Homeಕರ್ನಾಟಕಪುನೀತ್‌ ಎಂದ ಕೂಡಲೇ ಕಣ್ಣೆದುರಿಗೆ ಬರುವುದು ಡಾ.ರಾಜ್‌ ವ್ಯಕ್ತಿತ್ವ

ಪುನೀತ್‌ ಎಂದ ಕೂಡಲೇ ಕಣ್ಣೆದುರಿಗೆ ಬರುವುದು ಡಾ.ರಾಜ್‌ ವ್ಯಕ್ತಿತ್ವ

ಡಾ.ರಾಜ್‌ ಕುಟುಂಬದೊಂದಿಗೆ ಅಪಾರ ಒಡನಾಟ ಹೊಂದಿರುವ ಸಾಹಿತಿ ಹಾಗೂ ಸಿನಿಮಾ ನಿರ್ದೇಶಕರಾದ ಡಾ.ಬರಗೂರು ರಾಮಚಂದ್ರಪ್ಪ ಅವರು ಪುನೀತ್‌ ರಾಜ್‌ಕುಮಾರ್‌ ಅವರ ಮಾನವೀಯ ಕಾರ್ಯಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.

- Advertisement -
- Advertisement -

ಪುನೀತ್‌ ಎಂದ ಕೂಡಲೇ ನನ್ನ ಕಣ್ಣೆದುರಿಗೆ ಬರುವುದು ರಾಜ್‌ಕುಮಾರ್‌ ಅವರೇನೇ. ಪುನೀತ್‌ ಅಷ್ಟೇ ಅಲ್ಲ, ರಾಜ್‌ಕುಮಾರ್‌ ಅವರ ಮೂವರು ಮಕ್ಕಳೂ ಡಾ.ರಾಜ್‌ ಅವರ ಸಾರ್ವಜನಿಕ ನಡವಳಿಕೆಯ ಮಾದರಿಯನ್ನು ಅನುಸರಿಸಿದವರು.

ಜನಪ್ರಿಯ ಹೀರೋ ಎಂದ ಕೂಡಲೇ ಅಭಿಮಾನಿಗಳ ದೊಡ್ಡ ಬಳಗವೇ ಇರುತ್ತದೆ. ಆಗ ಒಬ್ಬ ಹೀರೋ ನಿಜವಾದ ಅರ್ಥದಲ್ಲಿ ತನ್ನ ಚಿತ್ರಗಳ ಮೂಲಕ ಯಾವ ಸಂದೇಶವನ್ನು ನೀಡುತ್ತಾನೆ ಎಂಬುದು ಮುಖ್ಯವಾಗುತ್ತದೆ. ಅಂದರೆ ಅವರು ಎಂತಹ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಸಂಗತಿ.

ಪಾತ್ರದ ವಿಚಾರ ನಿರ್ದೇಶಕನದ್ದಲ್ಲವೇ ಎಂದು ಕೆಲವರು ಕೇಳಬಹುದು, ನಿಜ. ಆದರೆ ಜನಪ್ರಿಯ ನಟರಾದವರ ಕೈಯಲ್ಲೇ ಕಥಾ ವಸ್ತುವಿನ ಆಯ್ಕೆ ಇರುತ್ತದೆ. ನಾನು ಇಂತಹ ಕಥೆ ಇದ್ದರೆ ಮಾತ್ರ ನಟಿಸುತ್ತೇನೆ ಎಂದು ಹೇಳುವ ಮಟ್ಟಕ್ಕೆ ನಟ ಬೆಳೆದಿರುತ್ತಾನೆ. ಇಂತಹ ಸಂದರ್ಭದಲ್ಲಿ ತನಗೆ ಹೊಂದುವಂತಹ ಕಥೆ ಇದ್ದಾಗ ಮಾತ್ರ ನಟನೆಗೆ ಮುಂದಾಗುತ್ತಾನೆ. ಒಬ್ಬ ನಾಯಕ ಎಂತಹ ಕಥೆ ಆಯ್ಕೆ ಮಾಡಿಕೊಳ್ಳುತ್ತಾನೆ ಎಂಬುದು ಮುಖ್ಯವಾಗುತ್ತದೆ. ಈ ಅರ್ಥದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರು ಸದಭಿರುಚಿಯ ಕಥಾ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು.

