Homeಮುಖಪುಟಪತ್ರಿಕಾ ದಿನಾಚರಣೆ: ಕಾವಲುನಾಯಿ ಮಲಗಿದೆ... ಏಳುವುದೆಂತೋ?

ಪತ್ರಿಕಾ ದಿನಾಚರಣೆ: ಕಾವಲುನಾಯಿ ಮಲಗಿದೆ… ಏಳುವುದೆಂತೋ?

- Advertisement -
- Advertisement -

ಭಾರತ ಮುಕ್ತ ಮಾರುಕಟ್ಟೆಗೆ ತೆರೆದುಕೊಂಡ ಬಳಿಕ ಪತ್ರಿಕೋದ್ಯಮ ಭಿನ್ನದಾರಿ ಹಿಡಿದಿದೆ. ಪತ್ರಿಕೋದ್ಯಮದ ಆಶಯಗಳು ಮತ್ತು ಮೌಲ್ಯಗಳು ಮಾರುಕಟ್ಟೆಯ ದಾಳಿಗೆ ಸಿಕ್ಕಿ ನಾಶವಾಗಿವೆ ಮತ್ತು ಹಳ್ಳ ಹಿಡಿದಿವೆ. ಆರಂಭದಲ್ಲಿ ನಿಗದಿಪಡಿಸಿಕೊಂಡಿದ್ದ ಪ್ರಮಾಣಗಳೆಲ್ಲವೂ ಉಲ್ಟಾ ಆಗಿವೆ.. ಸುದ್ದಿಯ ಜಾಗದಲ್ಲಿ ಜಾಹಿರಾತು ಕೂತಿದೆ. ಜಾಹಿರಾತುಗಳಿಗೆ ಮೀಸಲಿಟ್ಟಿದ್ದ ಜಾಗದಲ್ಲಿ ಸುದ್ದಿಗಳು ಪ್ರಕಟವಾಗುತ್ತಿವೆ. ಸುದ್ದಿ ಮೌಲ್ಯ, ಸುದ್ದಿಯ ಖಚಿತತೆ, ಸ್ಪಷ್ಟವಾದ ಸುದ್ದಿ ಜನರಿಗೆ ತಲುಪಿಸಬೇಕೆಂಬ ಸ್ವಾತಂತ್ರ್ಯಾ ನಂತರದ ಆಶಯಗಳು ಮಣ್ಣುಗೂಡಿವೆ.

ಪತ್ರಿಕಾ-ಧರ್ಮ ಮರೆಯಾಗಿ ಹಲವು ವರ್ಷಗಳೇ ಉರುಳಿಹೋಗಿವೆ. ವೃತ್ತಿ ಅಥವಾ ಪತ್ರಿಕಾಧರ್ಮದ ಜಾಗದಲ್ಲಿ ಕೇವಲ ಧರ್ಮವೊಂದು ಬಲವಾಗಿ ಬೇರೂರಿದೆ. ಪರಿಣಾಮ ಸಮಾಜದಲ್ಲಿ ಜನರ ನಡುವೆ ಗಲಭೆಗಳು, ಸಂಘರ್ಷಗಳು, ಹಿಂಸಾವೃತ್ತಿಗಳು ಹೆಚ್ಚಲು ತಲೆದೋತ್ತಿವೆ. ಕಳೆದ ಎರಡು ದಶಕದ ಅವಧಿಯಲ್ಲಿ ಭಾರತ ಅಭಿವೃದ್ಧಿ ದಿಕ್ಕು ಬದಲಾದಂತೆ ಜನಸಾಮಾನ್ಯರ ಸಮಸ್ಯೆಗಳು ಹೆಚ್ಚತೊಡಗಿವೆ. ಈ ಸಮಸ್ಯೆಗಳಿಗೆ ಪರಿಹಾರ ಪೂರಕವಾಗಿ ಬೆಳಕು ಚೆಲ್ಲುವಂತಹ ಕೆಲಸ ಮಾಡಬೇಕಾದ ಪತ್ರಿಕೆಗಳು ತಮ್ಮ ಜವಾಬ್ದಾರಿಯಿಂದ ನುಣಿಚಿಕೊಂಡಿವೆ.

