Homeಮುಖಪುಟಒಲಿಂಪಿಕ್ಸ್‌ನಲ್ಲಿ ರೈತರ ಮಕ್ಕಳ ಕಮಾಲ್, ಸಂತಸ ಹಂಚಿಕೊಂಡ ಪ್ರತಿಭಟನಾ ನಿರತ ರೈತರು

ಒಲಿಂಪಿಕ್ಸ್‌ನಲ್ಲಿ ರೈತರ ಮಕ್ಕಳ ಕಮಾಲ್, ಸಂತಸ ಹಂಚಿಕೊಂಡ ಪ್ರತಿಭಟನಾ ನಿರತ ರೈತರು

- Advertisement -
- Advertisement -

ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಏಳು ಪದಕ ಗಳಿಸಿ ಸಾಧನೆ ಮಾಡಿರುವ ಹೆಮ್ಮೆಯ ಕ್ರೀಡಾಪಟುಗಳಲ್ಲಿ ಹಲವರು ರೈತರ ಮಕ್ಕಳು ಎಂಬುದು ಗಮನಾರ್ಹ. ತಮ್ಮ ಮಕ್ಕಳ ಸಾಧನೆ ಬಗ್ಗೆ ಪ್ರತಿಭಟನಾ ಸ್ಥಳದಲ್ಲೇ ಘೋಷಣೆಗಳನ್ನು ಕೂಗಿ ಸಂತಸ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ #FarmersShineInOlympics ಹ್ಯಾಶ್‌ಟ್ಯಾಗ್ ಬಳಸಿ ಒಲಿಂಪಿಕ್ ವಿಜೇತರನ್ನು ಅಭಿನಂದಿಸಲಾಗುತ್ತಿದೆ. ನೀರಜ್‌ ಛೋಪ್ರಾ, ಬಜರಂಗ್‌ ಪೂನಿಯಾ, ರವಿಕುಮಾರ್, ಅಂಶು ಮಲ್ಲಿಕ್, ಶ್ರೀಜೇಶ್ ಸೇರಿದಂತೆ ಹಲವು ಕ್ರೀಡಾ ತಾರೆಗಳು ರೈತರ ಮಕ್ಕಳು.

ರೈತರ ಮಗ 24 ವರ್ಷದ ಹರಿಯಾಣದ ನೀರಜ್‌ ಛೋಪ್ರಾ ಜಾವೆಲಿನ್‌ ಎಸೆತದಲ್ಲಿ ಸಾಧನೆಗೈದು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಅಥ್ಲೀಟ್‌ ವಿಭಾಗದಲ್ಲಿ 100 ವರ್ಷಗಳ ಬಳಿಕ ಭಾರತೀಯ ಕ್ರೀಡಾಪಟುವೊಬ್ಬ ಮಾಡಿದ ಸಾಧನೆ ಇದು ಎಂದು ಬಣ್ಣಿಸಲಾಗಿದೆ.

ಹರಿಯಾಣದ ಸೋನಿಪತ್‌ ಜಿಲ್ಲೆಯ ನಹ್ರಿ ಗ್ರಾಮದ ಕುಸ್ತಿಪಟು ರವಿಕುಮಾರ್ ಬೆಳ್ಳಿಯ ಪದಕವನ್ನು ಗೆದ್ದು ತಂದಿದ್ದಾರೆ. ಅದೇ ರಾಜ್ಯದ ಬಜರಂಗ್‌ ಪೂನಿಯಾ ಶನಿವಾರ 64 ಕೆ ಜಿ ವಿಭಾಗದ ಕುಸ್ತಿಯಲ್ಲಿ ಕಜಕಿಸ್ತಾನದ ದೌಲತ್‌ ನಿಯಾಜ್‌ಬೆಕೋವ್ ಅವರನ್ನು 8-0 ಅಂತರದಲ್ಲಿ ಸೋಲಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ನೀರಜ್ ಚೋಪ್ರಾ: ‘ಚಿನ್ನದ ತೋಳಿನ ಹುಡುಗ’ ನಡೆದು ಬಂದ ದಾರಿ

