Homeಚಳವಳಿ'ಮೋದಿ ಅಳಿಯಂದಿರು ಬಂದರು ಹುಷಾರು’: ರೈತ ಬೂಟಾ ಸಿಂಗ್ ಎಚ್ಚರಿಕೆ

‘ಮೋದಿ ಅಳಿಯಂದಿರು ಬಂದರು ಹುಷಾರು’: ರೈತ ಬೂಟಾ ಸಿಂಗ್ ಎಚ್ಚರಿಕೆ

ನಮ್ಮ ಹಕ್ಕು ಕೇಳಿದರೆ ನಾವು ಖಾಲಿಸ್ತಾನಿಯರಾಗುತ್ತೇವೆ. ಅದೇ ನಾವು ದೇಶಕ್ಕಾಗಿ ಯುದ್ಧಗಳಲ್ಲಿ ಪ್ರಾಣ ಬಿಟ್ಟಾಗ ನಾವು ಖಾಲಿಸ್ತಾನಿಯರು ಎಂದು ಅನಿಸುವುದಿಲ್ಲವೆ..?

- Advertisement -
- Advertisement -

83 ದಿನಗಳು ತುಂಬಿದ ರೈತ ಹೋರಾಟ ಹಲವಾರು ರೀತಿಯ ಸೇವೆಗಳಿಂದ ಹೆಸರುವಾಸಿಯಾಗುತ್ತಿದೆ. ಸೇವೆಯನ್ನು ಹೀಗೂ ಮಾಡಬಹುದು ಎಂಬುದನ್ನು ಈ ಐತಿಹಾಸಿಕ ಹೋರಾಟದಲ್ಲಿ ಸಿಖ್ ಸಮುದಾಯ ಜಗತ್ತಿಗೆ ತಿಳಿಸಿಕೊಟ್ಟಿದೆ. ಸಿಂಘು ಗಡಿಯಲ್ಲಿ ಪ್ರತಿಭಟನಾ ನಿರತ ಬೂಟಾ ಸಿಂಗ್ ಐರನ್ (ಇಸ್ತ್ರಿ) ಸೇವೆ ನೀಡುತ್ತಿದ್ದಾರೆ.

ಬೂಟಾ ಸಿಂಗ್ ತರನ್ ತಾರನ್ ಸಾಹಿಬ್ (Tarn Taran Sahib) ಜಿಲ್ಲೆಯವರು. ಅವರು ಮೂಲತಃ ಕೃಷಿಕರಾಗಿದ್ದು, ಸದ್ಯ ಸಿಂಘು ಗಡಿಯಲ್ಲಿ ಐರನ್ ಅಂಗಡಿ ಇಟ್ಟು ಪ್ರತಿಭಟನಾ ನಿರತರ ಬಟ್ಟೆಗಳನ್ನು ಐರನ್ ಮಾಡುವ ಸೇವೆ ಮಾಡುತ್ತಿದ್ದಾರೆ.

“ಈ ಹಿಂದೆ ಸರ್ಕಾರದ ವಿರುದ್ಧ, ಕೆಟ್ಟ ಯೋಜನೆಗಳ ವಿರುದ್ಧ ನಿಂತಿದ್ದವರು, ವಿರೋಧಿಸಿದವರು ಬೇರೆ. ಅಂದಿನ ಪ್ರತಿಭಟನಾ ಸ್ವರೂಪವೂ ಬೇರೆ. ಆದರೆ ಈಗ ಪ್ರಧಾನಿ ಮೋದಿ ತಮ್ಮ ಕೆಟ್ಟ ಕಾನೂನುಗಳ ಮೂಲಕ ಎದುರು ಹಾಕಿಕೊಂಡಿರುವುದು ಅವರ ಅಳಿಯಂದಿರನು. ಅಳಿಯರ ಮುಂದೆ ಮಾವ ಗೆದ್ದ ಉದಾಹರಣೆ ಇಲ್ಲವೆ ಇಲ್ಲ” ಎಂದು ರೈತ ಬೂಟಾ ಸಿಂಗ್ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಗೆದ್ದೇ ಮನೆಗೆ ತೆರಳುತ್ತೇವೆ, ಇಲ್ಲವೆಂದರೆ ತ್ರಿವರ್ಣ ಧ್ವಜದಲ್ಲಿ ನಮ್ಮ ಮೃತದೇಹ ಹೋಗಲಿವೆ!

ತರನ್ ತಾರನ್ ಸಾಹಿಬ್ ಜಿಲ್ಲೆಯಲ್ಲಿ ಭತ್ತ, ಜೋಳ, ಕಡಲೆ ಮತ್ತು ಕಬ್ಬು ಬೆಳೆಯುವ ಬೂಟಾ ಸಿಂಗ್, ಪ್ರತಿಭಟನಾ ಸ್ಥಳದಲ್ಲಿ ಒಂದೂವರೆ ತಿಂಗಳು ವಾಷಿಂಗ್ ಮಷಿನ್‌ಗಳನ್ನು ಇಟ್ಟು ರೈತರ ಬಟ್ಟೆ ಸ್ವಚ್ಛಗೊಳಿಸುತ್ತಿದ್ದರು. ದಿನೇ ದಿನೇ ವಾಷಿಂಗ್ ಮಷಿನ್‌ಗಳ ಸಂಖ್ಯೆ ಹೆಚ್ಚಾದ ಕಾರಣ ಮತ್ತು ತೀವ್ರ ಚಳಿ ಮತ್ತು ಮಂಜಿನಲ್ಲಿ ಬೇಗ ಬಟ್ಟೆ ಒಣಗದಿರುವುದನ್ನು ಗಮನಿಸಿ ಐರನ್ ಸೇವೆ ನೀಡುತ್ತಿದ್ದಾರೆ.

