Homeಅಂಕಣಗಳುಕಳೆದುಹೋದ ದಿನಗಳು 33 - ಬರವಣಿಗೆಯ ಹಿನ್ನೆಲೆ : ಪ್ರಸಾದ್ ರಕ್ಷಿದಿ

ಕಳೆದುಹೋದ ದಿನಗಳು 33 – ಬರವಣಿಗೆಯ ಹಿನ್ನೆಲೆ : ಪ್ರಸಾದ್ ರಕ್ಷಿದಿ

- Advertisement -
- Advertisement -

ಸುಮಾರು ನಾಲ್ಕು ದಶಕಗಳಲ್ಲಿ ಕಂಡ, ನೋಡಿದ, ಜೊತೆಯಾಗಿ ಕೆಲಸಮಾಡಿದ, ಒಡನಾಡಿದ ಅನುಭವಗಳು ಹಾಗೂ ಮನಸ್ಸಿನಲ್ಲಿ ಉಳಿದು ಹೋಗಿದ್ದ ವಿಚಾರಗಳು ಎಲ್ಲದರ ಬಗ್ಗೆ ಎಂದಾದರೂ ಬರೆಯಬೇಕು ಎಂದುಕೊಂಡೇ ಕಾಲಕಳೆಯುತ್ತ ಇದ್ದವನಿಗೆ ಈಗ ಬರೆಯಲೇಬೇಕೆಂಬ ಎಂಬ ಯೋಚನೆ ಬಂದದ್ದು ಡಾ ವೆಂಕಟೇಶ ನೆಲ್ಲುಕುಂಟೆಯವರ ಮಾತಿನಿಂದ.

ಆ ಘಟನೆ ಹೀಗಿದೆ… ಡಾ ನೆಲ್ಲುಕುಂಟೆಯವರು ತೋಡ ಜನಾಂಗದವರು ಬೌದ್ಧಾನುಯಾಯಿಗಳೇ ಎಂಬ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದಿದ್ದರು. ಆಗ ನಾನು ಈ ಬಗ್ಗೆ ಲೇಖಕ ಪರಂಜ್ಯೋತಿಯವರು ಹಿಂದೆ ಒಂದು ಸಂದರ್ಭದಲ್ಲಿ “ನಾವು ಒಂದು ಕಾಲದಲ್ಲಿ ಬೌದ್ಧರಾಗಿದ್ದೆವಂತೆ ಎಂದಿದ್ದರು. ಪರಂಜ್ಯೋತಿ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಕೆ.ಪಿ. ಸ್ವಾಮಿ ಅದೇ ತೋಡ ಜನಾಂಗದವರು. ತೋಡ ಎನ್ನುವುದು ಬ್ರಿಟಿಷರ ಮಾಡಿದ ಅಪಭ್ರಂಶ. ನಿಜವಾದ ಹೆಸರು “ತೊದವ” ರು ಎಂದು ತಿಳಿಸಿದವರೂ ಅವರೇ.

ಆಗ ನಾನು ಸರ್ ಈ ಬಗ್ಗೆ ನೀವು ಬರೆಯಿರಿ ಎಂದಿದ್ದೆ. ಆಗ ಅವರು ಕುಮಾರ ವೆಂಕಣ್ಣನವರ ಬಗ್ಗೆ ಕೃತಿಯೊಂದನ್ನು ರಚಿಸುತ್ತಿದ್ದರು. ನಂತರ ಅವರು ಹೆಚ್ಚು ಕಾಲ ಇರಲೇ ಇಲ್ಲ

ಈ ವಿಚಾರವನ್ನು ನಾನು ವೆಂಕಟೇಶ ನೆಲ್ಲುಕುಂಟೆಯವರಿಗೆ ತಿಳಿಸಿದೆ.

ಆಗ ಅವರು ಕೆಲವು ವಿಚಾರಗಳನ್ನು ಯಾರು ಬರೆಯಬೇಕು ಅವರು ಆ ಕೆಲಸ ಮಾಡದಿದ್ದರೆ ಆಗುವ ನಷ್ಟ ಅಪಾರ ಎಂದರು. ಆ ಮಾತು ನನ್ನನ್ನು ಕೊರೆಯುತ್ತ ಇತ್ತು.

ಈ ಸಂಕಥನ ಗಣಪಯ್ಯನವರ ಜೀವನ ಚರಿತ್ರೆ ಅಲ್ಲ. ಕೊಡಗು ಮತ್ತು ಕೊಡಗಿನ ಭಾಗವಾಗಿದ್ದ ಮಂಜ್ರಾಬಾದ್ ಪ್ರದೇಶದ ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರೋತ್ತರ ಕಾಲದ ಸುಮಾರು ಏಳು ದಶಕಗಳ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸ್ಥಿತ್ಯಂತರಗಳ ಪಕ್ಷಿನೋಟ.

