳ ಅನೈತಿಕತೆಯೆ ಕಾರಣವಾಗಿದೆ. ಏಕೆಂದರೆ, ಚುನಾವಣೆ ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿನ ಒಂದು ಪ್ರಕ್ರಿಯೆಯಷ್ಟೆ. ಆದರೆ ಈ ಮಾಧ್ಯಮಗಳು ಚುನಾವಣಾ ರಣರಂಗ ಎಂದು ಬಿಂಬಿಸುತ್ತವೆ. ಜೊತೆಗೆ ತಮ್ಮ ಟಿಆರ್‌ಪಿಗಾಗಿ, ಹೀನಾಯ ಸೋಲು, ಪ್ರಚಂಡ ಗೆಲುವು, ಗದ್ದುಗೆ, ಸಿಂಹಾಸನ, ಪಟ್ಟಾಭಿಷೇಕ, ದರ್ಬಾರ್, ರಣಾಂಗಣ, ಶಕ್ತಿ ಪ್ರದರ್ಶನ, ಯುದ್ಧಭೂಮಿ ಎಂದೆಲ್ಲಾ ಅಬ್ಬರಿಸುತ್ತವೆ. ಇದನ್ನು ನೋಡುತ್ತಿರುವ ಜನ ಇಂದು ಚುನಾವಣೆಯನ್ನು ಅದರ ವಾಸ್ತವದ ಹಿನ್ನೆಲೆಯಲ್ಲಿ ನೋಡುತ್ತಿಲ್ಲ. ಇವು ಸೋಲು-ಗೆಲುವು ಲೆಕ್ಕಾಚಾರದೊಟ್ಟಿಗೆ ಮಾನ-ಅವಮಾನದ ಪ್ರಶ್ನೆಯನ್ನು ಮುಂದಿಡುತ್ತವೆ. ಈ ಕಾರಣದಿಂದಲೇ ಗುಂಡ್ಲುಪೇಟೆಯಂತಹ ಘಟನೆಗಳು ನಡೆಯುತ್ತವೆ. ಇನ್ನೂ ಮುಂದುವರಿದು ಆತ್ಮಹತ್ಯೆ, ಕೊಲೆಯಂತಹ ಘಟನೆಗಳಲ್ಲೂ ಮುಕ್ತಾಯವಾಗುತ್ತದೆ” ಎಂದು ಎಚ್ಚರಿಸಿದರು.

ಇದನ್ನೂ ಓದಿ: ಜಿಯೋ ಟವರ್‌ಗಳ ಮೇಲಿನ ರೈತರ ದಾಳಿಯನ್ನು ಪರೋಕ್ಷವಾಗಿ ಖಂಡಿಸಿದ ಪ್ರಧಾನಿ

“ಈ ಗ್ರಾಮ ನನಗೆ ಬಹಳ ಹತ್ತಿರದ್ದು. ಇಲ್ಲಿ ವೀರಶೈವರು ಪ್ರಬಲವಾಗಿದ್ದು, ಅವರ ನಂತರ ಸ್ಥಾನದಲ್ಲಿ ದಲಿತರು, ಕುರುಬರು ಉಪ್ಪಾರರು ಬರುತ್ತಾರೆ. ಇಲ್ಲಿರುವ ಬಹುಸಂಖ್ಯಾತ ವೀರಶೈವರು ಬಿಜೆಪಿಯ ಪರ. ಈಗ ನಡೆದಿರುವ ವಿಕೃತ ಘಟನೆಗೂ ಇವರೇ ಕಾರಣ. ಆಯ್ಕೆಯಾದವರು ತಮ್ಮ ಸಂಭ್ರಮವನ್ನು ತಮ್ಮ ಬೆಂಬಲಿಗರೊಂದಿಗೆ ತಾವಿರುವ ಸ್ಥಳದಲ್ಲಿ ಮಾಡಿಕೊಳ್ಳಬೇಕು. ಅದುಬಿಟ್ಟು ಸೋತವನ ಮನೆಗೆ ನುಗ್ಗುವುದು ಎಷ್ಟು ಸರಿ?. ಅಷ್ಟೇ ಅಲ್ಲದೇ, ಈ ದಲಿತರೆಲ್ಲಾ ಇಂದು ಎದ್ದು ನಿಲ್ಲಲು ಈ ಅಂಬೇಡ್ಕರ್‌ ಕಾರಣ ಎಂದು ಅವರ ಬ್ಯಾನರ್‌ ಮೇಲೆ ಚಪ್ಪಲಿ ಎಸೆಯುವುದು ಎಷ್ಟು ಸರಿ. ಹಾಗಾಗಿಯೇ ಈ ಸೋಲು-ಗೆಲುವು ಎನ್ನುವುದು ಪ್ರಾಥಮಿಕವಾಗಿಯೇ ಸರಿಯಿಲ್ಲ” ಎಂದು ಹೇಳಿದರು.

