Homeಸಿನಿಮಾಕ್ರೀಡೆವಿಂಬಲ್ಡನ್ ಟೆನಿಸ್ ಟೂರ್ನಿ ಆರಂಭ; ಇಲ್ಲ ಭಾರತದ ಪ್ರಾತಿನಿಧ್ಯ!

ವಿಂಬಲ್ಡನ್ ಟೆನಿಸ್ ಟೂರ್ನಿ ಆರಂಭ; ಇಲ್ಲ ಭಾರತದ ಪ್ರಾತಿನಿಧ್ಯ!

- Advertisement -
- Advertisement -

ವಿಶ್ವ ಟೆನಿಸ್ ಅಭಿಮಾನಿಗಳು ಕಳೆದ ಎರಡು ವರ್ಷಗಳಿಂದ ಕಾತರದಿಂದ ಕಾಯುತ್ತಿದ್ದ ಪ್ರತಿಷ್ಠಿತ ಇಂಗ್ಲೆಂಡ್-ವಿಂಬಲ್ಡನ್ ಟೆನಿಸ್ ಟೂರ್ನಿ ಕೊನೆಗೂ ಸೋಮವಾರದಿಂದ ಭರ್ಜರಿಯಾಗಿ ಆರಂಭವಾಗಿದೆ. ಆಸ್ಟ್ರೇಲಿಯಾ ಓಪನ್, ಫ್ರೆಂಚ್ ಓಪನ್, ಯುಎಸ್ ಓಪನ್ ಸೇರಿದಂತೆ ಟೆನಿಸ್ ಜಗತ್ತಿನಲ್ಲಿ ನಾಲ್ಕು ಜನಪ್ರಿಯ ಗ್ರ್ಯಾಂಡ್ ಸ್ಲಾಂ ಟೂರ್ನಿಗಳು ಇದ್ದಾಗ್ಯೂ ವಿಂಬಲ್ಡನ್‌ಗೇ ಅತ್ಯಂತ ಹೆಚ್ಚು ಪ್ರಾಶಸ್ತ್ಯ ಎಂದರೆ ತಪ್ಪಾಗಲಾರದು. 2019ರಲ್ಲಿ ನಡೆದ ಕೊನೆಯ ವಿಂಬಲ್ಡನ್ ಟೂರ್ನಿಯಲ್ಲಿ ಸರ್ಬಿಯಾದ ನಂಬರ್.1 ಆಟಗಾರ ನೊವಾಕ್ ಜಾಕೋವಿಚ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರೆ, ಮಹಿಳಾ ವಿಭಾಗದಲ್ಲಿ ಸೈಮನ್ ಹೆಲಿಪ್ ಮೊದಲ ಬಾರಿಗೆ ವಿಂಬಲ್ಡನ್ ಪ್ರಶಸ್ತಿಗೆ ಮುತ್ತಿಟ್ಟಿದ್ದರು.

ಆದರೆ, ಕಳೆದ ವರ್ಷ 2020ರಲ್ಲಿ ಮಾರಕ ಕೊರೊನಾ ವೈರಸ್ ಇಡೀ ವಿಶ್ವವನ್ನು ತಲ್ಲಣಕ್ಕೆ ದೂಡಿತ್ತು. ಪರಿಣಾಮ ಎಲ್ಲಾ ಕ್ರೀಡಾ ಕ್ಷೇತ್ರಗಳೂ ನಿಂತ ನೀರಾಗಿದ್ದವು. ಟೆನಿಸ್ ಜಗತ್ತಿನಲ್ಲೂ ಸಹ ಎಲ್ಲಾ ಪ್ರಮುಖ ಟೂರ್ನಿಗಳನ್ನು ಮುಂದೂಡಲಾಗಿತ್ತು. ಇದಕ್ಕೂ ಮುನ್ನ ಈ ರೀತಿ ಆಗಿದ್ದು ಯುದ್ಧದ ಸಮಯದಲ್ಲಿ! 1915-18ರ ಅವಧಿಯಲ್ಲಿ ನಾಲ್ಕು ವರ್ಷ ಮೊದಲ ಮಹಾಯುದ್ಧದ ಕಾರಣಕ್ಕೆ ಈ ಟೂರ್ನಿಯನ್ನು ನಡೆಸಿರಲಿಲ್ಲ. ಅದರ ನಂತರ 2020ರಲ್ಲಿಯೇ ಕೊರೊನಾದಿಂದ ವಿಂಬಲ್ಡನ್‌ಗೆ ಬ್ರೇಕ್ ಬಿದ್ದದ್ದು. ಆದರೆ, ಈಗ ಆತಂಕಗಳು ನಿವಾರಣೆಯಾಗುತ್ತಿದ್ದು, ಟೂರ್ನಿ ಆರಂಭವಾಗಿದೆ.