ಸಕಲೇಶಪುರ ತಾಲ್ಲೂಕು ಹಾಸನಜಿಲ್ಲೆಯಲ್ಲಿ ಇದ್ದರೂ, ಇದು ಸಂಪುರ್ಣವಾಗಿ ಮಲೆನಾಡಿನ ಕಾಫಿ ವಲಯವಾಗಿದ್ದು ದಟ್ಟ ಅರಣ್ಯಗಳಿಂದ ಕೂಡಿದ ಪ್ರದೇಶವೇ ಆಗಿದೆ. ಹೇಮಾವತಿ ನದಿಯ ದಕ್ಷಿಣ ಭಾಗ ಹಿಂದೆ  ಕೊಡಗಿನ ಭಾಗವಾದ ಮಂಜ್ರಾಬಾದ್ ಪ್ರಾಂತವೆಂದೇ ಪರಿಗಣಿಸಲ್ಪಟ್ಟಿತ್ತು. ಟಿಪ್ಪು ಸುಲ್ತಾನ್ ಕಾಲದಲ್ಲಿ, ಕೊಡಗಿನ ಅರಸರು ಮತ್ತು ನಂತರವೂ ಈ ಪ್ರದೇಶ  ಮಂಜ್ರಾಬಾದ್ ತಾಲ್ಲೂಕು ಎಂದೇ ಕರೆಯಲ್ಪಟ್ಟು ಸರ್ಕಾರಿ ದಾಖಲೆಗಳಲ್ಲಿಯೂ ಹಾಗೇಯೇ ಇದೆ. ತೀರ ಇತ್ತೀಚಿನವರೆಗೂ ಇದ್ದ ಸಕಲೇಶಪುರದ ಹಳೆಯ ತಾಲ್ಲೂಕು ಕಛೇರಿಯ ಮುಂಭಾಗದಲ್ಲಿ ಮಂಜ್ರಾಬಾದ್ ತಾಲ್ಲೂಕು ಕಛೇರಿ ಎಂದೇ ಬರೆಯಲ್ಪಟ್ಟಿತ್ತು. ಮಂಜ್ರಾಬಾದ್ ಯಾಲಕ್ಕಿ ವಿಶ್ವವಿಖ್ಯಾತಿ ಪಡೆದು ದಕ್ಷಿಣ ಕೊಡಗಿನಿಂದ ಯಾಲಕ್ಕಿ ಗಿಡಗಳಿಗಾಗಿ ಕೃಷಿಕರು ಮಂಜ್ರಾಬಾದ್‌ಗೆ ಬರುತ್ತಿದ್ದ ಉಲ್ಲೇಖ ಭಾರತೀಸುತರ ಕಾದಂಬರಿಗಳಲ್ಲಿ ಇದೆ.

ಜಯರಾಮ್ ಶೆಟ್ಟರು

ಕೊಡಗಿನ ಹಾಗೂ ಈಗ ಹಾಸನಜಿಲ್ಲೆಯ ಭಾಗವಾಗಿರುವ ಮಂಜ್ರಾಬಾದ್ ಇವೆರಡು ಪ್ರದೇಶಗಳ ಈ ಕಥಾನಕವನ್ನು ಬೆಸೆದಿರುವ ಕೊಂಡಿ ಗಣಪಯ್ಯ.

ಈ ಬರಹಗಳ ಮಾಲಿಕೆಯಲ್ಲಿ ಬರುವ ಕೆಲವರ ಬಗ್ಗೆ ಅಲ್ಲಲ್ಲಿ ಒಂದಷ್ಟು ಮಾಹಿತಿಗಳು ಸಿಗಬಹುದು. ಆದರೆ ಇನ್ನು ಕೆಲವರ ಬಗ್ಗೆ ಬರಹಕ್ಕಿಳಿದ ಮಾಹಿತಿಗಳು ಕಡಿಮೆ ಮತ್ತು ಇನ್ನು ಕೆಲವರ ಬಗ್ಗೆ ಇಲ್ಲವೇ ಇಲ್ಲ.

ಅಂತಹವರಲ್ಲಿ ಮುಖ್ಯರು ಎನ್.ಕೆ.ಗಣಪಯ್ಯ.

