Homeಮುಖಪುಟಆತ ಮಸಣದ ಅರ್ಚಕ! ಅತ್ಯಾಚಾರ ಮಾಡಿ ಹೆಣ ಸುಟ್ಟುಹಾಕಿದ- ಬಿ. ಪೀರ್ ಬಾಷ

ಆತ ಮಸಣದ ಅರ್ಚಕ! ಅತ್ಯಾಚಾರ ಮಾಡಿ ಹೆಣ ಸುಟ್ಟುಹಾಕಿದ- ಬಿ. ಪೀರ್ ಬಾಷ

- Advertisement -
- Advertisement -

“ಅಮ್ಮಾ…ಕೇರಂ ಆಡ್ತೀನಮ್ಮಾ” ಎಂದ ಮಗಳಿಗೆ ಕರೆದು, “ಒಂದು ಕೊಡ ನೀರು ತಂದಿಟ್ಟು ಆಡುವಂತೆ ಬಾರೆ” ಎಂದು ಹೇಳಿ, ಕೊಡ ಕೊಟ್ಟು ಕಳಿಸಿದ್ದೇ ತಪ್ಪಾಯ್ತು. ನೀರುತರಲು ಹೋದ ಆ 9 ವರ್ಷದ ಕರುಳ ಕುಡಿ, ಹೆಣವಾಗಿಯೂ ಕಾಣದಂತೆ ಸುಟ್ಟು ಬೂದಿಯಾಗುತ್ತಾಳೆಂದು ಆ ತಾಯಿ ಅಂದುಕೊಂಡಿರಲಿಲ್ಲ. ಅಷ್ಟಕ್ಕೂ ನೀರು ತರಲು ಹೋದ ಆ ಹೆಣ್ಣುಮಗುವನ್ನು ಕಚ್ಚಿಕೊಂದದ್ದು ವಿಷದ ಹಾವಾಗಲಿ, ಕ್ರೂರ ಹುಲಿಯಾಗಲಿ ಅಲ್ಲ. ಬದಲಿಗೆ ಗಂಡು- ಗಂಡಸುತನವೆಂಬ ಕೋರೆ ಪಂಜುಗಳು! ಈ ಕೊರೆ ಪಂಜುಗಳಿಗೆ ಜಾತಿ ಎಂಬ ನಂಜುನಶೆಯೇ ರಾಕ್ಷಸ ಶಕ್ತಿಯಾಯಿತೇ…ಗೊತ್ತಿಲ್ಲ. ಆದರೆ ಹಾಗೆ ಆ ಎಳೆಹುಡುಗಿಯ ಮೇಲೆ ಅತ್ಯಾಚಾರಗೈದವನು ಒಬ್ಬ ಅರ್ಚಕ, ಆತನ ಹೆಸರು ರಾಧೇಶ್ಯಾಮ. ಆತನ ದಾಳಿಗೆ ಜೀವ ಬಿಟ್ಟ ಹುಡುಗಿ ಬಡವರ ಮಗಳು, ದಲಿತ ಸಮುದಾಯದ ಜೀವ ಎಂಬುದಂತೂ ಹೌದು.

ಅತ್ಯಾಚಾರಗೈದು ಮಗಳನ್ನು ಹುಡುಕಲು ಬಂದ ತಾಯಿಗೆ “ಆಗಿದ್ದು ಆಗಿ ಹೋಯ್ತು, ಸುಟ್ಟು ಹಾಕು” ಎಂದವನೇ, ತಾಯಿ ಕೈಗೆ ಹೆಣವನ್ನೂ ಒಪ್ಪಿಸದೇ ತಾನಿರುವ ಜಾಗದಲ್ಲಿಯೇ ಆ ಮಗುವಿನ ಹೆಣಕ್ಕೆ ಬೆಂಕಿ ಇಟ್ಟಿದ್ದಾನೆ. ತಾಯಿ ಜೀವ ಜೋರಾಗಿ ಕೂಗಿ ಕೊಂಡರೆ “ಕೂಗಿ ರಂಪಾಟ ಮಾಡಿ ಕೇಸ್ ಮಾಡಿದರೆ, ಗೆಲ್ಲೋ ತಾಕತ್ತು ನಿನ್ನಲ್ಲಿದೆಯಾ, ಬಾಯಿ ಮುಚ್ವಿಕೊಂಡಿರು” ಎಂದು ಅರ್ಚಕ ಗದರಿಸಿದ್ದಾನೆ.

