Homeಚಳವಳಿಸಿಂಘು ಗಡಿಯಲ್ಲಿ ಬ್ಯಾರಿಕೇಡ್ ಮುರಿದು ಮುನ್ನುಗ್ಗಿದ ಟ್ರಾಕ್ಟರ್‌ಗಳು: ಮೂಕ ಪ್ರೇಕ್ಷಕರಾದ ಪೊಲೀಸರು

ಸಿಂಘು ಗಡಿಯಲ್ಲಿ ಬ್ಯಾರಿಕೇಡ್ ಮುರಿದು ಮುನ್ನುಗ್ಗಿದ ಟ್ರಾಕ್ಟರ್‌ಗಳು: ಮೂಕ ಪ್ರೇಕ್ಷಕರಾದ ಪೊಲೀಸರು

- Advertisement -
- Advertisement -

ಕೇಂದ್ರ ಸರ್ಕಾರದ ವಿರುದ್ದ ರೈತರು ನಡೆಸುತ್ತಿರುವ ಹೋರಾಟ ಇಂದಿಗೆ ಮೂರನೇ ತಿಂಗಳಿಗೆ ಕಾಲಿಟ್ಟಿದೆ. ಸರ್ಕಾರ ರೈತರೊಂದಿಗೆ ಹನ್ನೊಂದು ಸುತ್ತಿನ ಮಾತುಕತೆ ನಡೆಸಿದರು ಎಲ್ಲವೂ ಮುರಿದು ಬಿದ್ದಿದೆ. ಇಂದು ದೆಹಲಿಯ ಗಡಿಗಳ ಸುತ್ತಲೂ ಪ್ರತಿಭಟನಾ ನಿರತ ರೈತರು ಟ್ರಾಕ್ಟರ್‌ ಪರೇಡ್ ನಡೆಸಿ ಗಣರಾಜ್ಯೋತ್ಸವವನ್ನು, ರೈತರ ಗಣರಾಜ್ಯೋತ್ಸೋವ ಆಗಿ ನಡೆಸಲು ತೀರ್ಮಾನಿಸಿದ್ದಾರೆ.

ಈಗಾಗಲೇ ಟ್ರಾಕ್ಟರ್‌ ಪರೇಡ್ ಪ್ರಾರಂಭವಾಗಿದ್ದು, ದೆಹಲಿಯ ಸಿಂಘುಗಡಿಯಲ್ಲಿ ರೈತರ ಟ್ರಾಕ್ಟರ್‌ಗಳು ಸಾಲು ಸಾಲಾಗಿ ಮೆರವಣಿಗೆ ಹೊರಟಿವೆ. ರೈತರ ಪರೇಡ್‌ ಅನ್ನು ಅನುಮತಿಸಿ ರೂಟ್‌ ಮ್ಯಾಪ್‌ಕೂಡ ಹಾಕಿಕೊಟ್ಟಿದ್ದ ಪೊಲೀಸರು ಪರೇಡ್‌ ತಡೆಯಲು ಬೆಳ್ಳಂಬೆಳಗ್ಗೆಯೇ ಬ್ಯಾರಿಕೇಡ್‌ಗಳನ್ನು ರಸ್ತೆಗೆ ಅಡ್ಡಲಾಗಿ ಜೋಡಿಸಿದ್ದರು.

ದೆಹಲಿಯಲ್ಲಿ ಐತಿಹಾಸಿಕ ಟ್ರಾಕ್ಟರ್‌‌ ರ್ಯಾಲಿ ಪ್ರಾರಂಭ; ದೆಹಲಿಯ ಸಿಂಘುಗಡಿಯಿಂದ ನಾನುಗೌರಿ.ಕಾಮ್ ನೇರ ಪ್ರಸಾರದ ಲೈವ್ ವಿಡಿಯೋ ನೋಡಿ