ಪತ್ರಿಕೆಗಳ ಮಾಲಿಕತ್ವ ಬಂಡವಾಳಿಗರ ಕೈಗೆ ಸೇರಿ ಪತ್ರಿಕೆಗಳಲ್ಲಿ ಬರುವ ಸುದ್ದಿಗಳ ಸ್ವರೂಪವೂ ಬದಲಾಗಿದೆ. ಶ್ರೀಮಂತರ ಹುಚ್ಚುಗಳಿಗೆ ಹೆಚ್ಚಿನ ಪ್ರಾಧಾನ್ಯತೆ ದೊರೆಯುತ್ತಿದೆ. ಫ್ಯಾಷನ್, ಕ್ರೈಂ, ಧಾರ್ಮಿಕ ಭಾವನೆಯನ್ನು ಕೆರಳಿಸುವಂತಹ ಸುದ್ದಿಗಳಿಗೆ ಮಹತ್ವ ಬಂದಿದೆ. ಬಂಡವಾಳಿಗರು ತಮಗೆ ಬೇಕಾದಂತೆ ಪತ್ರಿಕೆಗಳನ್ನು ಬಳಸಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಯಾವುದೇ ಸರ್ಕಾರಗಳನ್ನೂ ನಿಯಂತ್ರಿಸುವ ಶಕ್ತಿಯನ್ನು ಬಂಡವಾಳಿಗ ಪತ್ರಿಕೆಗಳು ಹೊಂದಿವೆ.

ಪತ್ರಿಕೆಗಳು ಜನರ ನೋವು, ಸಂಕಟಗಳಿಗೆ ವೇದಿಕೆಯಾಗಬೇಕಿತ್ತು. ರೈತರು ಸಮಸ್ಯೆಗಳಿಗೆ ದನಿಯಂತೆ ಕೆಲಸ ಮಾಡಬೇಕಿತ್ತು. ಕಾರ್ಮಿಕರ ವೇದನೆಗಳನ್ನು ಹೊರಚೆಲ್ಲಬೇಕಿತ್ತು. ಮಹಿಳೆಯರು, ದಲಿತರು ಮತ್ತು ಬಡವರ ಬಗೆಗಿನ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆದು ಪರಿಹಾರ ಒದಗಿಸುವಂತಹ ಮಹತ್ವದ ಕೆಲಸವನ್ನು ಮಾಡಬೇಕಿತ್ತು. ಈ ವಿಷಯಗಳು ತೆರೆ ಮೆರೆಗೆ ಸರಿದಿವೆ. ಮುಕ್ತ ಮಾರುಕಟ್ಟೆಗೆ ಪೂರಕವಾಗಿ ಪತ್ರಿಕೆಗಳು ಕೆಲಸ ಮಾಡುತ್ತಿವೆ. ಧರ್ಮ-ಧರ್ಮಗಳ ನಡುವಿನ ಭಾವನೆಗಳನ್ನು ಕೆರಳಿಸುವಂತಹ ಸುದ್ದಿಗಳಿಗೆ ಪೂರಕ ಸನ್ನಿವೇಶವನ್ನು ಒದಗಿಸಿಕೊಡುತ್ತಿವೆ.

ಮುಕ್ತಮಾರುಕಟ್ಟೆ ಪ್ರವೇಶಕ್ಕೂ ಮೊದಲು ಬಹುತೇಕ ಪತ್ರಿಕೆಗಳು ಉತ್ತಮ ಕೆಲಸ ಮಾಡುತ್ತಿದ್ದವು. ಸರ್ಕಾರಗಳ ಹಗರಣಗಳನ್ನು ಬಯಲು ಮಾಡಿದ್ದವು. ಭ್ರಷ್ಟರ ಕುತಂತ್ರವನ್ನು ಬಹಿರಂಗಪಡಿಸಿದ್ದವು. ಹಲವು ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಬೆವರು ಇಳಿಯುವಂತೆ ಮಾಡಿದ್ದವು. ಹಲವ ಸಚಿವರ ರಾಜಿನಾಮೆಗೆ ಕಾರಣವಾಗಿದ್ದವು. ಸರ್ಕಾರದ ಕಿವಿಯನ್ನು ಹಿಂಡುತ್ತಿದ್ದವು. ಲೋಪಗಳನ್ನು ಎತ್ತಿಹಿಡಿಯುತ್ತಿದ್ದವು. ಆ ಲೋಪಗಳು ಸರಿಪಡಿಸಿ ಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದವು. ಈಗ ಇದ್ಯಾವುದೂ ಇಲ್ಲ.

