Homeಮುಖಪುಟಬೆಳ್ಳಿಚುಕ್ಕಿ; ಬಾಹ್ಯಾಕಾಶದಲ್ಲಿ ಅತ್ಯಂತ ದೊಡ್ಡದಾದ ಸ್ಫೋಟ?

ಬೆಳ್ಳಿಚುಕ್ಕಿ; ಬಾಹ್ಯಾಕಾಶದಲ್ಲಿ ಅತ್ಯಂತ ದೊಡ್ಡದಾದ ಸ್ಫೋಟ?

- Advertisement -
- Advertisement -

ನಭೋಮಂಡಲದಲ್ಲಿ ನಡೆಯುವ ಅತ್ಯಂತ ವಿಸ್ಮಯಕಾರಿ ವಿದ್ಯಮಾನ ಯಾವುದೆಂದು ಯೋಚಿಸಿದ್ದೀರಾ? ನೀವು ಯಾವುದಾದರೂ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಚರ್ಚೆಯಲ್ಲಿಯೋ, ಉಪನ್ಯಾಸದಲ್ಲಿಯೋ ಭಾಗವಹಿಸಿದ್ದರೆ, ಈ ವಿಸ್ಮಯದ ವಿದ್ಯಮಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಸಾಮಾನ್ಯವಾಗಿ ಕೇಳೇ ಇರುತ್ತೀರಿ! ಅಷ್ಟು ಚಿರಪರಿಚಿತವಾಗಿರುವ ಈ ವಿದ್ಯಮಾನ ಅಷ್ಟೇ ಕುತೂಹಲವನ್ನು ಮತ್ತು ನಿಗೂಢತೆಯನ್ನು ತನ್ನೊಳಗೆ ಇಟ್ಟುಕೊಂಡಿದೆ. ಇಷ್ಟು ಹೊತ್ತಿಗೆ ನೆನಪಾಗಿರಬಹುದಲ್ಲವಾ? ಹೌದು ಅದೇ ಸೂಪರ್‌ನೋವಾ (Supernova)!

ಈ ಸೂಪರ್‌ನೋವಾ ಬಗ್ಗೆ ನೀವು ಕೇಳಿರಬಹುದು? ಬಾಹ್ಯಾಕಾಶದಲ್ಲೇ ಅತ್ಯಂತ ದೊಡ್ಡದಾದ ಸ್ಫೋಟವಾ ಇದು? ನಕ್ಷತ್ರಗಳ ಅಂತ್ಯ ಕಾಲವೇ? ಸೂಪರ್‌ನೋವಾ ಆದ ನಕ್ಷತ್ರ ಆಕಾಶದಲ್ಲಿ ಬೆಳಗ್ಗೆ ಸಮಯದಲ್ಲಿಯೂ ಕಾಣುತ್ತದೆಯೇ? ಎಂಬಂತಹ ವಿಚಾರಗಳನ್ನು ನೀವು ಕೇಳಿರಬಹುದು. ಇತ್ತೀಚಿನ ಅಂತಹ ಒಂದು ಸುದ್ದಿ ಕೂಡ ನಿಮ್ಮ ಕಿವಿಗೆ ಬಿದ್ದಿರಬಹುದು. ಅದೇನೆಂದರೆ, ವಿಜ್ಞಾನಿಗಳು ಪ್ರಥಮ ಬಾರಿಗೆ ಹಿಂದೆಂದಿಗಿಂತಲೂ ವಿವರವಾಗಿ, ದೂರದರ್ಶಕದಲ್ಲಿ ದಾಖಲೆಯಾಗಿದ್ದ ದತ್ತಾಂಶಗಳ ಮೂಲಕ ಸೂಪರ್‌ನೋವಾಗೊಂಡ ನಕ್ಷತ್ರದ ವಿವರಣಾತ್ಮಕ ಚಿತ್ರವನ್ನು ರಚಿಸಿದ್ದಾರೆ. ಇದೇ ಮೊದಲ ಬಾರಿಗೆ ಇಂತಹ ವೈಜ್ಞಾನಿಕ ಮೈಲುಗಲ್ಲನ್ನು ವಿಜ್ಞಾನಿಗಳು ಸಾಧಿಸಿರುವುದು. ಇದು ನಮ್ಮ ನಭೋಮಂಡಲದ ಹುಟ್ಟಿನ ಬಗ್ಗೆ ಇರುವ ಪ್ರಶ್ನೆಗಳಿಗೆ ಹಾಗೂ ನಕ್ಷತ್ರಗಳ ಬಗ್ಗೆ ಇದ್ದ ಕುತೂಹಲಕಾರಿ ಅಂಶಗಳ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಲಿದೆ. ಅಂದಹಾಗೆ, ನಾಸಾ ನಭೋಮಂಡಲಕ್ಕೆ ಹಾರಿಸಿದ್ದ ಬಾಹ್ಯಾಕಾಶ ದೂರದರ್ಶಕವಾದ ಕೆಪ್ಲರ್ ಸಹಾದಿಂದ ಈ ಸೂಪರ್‌ನೋವಾದ ವಿವರಣಾತ್ಮಕ ಚಿತ್ರವನ್ನು ರಚಿಸಲು ಸಾಧ್ಯವಾಗಿರುವುದು.