ವಿಂಬಲ್ಡನ್ ಆರಂಭ ಮತ್ತು ಇತಿಹಾಸ

ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಮತ್ತು ಕ್ರೋಕೆ ಕ್ಲಬ್ ಎರಡೂ ಜಂಟಿಯಾಗಿ 23 ಜುಲೈ 1868ರಂದು ಖಾಸಗಿ ಕ್ಲಬ್ ಒಂದನ್ನು ಸ್ಥಾಪಿಸಿದವು. ಇದನ್ನು ’ದಿ ಆಲ್ ಇಂಗ್ಲೆಂಡ್ ಕ್ರೋಕೆ ಕ್ಲಬ್’ ಎಂದು ಕರೆಯಲಾಯಿತು. ಈ ಕ್ಲಬ್‌ನ ಟೆನಿಸ್ ಮೈದಾನ ವಿಂಬಲ್ಡನ್‌ನ ವರ್ಪಲ್ ರಸ್ತೆಯ ನರ್ಸರಿ ರಸ್ತೆಯಲ್ಲಿತ್ತು.

PC : Wikipedia, (ಸ್ಪೆನ್ಸರ್ ಗೋರ್)

1876ರಲ್ಲಿ ಮೇಜರ್ ವಾಲ್ಟರ್ ಕ್ಲೋಪ್ಟನ್ ವಿಂಗ್ಫೀಲ್ಡ್ ಮೊದಲ ಬಾರಿಗೆ ಹೊರಾಂಗಣ ಟೆನಿಸ್ ಅಂಕಣವನ್ನು ನಿರ್ಮಿಸಿದರು. 1877ರ ಜುಲೈ ತಿಂಗಳಲ್ಲಿ ಈ ಕ್ಲಬ್‌ಗೆ ’ದಿ ಆಲ್ ಇಂಗ್ಲೆಂಡ್ ಕ್ರೋಕೆ ಅಂಡ್ ಲಾನ್ ಟೆನಿಸ್ ಕ್ಲಬ್’ ಎಂದು ಮರುನಾಮಕರಣ ಮಾಡಲಾಯಿತು ಮತ್ತು ಸಾಂಪ್ರದಾಯಿಕ ಟೆನಿಸ್‌ನ ಮೊದಲ ಅಂತಾರಾಷ್ಟ್ರೀಯ ಗ್ರ್ಯಾನ್‌ಸ್ಲ್ಯಾಮ್ ಟೂರ್ನಿಗೆ ಚಾಲನೆ ನೀಡಲಾಯಿತು.

1877ರ ಉದ್ಘಾಟನಾ ವಿಂಬಲ್ಡನ್ ಚಾಂಪಿಯನ್‌ಶಿಪ್ 9 ಜುಲೈ, 1877ರಂದು ಪ್ರಾರಂಭವಾಯಿತು. ಮೊದಲ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಮಾತ್ರ ಆಯೋ ಜಿಸಲಾಗಿತ್ತು. ಆ ವರ್ಷದಲ್ಲಿ 22 ಜನ ಭಾಗವಹಿಸಿದ್ದರು. ತದನಂತರದ ಕಾಲಘಟ್ಟಗಳಲ್ಲಿ ಮಹಿಳಾ ಸಿಂಗಲ್ಸ್, ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಟೂರ್ನಿಗಳನ್ನೂ ಸಹ ಆರಂಭಿ ಸಲಾಯಿತು. ಅಂದಿನಿಂದ ಇಂದಿನವರೆಗೆ ವಿಂಬಲ್ಡನ್ ಟೂರ್ನಿ ಪ್ರತಿ ವರ್ಷ ಜೂನ್ ಕೊನೆಯ ಅಥವಾ ಜುಲೈ ಮೊದಲ ವಾರದಲ್ಲಿ ಪ್ರಾರಂಭಿಸುವುದು ವಾಡಿಕೆ.