ದೆಹಲಿಯ ಗಡಿಗಳಲ್ಲಿ ಸಾವಿರಾರು ರೈತರು ಏಳು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಲೇ ಬರುತ್ತಿದ್ದಾರೆ. ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಭಾರತ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಅವರ ನೋವನ್ನು ಸಮರ್ಥವಾಗಿ ಪರಿಣಾಮಕಾರಿಯಾಗಿ ಭಾರತ ಸರ್ಕಾರದ ಗಮನಕ್ಕೆ ತರಬೇಕಿತ್ತು. ಪತ್ರಿಕೆಗಳು ಈ ಕೆಲಸವನ್ನು ಮಾಡುವಲ್ಲಿ ಸಂಪೂರ್ಣ ವಿಫಲವಾದವು. ರೈತರ ಕೂಗು ಒಕ್ಕೂಟ ಸರ್ಕಾರದ ಗಿರಿಗೆ ಕೇಳಲೇ ಇಲ್ಲ. ಸರ್ಕಾರದ ಕಿವಿಗೆ ಮುಟ್ಟಿಸಬೇಕಿದ್ದ ಜವಾಬ್ದಾರಿ ಹೊರಬೇಕಿದ್ದ ಪತ್ರಿಕೆಗಳು ಜಾಣ ಮರೆಗುಳಿತನಕ್ಕೆ ಜಾರಿದವು. ಹಾಗಾಗಿ ರೈತರು ಕೂಗು ದೊರೆಯ ಕಿವಿಗೆ ಕೇಳಿಸಲೇ ಇಲ್ಲ. ಯಾಕೆಂದರೆ ಪತ್ರಿಕೆಗಳ ‘ಅವರ’ ಪರವಾಗಿದ್ದವು.

ಪತ್ರಿಕೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರು ಕಾವಲುನಾಯಿಯಂತೆ ಕೆಲಸ ಮಾಡಬೇಕೆಂಬ ಪಾಠ ಈಗಲೂ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಹೇಳಿಕೊಡುವ ಪರಿಪಾಠ ಮುಂದುವರಿದಿದೆ. ಆದರೆ ಕಾವಲುನಾಯಿಗಳು ಕಳೆದೊಂದು ದಶಕದಿಂದ ಮಲಗಿವೆ. ಮಾಲಿಕರು ಮತ್ತು ಬಂಡವಾಳಿಗರು, ಮುಕ್ತಮಾರುಕಟ್ಟೆಯ ಪ್ರತಿನಿಧಿಗಳು ಗಡತ್ತಾಗಿ ಹಾಕುವ ಊಟ ತಿಂದು ಅವು ಮೇಲೆ ಏಳುತ್ತಲೇ ಇಲ್ಲ. ಮಾಲಿಕರು ಬಂದರೆ ಬಾಲ ಅಲ್ಲಾಡಿಸುತ್ತಿವೆ. ಮನೆಗೆ ಕಳ್ಳ ಬಂದರೂ ಬೊಗಳುತ್ತಿಲ್ಲ. ಪತ್ರಕರ್ತರು ಒಂದು ರೀತಿಯಲ್ಲಿ ಮಹಿಳೆಯರ ಪೆಟ್ ಡಾಗ್ ಗಳಂತಿದ್ದಾರೆ. ಕುಯ್ಂಗುಟ್ಟಿಕೊಂಡು ಹೋಗುವುದು, ಬೆಳಗು ಮತ್ತು ಸಂಜೆಯ ವಾಕಿಂಗ್ ಮಾಡುವುದು ಅಷ್ಟೇ ಪೆಟ್ ಡಾಗ್ ಗಳ ಕೆಲಸ. ಅದನ್ನು ಮಾಲಿಕ ಪ್ರಭುಗಳು ವ್ಯವಸ್ಥಿತವಾಗಿ ಮಾಡಿಕೊಂಡು ಬರುತ್ತಿದ್ದಾರೆ.