ತಾಯಿ ಮತ್ತು ಮಗನ ಸಂಬಂಧದ ಕೌಟುಂಬಿಕ ಪಾತ್ರಗಳು ಒಂದು ಕಡೆ ಇರುತ್ತವೆ. ಇನ್ನೊಂದು ಕಡೆ ಅನಾಥ ಮಕ್ಕಳನ್ನು ಪುನರ್ವಸತಿ ಕೇಂದ್ರದಲ್ಲಿ ಇಟ್ಟಾಗ ಏನು ಸಂದೇಶ ಸಾರಬಹುದು, ಗಣಿಗಾರಿಕೆ ನಡೆಯುತ್ತಿರುವ ಸಂದರ್ಭದಲ್ಲಿ ಗಣಿಗಾರಿಕೆಯ ಅನಾಹುತಗಳೇನು?- ಈ ಥರದ ಕಥಾ ವಸ್ತುಗಳಲ್ಲೂ ಅವರು ಹೀರೋ ಆಗಿ ಅಭಿನಯಿಸಿದರು.

ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ಜಿಮ್‌ನಲ್ಲಿ ಕುಸಿದು ಬೀಳುತ್ತಿರುವ ಈ ವಿಡಿಯೊ ‘ಪುನೀತ್‌ ರಾಜ್‌ಕುಮಾರ್‌’ ಅವರದಲ್ಲ

ಹೀರೋಗಳ ಸಾರ್ವಜನಿಕ ನಡೆವಳಿಕೆಯೂ ಬಹಳ ಮುಖ್ಯ ಎಂದು ಭಾವಿಸಿದ್ದೇನೆ. ಆ ದೃಷ್ಟಿಯಿಂದಲೂ ನಮ್ಮ ಚಿತ್ರರಂಗದಲ್ಲಿ ಮೆಚ್ಚಲೇಬೇಕಾದ, ಗೌರವಿಸಬೇಕಾದ ವ್ಯಕ್ತಿತ್ವ ಪುನೀತ್‌ ರಾಜ್‌ಕುಮಾರ್‌. ವರನಟ ಡಾ.ರಾಜ್‌ಕುಮಾರ್‌ ಥರದ ಪ್ರಬುದ್ಧ ಕಲಾವಿದ ಮತ್ತೊಬ್ಬ ಸಿಗುವುದು ಕಷ್ಟ. ಹೀಗಾಗಿ ರಾಜ್‌ ಕುಮಾರ್ ಅವರನ್ನು ಇಡೀ ನಾಡು ಅಪಾರವಾಗಿ ಗೌರವಿಸುತ್ತದೆ. ಜೊತೆಗೆ ರಾಜ್‌ಕುಮಾರ್‌ ಅವರ ಸಾರ್ವಜನಿಕ ನಡವಳಿಕೆ ಮಾದರಿಯಾದದ್ದು. ಡಾ.ರಾಜ್‌ಕುಮಾರ್‌ ಅವರ ಸಜ್ಜನಿಕೆ, ವಿನಯ, ಅನ್ಯರ ಬಗೆಗಿನ ಗೌರವ, ಸರಳತೆ, ಅಹಂಕಾರ ಇಲ್ಲದೆ ಇರುವುದು- ಇದೆಲ್ಲವೂ ಪುನೀತ್‌ ರಾಜ್‌ಕುಮಾರ್‌ ಅವರಲ್ಲಿತ್ತು.

ಪುನೀತ್‌ ರಾಜ್‌ಕುಮಾರ್‌ ಅವರ ಸಾರ್ವಜನಿಕ ನಡವಳಿಕೆ ಇವತ್ತಿನ ಯುವಕರ ದೃಷ್ಟಿಯಿಂದ ಬಹಳ ಮುಖ್ಯವಾದದ್ದು. ಯಾಕೆಂದರೆ ಒಬ್ಬ ಹೀರೋ ಹೇಗಿರುತ್ತಾನೋ ಹಾಗೇ ತಮ್ಮ ಅಭಿಮಾನಿಗಳು ವರ್ತಿಸಲು ಶುರುಮಾಡುತ್ತಾರೆ. ಪುನೀತ್‌ ಅವರ ಸಭ್ಯತೆ ಮತ್ತು ಸಂಭಾವಿತನದ ಇಮೇಜ್‌ ಯುವಕರಿಗೆ ಮಾದರಿಯಾಗಿತ್ತು. ಈ ಗುಣಗಳು ಅವರ ಅಭಿಮಾನಿಗಳ ಮೇಲೆ ಪ್ರಭಾವ ಬೀರಿದೆ.

