Homeಕರ್ನಾಟಕಕ್ಲಬ್‌ಹೌಸ್‌ನಲ್ಲಿ ಕುವೆಂಪು ಮತ್ತು ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಅವಹೇಳನ

ಕ್ಲಬ್‌ಹೌಸ್‌ನಲ್ಲಿ ಕುವೆಂಪು ಮತ್ತು ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಅವಹೇಳನ

- Advertisement -
- Advertisement -

ಕನ್ನಡದ ಮಹತ್ವದ ಸಾಹಿತಿ ರಾಷ್ಟ್ರಕವಿ ಕುವೆಂಪುರವರನ್ನು ಮತ್ತು ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿರುವ ‘ಶ್ರೀರಾಮಾಯಣ ದರ್ಶನಂ’ ಕೃತಿಯ ಬಗ್ಗೆ ಅವಹೇಳಕಾರಿಯಾಗಿ ಹೀಯಾಳಿಸಿರುವ ಘಟನೆ ಸೋಮವಾರದಂದು ನಡೆದಿದೆ.

ಸಾಮಾಜಿಕ ಜಾಲತಾಣವಾದ ಕ್ಲಬ್‌ ಹೌಸ್‌ನಲ್ಲಿ ‘ನಾಲೆಡ್ಜ್ ಹೌಸ್ ಕನ್ನಡ’ ಎಂಬ ಗ್ರೂಪಿನಲ್ಲಿ ನಡೆದ ಚರ್ಚೆಯೊಂದರಲ್ಲಿ ದಿವ್ಯ ನಾಯಕ್ ಎಂಬ ಬಿಜೆಪಿ ಬೆಂಬಲಿಗ ಯುವತಿಯೊಬ್ಬರು, “ಕುವೆಂಪು ಅವರಿಗೆ ಗೌರವ ಯಾಕೆ ಕೊಡಬೇಕು? ಯಾರಿಗಾದರೂ ಗೌರವ ಕೊಡುವುದು ಅಥವಾ ಕೊಡದೇ ಇರುವುದು ನನ್ನ ವೈಯಕ್ತಿಕ ಆಯ್ಕೆ. ಕುವೆಂಪು ರಾಮಾಯಣ is something fuck all shit” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಯ್ಯೋ.. ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ!- ಎಚ್.ಡಿ.ಕುಮಾರಸ್ವಾಮಿ ಆಕ್ರೋಶ

“ಅದನ್ನು ಫಾಲೋ ಮಾಡುವುದಾಗಲಿ, ರೆಫರ್‌ ಮಾಡುವುದಾಗಲಿ ಮಾಡಬೇಡಿ. ಮೂಲ ಕೃತಿಗಳನ್ನು ಓದಿ. ಕುವೆಂಪು ಆಗಲಿ, ಕುವೆಂಪು ಅಪ್ಪ ಆಗಲಿ, ಯಾರೇ ಆಗಲಿ, ಹಿಂದೂಗಳಾಗಿ ಮೂಲ ಕೃತಿಗಳನ್ನು ಓದಿ. ಪುರಸ್ಕಾರ ಬಂದರೆ ಅವರೇನು ದೊಡ್ಡವರಲ್ಲ, ಪುರಸ್ಕಾರ ಎಷ್ಟೋ ಜನರಿಗೆ ಬಂದಿದೆ. ಅವರ (ಬಿಜೆಪಿಯೇತರ) ಸರ್ಕಾರ ಇದ್ದಾಗ ದೇಶ ವಿರೋಧಿಗಳಿಗೆ ಕೂಡಾ ಪುರಸ್ಕಾರ ಬಂದಿದೆ” ಎಂದು ವಿವಾದ ಸೃಷ್ಟಿಸಿದ್ದಾರೆ.

ಅವರ ಹೇಳಿಕೆಯ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಯುವತಿಯು ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿರುವ ರೋಹಿತ್ ಚಕ್ರತೀರ್ಥ ಅವರ ಆಪ್ತೆ ಎಂದು ಆರೋಪಿಸಲಾಗಿದೆ. “ಕ್ಲಬ್-ಹೌಸಿನಲ್ಲಿರುವ ಚಕ್ರತೀರ್ಥನ ಸಂಬಂಧಿಗಳಿಗೇಕೆ ಕುವೆಂಪುರವರ ಮೇಲೆ ದ್ವೇಷ ?” ಎಂದು ಪ್ರಶ್ನಿಸಲಾಗಿದೆ.