ಆಕಾಶದಲ್ಲಿ ಕಾಣುವ ಎಲ್ಲ ನಕ್ಷತ್ರಗಳೂ ಹುಟ್ಟುತ್ತವೆ ಮತ್ತು ಸಾಯುತ್ತವೆ (ಸಾಯುತ್ತವೆ ಅನ್ನುವ ಪದ ಸೂಕ್ತವಲ್ಲದಿದ್ದರೆ, ನಶಿಸಿಹೋಗುತ್ತವೆ ಎಂದಿಟ್ಟುಕೊಳ್ಳಬಹುದು, ಇರಲಿ). ತಮ್ಮ ಜೀವತಾವಧಿಯಲ್ಲಿ, ಅದರ ಗಾತ್ರ ಮತ್ತು ತಿರುಳಿನಲ್ಲಿರುವ (Core) ಧಾತುಗಳಿಗನುಸಾರವಾಗಿ (Elements) ಈ ನಕ್ಷತ್ರಗಳ ವಿವಿಧ ಹಂತಗಳನ್ನು ಗುರುತಿಸಲಾಗಿದೆ: ಯೌವ್ವನದ ನಕ್ಷತ್ರಗಳು (Young Stars), ದೈತ್ಯ ನಕ್ಷತ್ರಗಳು (Giant Stars), ಅತೀ ದೈತ್ಯ ನಕ್ಷತ್ರಗಳು (Super Giant Stars), ನ್ಯೂಟ್ರಾನ್ ನಕ್ಷತ್ರಗಳು (Neutron Stars) ಹೀಗೆ ಹಲವು ಹಂತಗಳನ್ನು ನಕ್ಷತ್ರಗಳಲ್ಲಿ ಗುರುತಿಸಲಾಗಿದೆ. ತಿರುಳಿನ ದ್ರವ್ಯರಾಶಿಗೆ ಅನುಸಾರವಾಗಿ ನಕ್ಷತ್ರಗಳು ವಿವಿಧ ಹಂತಗಳಲ್ಲಿ ಇರುವುದನ್ನು ನಾವು ನೋಡಬಹುದಾಗಿದೆ. ಸೂಪರ್‌ನೋವಾ ವಿದ್ಯಮಾನ ನಕ್ಷತ್ರಗಳ ಅಂತಿಮ ಹಂತದಲ್ಲಿ ಒಂದು. ಆದರೂ ಎಲ್ಲ ನಕ್ಷತ್ರಗಳೂ ಸೂಪರ್‌ನೋವಾ ಆಗುವುದಿಲ್ಲ. ಉದಾಹರಣೆಗೆ ನಮ್ಮ ಸೂರ್ಯ ಸೂಪರ್‌ನೋವಾಗೊಳ್ಳುವುದಿಲ್ಲ.

ಮಾನವನು ಪ್ರಸ್ತುತ ಸೂಪರ್‌ನೋವಾವನ್ನು ಅಧ್ಯಯನ ಮಾಡಬಹುದೆ?