ಚೆನ್ನಮ್ಮ

ಅದಕ್ಕೆ ಬಹಳ ಮುಖ್ಯ ಕಾರಣ ಅವರು ಯಾವುದನ್ನೂ ಹೇಳಿಕೊಳ್ಳುತ್ತಿರಲಿಲ್ಲ. ಪ್ರಚಾರಪ್ರಿಯತೆ ಹೋಗಲಿ ಪ್ರಜ್ಞಾಪೂರ್ವಕವಾಗಿ ಪ್ರಚಾರದಿಂದ ದೂರವಿದ್ದುದು. ಅವರು ಮಾಡಿದ ಎಷ್ಟೋ  ಜನಪರ ಕೆಲಸಗಳು ಅವರ ಕುಟುಂಬದವರಿಗೂ ತಿಳಿಯದೇ ಇದ್ದದು. ಈ ಎಲ್ಲದರಿಂದ ಬಹಳಷ್ಟು ಜನರಿಗೆ ಅವರ ಬಗ್ಗೆ ಮಾಹಿತಿಗಳಿಲ್ಲ. ನಾಡಿನ ಪತ್ರಿಕೆಗಳಲ್ಲಿ ಲೇಖನಗಳು ಬಂದಿಲ್ಲ ಹಾಗೂ ಬೌದ್ಧಿಕ ವಲಯದಲ್ಲಿ ಚರ್ಚೆಗಳಾಗಿಲ್ಲ. ಅವರು ನಡೆಸಿದ ನೂರಾರು ಕಾರ್ಯಕ್ರಮಗಳಲ್ಲಿಯೂ ಪೋಟೋ ತೆಗೆಸಿಕೊಳ್ಳುವ ಆಸಕ್ತಿಯೂ ಅವರಿಗೆ ಇದ್ದಿರಲಿಲ್ಲ.

ಇಲ್ಲಿ ಲಭ್ಯವಿರುವ ಹಲವು ಫೋಟೋಗಳು ಕೂಡಾ ಬೇರೆಯವರು ಕಾಲ ಕಾಲಕ್ಕೆ ತೆಗೆದಂತವುಗಳು. ಗಣಪಯ್ಯನವರು ಕೊನೆಯವರೆಗೂ ಬದುಕಿದ್ದ ಹಾರ್ಲೆ ಬಂಗಲೆಯ (ಬ್ರಿಟಿಷರು ಕಟ್ಟಿದ ಬಂಗಲೆ) ಒಂದು ಇಡಿಯಾದ ಫೋಟೋ ಕೂಡಾ ನನಗೆ ದೊರೆಯಲಿಲ್ಲ.

ಮಂಜಯ್ಯ ಮತ್ತು ದ್ಯಾವಯ್ಯ

ಈ ಎಲ್ಲ ಕಾರಣಗಳಿಂದ ನನಗೆ ದಕ್ಕಿದ ಮತ್ತು ನನ್ನ ನೆನಪುಗಳ ಸಂಗ್ರಹದಲ್ಲದ್ದನ್ನು ಬಳಸಿಕೊಂಡು ಹಲವರೊಡನೆ ಮತ್ತೊಮ್ಮೆ ಚರ್ಚಿಸಿ ಈ ಸಂಕಥನವನ್ನು ಕಟ್ಟುವ ಪ್ರಯತ್ನ ಮಾಡಿದ್ದೇನೆ. ಮತ್ತು ಆ ವಿವರಗಳನ್ನು ಮರುಪರಿಶೀಲನೆ ಮಾಡಿಕೊಂಡಿದ್ದೇನೆ.

ಅವರ ಒಡನಾಡಿಗಳಾಗಿದ್ದ ಹಿರಿಯರಲ್ಲಿ ಬಹಳ ಜನರು ಈಗ ಇಲ್ಲ.

ಈ ಬಗ್ಗೆ ಅವರ ಕುಟುಂಬವರ್ಗದವರಾದ ಡಾ.ರವೀಂದ್ರನಾಥ, ಕಮಲಾ ರವೀಂದ್ರನಾಥ, ಬಂಧುಗಳಾದ ವಾಸುದೇವ ಶರ್ಮ, ಎಂ.ಜಿ. ರಾಧಾಕೃಷ್ಣ ಹಾಗೂ ಗಣಪಯ್ಯನವರ ಕೊನೆಯವರೆಗೂ ಅವರ ಕಛೇರಿಯಲ್ಲಿ ಆಪ್ತಸಹಾಯಕಿಯಾಗಿ ದುಡಿದ ಕಮಲಾ.ಎನ್. ಭಟ್ ಇವರುಗಳ ಸಹಕಾರ ದೊಡ್ಡದು. ಗಣಪಯ್ಯನವರಿಗೆ ಸಂಬಂಧಿಸಿದ ಕೆಲವು ಅಪರೂಪದ ಫೋಟೋಗಳು ಇವರೆಲ್ಲರ ಸಂಗ್ರಹದ ಕೊಡುಗೆ.