ರಾಜ್‌ಕುಮಾರ್‌ ಅವರ ಮಕ್ಕಳು ಎಲ್ಲಿಯೂ ಸಾರ್ವಜನಿಕ ವಿವಾದಗಳಿಗೆ ಒಳಗಾದವರಲ್ಲ. ಪುನೀತ್ ಅವರನ್ನು ಕರ್ನಾಟಕದ ಅಸಂಖ್ಯಾತ ಯುವಕರು ಇಷ್ಟಪಡುತ್ತಾರೆ. ಅವರನ್ನು ಸಾರ್ವತ್ರಿಕವಾಗಿ ಇಷ್ಟಪಡುವ ಬಹುದೊಡ್ಡ ಪಡೆಯೇ ನಾಡಿನಲ್ಲಿದೆ. ಅವರ ನಡವಳಿಕೆಯನ್ನು ಸಾಮಾಜಿಕ ಜವಾಬ್ದಾರಿಯ ನಡವಳಿಕೆ ಎನ್ನಬಹುದು.

ಸಾರ್ವಜನಿಕ ಸೇವೆಯ ಗುರುತು

ಪುನೀತ್‌ ರಾಜ್‌ಕುಮಾರ್‌ ಅವರ ಸಾರ್ವಜನಿಕ ಸೇವೆ ಅನನ್ಯವಾದದ್ದು. ಮೈಸೂರಿನಲ್ಲಿ ಪಾರ್ವತಮ್ಮ ರಾಜ್‌ಕುಮಾರ್‌ ಅವರ ನೇತೃತ್ವದಲ್ಲಿ ಶಕ್ತಿಧಾಮ ಶುರು ಮಾಡಲಾಯಿತು. ರಾಜ್‌ಕುಮಾರ್‌ ಅವರ ಬೆಂಬಲ ಶಕ್ತಿಧಾಮ ಸ್ಥಾಪನೆಗೆ ಇತ್ತು. ಬೀದಿಗೆ ಬಿದ್ದ ಹೆಣ್ಣು ಮಕ್ಕಳಿಗೆ ಆಶ್ರಯವನ್ನು ಶಕ್ತಿಧಾಮ ನೀಡುತ್ತಿದೆ. ಪುನೀತ್‌ ರಾಜ್‌ಕುಮಾರ್‌ ಹಾಡಿ ಸಂಪಾದಿಸಿದ್ದು ಇರಬಹುದು, ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋ ಮೂಲಕ ಬಂದ ಸಂಭಾವನೆ ಇರಬಹುದು- ಇದರ ಬಹುಪಾಲನ್ನು ಶಕ್ತಿಧಾಮಕ್ಕೆ ನೀಡುತ್ತಾ ಬಂದಿದ್ದರು. ಅನೇಕ ಅನಾಥಾಶ್ರಮಗಳಿಗೆ ಹಣ ಕೊಡುತ್ತಿದ್ದರು.

PC: newindianexpress.com

ರಾಜ್‌ಕುಮಾರ್‌‌ ಅವರು ನೂರು ಸಿನಿಮಾಗಳನ್ನು ಪೂರೈಸಿದಾಗ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿ.ವಿ.ಎಲ್‌.ಶಾಸ್ತ್ರಿಯವರ ಅಧ್ಯಕ್ಷತೆಯಲ್ಲಿ ಒಂದು ಶಿಕ್ಷಣ ಸಮಿತಿ ರಚಿಸುತ್ತಾರೆ. ಆನಂತರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸಾಕಷ್ಟು ಕೆಲಸಗಳನ್ನು ಮಾಡುತ್ತಾರೆ. ಅನಾಥಾಶ್ರಮಗಳಿಗೆ ಸಹಕಾರ ನೀಡುತ್ತಾರೆ. ರಂಗ ಮಂದಿರಗಳು ರಾಜ್ಯಾದ್ಯಾಂತ ಸ್ಥಾಪನೆಯಾಗಲು ರಸಸಂಜೆ ಕಾರ್ಯಕ್ರಮಗಳ ಮೂಲಕ ನೆರವಾಗುತ್ತಾರೆ.

ಒಮ್ಮೆ ರಾಜ್‌ಕುಮಾರ್‌ ಅವರು ನಮ್ಮ ಮನೆಗೆ ಬಂದಾಗ, “ಇಷ್ಟೆಲ್ಲ ಮಾಡುತ್ತೀರಿ, ಆದರೂ ಎಲ್ಲಿಯೂ ಪ್ರಚಾರ ತೆಗೆದುಕೊಳ್ಳುವುದಿಲ್ಲವಲ್ಲ ಸಾರ್” ಎಂದೆ. “ನಾವು ಕಲಾವಿದರು. ಬಲಗೈಲಿ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದು. ನಾವು ಸಿನಿಮಾ ಮಾಡ್ತೀವಿ. ಇದನ್ನೆಲ್ಲ ಯಾಕೆ ಪ್ರಚಾರ ಮಾಡಬೇಕು” ಎಂದಿದ್ದರು.