24 ವರ್ಷದ ನೀರಜ್‌ ಚೋಪ್ರಾ ಅವರು ಮೂಲತಃ ಹರ್ಯಾಣದ ಪಾಣಿಪತ್ ಜಿಲ್ಲೆಯ ಖಂದ್ರಾ ಎಂಬ ಹಳ್ಳಿಯವರು. ನೀರಜ್‌ ತಂದೆ ರೈತ. ತಾಯಿ ಗೃಹಿಣಿ, ಕೂಡು ಕುಟುಂಬ. ಯಾವುದೇ ಸರ್ಕಾರಿ ಅಥವಾ ಖಾಸಗಿ ಉದ್ಯೋಗಿಗಳಿಲ್ಲದ ಕುಟುಂಬ.  ತಾನು ಕ್ರೀಡೆಯಲ್ಲಿ ಸಾಧನೆ ಮಾಡಿ ಸೇನೆಗೆ ಸೇರಿದ್ದು ತನ್ನ ಅಭ್ಯಾಸಕ್ಕೆ ಮತ್ತು ಕುಟುಂಬಕ್ಕೆ ಅಗತ್ಯವಾದ ಸಂಪಾದನೆ ಸಾಧ್ಯವಾಯಿತು ಎಂದು ನೀರಜ್‌ ಹೇಳಿಕೊಂಡಿದ್ದರು. ಇವರು 2016ರಲ್ಲಿ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿಸಿ, ಐಎಎಎಫ್‌ (ಇಂಟರ್ ನ್ಯಾಷನಲ್ ಅಸೋಸಿಯೇಶನ್ ಆಫ್ ಅತ್ಲೆಟಿಕ್ಸ್ ಫೆಡರೇಶನ್) ಕಿರಿಯರ ವಿಶ್ವ ಕ್ರೀಡಾಕೂಟದಲ್ಲಿ ಗೆದ್ದು ಚಾಂಪಿಯನ್‌ ಆಗಿ ಮಿಂಚಿದ್ದರು.

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್: ಭಾರತಕ್ಕೆ ಮೊದಲ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ!

ಹಾಕಿಯಲ್ಲಿ ಸಾಧನೆ ಮಾಡಿದ ಗೋಲ್‌ ಕೀಪರ್‌ ಶ್ರೀಜೇಶ್ ಕೂಡ ರೈತರ ಮಗನಾಗಿದ್ದು, ಮಗನ ಕನಸಿಗೆ ನೀರೆರೆಯಲು ತಂದೆ ತಮ್ಮ ಹಸುವನ್ನು ಮಾರಿದ್ದರು ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ.

ಹರಿಯಾಣದ ಜಝ್ಜರ್‌ನ ಕುಸ್ತಿಪಟು ಬಜರಂಗ್‌ ಪೂನಿಯಾ ರೈತ ಕುಟುಂಬದಿಂದ ಬಂದವರು. ಕಳೆದ ಡಿಸೆಂಬರ್‌ನಲ್ಲಿ ದೆಹಲಿ ಗಡಿಗಳಲ್ಲಿ ರೈತರ ಹೋರಾಟ ತೀವ್ರಗೊಂಡಾಗ ಹಲವು ಕ್ರೀಡಾಪಟುಗಳು ಬೆಂಬಲ ಸೂಚಿಸಿದ್ದರು. ಆಗ ದೇಶದ ಅತ್ಯುನ್ನತ ಕ್ರೀಡಾಪ್ರಶಸ್ತಿ ಖೇಲ್‌ರತ್ನವನ್ನು ಹಿಂದಿರುಗಿಸಿ ಕುಸ್ತಿಪಟು ಬಜರಂಗ್ ಪೂನಿಯಾ ಕೂಡ ತಮ್ಮ ಬೆಂಬಲವನ್ನು ಸೂಚಿಸಿದ್ದರು.

“ಭಾರತ ಒಂದು ಕೃಷಿ ಪ್ರದಾನ ದೇಶ, ದೇಶದ ಆರ್ಥಿಕತೆಯು ಕೂಡ ಕೃಷಿಯ ಮೇಲೆ ಅವಲಂಬಿತವಾಗಿದೆ. ಸರ್ಕಾರದ ಧೋರಣೆಯಿಂದಾಗಿ ರೈತರು ಬೀದಿಗೆ ಬರುವಂತಾಗಿದೆ. ನಾವು ರೈತರ ಮಕ್ಕಳು. ದೇಶದ ಪ್ರತಿಯೊಬ್ಬ ಪ್ರಜೆಯೂ ರೈತ ಚಳುವಳಿಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ” ಎಂದು ಟ್ವೀಟ್ ಮಾಡಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಒಲಿಂಪಿಕ್ ವಿಜೇತರ ಚಿತ್ರಗಳನ್ನು ಹಾಕಿ, ರೈತರ ಮಕ್ಕಳ ಸಾಧನೆ ಎಂದು ಸಾವಿರಾರು ಮಂದಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.


ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌: ಫ್ರೀಸ್ಟೈಲ್ ಕುಸ್ತಿಯಲ್ಲಿ ಕಂಚು ಗೆದ್ದ ಬಜರಂಗ್ ಪೂನಿಯಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...