ಇಡೀ ಬ್ರಹ್ಮಾಂಡದಲ್ಲೇ ಅತ್ಯಂತ ದೊಡ್ಡದಾದ ಸ್ಫೋಟ ಸೂಪರ್‌ನೋವಾ ಆಗುವ ನಕ್ಷತ್ರಗಳನ್ನು ಗುರುತಿಸಲು ‘ಚಂದ್ರಶೇಖರ್ ಮಿತಿ’ ಎನ್ನುವ ಥಿಯರಿಯನ್ನು ಬಳಸುತ್ತೇವೆ. ಈ ಥಿಯರಿಯ ಪ್ರಕಾರ, ಸೂರ್ಯನ ದ್ರವ್ಯರಾಶಿಗಿಂತಲೂ 1.4ರಷ್ಟು ಹೆಚ್ಚಿರು ನಕ್ಷತ್ರಗಳು ಸೂಪರ್‌ನೋವಾ ಆಗುತ್ತವೆ. ಈ ಅಂಶವನ್ನು ಮೊದಲ ಬಾರಿಗೆ ಭಾರತೀಯ ಮೂಲದ ವಿಜ್ಞಾನಿ ಸುಬ್ರಮಣ್ಯನ್ ಚಂದ್ರಶೇಖರ್ ತಮ್ಮ ಅಧ್ಯಯನದ ಮೂಲಕ ತಿಳಿಸಿದರು. ಈ ಅಧ್ಯಯನಕ್ಕೆ 1983ರಲ್ಲಿ ನೊಬೆಲ್ ಪ್ರಶಸ್ತಿಯು ಲಭಿಸಿತ್ತು. ಚಂದ್ರಶೇಖರ್ ಮಿತಿ ಉಪಯೋಗಿಸಿಕೊಂಡು ಯಾವ ಯಾವ ನಕ್ಷತ್ರಗಳು ಸೂಪರ್‌ನೋವಾ ಆಗುತ್ತವೆ ಎಂಬುದನ್ನು ಕಂಡುಕೊಳ್ಳಬಹುದಾಗಿದೆ.

ನಕ್ಷತ್ರವು ಸೂಪರ್‌ನೋವಾ ಆಗುವ ಸಂದರ್ಭದಲ್ಲಿ, ಅದರ ಹೆಚ್ಚು ದ್ರವ್ಯರಾಶಿಯಿಂದ ಉಂಟಾದ ಗುರುತ್ವ ಬಲವು ನಕ್ಷತ್ರವನ್ನು ಕಡಿಮೆ ಗಾತ್ರಕ್ಕೆ ಕುಸಿಯುವಂತೆ ಮಾಡುತ್ತಿದ್ದರೆ, ಈ ಗಾತ್ರದ ಕಡಿಮೆಯಿಂದ ಉಂಟಾದ ತೀವ್ರ ಒತ್ತಡವು, ನಕ್ಷತ್ರವನ್ನು ಹಿಗ್ಗುವಂತೆ ಮಾಡುತ್ತಿರುತ್ತದೆ. ಈ ಎರಡು ಬಲಗಳು (ಗುರುತ್ವ ಬಲ ಮತ್ತು ಒತ್ತಡದ ಬಲ) ವಿರುದ್ಧ ದಿಕ್ಕಿನಲ್ಲಿದ್ದು, ಪ್ರತಿ ಕ್ಷಣವೂ ಪೈಪೋಟಿಯಲ್ಲಿರುತ್ತವೆ.

ಈ ಸ್ಥಿತಿಯಲ್ಲಿ ನಕ್ಷತ್ರದ ತಿರುಳಿನ ದ್ರವ್ಯರಾಶಿಯ ಒತ್ತಡ ಮತ್ತು ಅದರ ಗುರುತ್ವಬಲ ಹೆಚ್ಚು ಅಸ್ಥಿರವಾಗಿದ್ದು, ಯಾವುದೇ ಸಂದರ್ಭದಲ್ಲಿ ಸಿಡಿದು, ತನ್ನೆಲ್ಲಾ ದ್ರವ್ಯವನ್ನು ಹೆಚ್ಚು ತೀವ್ರತೆಯಿಂದ ಹೊರಸೂಸಲು ಸನ್ನದ್ಧವಾಗಿರುತ್ತದೆ. ಇವೆಲ್ಲವೂ ಒಂದು ಕ್ಷಣಕ್ಕೆ ನಡೆದುಹೋಗಿ, ನಕ್ಷತ್ರವು ತನ್ನನ್ನು ತಾನೇ ಸ್ಫೋಟಿಸಿಕೊಳ್ಳುತ್ತದೆ. ಇದೇ ಸೂಪರ್‌ನೋವಾ!