ಮೊದಲ ವಿಂಬಲ್ಡನ್ ಟೂರ್ನಿಯಲ್ಲಿ ಇಂಗ್ಲೆಂಡ್‌ನ ಸ್ಪೆನ್ಸರ್ ಗೋರ್ ಎಂಬವರು ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಆದರೆ, ಈತ ಕ್ರಿಕೆಟ್ ಆಟಗಾರನೂ ಆಗಿದ್ದು, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸರ್ರೆ ತಂಡವನ್ನೂ ಪ್ರತಿನಿಧಿಸಿದ್ದರು ಎಂಬುದು ಉಲ್ಲೇಖಾರ್ಹ. ಆನಂತರ ಹಲವು ಆಟಗಾರರು ಟಿನಿಸ್ ಲೋಕವನ್ನು ಆಳಿದ್ದಾರೆ. ಆದರೆ, ಸ್ಪೆಫಿ ಗ್ರಾಫ್ ಅವರನ್ನು ಟೆನಿಸ್ ದಂತಕಥೆ ಎಂದು ಬಣ್ಣಿಸಲಾಗುತ್ತಿದೆ. 8 ಬಾರಿ ವಿಂಬಲ್ಡನ್ ಟೆನಿಸ್ ಪ್ರಶಸ್ತಿಯನ್ನು ಜಯಿಸುವ ಮೂಲಕ ಸ್ವಿಜಲೆಂಡ್‌ನ ರೋಜರ್ ಫೆಡರರ್ ಅತಿಹೆಚ್ಚು ಬಾರಿ ಈ ಪ್ರಶಸ್ತಿಯನ್ನು ಗೆದ್ದ ಆಟಗಾರ ಎಂಬ ಶ್ರೇಯಕ್ಕೆ ಪಾತ್ರವಾಗಿದ್ದಾರೆ.

ವಿಶೇಷವೆಂದರೆ ಈ ವರ್ಷವೂ ಟೆನಿಸ್ ದಂತಕಥೆ ರೋಜರ್ ಫೆಡರರ್ ಕಣದಲ್ಲಿದ್ದು, ಸರ್ಬಿಯಾದ ರನ್ನಿಂಗ್ ಚಾಂಪಿಯನ್ ನೊವಾಕ್ ಜಾಕೋವಿಚ್ ಮತ್ತು ರಫೇಲ್ ನಡಾಲ್ ಕಠಿಣ ಪೈಪೋಟಿ ನೀಡಲಿದ್ದಾರೆ ಎಂದು ಟೆನಿಸ್ ಅಭಿಮಾನಿಗಳು ಕಾತುರದಿಂದ ಎದುರುನೊಡುತ್ತಿದ್ದಾರೆ.

ಮಹಿಳಾ ಸಿಂಗಲ್ಸ್‌ನಲ್ಲಿ ದಂತೆಕಥೆಯಾಗಿರುವ ಸಹೋದರಿಯರು ಸೆರೆನಾ ವಿಲಿಯಮ್ಸ್-ವೀನಸ್ ವಿಲಿಯಮ್ಸ್, ಸೈಮನ್ ಹೆಲಿಪ್, ನದಿಯಾ ಪೊಡರೊಸ್ಕಾ, ಅಂಜೆಲಿಕಾ ಕೆರ್ಬರ್, ಎಲೀಸ್ ಮಾರ್ಟೆನ್ಸ್ ಸೇರಿದಂತೆ ಅನೇಕ ಪ್ರಮುಖ ಆಟಗಾರ್ತಿಯರಿದ್ದಾರೆ. ಪ್ರಶಸ್ತಿ ಯಾರ ಮುಡಿಗೇರಲಿದೆ ಎಂಬುದನ್ನು ಕಾದುನೋಡಬೇಕಿದೆ.