ಇದರಿಂದ ಸಿಟ್ಟಾಗಿರುವ ರೈತರು 12 ಗಂಟೆಗೆ ನಿಗದಿ ಮಾಡಿದ್ದ ರ್‍ಯಾಲಿಯನ್ನು 08 ಗಂಟೆಗೆ ಆರಂಭಿಸಿದ್ದು, ಪೊಲೀಸರ ಬ್ಯಾರಿಕೇಡ್ ಭೇದಿಸಿ ಟ್ರಾಕ್ಟರ್‌ ರ್‍ಯಾಲಿ ಹೊರಟಿದ್ದಾರೆ. ರ್‍ಯಾಲಿಯು ಶಾಂತಿಯುತವಾಗಿ ನಡೆಯುತ್ತಿದ್ದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ. ಲಕ್ಷಾಂತರ ಟ್ರಾಕ್ಟರ್‌ಗಳು ಇಂದು ದೆಹಲಿಯ ಐದು ಗಡಿಭಾಗಗಳಿಂದ ರಾಜಧಾನಿಯ ಸುತ್ತಲೂ ಇರುವ ಹೆದ್ದಾರಿಯಲ್ಲಿ ಪರೇಡ್‌ ನಡೆಸುತ್ತಿವೆ.

ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ದೇಶಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿದ್ದು, ನೂರಾರು ಟ್ರಾಕ್ಟರ್‌ಗಳು ನಿನ್ನೆ (ಸೋಮವಾರ) ರಾತ್ರಿ ದೆಹಲಿ ಗಡಿ ತಲುಪಿವೆ. ಕರ್ನಾಟಕದಿಂದಲೇ ನೂರಾರು ರೈತ-ಹೋರಾಟಗಾರರು ದೆಹಲಿ ಗಡಿಗೆ ತೆರಳಿದ್ದಾರೆ. ಇಂದಿನ ಗಣರಾಜ್ಯೋತ್ಸವ ಆಚರಣೆಯ ದಿನ ರೈತರು ಸರ್ಕಾರಕ್ಕೆ ತಮ್ಮ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದಾರೆ.

ಕರ್ನಾಟಕದಲ್ಲಿಯೂ ರೈತರ ಟ್ರಾಕ್ಟರ್‌ ಪರೇಡ್‌ ನಡೆಯಲಿದ್ದು, ಈಗಾಗಲೇ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ರೈತ ಹೋರಾಟಗಳು ಪ್ರಾರಂಭವಾಗಿವೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೃಹತ್‌ ಟ್ರಾಕ್ಟರ್‌ ರ್‍ಯಾಲಿ ನಡೆಯಲಿದ್ದು, ತಯಾರಿಗಳು ಪ್ರಾರಂಭವಾಗಿದೆ. ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಐದು ಹೆದ್ದಾರಿಗಳಿಂದ ಟ್ರಾಕ್ಟರ್‌ ರ್‍ಯಾಲಿ ನಗರದ ಫ್ರೀಡಂ ಪಾರ್ಕ್‌ ಕಡೆಗೆ ಹೊರಡಲಿವೆ.

ಇದನ್ನೂ ಓದಿ: ಟ್ರ್ಯಾಕ್ಟರ್‌ ರ್ಯಾಲಿ ನಡೆದೇ ನಡೆಯುತ್ತದೆ; ಮುಂದಿನದು ಪೊಲೀಸರಿಗೆ ಬಿಟ್ಟಿದ್ದು: ನೂರ್‌ ಶ್ರೀಧರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಿಕ್ಷಕರ ನೇಮಕಾತಿಯಲ್ಲಿ ಉರ್ದು ಮಾಧ್ಯಮಕ್ಕೆ ಅನ್ಯಾಯ : ಹೈಕೋರ್ಟ್‌ಗೆ ಅರ್ಜಿ

ಕರ್ನಾಟಕ ಸರ್ಕಾರದ 15 ಸಾವಿರ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಉರ್ದು ಮಾಧ್ಯಮ ಹಾಗೂ ಇತರ ಭಾಷಾ ಅಲ್ಪಸಂಖ್ಯಾತ ಶಿಕ್ಷಕರ ಹುದ್ದೆಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ನ ಧಾರವಾಡ ಪೀಠದ ಮುಂದೆ ಅರ್ಜಿ ಸಲ್ಲಿಕೆಯಾಗಿದೆ. ಉರ್ದು...

