Homeಮುಖಪುಟನಿಮ್ಮ ಮನೆ 20 ವರ್ಷ ಹಳೆಯದೇ? ಹಾಗಾದರೆ ಕೂಡಲೇ ಕೆಡವಿ ಮತ್ತೆ ಕಟ್ಟಿಸಿ!

ನಿಮ್ಮ ಮನೆ 20 ವರ್ಷ ಹಳೆಯದೇ? ಹಾಗಾದರೆ ಕೂಡಲೇ ಕೆಡವಿ ಮತ್ತೆ ಕಟ್ಟಿಸಿ!

- Advertisement -
- Advertisement -

ನಿಮ್ಮ ಬಟ್ಟೆಗಳು ಒಂದು ವರ್ಷ ಹಳೆಯದೇ? ಹಾಗಿದ್ದಲ್ಲಿ ಅವನ್ನು ಕೂಡಲೇ ಹರಿದು ಹಾಕಿ ಹೊಸ ಬಟ್ಟೆ ಕೊಂಡುಕೊಳ್ಳಿರಿ. ಮೊಬೈಲ್ ಮೂರು ವರ್ಷ ಹಳೆಯದೇ, ಅದನ್ನು ಕೂಡಲೇ ಎಸೆದು ಹೊಸದೊಂದು ಕೊಳ್ಳಿರಿ.

ಲೇಖಕನಿಗೆ ತಲೆ ಕೆಟ್ಟಿದೆಯೇ ಎಂದು ಕೇಳಬೇಡಿ, ಬರುತ್ತೇನೆ ವಿಷಯಕ್ಕೆ.

ನಿಮ್ಮ ಕಾರು 20 ವರ್ಷ ಹಳೆಯದೇ? ಹಾಗಾದರೆ ಅದನ್ನು ಗುಜರಿಗೆ ಹಾಕಿ ಹೊಸ ಕಾರು ಖರೀದಿಸಿ ಎಂದು ಸರಕಾರ ಹೇಳಿದಾಗ ಯಾರನ್ನಾದರೂ ಪ್ರಶ್ನಿಸಿದಿರಾ, ಇಲ್ಲಾ ತಾನೆ? ಹಾಗಾದರೆ ನಾನು ಮೇಲೆ ಹೇಳಿದ ಮಾತುಗಳು ಶೀಘ್ರದಲ್ಲೇ ಸರಕಾರದ ಆದೇಶವಾಗಿ ಬರುವುದರಲ್ಲಿ ಸಂದೇಹವಿಲ್ಲ.

ಈ ಬಾರಿಯ ಬಜೆಟ್ ಮಂಡನೆಯಾದ ನಂತರ ಹಲವಾರು ಆರ್ಥಿಕ ತಜ್ಞರು ಮುಂಗಡಪತ್ರದಲ್ಲಿ ಕೇವಲ ಸಪ್ಪ್ಲೈ ಸೈಡನ್ನು ಗಮನಿಸಲಾಗಿದೆ, ಇದಕ್ಕೆ ಬೇಕಾದ ಡಿಮ್ಯಾಂಡ್ ಹೇಗೆ ಸರಕಾರ ಸೃಷ್ಟಿಸುತ್ತದೆ ಎನ್ನುವ ಬಗ್ಗೆ ವಿವರ ಇಲ್ಲ ಎಂದು ಗೊಣಗಿದ್ದರು. ಇದೋ ಇಲ್ಲಿದೆ ಡಿಮ್ಯಾಂಡ್ ಸೃಷ್ಟಿಯ ವಿವರ.

ಇದನ್ನೂ ಓದಿ: ಭಾರತದ ಪ್ರಗತಿಯನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವ ಕೃಷಿ ಕಾಯ್ದೆಗಳು