ಮಹಾಯುದ್ಧದ ಕಾಲದಲ್ಲಿ ಈ ಅಂಗಳದಲ್ಲೂ ಬಿದ್ದಿತ್ತು ಬಾಂಬ್

ಮೊದಲ ಮಹಾಯುದ್ಧದ ಕಾಲದಲ್ಲಿ 1915 ರಿಂದ 1918ರ ವರೆಗೆ ಮೊದಲ ಬಾರಿಗೆ ವಿಂಬಲ್ಡನ್ ಟೂರ್ನಿಯನ್ನು ಆಯೋಜಿಸಲಾಗಿರಲಿಲ್ಲ. 1916ರಲ್ಲಿ ಇಲ್ಲಿನ ಟೆನಿಸ್ ಅಂಗಳದ ಮೇಲೆ ಯುದ್ಧ ವಿಮಾನಗಳು ಬಾಂಬ್ ದಾಳಿ ನಡೆಸಿದ್ದವು. ಪರಿಣಾಮ ನಂತರದ ದಿನಗಳಲ್ಲಿ ಸೆಂಟರ್ ಕೋರ್ಟ್ ಅನ್ನು ಮರುನಿರ್ಮಾಣ ಮಾಡಲಾಯಿತು.

ರೋಜರ್ ಫೆಡರರ್ ಹೆಸರಲ್ಲಿದೆ ವಿಶಿಷ್ಟ ದಾಖಲೆ

PC : Fox Sports, (ರೋಜರ್ ಫೆಡರರ್)

ವಿಂಬಲ್ಡನ್ ಗೆಲುವು ಪ್ರತಿಯೊಬ್ಬ ಟೆನಿಸ್ ಆಟಗಾರನಿಗೆ ಒಂದು ಮಹತ್ವದ ಮೈಲಿಗಲ್ಲು. ಆಟಗಾರರು ಒಮ್ಮೆ ವಿಂಬಲ್ಡನ್ ಗೆದ್ದರೆ ಅದು ಅವರ ಜೀವನ ಶೇಷ್ಠ ಸಾಧನೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಸ್ವಿಜರ್ಲೆಂಡ್ ಮೂಲದ ರೋಜರ್ ಫೆಡರರ್ ಒಟ್ಟು 8 ಸಲ ವಿಂಬಲ್ಡನ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಅದರಲ್ಲೂ 2003ರಿಂದ 2007ರ ವರೆಗೆ ಸತತ 5 ಬಾರಿ ಈ ಟ್ರೋಫಿಯನ್ನು ಗೆಲ್ಲುವ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿದ್ದರು. ಈ ಹಿಂದೆ ವಿಲಿಯಂ ರೆನ್ಶಾ ಎಂಬವರು 1981ರಿಂದ 1989ರ ಅವಧಿಯಲ್ಲಿ 7 ಬಾರಿ ಈ ಟ್ರೋಫಿಯನ್ನು ಗೆದ್ದದ್ದು ದಾಖಲೆಯಾಗಿ ಉಳಿದಿತ್ತು.

ವಿಂಬಲ್ಡನ್‌ನಲ್ಲಿ ಭಾರತದ ಸಾಧನೆ

ಕ್ರಿಕೆಟ್‌ಗೆ ಟೆನಿಸ್‌ಗಿಂತಲೂ ಅಥವಾ ಬೇರೆ ಯಾವುದೇ ಆಟಕ್ಕಿಂತಲೂ ಹೆಚ್ಚು ಪ್ರಾಶಸ್ತ್ಯ ನೀಡುವ ಭಾರತದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಟೆನಿಸ್ ದಾಖಲೆಗಳು ಸಾಕಷ್ಟು ಕಡಿಮೆ. ಆದರಲ್ಲೂ ವಿಂಬಲ್ಡನ್‌ನಂತಹ ಗ್ರ್ಯಾಂಡ್‌ಸ್ಲ್ಯಾಮ್ ಟೂರ್ನಿಗಳಲ್ಲಿ ಭಾರತದ ಸಾಧನೆ ಹೇಳಿಕೊಳ್ಳುವ ಮಟ್ಟದ್ದಲ್ಲ. ಆದರೂ, 1960 ಮತ್ತು 1961ರಲ್ಲಿ ಸತತ ಎರಡು ಬಾರಿ ಭಾರತದ ಟೆನಿಸ್ ಆಟಗಾರ ರಾಮನಾಥನ್ ಕೃಷ್ಣನ್ ಎಂಬವರು ಸೆಮಿಫೈನಲ್‌ಗೆ ತಲುಪಿ ಸಾಧನೆ ಮಾಡಿದ್ದರು. ಆದರೆ, ಟ್ರೋಫಿಗೆ ಮುತ್ತಿಡುವುದು ಸಾಧ್ಯವಾಗಿರಲಿಲ್ಲ.