“ಭಕ್ತರ ಅಟ್ಟಹಾಸ ಈಗ ಪ್ರತೀ ಗ್ರಾಮಕ್ಕೂ ಇಳಿದಿದೆ. ಇದು ಕೇಸರಿ ಪಡೆಯ ದಾಂಧಲೆ. ಇನ್ನಾದರೂ ಬಿಜೆಪಿ ಒಳಗಿರುವ ಘಟಾನುಘಟಿ ನಾಯಕರು(!) ತಮ್ಮ ಸಮುದಾಯದ ಪರ ಬಾಯಿ ಬಿಚ್ಚುವರೇ? ಅಥವಾ ಒದೆಸಿಕೊಂಡು ನಾಶವಾಗಿ, ನಾವು ಮಾತ್ರ ಬಿಜೆಪಿಯಲ್ಲಿ ಅಧಿಕಾರ ಅನುಭವಿಸಿಕೊಂಡು ಹಾಯಾಗಿರುತ್ತೇವೆ ಎಂದುಕೊಳ್ಳುವರೋ? ಈ ಕಾರಣಕ್ಕೆ ದಲಿತರು ಬಿಜೆಪಿ ಬೆಂಬಲಿಸಬೇಕಾ?? ಯೋಚನೆ ಮಾಡಿ” ಎಂದು ಅವರು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: ಕರ್ನಾಟಕದಲ್ಲಿ ಇತಿಹಾಸ ಸೃಷ್ಟಿಸಿದ ಮಂಗಳಮುಖಿಯರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 4 ಜನ ಆಯ್ಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: 2ಲಕ್ಷ ಮತದಾರರಲ್ಲಿ ಬಸವನಗುಡಿಯಲ್ಲಿ ಉಳಿಯುವುದು 88 ಸಾವಿರ ಮಾತ್ರಾ?: SIR ಪರಿಷ್ಕರಣೆಯ ಆಘಾತಕಾರಿ ಲೆಕ್ಕಾಚಾರ

2023ರ ಚುನಾವಣೆಯಲ್ಲಿ ಬಸವನಗುಡಿಯಲ್ಲಿ 1.28 ಲಕ್ಷ ಮತಗಳು ಚಲಾಯಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ SIR ಪ್ರಕ್ರಿಯೆಯಲ್ಲಿ 1.13 ಲಕ್ಷ ಜನರನ್ನು ಹೊರಗಿಟ್ಟು, ಕರಡು ಪಟ್ಟಿಯಲ್ಲಿ ಕೇವಲ 1.35 ಲಕ್ಷ ಮತದಾರರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರ...

ಕರ್ನಾಟಕ ಎಸ್ಐಆರ್: 43.81 ಲಕ್ಷ ಜನರಿಗೆ SIR ನೋಟಿಸ್: ಗಣ್ಯರ ಹೆಸರು ಸರಿಪಡಿಸುವ ಚುನಾವಣಾ ಆಯೋಗಕ್ಕೆ ಜನ-ಸಾಮಾನ್ಯರ ನೋವು ಕಾಣುತ್ತಿಲ್ಲವೇ?

ಕರ್ನಾಟಕದಲ್ಲಿ SIR ವೇಳೆ 43.81 ಲಕ್ಷ ಮತದಾರರ ಪ್ರಕರಣಗಳಿಗೆ ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಅವರ ದಾಖಲೆಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 23.45 ಲಕ್ಷ ಪ್ರಕರಣಗಳಲ್ಲಿ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು...

ಪಿಣರಾಯಿ ವಿಜಯನ್ ವಿರುದ್ಧ ಎಫ್‌ಐಆರ್‌ಗೆ ಇಡಿ ಪತ್ರ: ಕಾನೂನು ಪರಿಶೀಲನೆ ನಡೆಸಲಾಗುವುದು ಎಂದ ಸಿಎಂ ವಿ.ಡಿ. ಸತೀಶನ್

ಆರೋಪಿತ ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಪತ್ರವನ್ನು ಕಾನೂನುಬದ್ಧವಾಗಿ ಪರಿಶೀಲಿಸಲಾಗುವುದು, ಅದರ ನಂತರ...

‘ಸಿಇಸಿ ಜ್ಞಾನೇಶ್ ಕುಮಾರ್ ಮಗಳು’ : ನೋಯ್ಡಾ ಜಿಲ್ಲಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ತಪರಾಕಿ ಬೆನ್ನಲ್ಲೇ ವಿಪಕ್ಷ ನಾಯಕರ ವಾಗ್ದಾಳಿ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಕ್ಕಾಗಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಗಳು ಹಾಗೂ ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರನ್ನು...

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...

ದೆಹಲಿ ಮತದಾರರ ಪಟ್ಟಿಗೆ ರಾಘವ್ ಚಡ್ಡಾ ಹೆಸರು ಸೇರ್ಪಡೆ; ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಎಎಪಿ ಆರೋಪ

ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ, ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ...

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...

‘ಪ್ರೊ. ಸಿಎನ್ಆರ್ ರಾವ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ..’; ಚುನಾವಣಾ ಆಯೋಗದ ಸ್ಪಷ್ಟನೆ

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಹೆಸರಿನ ಕಾಗುಣಿತದಲ್ಲಿನ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸಲು...

‘ಬಂಗಾಳಿಗಳು ಮೀನು ಇಲ್ಲದೆ ಬದುಕಲು ಸಾಧ್ಯವಿಲ್ಲ’; ಆಹಾರ ಪದ್ಧತಿ ನಿರ್ಧಾರ ಬಿಜೆಪಿ ಕೆಲಸವಲ್ಲ: ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ 

ಕೊಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ದುರ್ಗಾ ಪೂಜೆ ಮತ್ತು ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ ಆಹಾರ ಪದ್ಧತಿಯ ಕುರಿತು ಕೆಲವು ಧಾರ್ಮಿಕ ನಾಯಕರು ಹಾಗೂ ವಿಶ್ವ ಹಿಂದೂ...

ಮತದಾರ ಇರುವುದು ವಿದೇಶದಲ್ಲಿ, ಆದರೆ ವಿಚಾರಣೆ ನಡೆಯುತ್ತಿರುವುದು ಇಲ್ಲಿ: ಕರ್ನಾಟಕ SIR ತಂದಿಟ್ಟ ಧರ್ಮಸಂಕಟ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅನೇಕ ಅನಿವಾಸಿ ಕನ್ನಡಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೆಸರಿನಲ್ಲಿನ ವ್ಯತ್ಯಾಸ, ವಯಸ್ಸಿನ ವ್ಯತ್ಯಾಸ...