ಇತ್ತೀಚೆಗೆ ಬಂದ ಭಾರತ ಸರಕಾರದ “ಅದ್ವಿತೀಯ” ಮುಂಗಡಪತ್ರದಲ್ಲಿ ಹಳೆಯ ಕಾರಿನ ಪ್ರಸ್ತಾವನೆ ಇದೆ. ಕೇವಲ ಕಾರಿನ ಬಗ್ಗೆ ಮಾತನಾಡುವುದಾದರೆ ನನ್ನ ಕಾರು ನನ್ನ ವೈಯುಕ್ತಿಕ ವಿಚಾರ, ಇದರಲ್ಲಿ ಇನ್ನೊಬ್ಬರಿಗೆ ಮೂಗು ತೂರಿಸುವ ಅವಕಾಶವಿಲ್ಲ. ಭಾರತದಲ್ಲಿ ಹಿಂದಿನಿಂದಲೂ ಮಧ್ಯಮ ವರ್ಗದ ಜನರು ಜೀವನದಲ್ಲಿ ಒಂದೇ ಹೆಂಡತಿ, ಒಂದೇ ಮಗು, ಒಂದೇ ಮನೆ, ಒಂದೇ ಕಾರು ಎಂದು ಜೀವನ ಮಾಡಿದವರು. ಕಾರನ್ನು ಹೆಂಡತಿ ಅಥವಾ ಮಗುವಿನಷ್ಟೇ ಪ್ರೀತಿಯಿಂದ ಸಾಕಿದವರು. ಅದನ್ನು ಗುಜರಿಗೆ ಹಾಕುವುದು ಅವರಿಗೆ ಜೀರ್ಣವಾಗದ ಮಾತು. ವೈಯುಕ್ತಿಕ ವಿಚಾರಗಳು ಹಾಗಿರಲಿ.

PC: Google Sites

ನಮ್ಮ ಗ್ರಾಮೀಣ ಸಾರಿಗೆ ನಿಂತಿರುವುದೇ ಹಳೆಯ ವಾಹನಗಳ ಕೃಪೆಯಿಂದ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದೆ ಗ್ರಾಮೀಣ ಭಾಗದ ಜನರು ಹಳೆಯ ಮತ್ತು ಮಾರ್ಪಡಿಸಲ್ಪಟ್ಟ ವಾಹನಗಳನ್ನೇ ನಂಬಿಕೊಂಡು ಇದೇ ಗ್ರಾಮೀಣ ಸಾರಿಗೆ ಎಂದು ಜೀವನ ನಡೆಸುತ್ತಿದ್ದಾರೆ. ಹಾಗಾದರೆ ಅವರೆಲ್ಲಾ ಏನು ಮಾಡಬೇಕು. ಹಳೆಯ ವಾಹನಗಳ ರಿಪೇರಿ ಮಾಡಿ ಜೀವನ ನಡೆಸುತ್ತಿರುವ ಲಕ್ಷಾಂತರ ಮೆಕ್ಯಾನಿಕ್‌‌‌ಗಳು ಏನು ಮಾಡಬೇಕು.

ಇದನ್ನೂ ಓದಿ: ಓಡಿಒಪಿ: ಎಲ್ಲದರೊಳಗು ಸ್ವತಂತ್ರ ಬೇಕು ಅಂದ್ರ ಹೆಂಗ? 1947ರೊಳಗ ಸಿಕ್ಕದಲ್ಲಾ ಸಾಕು

ಒಂದು ಅಂದಾಜಿನ ಪ್ರಕಾರ 2000-2001 ರಲ್ಲಿ ದೇಶದಲ್ಲಿ ಸುಮಾರು ನಲವತ್ತು ಲಕ್ಷ ವಾಹನಗಳ ಉತ್ಪಾದನೆಯಾಗಿತ್ತು. ಅವೆಲ್ಲವೂ ಏಕಕಾಲಕ್ಕೆ ಗುಜರಿಗೆ ಹೋದರೆ ಅವನ್ನು ಕೊಂಡುಕೊಳ್ಳುವವರು ಯಾರು? ಬಹುಶ: ಮಹೀಂದ್ರ ಮತ್ತು ಟಾಟಾ ಈಗಾಗಲೇ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಂಡಿರಬಹು (ಅದಾನಿ ಪಂಜಾಬಿನಲ್ಲಿ ಧಾನ್ಯಸಂಗ್ರಹಣೆ ಗೋಡೌನ್ ಕಟ್ಟಿಸಿದಂತೆ). ಆಟೋಮೊಬೀಲ್ ಲಾಬಿ ಸರಕಾರಕ್ಕೆ ಕಪ್ಪಕಾಣಿಕೆ ಸಲ್ಲಿಸಿರಬಹುದೇನೋ, ಅದಕ್ಕಾಗಿ ಈ ಆದೇಶ ಎಂದು ಸಂದೇಹ ಮೂಡುವುದು ಸ್ವಾಭಾವಿಕ.