ಐರನ್ ಸೇವೆ ನೀಡಲು 20 ಜನರ ತಂಡ ಇಲ್ಲಿದೆ. 8 ಜನರ ಪಾಳಿಯಂತೆ ಇಡೀ ದಿನ ಬಟ್ಟೆಗಳ್ನು ಐರನ್ ಮಾಡಿ ಕೊಡಲಾಗುತ್ತದೆ. ವಾಷಿಂಗ್ ಮಷಿನ್ ಇಟ್ಟಿರುವ ಸ್ಥಳದ ಮುಂದೆಯೇ ಇವರು ತಮ್ಮ ಟ್ಯ್ರಾಲಿಯನ್ನು ಇಟ್ಟುಕೊಂಡಿದ್ದಾರೆ.

ಅಮನ್ ಸಿಂಗ್, ಜಸ್ಪಿಂದರ್ ಸಿಂಗ್, ಬಲದೇವ್ ಸಿಂಗ್, ಬಲ್ಜಿಂದರ್ ಸಿಂಗ್ ಮತ್ತು ಲಕ್ಕಿ ಸಿಂಗ್ ಸೇರಿದಂತೆ ೨೦ ಮಂದಿಯ ತಂಡ ಬೂಟಾ ಸಿಂಗ್ ಅವರ ನೇತೃತ್ವದಲ್ಲಿ ಐರನ್ ಸೇವೆ ನೀಡುತ್ತಿದೆ. ಬಿಸಿಲು ಮರೀಚಿಕೆಯಾಗಿದ್ದ ಸಮಯದಲ್ಲಿ ಈ ಸೇವೆ ಆರಂಭಿಸಲಾಗಿತ್ತು. ಈಗ ಪರಿಸ್ಥಿತಿ ಪರವಾಗಿಲ್ಲ. ಸ್ವಲ್ಪ ಬಿಸಿಲು ಇದೆ. ಚಳಿ ಮತ್ತು ಮಂಜಿನಲ್ಲಿ ಐರನ್ ಸೇವೆ ನಿಜಕ್ಕೂ ಅನಿವಾರ್ಯವಾಗಿತ್ತು ಎನ್ನುತ್ತಾರೆ ರೈತರು.

‘ನಮ್ಮನ್ನು ಖಾಲಿಸ್ತಾನಿಗಳು ಎಂದು ಕರೆಯುತ್ತಾರೆ. ನಮ್ಮ ಜಿಲ್ಲೆಯನ್ನು ಖಾಲಿಸ್ತಾನಿಗಳ ಜಿಲ್ಲೆ ಎನ್ನುತ್ತಾರೆ. ಹಾಗೆಂದು ನಾವು ನಮ್ಮವರು ತೊಂದರೆಯಲ್ಲಿದ್ದಾಗ ಅವರ ಸೇವೆ ಮಾಡದೇ ಇರಲು ಸಾಧ್ಯವೆ..? ನಮ್ಮ ಹಕ್ಕು ಕೇಳಿದರೆ ನಾವು ಖಾಲಿಸ್ತಾನಿಯರಾಗುತ್ತೇವೆ. ಅದೇ ನಾವು ದೇಶಕ್ಕಾಗಿ ಯುದ್ಧಗಳಲ್ಲಿ ಪ್ರಾಣ ಬಿಟ್ಟಾಗ ನಾವು ಖಾಲಿಸ್ತಾನಿಯರು ಎಂದು ಅನಿಸುವುದಿಲ್ಲವೆ..?’ ಎಂದು ಆಕ್ರೋಶ ಹೊರಹಾಕುತ್ತಾರೆ ರೈತ ಬೂಟಾ ಸಿಂಗ್.

ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಹೊರಾಟ ನಡೆಸುತ್ತಿರುವ ರೈತರು ವಿಭಿನ್ನ ಸೇವೆಗಳಿಂದ ವಿಶೇಷ ಸ್ಥಾನ ಪಡೆದುಕೊಂಡಿದ್ದಾರೆ. ತಮ್ಮ ಊರುಗಳಲ್ಲಿ ತಾವು ಮಾಡುವ ಕೆಲಸ ಬೇರೆ. ಆದರೆ ಇಲ್ಲಿ ಇವರು ಸೇವೆ ಮಾಡಲು ಯಾವುದು ಅವಶ್ಯಕವಾಗಿದೆಯೋ ಅದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸೇವೆಯಲ್ಲಿ ದೊಡ್ಡದು, ಚಿಕ್ಕದು ಎಂಬ ಭೇದವಿಲ್ಲದೆ ಇಲ್ಲಿ ಜನ ಕೆಲಸ ಮಾಡುತ್ತಾರೆ.


ಇದನ್ನೂ ಓದಿ: ಗೆಲ್ಲುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ: ಸಿಂಘು ಗಡಿಯಲ್ಲಿ ಗುರ್ತೇಜ್ ಸಿಂಗ್ ಗುಡುಗು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...