Homeಅಂಕಣಗಳುಗ್ಲಿರಿಸೀಡಿಯಾ ಎಂಬ ಖರ್ಚಿಲ್ಲದ ಗೊಬ್ಬರ ಗಿಡದ ಬಗ್ಗೆ ನಿಮಗೆಷ್ಟು ಗೊತ್ತು?

ಗ್ಲಿರಿಸೀಡಿಯಾ ಎಂಬ ಖರ್ಚಿಲ್ಲದ ಗೊಬ್ಬರ ಗಿಡದ ಬಗ್ಗೆ ನಿಮಗೆಷ್ಟು ಗೊತ್ತು?

ಅಪಾರ ಸಾರಜನಕ ಒಳಗೊಂಡ ಈ ಹಸಿರು ಸೊಪ್ಪನ್ನು ಹಸಿಯಾಗಿದ್ದಾಗಲೇ ಮಣ್ಣಿಗೆ ಸೇರಿಸುವುದು, ಗದ್ದೆಗೆ ತುಳಿಯುವುದು ಸಾಧ್ಯವಾದರೆ ತುಂಬಾ ಉಪಯುಕ್ತ.

- Advertisement -
- Advertisement -

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ…: ಭಾಗ-10

ಕೆಲವು ಗಿಡಗಳಿಗೆ ಅದೇನು ಶಕ್ತಿಯೋ ಕಾಣೆ. ಕತ್ತರಿಸಿದರೆ ಹೊಸ ಜೀವ ಪಡೆದು ಚಿಗುರುತ್ತವೆ. ಚಿಗುರು ಕಡ್ಡಿಗಳ ಈ ಈ ಜಾತಿಗೆ ಸೇರಿದ್ದು ಈ ಗ್ಲಿರಿಸೀಡಿಯಾ. ಇದನ್ನು ನಮ್ಮ ಜನ ಗೊಬ್ಬರದ ಗಿಡ ಎಂದೇ ಕರೆಯುವುದು ರೂಢಿ. ನಮ್ಮ ತೋಟದಲ್ಲಿ ಇದಕ್ಕೆ ಪ್ರಮುಖ ಸ್ಥಾನವಿದೆ. ಇದರ ಸೊಪ್ಪು ಅಪಾರ ಸಾರಜನದ ನೊರೆ ಹಾಲಿನಿಂದ ಕೂಡಿದೆ. ನೆಲಕ್ಕೂ ಸಾರಜನಕ ಸ್ಥೀರಿಕರಿಸುತ್ತದೆ.

ನನಗೆ ಈ ಗ್ಲಿರಿಸೀಡಿಯಾದ ಹುಚ್ಚು ಹತ್ತಿದ ಆ ವರ್ಷ ನಾನು ಮಾಡಿದ್ದು ಹೀಗೆ. ಕೇವಲ ಒಂದು ಅಡಿ ಆಳದ ಟ್ರೆಂಚ್‌ ತೆಗೆದು ಅದರೊಳಗೆ ಕಸಕಡ್ಡಿ ತುಂಬಿ ನೀರು ಬಿಟ್ಟು ಮುಚ್ಚಿ ಒಂದು ತಿಂಗಳು ಬಿಟ್ಟು ಆ ಟ್ರೆಂಚ್‌ಗೆ ಅಡಿಗೊಂದರಂತೆ ಎರಡು ಅಡಿ ಉದ್ದದ ಈ ಗ್ಲಿರಿಸಿಡಿಯಾ ಕಡ್ಡಿಗಳನ್ನು ಊರಿದೆ. ಒಂದೂ ಹುಸಿಹೋಗದಂತೆ ಹಸಿರು ದೀಪದಂತೆ ಹೊತ್ತಿಕೊಂಡವು. ಹದಿನೈದು ವರ್ಷವಾಯಿತು ಇನ್ನೂ ಉರಿಯುತ್ತಲೇ ಇವೆ. ಘನವಾದ ಸೊಪ್ಪು ಕೊಡುತ್ತಲೇ ಇವೆ.