ಸೂಪರ್‌ನೋವಾಗೊಂಡ ನಕ್ಷತ್ರವು ತನ್ನ ದ್ರವ್ಯವನ್ನು 15,000 ದಿಂದ 40,000 ಕಿಲೋ ಮೀಟರ್ ವೇಗದಲ್ಲಿ ಹೊರಕ್ಕೆ ಎಸೆಯುತ್ತದೆ. ಸೂಪರ್‌ನೋವಾವಾದಾಗ, ನಕ್ಷತ್ರದ ತಿರುಳಿನಲ್ಲಿ ಅತೀ ಹೆಚ್ಚು ತಾಪಮಾನವಿರುವುದರಿಂದ, ಅತ್ಯಂತ ಭಾರವಾದ ಧಾತುಗಳು [Heavy Element- ಆವರ್ತಕ ಕೋಷ್ಟಕದಲ್ಲಿ ಕಬ್ಬಿಣದ ನಂತರದ ಧಾತುಗಳು] ಆ ಸಮಯದಲ್ಲಿ ಉತ್ಪತ್ತಿಯಾಗುತ್ತವೆ.

ಸೂಪರ್‌ನೋವಾ ಅತ್ಯಂತ ಭಯಂಕರ ಸ್ಪೋಟ. ಇದು, ತನ್ನ ಸುತ್ತಲಿನ ಪ್ರದೇಶವನ್ನು ಕ್ಷಣ ಮಾತ್ರದಲ್ಲಿ ಬೂದಿ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹಾಗಾದರೆ, ಸೂಪರ್‌ನೋವಾ ಭೂಮಿಯ ಹತ್ತಿರ ಆಗುತ್ತಾ ಅಂತ ಪ್ರಶ್ನೆ ಕೇಳಿದರೆ, ಭೂಮಿಗೆ ಹತ್ತಿರವಿರುವ ನಕ್ಷತ್ರ ಸೂರ್ಯ. ಈ ಸೂರ್ಯನ ದ್ರವ್ಯರಾಶಿ ಚಂದ್ರಶೇಖರ ಮಿತಿಯ ಒಳಗಿರುವುದರಿಂದ, ಸೂರ್ಯ ಸೂಪರ್‌ನೋವಾ ನಕ್ಷತ್ರವಾಗುವುದಿಲ್ಲ. ಸೂರ್ಯನಿಂದ ಸೂಪರ್‌ನೋವಾದ ಭಯ ನಮಗಿಲ್ಲ. ಆದರೂ ವೈಜ್ಞಾನಿಕ ಅಧ್ಯಯನದ ಪ್ರಕಾರ, ಭೂಮಿಯ ಮೇಲೆ ಸೂಪರ್‌ನೋವಾದಿಂದ ಯಾವುದೇ ವಿಕೋಪಗಳಾಗದಿರುವುದಕ್ಕೆ ಸೂಪರ್‌ನೋವಾಗುವ ನಕ್ಷತ್ರಕ್ಕೂ ಭೂಮಿಗೂ ಇರಬೇಕಾದ ಕನಿಷ್ಟ ದೂರ 50-100 ಜೋತಿರ್ವರ್ಷಗಳು ಇರಬೇಕು. ಅಂದರೆ, ಒಂದು ಸೆಕೆಂಡಿಗೆ 3 ಲಕ್ಷ ಕಿಲೋಮೀಟರ್ ಸಾಗುವ ಬೆಳಕು, 100 ವರ್ಷಗಳಿಗೆ ಎಷ್ಟು ಕಿಲೋಮೀಟರ್ ಸಾಗುತ್ತೋ ಅಷ್ಟೂ ಅಂತರ. ಈ ಅಂತರದ ಒಳಗೆ ಇದುವರೆಗೂ ಯಾವ ಸೂಪರ್‌ನೋವಾ ಆಗಿರುವುದು ನಮಗೆ ತಿಳಿದಿಲ್ಲ. ಆಗಿದ್ದರೆ, ಭೂಮಿಯು ಇವತ್ತಿನ ಸ್ಥಿತಿಯಲ್ಲಿರುತ್ತಿರಲಿಲ್ಲ.