ಇದನ್ನೂ ಓದಿರಿ: ಹೊಸ ಪ್ರತಿಭೆಗಳ ಮಹಾನ್‌ ಪ್ರೋತ್ಸಾಹಕ ಪುನೀತ್‌ ರಾಜ್‌ಕುಮಾರ್

ಪುನೀತ್ ಅವರಲ್ಲಿ ಒಮ್ಮೆ ಮಾತನಾಡುತ್ತಿದ್ದಾಗ ಹೇಳಿದೆ: “ನಿಮ್ಮ ತಂದೆಯವರು ಬಲಗೈಲಿ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದು ಎಂದು ಹೇಳುತ್ತಿದ್ದರು. ಆ ಕಾಲದಲ್ಲಿ ಹೇಳಿದ್ದನ್ನೇ ನೀವು ಈಗಲೂ ಅನುಸರಿಸುತ್ತಿದ್ದೀರಿ. ಆದರೆ ಇವತ್ತಿನ ಪ್ರಪಂಚ, ಇವತ್ತಿನ ಸಮಾಜ ಬದಲಾಗಿದೆ. ನೀವು ಏನು ಮಾಡುತ್ತಿದ್ದೀರಿ ಎಂದು ಜನ ಕೇಳುತ್ತಾರೆ. ನೀವು ಮಾಡಿರುವುದನ್ನು ಹೇಳಬಹುದಲ್ಲ” ಎಂದೆ. ಆಗ ಪುನೀತ್ ಅವರು (ಐದು ವರ್ಷಗಳ ಹಿಂದೆ) ನಮ್ಮ ಮನೆಗೆ ಸಹಾಯಕರ ಮೂಲಕ ಒಂದು ಪಟ್ಟಿ ಕಳುಹಿಸಿಕೊಟ್ಟರು. ಸುಮಾರು ಐವತ್ತರಿಂದ ಅರವತ್ತು ಸರ್ಕಾರಿ ಶಾಲೆಗಳಿಗೆ ಲಕ್ಷಾಂತರ ರೂಪಾಯಿ ನೀಡಿರುವ ವಿವರಗಳನ್ನು ಆ ಪಟ್ಟಿಯಲ್ಲಿ ನೋಡಿದೆ.

ಸರ್ಕಾರಿ ಶಾಲೆಗಳಿಗೆ ಅವರು ಹಣ ನೀಡಿರುವುದು ಮುಖ್ಯ ಅನಿಸಿತು. ಕೆಲವು ಸರ್ಕಾರಿ ಶಾಲೆಗಳಿಗೆ ಕೊಠಡಿಗಳನ್ನು ಕಟ್ಟಿಸಿಕೊಟ್ಟಿದ್ದರು, ಕೆಲವು ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್‌ ಕೊಟ್ಟಿದ್ದರು. ಹಣ ಸಹಾಯ ಮಾಡಿದ್ದರು. ವೃದ್ಧಾಶ್ರಮಗಳಿಗೆ, ಅನಾಥಾಶ್ರಮಗಳಿಗೆ ಹಣ ಕೊಟ್ಟಿದ್ದರು. ಹಾಗಾಗಿ ಪುನೀತ್‌ ಯುವಕರಿಗೆ ರಂಜನೆ ಮಾಡುತ್ತಿದ್ದ ನಟನಾಗಿ ಅಷ್ಟೇ ಇರಲಿಲ್ಲ. ಸಾಮಾಜಿಕ ಜವಾಬ್ದಾರಿಗಳನ್ನು ಸಿನಿಮಾಗಳ ಮೂಲಕ ತೋರಿಸಿಕೊಡುತ್ತಿದ್ದರು. ಯುವಕರು ಹಾದಿ ತಪ್ಪಬಹುದಾದ ಸಿನಿಮಾಗಳನ್ನು ಅವರು ಮಾಡಲಿಲ್ಲ.