ಹಾಗಾದರೆ ನಾಳೆ ರಿಯಲ್ ಎಸ್ಟೇಟ್ ಲಾಬಿ ಭೇಟಿಯಾದಲ್ಲಿ ಎಲ್ಲಾ 20 ವರ್ಷ ಹಳೆಯ ಮನೆ ಕೆಡವಿ ಹೊಸ ಮನೆ ಕಟ್ಟಬೇಕೆಂಬ ಕಾನೂನು ಬಂದರೆ ಅಥವಾ ಬಟ್ಟೆ ಲಾಬಿ ಒತ್ತಡದ ಮೇರೆಗೆ ಎಲ್ಲರೂ ಪ್ರತಿ ವರ್ಷ ಹೊಸ ಬಟ್ಟೆಯನ್ನೇ ಕೊಳ್ಳಬೇಕೆಂಬ ಕಾನೂನು ಜಾರಿಯಾದರೆ ಏನೂ ಆಶ್ಚರ್ಯವಿಲ್ಲ.

ಗೌರಿ ಲಂಕೇಶ್ ಇಂಗ್ಲಿಷ್‌ ಯುಟ್ಯೂಬ್ ಚಾನೆಲ್ Gauri Lankesh News Subscribe ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಇಷ್ಟೇ ಅಲ್ಲ, ಮನೆಯ ಪಾತ್ರೆ, ವಾಷಿಂಗ್ ಮಷಿನ್, ಮಿಕ್ಸರ್-ಗ್ರೈಂಡರ್, ಫ್ರಿಜ್, ಟಿವಿ, ಮೊಬೈಲ್, ಆಭರಣಗಳು, ಎಲ್ಲದಕ್ಕೂ ಎಕ್ಸ್ಪೈರಿ ಡೇಟ್ ಫಿಕ್ಸ್ ಆಗುತ್ತದೆ. ಇದೆಲ್ಲಾ ಕೊಂಡುಕೊಳ್ಳಲು ಹಣ ಎಲ್ಲಿಂದ ಬರುತ್ತದೆ ಎಂದು ನನ್ನನ್ನು ಕೇಳಬೇಡಿ, ವಿತ್ತಮಂತ್ರಿಗಳನ್ನು ಕೇಳಿ ನೋಡಿ. ಬಹುಶ: ಹೆಲಿಕಾಪ್ಟರ್ ಮನಿ. ಸರ್ಕಾರ ಗರಿಗರಿ ನೋಟು ಮುದ್ರಿಸಿ ಮೇಲಿನಿಂದ ಎಸೆಯಬಹುದು.

ಹೆಂಡತಿ/ಗಂಡ ಅದೇ ಇರಬೇಕೋ ಅಥವಾ ಅದೂ ಬದಲಾಯಿಸುತ್ತಿರಬೇಕೋ ಏನೋ ಗೊತ್ತಿಲ್ಲ. ವಿಚಾರಿಸಿ ನೋಡಿ.

 -ಜಿ.ಆರ್. ವಿದ್ಯಾರಣ್ಯ (ಅಭಿಪ್ರಾಯಗಳು ವೈಯಕ್ತಿಕವಾದವು)

ಇದನ್ನೂ ಓದಿ: ಪುಟಕ್ಕಿಟ್ಟ ಪುಟಗಳು: ಪುರುಷಾಧಿಪತ್ಯವನ್ನು ಪ್ರಶ್ನಿಸಿ ಆರೋಗ್ಯಕರ ಶೃಂಗಾರ ಪಾಠ ಹೇಳುವ ’ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. The Indian and state governments are implementing new new bills on public (scraping the old cars and two wheelers ) but it will be affecting only to the middle class families not to politicians nor rich families and it’s like a indirect death penalty to citizens of India.

LEAVE A REPLY

Please enter your comment!
Please enter your name here

- Advertisment -

ಮಾಲ್ಡಾ ನ್ಯಾಯಾಂಗ ಅಧಿಕಾರಿಗಳ ಘೇರಾವ್ ಪ್ರಕರಣದಲ್ಲಿ 17 ಜನರ ಬಂಧನ: ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಿದ ಇಸಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಏಳು ನ್ಯಾಯಾಂಗ ಅಧಿಕಾರಿಗಳ ಘೇರಾವ್‌ನಲ್ಲಿ ಭಾಗಿಯಾಗಿದ್ದಕ್ಕಾಗಿ ಚುನಾವಣಾ ಅಭ್ಯರ್ಥಿ ಸೇರಿದಂತೆ ಕನಿಷ್ಠ 17 ಜನರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು...

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...