ನಾಸಾದ ಕೆಪ್ಲರ್ ಬಾಹ್ಯಾಕಾಶ ದೂರದರ್ಶಕದಲ್ಲಿ ದಾಖಲಾಗಿದ್ದ ದತ್ತಾಂಶದ ಸಹಾಯದಿಂದ, ಸೂರ್ಯನಿಗಿಂತಲೂ ನೂರುಪಟ್ಟು ದೊಡ್ಡದಾದ ನಕ್ಷತ್ರದ ಸೂಪರ್‌ನೋವಾದ ಅತ್ಯಂತ ವಿವರಣಾತ್ಮಕ ಚಿತ್ರವನ್ನು ಈ ಬಾರಿ ರಚಿಸಲಾಗಿದೆ. ಇದು ಸೂಪರ್‌ನೋವಾದ ಅತೀ ಆರಂಭಿಕ ಹಂತದ ಚಿತ್ರವಾಗಿದೆ. ಈ ಸೂಪರ್‌ನೋವಾ ಭೂಮಿಯಿಂದ ಸರಿ ಸುಮಾರು 100 ಕೋಟಿ ಜೋತಿರ್ವರ್ಷ ದೂರದಲ್ಲಿ ನಡೆದಿದೆ ಎಂದು ಲೆಕ್ಕ ಹಾಕಲಾಗಿದೆ. ಇದರ ಅರ್ಥ ಏನೆಂದರೆ, ಆ 100 ಕೋಟಿ ವರ್ಷದ ಹಿಂದೆ ನಡೆದಿರುವ ಸೂಪರ್‌ನೋವಾವನ್ನು ನಾವು ಈಗ ನೋಡುತ್ತಿದ್ದೇವೆ ಎಂದು (ಅಂದರೆ ಆ ಬೆಳಕು ನಮ್ಮ ದೂರದರ್ಶಕವನ್ನು ಇಷ್ಟು ವರ್ಷಗಳ ನಂತರ ಮುಟ್ಟಿದೆ).

ಖಗೋಳ ವಿಜ್ಞಾನಿಗಳ ಪ್ರಕಾರ ಸಾಮಾನ್ಯವಾಗಿ 100 ವರ್ಷಗಳಲ್ಲಿ ಒಂದು ಗ್ಯಾಲಾಕ್ಸಿಯಲ್ಲಿನ ಒಂದು ನಕ್ಷತ್ರ ಸೂಪರ್‌ನೋವಾ ಆಗಬಹುದು ಎಂದು ಊಹಿಸಿದ್ದಾರೆ. ನಭೋಮಂಡಲದಲ್ಲಿ ಲಕ್ಷಾಂತರ, ಕೋಟ್ಯಾಂತರ ಗ್ಯಾಲಾಕ್ಸಿಗಳಿವೆ. ಯಾವ ಗ್ಯಾಲಾಕ್ಸಿಯಲ್ಲಾದರೂ ಸೂಪರ್‌ನೋವಾ ನಡೆಯುತ್ತಿರಬಹುದು. ಆದರೆ, ನಮ್ಮ ದೂರದರ್ಶಕಗಳು ಸರಿಯಾದ ಸಮಯದಲ್ಲಿ, ಸರಿಯಾದ ದಿಕ್ಕಿನಲ್ಲಿ ಆ ನಕ್ಷತ್ರವನ್ನು ವೀಕ್ಷಣೆ ಮಾಡಿದರೆ ಮಾತ್ರ ನಮಗೆ ಸೂಪರ್‌ನೋವಾವನ್ನು ಸೆರೆ ಹಿಡಿಯಬಹುದು ಮತ್ತು ಅಧ್ಯಯನ ಮಾಡಬಹುದಾಗಿದೆ.

ಈ ಸೂಪರ್‌ನೋವಾವನ್ನು ನಾವು ಏಕೆ ಅಧ್ಯಯನ ಮಾಡಬೇಕು?