 

ರಾಷ್ಟ್ರಕವಿ ಕುವೆಂಪು ಅವರನ್ನು ಬಲಪಂಥಿಯರು ನಿರಂತರವಾಗಿ ಗುರಿಯಾಗಿಸುತ್ತಲೇ ಬರುತ್ತಿದ್ದಾರೆ. ಸ್ವತಃ ರೋಹಿತ್‌ ಚಕ್ರತೀರ್ಥ ಅವರು ಕೂಡಾ ನಾಡಗೀತೆಯನ್ನು ಅವಹೇಳನ ಮಾಡಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದರು. ದೇಶದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ಕುವೆಂಪು ಮೇಲಿನ ದಾಳಿಗಳು ಕೂಡಾ ಹೆಚ್ಚಾಗುತ್ತಿದೆ ಎಂದು ಚರ್ಚೆಯಾಗುತ್ತಿದೆ.

ಇದನ್ನೂ ಓದಿ: ‘#ಕನ್ನಡದಲ್ಲಿUPSC’ ಟ್ವಿಟರ್‌ನಲ್ಲಿ ಟ್ರೆಂಡ್‌; ಅಭಿಯಾನ ಬೆಂಬಲಿಸಲು ಕನ್ನಡಿಗರ ಕರೆ

ದಿವ್ಯ ನಾಯಕ್ ಅವರ ಹೇಳಿಕೆಯನ್ನು ಹಲವಾರು ಜನರು ಖಂಡಿಸಿದ್ದು, ಬಲಪಂಥೀಯರಿಗೆ ಕುವೆಂಪು ಮತ್ತು ಅವರು ಬರೆದಿರುವ ಕೃತಿಗಳ ಮೇಲೆ ಅಷ್ಟೊಂದು ದ್ವೇಷ ಯಾಕೆ? ಇದಕ್ಕೆ ಅವರ ಪುರೋಹಿತಶಾಹಿ ಮನಸ್ಥಿತಿ ಕಾರಣವಲ್ಲವೇ ಎಂಬ ವಿಷಯದಲ್ಲಿ ನಾನುಗೌರಿ.ಕಾಂ ಜೊತೆ ಮಾತನಾಡಿದ್ದಾರೆ.

ಜೆಎನ್‌ಯು ಕನ್ನಡ ಅಧ್ಯಯನಪೀಠದ ಮುಖ್ಯಸ್ಥರಾಗಿದ್ದ ಪ್ರೊ. ಪುರುಷೋತ್ತಮ್ ಬಿಳಿಮಲೆಯವರು ಮಾತನಾಡಿ, “ಬಲಪಂಥೀಯರ ಜೊತೆಗೆ ಚರ್ಚೆಯೆ ಸಾಧ್ಯವಿಲ್ಲ. ಎ.ಕೆ ರಾಮಾನುಜ ಅವರು ಸುಮಾರು ಮುನ್ನೂರು ರಾಮಾಯಣಗಳ ಬಗ್ಗೆ ಬರೆದಿದ್ದಾರೆ. ಈ ದೇಶದ ಸಾವಿರಾರು ರಾಮಾಯಣಗಳಲ್ಲಿ ವಾಲ್ಮಿಕಿ ರಾಮಾಯಣ ಕೂಡಾ ಒಂದು. ವಾಲ್ಮಿಕಿ ರಾಮಾಯಣವೇ ಮೂಲ ರಾಮಾಯಣ ಎಂದು ಯಾವುದೆ ಸಂಶೋಧಕರು ಒಪ್ಪಿಕೊಂಡಿಲ್ಲ ಹಾಗೂ ಐತಿಹಾಸಿಕವಾಗಿಯು ಅದು ದೃಡಪಟ್ಟಿಲ್ಲ. ಇದು ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂಬಂತೆ” ಎಂದು ತಿಳಿಸಿದರು.