ಪತ್ರಕರ್ತ ಸ್ವತಂತ್ರವಾಗಿ ಆಲೋಚಿಸುತ್ತಿಲ್ಲ. ಅಂತಹ ಆಲೋಚನೆಗೆ ಅವಕಾಶವೂ ಇಲ್ಲ. ಶಕ್ತಿಕೇಂದ್ರಗಳಲ್ಲಿ ತರಬೇತಿ ಪಡೆದು ಬರುವ ಪತ್ರಕರ್ತರು ಶಕ್ತಿಕೇಂದ್ರಗಳಲ್ಲಿ ಬೋದಿಸಿದ ರೀತಿಯಲ್ಲೇ ವೃತ್ತಿ ಮಾಡುತ್ತಾರೆ. ಇಲ್ಲ ಪತ್ರಿಕಾಧರ್ಮ, ವೃತ್ತಿಧರ್ಮ ಯಾವುದಕ್ಕೂ ಮಾನ್ಯತೆ ಇಲ್ಲ. ಧರ್ಮದ ಪರ, ಸರ್ಕಾರಗಳ ಪರ, ಬಲಿಷ್ಠ ಜಾತಿಗಳ ಪರ ಹೇಗೆ ವಕ್ತಾರಿಕೆ ಮಾಡಬೇಕೆಂಬ ಕಸುಬನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಜಾಗಟೆ ಬಡಿಯಬೇಕು, ಶಂಖ ಊದಬೇಕು. ತಟ್ಟೆ ಬಡಿಯಬೇಕು ಎಂಬ ಸುದ್ದಿಗಳಿಗೆ ಇನ್ನಿಲ್ಲದ ಪ್ರಚಾರ ಸಿಗುತ್ತದೆ. ಇದು ಶಕ್ತಿಕೇಂದ್ರಗಳ ತರಬೇತಿಯ ಪರಿ.

ಕೊರೊನ ಕಾಲದಲ್ಲಿ ಪತ್ರಿಕೆಗಳ ನಡೆದುಕೊಂಡ/ನಡೆದುಕೊಳ್ಳುತ್ತಿರುವ ರೀತಿ ಜನರಿಗೆ ಬೇಸರ ತರಿಸುವಂತೆ ಮಾಡಿದೆ. ದೇಶೀಯ ಸರ್ಕಾರಗಳು ಕೊರೊನಾ ನಿಭಾಯಿಸುವಲ್ಲಿ ವಿಫಲವಾಗಿರುವ ಕುರಿತು ಸುದ್ದಿಗಳೇ ಬರುವುದಿಲ್ಲ. ಬಂದರೂ ತೇಪೆ ಹಾಕಿದಂತೆ ಇರುತ್ತವೆ. ದೇಶೀಯ ತಯಾರಕ ಸಂಸ್ಥೆ ಭಾರತ್ ಬಯೋಟೆಕ್ ನ  ಕೊವಾಕ್ಸಿನ್ ಮತ್ತು ಸೆರೆಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಕೊವಿಶೀಲ್ಡ್ ಲಸಿಕೆಗಳು ಜನರಿಗೆ ಸುಲಭವಾಗಿ ದೊರೆಯುವಂತೆ ಮಾಡಲು ಏನು ಮಾಡಬೇಕೆಂಬ ಬಗ್ಗೆ ವರದಿಗಳನ್ನು ಬಿತ್ತರಿಸಲೇ ಇಲ್ಲ. ಡೋಸ್ ಗಳ ತಯಾರಿಕೆ ಸಾಮರ್ಥ್ಯ, ಲಸಿಕೆ ದೊರಕುವಂತಾಗಲು ಮಾಡಬೇಕಾದ ವೈಜ್ಞಾನಿಕ ಕ್ರಮದ ಬಗ್ಗೆ ಸರ್ಕಾರ ಗಮನ ಹರಿಸಲಿಲ್ಲ. ಉದಾಹರಣೆಗೆ ದೇಶದಲ್ಲಿ 45 ವರ್ಷ ಮೇಲ್ಪಟ್ಟವರು ಎಷ್ಟು ಜನರಿದ್ದಾರೆ? 18 ವರ್ಷದಿಂದ 45 ವರ್ಷದ ಒಳಗಿನ ಜನರು ಎಷ್ಟು ಮಂದಿ ಇದ್ದಾರೆ? ಎಂಟು ವರ್ಷ ಮೇಲ್ಪಟ್ಟು 18 ವರ್ಷದೊಳಗಿನವರು ಎಷ್ಟು ಮಂದಿ ಇದ್ದಾರೆ ಎಂಬ ಬಗ್ಗೆ ಯಾವ ಸರ್ಕಾರಗಳ ಬಳಿಯೂ ಮಾಹಿತಿ ಇರಲಿಲ್ಲವೇ? ಆದರೂ ಏಕೆ ಸಮರ್ಪಕವಾಗಿ ಹೇಳಲಿಲ್ಲ?