ನಭೋಮಂಡಲದಲ್ಲಿ ಧಾತುಗಳು ಎಲ್ಲಾ ದಿಕ್ಕಿನಲ್ಲೂ ಹರಡಲು ಸಾಧ್ಯವಾಗಿರುವುದು ಸೂಪರ್‌ನೋವಾದಿಂದ ಮಾತ್ರ. ಜೊತೆಗೆ ಭಾರವಾದ ಧಾತುಗಳು ತಯಾರಾಗುವ ಕುಲುಮೆ ಸೂಪರ್‌ನೋವಾ. ಭೂಮಿಯಲ್ಲಿ ಸಿಗುವ ಭಾರವಾದ ಧಾತುಗಳ ಮೂಲವು ಸೂಪರ್‌ನೋವಾವೇ. ಅಂದರೆ, ಗ್ರಹಗಳಲ್ಲಿ ಜೀವಿಗಳ ಉಗಮಕ್ಕೂ ಈ ಮಹಾ ಸ್ಫೋಟವಾದ ಸೂಪರ್‌ನೋವಾನೇ ಕಾರಣ. ಭೂಮಿಯ ತರಹ ಅನ್ಯಗ್ರಹದ ಅನ್ವೇಷಣೆಗೆ, ಆ ಅನ್ಯಗ್ರಹದಲ್ಲಿ ಜೀವಿಗಳ ಇರುವಿಕೆಯ ಅಧ್ಯಯನಕ್ಕೆ ಈ ಸೂಪರ್‌ನೋವಾ ಅಧ್ಯಯನ ಬಹಳ ಮಹತ್ವದ್ದು. ನಮ್ಮ ಬ್ರಹ್ಮಾಂಡ ವಿಸ್ತಾರಗೊಳ್ಳುತ್ತಿದೆ (Expanding Unierse) ಎನ್ನುವುದನ್ನು ನಾವು ಕಂಡುಕೊಂಡಿದ್ದು ಸೂಪರ್‌ನೋವಾದಿಂದಲೇ. ಸೂಪರ್‌ನೋವಾದ ಅಧ್ಯಯನ ಎಂದರೆ, ವಿಶ್ವದ ಆರಂಭಿಕ ಹಂತದ ಅಧ್ಯಯನ. ಈ ವಿಶ್ವದ ಉಗಮದ ಬಗ್ಗೆಯೂ ಸೂಪರ್‌ನೋವಾ ನಮಗೆ ವಿವರ ನೀಡಬಹುದು. ಈ ಕಾರಣದಿಂದ ಖಗೋಳ ವಿಜ್ಞಾನದಲ್ಲಿ ಸೂಪರ್‌ನೋವಾದ ಅಧ್ಯಯನ ಬಹಳ ಮುಖ್ಯವಾದದ್ದು.

ಅಂದಹಾಗೆ, ಈ ಸೂಪರ್‌ನೋವಾ ಸೆರೆ ಹಿಡಿಯಲು ಬಳಸಿಕೊಂಡ ದೂರದರ್ಶಕದ ಹೆಸರು ಕೆಪ್ಲರ್ ಎಂದು. ಜೋಹಾನಸ್ ಕೆಪ್ಲರ್ ಒಬ್ಬ ಖಗೋಳ ವಿಜ್ಞಾನಿ. ಮೊದಲ ಬಾರಿಗೆ 1604ರಲ್ಲಿ ಸೂಪರ್‌ನೋವಾವನ್ನು ಆಕಾಶದಲ್ಲಿ ಗುರುತಿಸಿ ನೋಡಿದವನು. ರಾತ್ರಿ ಆಕಾಶದಲ್ಲೇ ಅತ್ಯಂತ ಪ್ರಕಾಶಮಾನವಾಗಿ ಹೊಳೆಯುತ್ತಿದ್ದ ಆ ಸೂಪರ್‌ನೋವಾಗೊಂಡ ನಕ್ಷತ್ರ ಬೆಳಗಿನ ಆಕಾಶದಲ್ಲೂ ಕಾಣುತ್ತಿದ್ದುದ್ದನ್ನು ಆತ ದಾಖಲಿಸಿದ್ದನು. ಈ ಕಾರಣದಿಂದ ನಾಸಾ ಅನ್ಯಗ್ರಹಗಳ ಅನ್ವೇಷಣೆಗೆಂದು ನಭೋಮಂಡಲಕ್ಕೆ ಹಾರಿಸಿದ್ದ ದೂರದರ್ಶಕವನ್ನು ಕೆಪ್ಲರ್ ಎಂದು ನಾಮಕರಣ ಮಾಡಿತು.


ಇದನ್ನೂ ಓದಿ: ಬೆಳ್ಳಿಚುಕ್ಕಿ; ಭೂಕಂಪನವಲ್ಲ; ಸ್ಫೋಟವಲ್ಲ; ಏನಿದು ಶಬ್ದ? ಸೂಪರ್‌ಸಾನಿಕ್ ಬೂಮ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...