ಕಮಲಾ. ಎನ್. ಭಟ್

ಹಾಗೆಯೇ ಅವರಲ್ಲಿ ಎಳವೆಯಿಂದ ಹಾರ್ಲೆಯಲ್ಲಿ ಕೆಲಸಮಾಡುತ್ತ ಬೆಳೆದ ಇಂದೂ ಕೂಡಾ ಗಣಪಯ್ಯನವರ ಗೆಳೆಯ ಗ್ರೆಗೊರಿ ಮಥಾಯಿಸ್ ರವರ ತೋಟವನ್ನು ನೋಡಿಕೊಳ್ಳುತ್ತಿರುವ ಬಿ.ಜಯರಾಮ ಶೆಟ್ಟರು, ನಡಹಳ್ಳಿ ಗ್ರಾಮದ ಮಂಜಯ್ಯ, ದ್ಯಾವಯ್ಯ. ರೇಖಾ, ಅಜ್ಜನಕೆರೆಯ ಚೆನ್ನಮ್ಮ, ಹೆನ್ನಲಿ ಮಂಜುನಾಥ್, ಸಣ್ಣಯ್ಯ, ಕೃಷ್ಣಪ್ಪ ಮುಂತಾದವರು ಹಲವು ಮಾಹಿತಿಗಳನ್ನು ನೀಡಿದ್ದಾರೆ.

ಮಂಜುನಾಥ್ ಮತ್ತು ಇತರರು

ಕೊಡಗಿನಿಂದ ಸಿ.ಪಿ.ಬೆಳ್ಳಿಯಪ್ಪ ಅವರ ಲೇಖನವೊಂದನ್ನು ಗೆಳೆಯರೊಬ್ಬರು ಕಳುಹಿಸಿ ಕೊಟ್ಟಿದ್ದಾರೆ.

ಇಲ್ಲಿ ಬಳಸಿಕೊಂಡಿರುವ ಪೋಟೋಗಳಲ್ಲಿ ಹೆಚ್ಚಿನವು ನನ್ನ ಸಂಗ್ರಹ, ಸಾಕಮ್ಮನವರ ಬಂಗಲೆಯ ಕೆಲವು ಅಮೂಲ್ಯ ಚಿತ್ರಗಳನ್ನು ಒದಗಿಸಿದ್ದು ಹಾರ್ಲೆ ಎಸ್ಟೇಟ್‌ನ ಇಂದಿನ ಮಾಲಿಕರಾದ ಡಿ.ಎಂ. ಪೂರ್ಣೇಶ್ ಅವರು.

ಇವರೆಲ್ಲರಿಗೆ ಕೃತಜ್ಞತೆಗಳು….

ಹಾಗೇ ಇನ್ನು ಕೆಲವು ಚಿತ್ರಗಳಿಗಾಗಿ ಗೂಗಲಪ್ಪನಿಗೂ ವಂದನೆಗಳು.

ಇವೆಲ್ಲದರೊಂದಿಗೆ ಈ ಬರಹದ ಮೂಲಕ ಅನಾವರಣ ಗೊಳ್ಳುತ್ತಿರುವ ಹಲವಾರು ಸಂಗತಿಗಳು. ಇನ್ನಷ್ಟು ವಿಚಾರಗಳನ್ನು ತೆರೆದಿಡುತ್ತಿವೆ. ಇದು ಸಾಮಾಜಿಕ ತಾಣದ ಶಕ್ತಿ ಕೂಡಾ. ಈ ಬರಹಗಳ ಮಾಲಿಕೆಯಲ್ಲಿ ಉಲ್ಲೇಖವಾಗಿರುವ ಹಲವಾರು ವ್ಯಕ್ತಿಗಳ ಬಗ್ಗೆ ಅನೇಕ ಮಾಹಿತಿಗಳು ಇಂದು ಲಭ್ಯ.

ವಾಸುದೇವ ಶರ್ಮಾ

ಈ ಬರಹಗಳು ಮುದ್ರಣವಾಗುವ ಸಂದರ್ಭದಲ್ಲಿ ಪರಿಷ್ಕರಿಸಿಕೊಳ್ಳಲು ಅವು ಸಹಾಯಕವಾಗಿವೆ.

ಈ ಬರಹಗಳ ಮುಂದುವರಿದ ಭಾಗವಾಗಿ ಬರೆಯಬಹುದಾದ ಕೆಲವು ಸಂಗತಿಗಳಿವೆ. ಕೆಲವು ದಿನಗಳ ವಿರಾಮದ ನಂತರ ಮತ್ತು ಅವು ನಿಮ್ಮೊಂದಿಗೆ ಮಾತನಾಡಲಿವೆ.

ಅಲ್ಲಿಯವರೆಗೆ …… ನಮಸ್ಕಾರ

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದು ಹೋದ ದಿನಗಳು -24: ಶಾಪ್ ಸಿದ್ಧೇಗೌಡ ಚಿನ್ನದ ಪದಕದ ಸ್ಥಾಪಕರ ಕುರಿತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...