ಈಗಲೂ ಈ ಮಾಹಿತಿ ಸರ್ಕಾರದ ಬಳಿ ಇಲ್ಲ. ಸರ್ಕಾರದ ಬಳಿ ಈ ಅಂಕಿಅಂಶಗಳು ಇದ್ದರೆ ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕಿತ್ತು. ಆ ಕೆಲಸವೂ ಆಗಿಲಿಲ್ಲ. ಬರೀ ಗೊಂದಲಗಳಲ್ಲೇ ಜನರು ಮುಳುಗುವಂತೆ ನೋಡಿಕೊಳ್ಳಲಾಯಿತು. ಸರ್ಕಾರಗಳು ಸೃಷ್ಟಿಸುತ್ತಿರುವ ಗೊಂದಲಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಜವಾಬ್ದಾರಿಯನ್ನು ಪತ್ರಿಕೆಗಳು ಮಾಡಲಿಲ್ಲವೆಂಬುದು ನೋವಿನ ಸಂಗತಿ. ಲಸಿಕೆ ಪಡೆಯುವ ಜನರಿಗೆ ಕ್ರಮಸಂಖ್ಯೆಗಳನ್ನು ನೀಡಿ, ಲಸಿಕಾ ಕೇಂದ್ರಗಳನ್ನು ತೆರೆದು ಯಾವ್ಯಾವ ಲಸಿಕಾ ಕೇಂದ್ರಗಳಿಗೆ ಎಷ್ಟೆಷ್ಟು ಮಂದಿ ಬರಬೇಕು. ಅಲ್ಲಿ ಅವರಿಗೆ ಲಸಿಕೆ ವ್ಯವಸ್ಥಿತವಾಗಿ ಹೇಗೆ ದೊರೆಯುವಂತೆ ಮಾಡಬೇಕೆಂಬ ಬಗ್ಗೆ ಕ್ರಮಗಳನ್ನು ಅನುಸರಿಸಬೇಕಿತ್ತು. ಆದರೆ ಪ್ರಭಾವಿ ರಾಜಕಾರಣಿಗಳು, ಶಾಶಸಕರು, ಸಚಿವರು ತಮ್ಮ ಬೆಂಬಲಿಗರು ಮತ್ತು ಕಾರ್ಯಕರ್ತರಿಗೆ ಮಾತ್ರ ಲಸಿಕೆಗಳು ಸಿಗುವಂತೆ ನೋಡಿಕೊಳ್ಳಲಾಯಿತು. ಇದನ್ನು ಜನರು ಈಗಲೂ ಮಾತನಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಜನರ ನಾಡಿಮಿಡಿತವನ್ನು ಅರ್ಥ ಮಾಡಿಕೊಳ್ಳಲು,ಪತ್ರಿಕೆಗಳು ಪ್ರಯತ್ನ ಮಾಡಲೇ ಇಲ್ಲ ಎಂಬುದು ಈವರೆಗಿನ ವರದಿಗಳಿಂದ ಜಗಜಾಹಿರಾಗಿದೆ.