ಚುನಾವಣಾ ಆಯೋಗಕ್ಕೆ ನಕಲಿ ಆಕ್ಷೇಪಣೆ ಪತ್ರ ಸಲ್ಲಿಕೆ; ಉತ್ತರಾಖಂಡ್ ಹಾಲಿ ಕಾಂಗ್ರೆಸ್ ಶಾಸಕರ ಹೆಸರು ಡಿಲೀಟ್

ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲು ಕೋರಿ ಸಲ್ಲಿಸಲಾದ ಆಕ್ಷೇಪಣೆಯನ್ನು (ಅರ್ಜಿ) ನಾನು ಸಲ್ಲಿಸಿಲ್ಲ ಎಂದು ವ್ಯಕ್ತಿಯೊಬ್ಬರು ನಿರಾಕರಿಸಿದ ನಂತರ, ಉತ್ತರಾಖಂಡ್ ಕಾಂಗ್ರೆಸ್ ಶಾಸಕ ಫುರ್ಕಾನ್ ಅಹಮದ್ ಅವರು ಮತದಾರರ ಪಟ್ಟಿಯ ವಿಶೇಷ ತೀವ್ರ...

RTI ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆ ಪ್ರಕರಣ: ₹24 ಲಕ್ಷ ದೇವಸ್ಥಾನದ ಕಾಣಿಕೆ ಹಣ ಮನೆಗೆ ಕೊಂಡೊಯ್ದಿದ್ದ ನರೇಶ್ ಶೆಣೈ

RTI ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚಲನ ಮೂಡಿಸುವಂತಹ ಮಹತ್ವದ ದಾಖಲೆಯೊಂದು ಬಹಿರಂಗವಾಗಿದೆ. ಬಾಳಿಗಾ ಹತ್ಯೆ ನಡೆಯುವುದಕ್ಕೂ ಕೆಲವೇ ದಿನಗಳ ಮುನ್ನ, ಪ್ರಕರಣದ ಪ್ರಮುಖ ಆರೋಪಿ ನರೇಶ್...

ಸಿಜೆಪಿ ಪ್ರತಿಭಟನೆ: ಪೊಲೀಸ್ ದೌರ್ಜನ್ಯಗಳ ಆರೋಪದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಸುಪ್ರೀಂ ಆದೇಶ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ದೆಹಲಿ ಪೊಲೀಸರು ನಡೆಸಿದ ಅತಿಯಾದ ಬಲಪ್ರಯೋಗ, ಹಿಂಸಾಚಾರ ಮತ್ತು ಇತರ ಗಂಭೀರ ದುರ್ನಡತೆಯ ಆರೋಪಗಳ ತನಿಖೆಗೆ ಉನ್ನತ...

ನಕಲಿ ಔಷಧ ದಂಧೆ: ತನಿಖೆಗೆ ಕಾನೂನು ತೊಡಕು, ಎಸ್‌ಐಟಿಗೆ ವಿಶೇಷಾಧಿಕಾರಕ್ಕೆ ಬೇಡಿಕೆ

ರಾಮನಗರ ಜಿಲ್ಲೆಯ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡೇರಿ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ಬೆಳಕಿಗೆ ಬಂದಿರುವ ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಬೃಹತ್ ನಕಲಿ ಔಷಧ ದಂಧೆಯ ತನಿಖೆಗೆ ಗಂಭೀರವಾದ ಕಾನೂನು ತೊಡಕು...

ಸಿಜೆಪಿ ಸ್ವಯಂ ಸೇವಕರ ಮೇಲೆ ದಾಳಿ | ರಾಜಸ್ಥಾನದ ಬಿಜೆಪಿ ಸರ್ಕಾರಕ್ಕೆ 3 ಬೇಡಿಕೆಗಳನ್ನು ಮುಂದಿಟ್ಟ ಅಭಿಜೀತ್ ದೀಪ್ಕೆ : ಈಡೇರಿಸಲು 48 ಗಂಟೆಗಳ ಗಡುವು

ಸರ್ಕಾರಿ ಶಾಲೆಯ ದುಃಸ್ಥಿತಿಯನ್ನು ಪರಿಶೀಲಿಸಲು ತೆರಳಿದ್ದ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸಹ-ಸಂಘಟಕ ಆಶುತೋಷ್ ರಾಂಕಾ ಮತ್ತು ಇತರ ಸ್ವಯಂಸೇವಕರ ಮೇಲೆ ದಾಳಿ ನಡೆಸಿರುವುದನ್ನು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ತೀವ್ರವಾಗಿ ಖಂಡಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು...