ನೀವೇನಾದರೂ ಒಂದೆರಡು ವರ್ಷಗಳ ನಂತರ ಇವುಗಳನ್ನು ಕತ್ತರಿಸಿ ಒಪ್ಪವಾಗಿ ಇಟ್ಟುಕೊಳ್ಳದಿದ್ದರೆ, ನೀವು ನಿಯಂತ್ರಿಸಲಾಗದಂತೆ ಕೊಬ್ಬಿ ಬೆಳೆಯುತ್ತವೆ. ಇವಕ್ಕೆ ಗೊಬ್ಬರ ಗೋಡು ಏನೂ ಬೇಡ, ಕಾರಣ ಇವೇ ಗೊಬ್ಬರದ ಗಿಡಗಳು. ಬಿಸಿಲುಂಡು ವಾತಾವರಣದ ಗಾಳಿಯಲ್ಲಿನ ಅಪಾರ ಸಾರಜನಕವನ್ನು ಹಸಿರು ಎಲೆಗಳಾಗಿಸುವ ಶಕ್ತಿ ಇವಕ್ಕಿದೆ. ಗ್ಲಿರಿಸೀಡಿಯಾವನ್ನು ಕತ್ತರಿಸುವುದು ಅಷ್ಟು ಕಷ್ಟವಲ್ಲ, ಮುಳ್ಳಿಲ್ಲ , ತೀರಾ ಒರಟಲ್ಲ, ಅಲರ್ಜಿಯಿಲ್ಲ. ವರ್ಷಕ್ಕೆ ಎರಡು ಬಾರಿ ಕತ್ತಿರಿಸುತ್ತಿದ್ದರೆ ಒಳ್ಳೆಯ ಸೊಪ್ಪು ಸಿಗುತ್ತದೆ, ನಿಯಂತ್ರಣದಲ್ಲೂ ಇರುತ್ತದೆ. ಸೊಪ್ಪು ಹಸಿಯಾಗಿದ್ದಾಗಲೇ ಮಣ್ಣಿಗೆ ಸೇರಿಸುವುದು, ಗದ್ದೆಗೆ ತುಳಿಯುವುದು ಸಾಧ್ಯವಾದರೆ ತುಂಬಾ ಉಪಯುಕ್ತ. ಒಣಗಿದರೆ ಹೆಚ್ಚು ನಷ್ಟ.

ಈ ಸೊಪ್ಪನ್ನು ಸ್ವಲ್ಪ ಬಾಡಿಸಿ ದನಕರುಗಳಿಗೆ ಮೇವಾಗಿಯೂ ಬಳಸಬಹುದು. ಪೂರ್ಣ ಹಸಿಯ ಸೊಪ್ಪನ್ನು ಅದರ ಕಟು ವಾಸನೆಯ ಕಾರಣ ಕೆಲವು ದನಕರುಗಳು ತಿನ್ನಲು ನಿರಾಕರಿಸುವ ಸಾಧ್ಯತೆ ಇರುತ್ತದೆ. ಆಡುಕುರಿಗಳು ಮಾತ್ರ ಯಾವ ಭಿನ್ನಭೇದವೂ ಇಲ್ಲದೆ ಈ ಸೊಪ್ಪನ್ನು ಮೆಲ್ಲುತ್ತವೆ. ಚೆನ್ನಾಗಿ ಕೊಬ್ಬುತ್ತವೆ. ಬುದ್ದಿವಂತ ರೈತರು ಈ ಹಸಿ ಸೊಪ್ಪನ್ನು ಇತರ ಮೇವಿನೊಂದಿಗೆ ಬೆರೆಸಿ ಹಾಲು ಕೊಡುವ ರಾಸುಗಳು ತಿನ್ನುವಂತೆ ಮಾಡಿ ಹೆಚ್ಚು ಹಾಲು ಹಿಂಡಿ ಲಾಭ ಮಾಡಿಕೊಂಡವರಿದ್ದಾರೆ.