ಜೂನಿಯರ್‌ ರಾಜ್‌ಕುಮಾರ್‌ ಎಂದೇ ಖ್ಯಾತರಾದ ಹಾವೇರಿಯ ಅಶೋಕ್‌ ಬಸ್ತಿ ಅವರು ರಾಜ್‌ಕುಮಾರ್‌ ಅವರ ಹೆಸರಲ್ಲಿ ಸಾಂಸ್ಕೃತಿಕ ಭವನ ಮಾಡಲಿದ್ದರು. ಅದೇ ಸಮಯದಲ್ಲಿ ಧಾರಾವಾಡದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರು ಶೂಟಿಂಗ್‌ನಲ್ಲಿ ಇದ್ದರು. ಅಶೋಕ್ ಬಸ್ತಿ ಅವರ ಸಾಂಸ್ಕೃತಿಕ ಭವನದ ಕುರಿತು ಪುನೀತ್‌ ಅವರಿಗೆ ತಿಳಿಸಿದೆ. ಸಾಂಸ್ಕೃತಿಕ ಭವನದ ಶಂಕು ಸ್ಥಾಪನೆಗೆ ಹೋಗಿಬಂದಿದ್ದರು. ಇನ್ನೊಬ್ಬರು ಜೂನಿಯರ್‌ ರಾಜ್‌ಕುಮಾರ್‌ ಕುಂಬಳಗೋಡು ಬಳಿಯ ಮುನಿಕುಮಾರ್‌. ಪುನೀತ್‌ ರಾಜ್‌ಕುಮಾರ್‌ ಅವರನ್ನು ಭೇಟಿ ಮಾಡಬೇಕು ಎಂಬ ಆಕಾಂಕ್ಷೆಯನ್ನು ತೋಡಿಕೊಂಡಿದ್ದರು. ಇದನ್ನು ತಿಳಿಸಲು ಹದಿನೈದು ದಿನಗಳ ಹಿಂದೆ ಪುನೀತ್ ಅವರಿಗೆ ಕರೆ ಮಾಡಿದ್ದೆ. “ಚೂರು ಕೆಲಸಗಳಿವೆ. ಖಂಡಿತ ಭೇಟಿ ಮಾಡೋಣ” ಎಂದಿದ್ದರು.

ಮೊದಲೆಲ್ಲ ಕರೆ ಮಾಡಿದಾಗ ‘ಸಾರ್‌’ ಎನ್ನುತ್ತಿದ್ದರು. ಇತ್ತೀಚೆಗೆ ನನ್ನನ್ನು ‘ಅಣ್ಣ’ ಎನ್ನುತ್ತಿದ್ದರು. ಮೊನ್ನೆಯೂ ‘ಆಯ್ತು ಅಣ್ಣ, ಮುನಿಕುಮಾರ್‌ ಅವರನ್ನು ಭೇಟಿಯಾಗೋಣ’ ಎಂದಿದ್ದರು. ಅಷ್ಟು ಆತ್ಮೀಯತೆ ಇತ್ತು. ಯಾವುದಾದರೂ ಆಡಿಯೋ ರಿಲೀಸ್‌ಗೆ ಕರೆದರೆ ತಕ್ಷಣ ಬಂದು ಬಿಡುತ್ತಿದ್ದರು. ಒಂದು ಸಿನಿಮಾವನ್ನು ನೀವು ನೋಡಬೇಕು ಎಂದರೆ ಬಂದು ನೋಡುತ್ತಿದ್ದರು. ಅವರ ವಿನಯವಂತಿಗೆ ಅಪಾರ.

ಅವರನ್ನು ಚಿಕ್ಕವರಿದ್ದಾಗಿನಿಂದಲೂ ನೋಡಿದ್ದೇನೆ. ಅವರ ಅಭಿನಯ, ಅವರು ನಡೆದುಕೊಳ್ಳುತ್ತಿದ್ದ ರೀತಿ… ಇಷ್ಟು ಚಿಕ್ಕ ವಯಸ್ಸಿಗೆ ಹೋಗಿದ್ದನ್ನು ಊಹಿಸಿಕೊಳ್ಳಲೂ ಆಗುತ್ತಿಲ್ಲ.

-ಡಾ.ಬರಗೂರು ರಾಮಚಂದ್ರಪ್ಪ

ನಿರೂಪಣೆ: ಯತಿರಾಜ್‌ ಬ್ಯಾಲಹಳ್ಳಿ


ಇದನ್ನೂ ಓದಿರಿ: ಕಂಠೀರವ ಸ್ಟುಡಿಯೊದಲ್ಲಿ ಪುನೀತ್‌ ರಾಜ್‌ಕುಮಾರ್‌ ಅಂತ್ಯ ಸಂಸ್ಕಾರ; ಬಿಗಿ ಬಂದೋಬಸ್ತ್‌‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...