PC : The Bridge, (ಮಹೇಶ್ ಭೂಪತಿ ಮತ್ತು ಲಿಯಾಂಡರ್ ಪೇಸ್)

1999ರಲ್ಲಿ ಭಾರತದ ಖ್ಯಾತ ಟೆನಿಸ್ ಜೋಡಿ ಮಹೇಶ್ ಭೂಪತಿ ಮತ್ತು ಲಿಯಾಂಡರ್ ಪೇಸ್ ಮೊದಲ ಬಾರಿಗೆ ಪುರುಷರ ಡಬಲ್ಸ್‌ನಲ್ಲಿ ವಿಂಬಲ್ಡನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಈ ಜೋಡಿ ಅದೇ ವರ್ಷ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲ್ಯಾಮ್ ಟೂರ್ನಿಯಲ್ಲೂ ಜಯ ಗಳಿಸುವ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಿತ್ತು. ಆ ನಂತರ ಈ ಜೋಡಿ 2017ರವರೆಗೆ 18 ಬಾರಿ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದದ್ದು ಇಂದು ಇತಿಹಾಸ.

ಇನ್ನು ಮಹಿಳಾ ಟೆನಿಸ್‌ನಲ್ಲಿ ತನ್ನದೇ ಛಾಪು ಮೂಡಿಸಿದ್ದ ಸಾನಿಯಾ ಮಿರ್ಜಾ ಸಹ 2015ರಲ್ಲಿ ಸ್ವಿಜರ್ಲೆಂಡ್‌ನ ಮಾರ್ಟಿನಾ ಹಿಂಗಿಸ್ ಜೊತೆಗೂಡಿ ರಷ್ಯಾದ ಎಲೆನಾ ವೆಸ್ನೇನಾ ಮತ್ತು ಎಕಟೆರೀನಾ ಮಕರೋವಾ ಜೋಡಿಯನ್ನು ಸೋಲಿಸುವ ಮೂಲಕ ಮಹಿಳಾ ಡಬಲ್ಸ್‌ನಲ್ಲಿ ಚೊಚ್ಚಲ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದರು. ಆದರೆ, ಆ ನಂತರದ ದಿನಗಳಿಂದ ಈವರೆಗೆ ಭಾರತ ಮಹಿಳಾ ಟೆನಿಸ್ ಕ್ರೀಡೆಯಲ್ಲಿ ಮತ್ತೊಂದು ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಯ ಬರ ಎದುರಿಸುತ್ತಿದೆ.

ಈ ವರ್ಷ ವಿಂಬಲ್ಡನ್ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ರಾಮ್‌ಕುಮಾರ್ ರಾಮನಾಥನ್ ಭಾರತದ ಪರ ಕಣಕ್ಕಿಳಿದಿದ್ದರು. ಆದರೆ ಅರ್ಹತಾ ಸುತ್ತಿನಲ್ಲೇ ಅವರು ಆಸ್ಟ್ರೇಲಿಯಾದ ಮಾರ್ಕ್ ಪೋಮನ್ಸ್ ವಿರುದ್ಧ ಸೋಲುವ ಮೂಲಕ ವಿಂಬಲ್ಡನ್‌ನಲ್ಲಿ ಭಾರತದ ಪ್ರಾತಿನಿಧ್ಯವೇ ಇಲ್ಲದಂತಾಗಿದೆ!


ಇದನ್ನೂ ಓದಿ: ಮುಂದುವರೆದ ಒಕ್ಕೂಟ ಸರ್ಕಾರ-ಟ್ವಿಟರ್‌‌‌ ಸಂಘರ್ಷ: ಮಧ್ಯಪ್ರದೇಶದಲ್ಲೂ ಕೇಸ್‍!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...