ಸಾವಯವ ಕೃಷಿ ಚಳುವಳಿಯ ಆರಂಭಿಕ ಸಂದರ್ಭದಲ್ಲಿ ಇದರ ಜನಪ್ರಿಯತೆ ಹೆಚ್ಚಾದಾಗ ಕೆಲವರು “ಇದು ನೆಲದ ಒರವು ತಿನ್ನುತ್ತದೆ” ಎಂಬ ತಕರಾರು ತೆಗೆದದ್ದು ಉಂಟು. ಆದರೆ ಇದರ ಬಗೆಗೆ ತಿಳಿಯುತ್ತಾ ಹೋದಂತೆ, ಇದು ನೆಲದ ಒರವು ತಿನ್ನುವುದಕ್ಕೆ ಬದಲಾಗಿ ನೆಲಕ್ಕೆ ಹೆಚ್ಚು ಒರವನ್ನು ಒದಗಿಸುತ್ತದೆ ಎಂಬುದು ರೈತರ ಅರಿವಿಗೆ ಬಂತು. ಆಗ ಬಹುತೇಕ ಸಾವಯವ ತೋಟಗಳಲ್ಲಿ ಇದು ಬೇಲಿಯಲ್ಲಷ್ಟೇ ಅಲ್ಲ ತೋಟದ ಬದುಗಳಲ್ಲೂ ಸ್ಥಾನ ಪಡೆಯಿತು.

ಈಗಲೂ ಕೆಲವು ರೈತರು ಇದರ ಸಹವಾಸ ಕಷ್ಟ ಎನ್ನುತ್ತಾರೆ. ಇದಕ್ಕೆ ಕಾರಣವಿದೆ. ಈ ಗ್ಲಿರಿಸೀಡಿಯಾವನ್ನು ಹೆಮ್ಮರವಾಗಲು ಬಿಡಬಾರದು. ಬಿಟ್ಟರೆ ಕೆಟ್ಟೆವು ಎಂದೇ ಅರ್ಥ. ಏಕೆಂದರೆ ಅದು ಸೂರ್ಯ ಸ್ನೇಹಿ ಗಿಡ, ಸೂರ್ಯನತ್ತಲೇ ಅದರ ಚಿತ್ತ. ಅದನ್ನು ಬುಡಕ್ಕೆ ಕತ್ತರಿಸುತ್ತಲೇ ಇರಬೇಕಾಗುತ್ತದೆ. ಕತ್ತರಿಸಿದಷ್ಟೂ ನಮಗೆ ಲಾಭವಾಗುತ್ತಲೇ ಇರುತ್ತದೆ. ಕುರಿಗೊಬ್ಬರ, ಕೋಳಿಗೊಬ್ಬರಕ್ಕೆ ಸಿಕ್ಕಾಪಟ್ಟೆ ದುಡ್ಡು ಸುರಿಯುವವರು ಏನು ಬೇಕಾದರೂ ಹೇಳುತ್ತಾರೆ. ನಿಜವಾದ ಕೃಷಿಕರು ತಮ್ಮ ಪರವಾಗಿ ಹಗಲು ರಾತ್ರಿ ದುಡಿಯುವ ಗಿಡಮರಗಳನ್ನು, ಹುಲ್ಲು ಸೊಪ್ಪು ತಿಂದು ಹಾಲು ಮತ್ತು ಗೊಬ್ಬರ ಕೊಡುವ ದನಕರು, ಕುರಿ ಆಡುಗಳನ್ನು  ನೆಚ್ಚಲೇಬೇಕಾಗುತ್ತದೆ.

ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-7: ಬೇಲಿಯೆಂದರೆ ಹಸಿರ ಕಲೆ, ಇಲಿ, ಇಲಿಬುಲ್ಡೆ ಇತ್ಯಾದಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...