“ಬಲಪಂಥೀಯರು ಕುವೆಂಪು ಅವರನ್ನು ವಿರೋಧಿಸಲು ಬೇಕಾಗಿ ವಾಲ್ಮಿಕಿ ರಾಮಾಯಣವನ್ನು ತರುತ್ತಾರೆ. ರಾಮಾಯಣದ ಬಹುತ್ವದ ಬಗ್ಗೆ ಕುಮಾರವ್ಯಾಸನೇ ಆ ಕಾಲದಲ್ಲಿ ‘ತಿಣುಕಿದನು ಫಣಿರಾಯ ರಾಮಾಯಣದ ಕತೆಗಳ ಭಾರದಲಿ’ ಎಂದು ಬರೆದಿದ್ದಾನೆ. ಕುವೆಂಪು ಮತ್ತು ಅವರು ಬರೆದ ರಾಮಾಯಣದ ಬಗ್ಗೆ ಈಗ ನಡೆಯುತ್ತಿರುವ ಚರ್ಚೆಗಳು ಮತ್ತಾ ಆರೋಪಗಳು ರಾಜಕೀಯ ಪ್ರೇರೇಪಿತವಾಗಿದ್ದು, ಅವುಗಳನ್ನು ರಾಜಕೀಯವಾಗಿಯೇ ಎದುರಿಸಬೇಕು” ಎಂದು ಹೇಳಿದರು.

ಇದನ್ನೂ ಓದಿ: ಕನ್ನಡದ ಮೊದಲ ಲೆಸ್ಬಿಯನ್ ಚಿತ್ರ ’ನಾನು ಲೇಡಿಸ್’ ತಸ್ವೀರ್ ದಕ್ಷಿಣ ಏಷ್ಯಾ ಚಿತ್ರೋತ್ಸವಕ್ಕೆ ಆಯ್ಕೆ

ಪ್ರಾಧ್ಯಾಪಕ ಕೀಲಾರ ನಾಗೇಗೌಡ ಅವರು ಮಾತನಾಡಿ, “ಕುವೆಂಪು ಬದುಕಿದ್ದಾಗಲೂ ಅವರ ಮೇಲೆ ದಾಳಿ ನಡೆಸಲಾಗುತ್ತಿತ್ತು, ಈ ದಾಳಿ ಈಗಲೂ ಮುಂದುವರೆದಿದೆ. ಕುವೆಂಪು ಅವರು ವೈದಿಕ ಮೌಲ್ಯವನ್ನು ಮುರಿದು, ಸರ್ವೋದಯ ಕಾಣಬೇಕೆಂಬ ಪೂರ್ಣದೃಷ್ಟಿಯಲ್ಲಿ ರಾಮಾಯಣ ಬರೆದವರು. ಸರ್ವೋದಯ ಮತ್ತು ಪೂರ್ಣದೃಷ್ಟಿ ಇತರ ರಾಮಾಯಣದಲ್ಲಿ ಇರಲಿಲ್ಲ. ಅವರು ರಾಮಾಯಣಕ್ಕೆ ಹೊಸ ಮೌಲ್ಯ ಕಟ್ಟಿದರು. ಇದು ಕೆಲವು ಜನರಿಗೆ ಆಗಿಬರುವುದಿಲ್ಲ. ಆದ್ದರಿಂದ ಅವರಿಗೆ ಕುವೆಂಪು ಮೇಲೆ ದ್ವೇಷವಿದೆ. ಇವರಿಗೆ ವೈದಿಕತೆ ಮತ್ತು ಗಂಡಾಳ್ವಿಕೆ ಉಳಿಯಬೇಕು. ಹಾಗಾಗಿ ವಾಲ್ಮಿಕಿ ರಾಮಾಯಣವೇ ಮೂಲ ರಾಮಾಯಣ ಎಂದು ಪ್ರತಿಪಾದಿಸುತ್ತಾರೆ” ಎಂದು ಹೇಳಿದ್ದರು.

ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಅವರು, “ಕುವೆಂಪು ಅವರು ಮಾನವತಾವಾದವನ್ನು ಪ್ರತಿಪಾದಿಸಿದವರು. ಜಾತಿ ಮತದ ಸಂಕೋಲೆ ಕಳಚಿ ಪ್ರತಿಯೊಬ್ಬರೂ ವಿಶ್ವ ಮಾನವರಾಗಬೇಕು ಎಂದು ಆಶಿಸಿದವರು. ಕ್ಲಬ್‌ಹೌಸ್‌ನಲ್ಲಿ ಅವರ ಬಗ್ಗೆ ಅವಾಚ್ಯ ಶಬ್ದ ಬಳಸಿದ ದಿವ್ಯಾ ನಾಯಕ್‌ ನಡೆ ಖಂಡನೀಯ” ಎಂದು ಹೇಳಿದರು.

ಕನ್ನಡ ಪರ ಹೋರಾಟಗಾರ, ರಣಧೀರ ಪಡೆಯ ಮುಖಂಡ ಹರೀಶ್ ಬೈರಪ್ಪ ಅವರು ದಿವ್ಯಾ ಅವರ ಹೇಳಿಕೆಯನ್ನು ಖಂಡಿಸಿದ್ದು, ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಆಲೋಚಿಸಲಾಗುತ್ತಿದೆ ಎಂದು ಹೇಳಿದ್ದಾರೆ.

“ಕುವೆಂಪು ಅವರ ವಿರುದ್ದ ಹಿಂದಿನಿಂದಲೂ ದಾಳಿಯಾಗುತ್ತಲೆ ಬಂದಿದೆ. ಈ ದಾಳಿ ಹೆಚ್ಚಾದಷ್ಟೂ ಅವರ ವಿಚಾರಧಾರೆಗಳು ಗಟ್ಟಿಯಾಗುತ್ತಲೆ ಬರುತ್ತಿದೆ, ಜೊತೆಗೆ ಪ್ರಸ್ತುತಗೊಳ್ಳುತ್ತಲೆ ಹೋಗುತ್ತಿದೆ. ಕುವೆಂಪು ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ, ರಾಜ್ಯ ಸರ್ಕಾರ, ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ದಿ ಪ್ರಾಧಿಕಾರ ಸ್ವಯಂ ಪ್ರೇರಿತ ಕೇಸು ದಾಖಲಿಸಬೇಕಿತ್ತು. ಆದರೆ ಈ ಯಾರಿಗೂ ಅವು ಬೇಕಿಲ್ಲ, ಕುವೆಂಪು ಬೈಯ್ಯುವುದಕ್ಕೋಸ್ಕರವೇ ಈ ಇಲಾಖೆ ಪ್ರಾಧಿಕಾರವನ್ನು ನೇಮಕ ಮಾಡಿದಂತಿದೆ” ಎಂದು ಹರೀಶ್ ಅವರು ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕನ್ನಡಿಗರು ನಿಮ್ಮ ಗುಲಾಮರಲ್ಲ, ನಾವು ಸ್ವಾಭಿಮಾನಿಗಳು: ಹಿಂದಿ ಬ್ಯಾನರ್‌ಗೆ ಮಸಿ ಬಳಿದ ರೂಪೇಶ್ ರಾಜಣ್ಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

6 COMMENTS

  1. ವಿಷಯ ಜ್ಞಾನ, ಬೌದ್ಧಿಕ ಸೂಕ್ಷ್ಮತೆ ಮತ್ತು ಗ್ರಹಿಕೆಯ ವಿಸ್ತಾರಗಳಿದ್ದವರು, ಪ್ರಸ್ತುತವೆನಿಸುತ್ತಿದ್ದ ಪ್ರತಿಯೊಂದು ವಿಷಯವನ್ನೂ ತರ್ಕಬದ್ಧವಾಗಿ, ಸರಳವಾಗಿ ಮತ್ತು ನಿಷ್ಠುರವಾಗಿ ವಿಮರ್ಶಿಸುತ್ತಿದ್ದವರು, ಕನ್ನಡದಲ್ಲಿ ಕುವೆಂಪು ಮಾತ್ರ! ಕುವೆಂಪು ಅವರನ್ನು ನಾನು ನೋಡಿಲ್ಲ; ಆದರೆ, ಅವರ ಪ್ರತಿಯೊಂದು ಕೃತಿಯಲ್ಲೂ ಅವರ ವ್ಯಕ್ತಿತ್ವ ಪ್ರಕಟಗೊಳ್ಳುತ್ತದೆ. ಅವರ ದಿವ್ಯ ಚೇತನ ಪ್ರಭಾವಿತಗೊಂಡ ಬಗೆಯನ್ನು ಕುಪ್ಪಳ್ಳಿಯಲ್ಲಿ ನೋಡಬಹುದು.