ಹೆತ್ತ ತಾಯಿಯ ಸಂಕಟದ ಚೀರಾಟಕ್ಕೆ ಕಿಂಚಿತ್ತೂ ಅಳುಕದ, ಮನಕರಗದ ಆ ನೀಚ, ಮುಕ್ಕಾಲು ಪಾಲು ದೇಹವನ್ನು ಬೆಂಕಿಯಲ್ಲಿ‌ ಕರಗಿಸಿದ್ದಾನೆ. ನಂತರ ಸೇರಿದ ಜನ, ಚಿತೆಗೆ ನೀರು ಚೆಲ್ಲಿ ಬೆಂಕಿ ನಂದಿಸಿದಾಗ ಸಿಕ್ಕಿದ್ದು ಆ ಮಗುವಿನ ಪಾದಗಳು ಮತ್ತು ಎಲುಬುಗಳಷ್ಟೆ. ಎಲ್ಲ ಮುಗಿದ ನಂತರ ಬಂದ ಪೊಲೀಸರು ಆ ಸುಟ್ಟ ಮಾಂಸದ ಚೂರುಗಳನ್ನು ವಶಪಡಿಸಿಕೊಂಡು ತನಿಖೆಯ ಮಾತು ‘ಆಡಿದ್ದಾರೆ’.

ಇದನ್ನೂ ಓದಿ: ದೆಹಲಿ: ದಲಿತ ಅಪ್ರಾಪ್ತೆ ಅತ್ಯಾಚಾರ, ಕೊಲೆ ಪ್ರಕರಣ, ಮ್ಯಾಜಿಸ್ಟೀರಿಯಲ್ ತನಿಖೆಗೆ ಕೇಜ್ರಿವಾಲ್ ಆದೇಶ

ದೇಶದ ರಾಜಧಾನಿಯಲ್ಲಿ, ಕೊಡ ನೀರಿಗೆಂದು ಕಳಿಸಿದ ಮಗಳು ಹೆಣವಾಗಿ ಬೆಂಕಿಯಲ್ಲಿ ಸುಡುತ್ತಿರುವುದನ್ನು ಕಂಡು‌ ಸಂಕಟ ಪಟ್ಟ ಆ ತಾಯಿಯನ್ನು, ಮತ್ತು ತಂದೆಯನ್ನೂ ಕರೆದೊಯ್ದು ಆ ಇಡೀರಾತ್ರಿ ಬೇರೆಬೇರೆ ಕೋಣೆಗಳಲ್ಲಿ ಕೂಡಿ ಹಾಕಿ ವಿಚಾರಣೆ ಮಾಡಿದ ಘನಂದಾರಿ ಕಾರ್ಯ ಈ ಪೊಲೀಸರದ್ದು. ಸಿಟ್ಟಿಗೆದ್ದ ಜನರಿಂದ ಬಚಾವು ಮಾಡಲೆಂಬಂತೇನೋ ಅತ್ಯಾಚಾರಿಯೊಂದಿಗೆ ಇನ್ನು ಕೆಲವರನ್ನು ಬಂಧಿಸಿದ್ದಾರೆ ಎಂಬುದೇನೋ ನಿಜ. ಆದರೆ ಇವರ ಮೇಲೆ ಹಾಕಲಾದ ಕೇಸುಗಳು, ಬಂಧನ ಇವೆಲ್ಲಾ ಜನರ ಆಕ್ರೋಶ ತಡೆಯಲು ಮಾಡಿದ ಕ್ರಮಗಳು ಎಂಬ ಬಗ್ಗೆ ಅನುಮಾನ ಪಡಬೇಕಿಲ್ಲ.

ಅದೇ ದೆಹಲಿಯಲ್ಲಿ ನಿರ್ಭಯಾಳಿಗೆ ಹೀಗಾದಾಗ, ಹೈದ್ರಾಬಾದಿನಲ್ಲಿ ಹೀಗಾದಾಗ ಬಂದ ಈ ಮಧ್ಯಮವರ್ಗದ ರೋಷಾವೇಶ, ಸಂಸ್ಕೃತಿ ಸಭ್ಯತೆಗಳು ಈಗ ಯಾವ ಗುಹೆ ಸೇರಿವೆ..? ಈಗೇಕೇ ಮೇಣದ ಬತ್ತಿಗಳು ಹೊತ್ತಿಕೊಳ್ಳುತ್ತಿಲ್ಲ..? ಎಲ್ಲಕ್ಕೂ ಹೆಚ್ಚಾಗಿ ದೇಶದ ವಿದ್ಯಮಾನವನ್ನು “ನಿರ್ಧರಿಸುವ” ಈ ಬಗಲಕುನ್ನಿ ಮಾಧ್ಯಮಗಳ ಗಂಟಲಲ್ಲಿ ಯಾವ ಅಮೇಧ್ಯ ಸಿಕ್ಕಿಕೊಂಡಿದೆ..?

ಅತ್ಯಾಚಾರವನ್ನು ಖಂಡಿಸಲೂ ಜಾತಿ ನೋಡುವಷ್ಟು ಹೇಸಿಗೆಯಾಗಿಬಿಟ್ಟಿದೆಯಾ ಮನಸ್ಸು. ದಲಿತ ಹೆಣ್ಣು ಮಕ್ಕಳಮೇಲೆ ಅತ್ಯಾಚಾರವಾದರೆ ಅದು ಸುದ್ದಿಯೇ ಅಲ್ಲವೇ..? ಏನಾಗಿದೆ ನಮ್ಮ ವಿವೇಕಕ್ಕೆ..? ಈ ದೇಶಕ್ಕೆ..?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...