ಸಾರ್ವಜನಿಕರ ಉಪಸ್ಥಿತಿಯಿಲ್ಲದ ಮುಚ್ಚಿದ ಸ್ಥಳದಲ್ಲಿ ಜಾತಿ ನಿಂದನೆ: ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಅಪರಾಧವಲ್ಲ: ಸುಪ್ರೀಂ ಕೋರ್ಟ್ 

ಸಾರ್ವಜನಿಕ ಪ್ರವೇಶವಿಲ್ಲದ ಮತ್ತು ಸಾರ್ವಜನಿಕರ ಉಪಸ್ಥಿತಿಯಿಲ್ಲದ ನಾಲ್ಕು ಗೋಡೆಗಳ ನಡುವೆ ಅಥವಾ ಸುತ್ತುವರಿದ ಮುಚ್ಚಿದ ಜಾಗದಲ್ಲಿ ನಡೆದಿದೆ ಎನ್ನಲಾದ ಜಾತಿ ಆಧಾರಿತ ನಿಂದನೆ ಅಥವಾ ವಾಗ್ವಾದಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ...

ಕರ್ನಾಟಕದ ಒಂದೂವರೆ ಕೋಟಿ ಮತದಾರರನ್ನು ಬಾಧಿಸಿದ SIR

ಎನ್ಯುಮರೇಷನ್ ಫಾರಂ (ಗಣತಿ ನಮೂನೆ) ಸಲ್ಲಿಕೆ ಹಂತ ಮುಗಿದ ಬಳಿಕ (ಆ.18-19ರ ಪ್ರಕಾರ) ದೊರೆತ ಮಾಹಿತಿ ಪ್ರಕಾರ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕರ್ನಾಟಕದ ಸುಮಾರು ಒಂದೂವರೆ ಕೋಟಿ (...

ಮಹಾರಾಷ್ಟ್ರ: 8 ವರ್ಷದ ಬಾಲಕಿ ಶಾರ್ಟ್ಸ್ ಧರಿಸಿದ್ದಕ್ಕೆ ಕುಟುಂಬದ ಮೇಲೆ ಭೀಕರ ಹಲ್ಲೆ: ನೈತಿಕ ಪೊಲೀಸ್‌ಗಿರಿಗೆ ಸಾಕ್ಷಿಯಾದ ಸಿಂಹಗಢ ಕೋಟೆ

ಮಹಾರಾಷ್ಟ್ರದ ಪುಣೆ ಸಮೀಪದ ಐತಿಹಾಸಿಕ ಸಿಂಹಗಢ ಕೋಟೆಯಲ್ಲಿ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಪ್ರವಾಸಿಗರ ಮೇಲೆ ನೈತಿಕ ಪೊಲೀಸ್‌ಗಿರಿ (ಮೊರಾಲ್ ಪೋಲಿಸಿಂಗ್) ನಡೆಸಿ ಭೀಕರ ಹಲ್ಲೆ ನಡೆಸಲಾಗಿದೆ. ಎಂಟು ವರ್ಷದ ಚಿಕ್ಕ ಬಾಲಕಿಯೊಬ್ಬಳು...

ಜೈಪುರದಲ್ಲಿ ಸರ್ಕಾರಿ ಶಾಲೆ ತಪಾಸಣೆ ವೇಳೆ ಭೀಕರ ಹಿಂಸಾಚಾರ: ‘ಸಿಜೆಪಿ’ನಾಯಕ ಅಶುತೋಷ್ ರಂಕಾ ತಂಡದ ಮೇಲೆ ದಾಳಿ, ಕಲ್ಲು ತೂರಾಟ, ಕಾರು ಧ್ವಂಸ

ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರ ಸಮೀಪದ ಬಾಗ್ರು ವಿಧಾನಸಭಾ ಕ್ಷೇತ್ರದ ರಾಂಪುರ ಕನ್ವರ್‌ಪುರ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಸ್ಥಿತಿಗತಿಗಳನ್ನು ಪರಿಶೀಲಿಸಲು ತೆರಳಿದ್ದ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಕಾರ್ಯಕರ್ತರ ಮೇಲೆ ಉಗ್ರ...