    ಅವರನ್ನು ಮತ್ತು, ಅವರ ಕೃತಿಗಳ ಆಳ ಮತ್ತು ವಿಸ್ತಾರವನ್ನು, ಪೂರ್ಣವಾಗಿ ಅರಿಯುವಷ್ಟು ನಮ್ಮಲ್ಲಿ ಹೆಚ್ಚಿನವರು ಬೆಳೆದಿಲ್ಲ ಎಂಬುದು ನನ್ನ ನಮ್ರ ತಿಳಿವಳಿಕೆ.

    ಸಾರ್ವಜನಿಕ ವೇದಿಕೆಗಳಲ್ಲಿ ಹೆಸರು ಮಾಡಲು, ಈ ಮಟ್ಟದ ಕೀಳು ಮಟ್ಟದ ಟೀಕೆ ಮಾಡಿದ ಈ ದೀವ್ಯಾ ನಾಯಕ್ ಗೆ ಮನೋವೈದ್ಯಕೀಯ ಚಿಕಿತ್ಸೆ ಅವಶ್ಯಕ ಎನ್ನಿಸುತ್ತದೆ.

  2. ಕುರುಡನೊಬ್ಬ ಆನೆಯನ್ನು ಮುಟ್ಟಿ ವರ್ಣಿಸಿದಂತಿದೆ. ಕುವೆಂಪು ಅವರ ವಿಚಾರಗಳು ಅನೇಕರನ್ನು ಜಾಗೃತ ಗೊಳಿಸಿದ ಸತ್ಯ ಎಲ್ಲೆಡೆ ಕಾಣುತ್ತಿದ್ದೇವೆ. ಶೂದ್ರ ಯುವಕರಿಗೆ ಧರ್ಮದ ಅಫೀಮು ಬಣ್ಣದ ಮಾತುಗಳಲ್ಲಿ ಬಿತ್ತಿ ಬೆಳೆ ತೆಗೆಯುವ ಮಂದಿಯ ಹುನ್ನಾರ ಬಯಲಾಗಿದೆ.
    ಗುಡಿ ಚರ್ಚು, ಮಸೀದಿಗಳು ಮೌಢ್ಯ ಬಿತ್ತುವ ಕೇಂದ್ರ ಗಳೆಂದು ಹೇಳಿದ ಮಾತು ಮಹಾ ಪೋಷಕರಾದ ಇವರಿಗೆ ಅರಗಿಸಿ ಕೊಳ್ಳಲು ಆಗಲಿಲ್ಲ ಎನ್ನುವುದು ಸತ್ಯ.

  3. ಕುವೆಂಪು ಮತ್ತು ಅವರ ಕೃತಿಗಳ ಬಗ್ಗೆ ಅವಹೇಳನವಾಗಿ ಮಾತನಾಡಿರುವುದು ಕಂಡನಾರ್ಹ.

  4. ಕುವೆಂಪು ರವರ ಪುಸ್ತಕಗಳ ಬಗ್ಗೆ ಅವಹೇಳನ ಮಾಡಿರುವ ದಿವ್ಯ ನಾಯಕ್ ರವರ ನಡವಳಿಕೆಯನ್ನು ಖಂಡಿಸುತ್ತೇನೆ

  5. ಮಹಾಚೇತನ ಕುವೆಂಪು ಅವರ ಬಗ್ಗೆ ಟೀಕಿಸಿರುವ ಮಹಾತಾಯಿ ನಿಮಗೆ ದೊಡ್ಡ ನಮಸ್ಕಾರ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...