ಪತ್ರಿಕೆಗಳು ಸರ್ಕಾರಗಳು ಮತ್ತು ಮುಕ್ತಮಾರುಕಟ್ಟೆಯ ತುತ್ತೂರಿಗಳಾದಂತೆ ಜನರಿಂದ ದೂರ ಸರಿಯ ತೊಡಗಿದವು. ಜನರು ಪತ್ರಿಕೆ ಕೊಳ್ಳುವುದನ್ನು ಕೈಬಿಟ್ಟರು. ಪತ್ರಿಕೆಗಳು ಸಾಮಾಜಿಕ ಜವಾಬ್ದಾರಿಯಿಂದ ನುಣುಚಿಕೊಂಡವು. ಹೀಗಾಗಿ ಸಾಮಾನ್ಯರು ಅದರ ಪರಿಣಾಮವನ್ನು ಉಣ್ಣುವಂತೆ ಆಗಿದೆ. ದೇಶೀಯ ಸುದ್ದಿಗಳಿಗೆ ಆದ್ಯತೆ ನೀಡುವ ಬದಲು ವಿದೇಶದ ಸುದ್ದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು. ಗ್ರಾಮೀಣ ಭಾರತದ ಆಗುಹೋಗುಗಳತ್ತ ಬೆಳಕು ಚೆಲ್ಲುವ ಕೆಲಸಕ್ಕೆ ಮಾಧ್ಯಮ ಮಾಲಿಕತ್ವ ಅಡ್ಡಿ ಬಂತು. ಪತ್ರಕರ್ತ ಕೂಡ ಮಾಲಿಕತ್ವಕ್ಕೆ ನಡುಬಗ್ಗಿಸಿ ನಡೆದುಕೊಂಡ. ವೈದ್ಯ ಹೇಳಿದ್ದೂ ಹಾಲು ಅನ್ನ, ರೋಗಿ ಬಯಸ್ಸಿದ್ದೂ ಅದನ್ನೇ ಎಂಬಂತಹ ಪರಿಸ್ಥಿತಿಗೆ ಪತ್ರಿಗಳು ಮತ್ತು ಪತ್ರಕರ್ತರು ಬಂದು ನಿಂತಿದ್ದಾರೆ.

ಪತ್ರಿಕೆಗಳು ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ ನಗರಕೇಂದ್ರಿತವಾಗಿ ಕೆಲಸ ಮಾಡುತ್ತಿವೆ. ಯಾವುದೇ ಪತ್ರಕರ್ತನೂ ಹಳ್ಳಿಯ ಸಮಸ್ಯೆಗಳನ್ನು ಬಿಂಬಿಸುವ ಗೋಜಿಗೆ ಹೋಗುತ್ತಿಲ್ಲ. ಇವು ಟಿಆರ್ ಪಿ ತರುವಂಥ ಸುದ್ದಿಗಳೇನೂ ಅಲ್ಲ. ಹಾಗಾಗಿ ಗ್ರಾಮೀಣ ಪ್ರದೇಶದ ಸುದ್ದಿಗಳಿಗೆ ಮಹತ್ವವನ್ನೇ ಸಿಗುತ್ತಿಲ್ಲ ಎನ್ನುವುದಕ್ಕಿಂತ ಕೊಡುತ್ತಿಲ್ಲ ಎನ್ನಬೇಕು. ಅಂದಮೇಲೆ ಪ್ರಕಟಿಸುವುದು ಎಲ್ಲಿಂದ ಬಂತು.

ಇಷ್ಟೆಲ್ಲಾ ಕಷ್ಟಕೋಟಲೆಗಳ ನಡುವೆ ಒಂದಿಷ್ಟು ಪತ್ರಿಕೆಗಳು, ಬೆರಳೆಣಿಕೆಯ ಪತ್ರಕರ್ತರು, ನ್ಯೂಸ್ ಪೋರ್ಟಲ್ ಗಳು ಜನರ ಪರವಾಗಿ ಕೆಲಸ ಮಾಡುತ್ತಿವೆ. ಅವರ ನೋವುಗಳನ್ನು ಕಿವುಡಾಗಿರುವ ಸರ್ಕಾರಗಳ ಕಿವಿಗೆ ಹಾಕುತ್ತಿವೆ ಇದೇ ಸಮಾಧಾನದ ಸಂಗತಿ.

  • ಕೆ.ಈ.ಸಿದ್ದಯ್ಯ, ತುಮಕೂರು

ಇದನ್ನೂ ಓದಿ; ಹೀಗೊಬ್ಬ ಬಡವರ ವೈದ್ಯ : ಒಂದು ರೂ ಸಹ ಪಡೆಯದೆ ಸೇವೆ ನೀಡುತ್ತಿರುವ ಡಾ.ಬಿ.ಸಂಜೀವ ರೈ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...