Homeಕರ್ನಾಟಕರಾತ್ರಿ ವೇಳೆ ಅಪರಿಚಿತರಿಂದ ಫೋನ್‌ ಕಾಲ್‌: ನಟಿ ಸಂಜನಾ ತರಾಟೆ

ರಾತ್ರಿ ವೇಳೆ ಅಪರಿಚಿತರಿಂದ ಫೋನ್‌ ಕಾಲ್‌: ನಟಿ ಸಂಜನಾ ತರಾಟೆ

"ನಾನು ಒಬ್ಬ ನಟಿ, ಮಿಗಿಲಾಗಿ ಒಬ್ಬ ಮಹಿಳೆ. ನನ್ನ ಮೊಬೈಲ್‌ ಸಂಖ್ಯೆಯನ್ನು ಬದಲಾಯಿಸಿ ನನಗೆ ಸಾಕಾಗಿದೆ" ಎಂದು ಬೇಸರ ವ್ಯಕ್ತಪಡಿಸಿರುವ ಅವರು, ಅಪರಿಚಿತನಿಗೆ ಕ್ಲಾಸ್‌ ತೆಗೆದುಕೊಂಡಿರುವ ಆಡಿಯೊ ಹಂಚಿಕೊಂಡಿದ್ದಾರೆ.

- Advertisement -
- Advertisement -

ಅರ್ಧ ರಾತ್ರಿಯಲ್ಲಿ ಬರುತ್ತಿರುವ ಅಪರಿಚಿತರ ಕರೆಗಳಿಂದ ಬಹುಭಾಷಾ ನಟಿ ಸಂಜನಾ ಗಲ್ರಾನಿ ಬೇಸತ್ತಿದ್ದಾರೆ. “ನಾನೊಬ್ಬ ನಟಿ, ಅದಕ್ಕಿಂತ ಮಿಗಿಲಾಗಿ ನಾನು ಮಹಿಳೆ” ಎಂದು ನಟಿ ತಿಳಿಸಿದ್ದಾರೆ.

“ಸ್ನೇಹಿತರೇ, ನಾನು ಸಂಜನಾ ಗಲ್ರಾನಿ, ನಾನೊಬ್ಬ ನಟಿ. ಆದರೆ ಅದಕ್ಕಿಂತ ಹೆಚ್ಚಾಗಿ ನಾನು ಮಹಿಳೆ. ಕುಟುಂಬವನ್ನು ಹೊಂದಿರುವ ಮಹಿಳೆ. ನನಗೆ ರಾತ್ರಿ 1ರಿಂದ 2 ಗಂಟೆಯ ಸಮಯದಲ್ಲಿ ಬೇರೆ ಬೇರೆ ನಂಬರ್‌ಗಳಿಂದ ಕರೆಗಳು ಬರುತ್ತಲೇ ಇವೆ” ಎಂದು ಹೇಳಿದ್ದಾರೆ.

“ನಿನ್ನೆ ರಾತ್ರಿ ಶನಿವಾರ ಕುಡಿದು ಕೆಲವರು ಕರೆ ಮಾಡಿದ್ದಾರೆ. ಶನಿವಾರವಷ್ಟೇ ಅಲ್ಲ, ಪ್ರತಿದಿನ ನಾನು ಅಪರಿಚಿತ ನಂಬರ್‌ಗಳನ್ನು ಬ್ಲಾಕ್ ಮಾಡುತ್ತಲೇ ಇದ್ದೇನೆ. ಮತ್ತು ಮತ್ತೆ ಹೊಸ ಸಂಖ್ಯೆಗಳಿಂದ ನನಗೆ ಕರೆಗಳು ಬರುತ್ತಿವೆ” ಎಂದು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

“ಅಸಹಾಯಕತೆ, ತೊಂದರೆ ಮತ್ತು ಹತಾಶೆಯನ್ನು ನಾನು ಅನುಭವಿಸುತ್ತೇನೆ. ನನ್ನ ತಪ್ಪೇನು? ನಾನು ಎಷ್ಟು ಮೊಬೈಲ್ ಸಂಖ್ಯೆಗಳನ್ನು ಬದಲಾಯಿಸಬೇಕು, ಯಾರಾದರೂ ಈ ವ್ಯಕ್ತಿಗೆ ಪಾಠ ಕಲಿಸಬಹುದೇ? ನಾನು ಮಾನಸಿಕ ಶಾಂತಿ ಬಯಸುತ್ತಿದ್ದೇನೆ” ಎಂಬ ಬರಹವನ್ನು ಹಂಚಿಕೊಂಡಿದ್ದಾರೆ.

ನನ್ನ ಮೊಬೈಲ್‌ ಸಂಖ್ಯೆಯನ್ನು ಬದಲಾಯಿಸಿ ನನಗೆ ಸಾಕಾಗಿದೆ. ನಂಬರ್‌ಗಳನ್ನು ಬದಲಿಸಿದ್ದರಿಂದ ನನ್ನ ವೃತ್ತಿಗೆ ಸಂಬಂಧಿಸಿದ ಸಂಪರ್ಕಗಳ ಮೇಲೂ ಪರಿಣಾಮ ಬೀರುತ್ತಿದೆ. ರಾತ್ರಿ 2.00 ಗಂಟೆಯಲ್ಲಿ ಕರೆ ಮಾಡಿ ಕಿರುಕುಳ ನೀಡುತ್ತಿರುವ ಅಪರಿಚಿತ ವ್ಯಕ್ತಿ ತನ್ನ ಸಂಖ್ಯೆಯನ್ನು ಶಾಶ್ವತವಾಗಿ ಬದಲಾಯಿಸಲು ಹಾಗೂ ಆತನ ಕಿರುಕುಳವನ್ನು ತಡೆಯಲು ನಾನು ಬಯಸುತ್ತೇನೆ. ನನಗೆ ಮಾತ್ರವಲ್ಲ. ಬೇರೆ ಯಾವ ಮಹಿಳೆಗೂ ತೊಂದರೆ ಕೊಡಬಾರದು ಎಂದು ಕೋರಿದ್ದಾರೆ.

ಜೊತೆಗೆ ಆಡಿಯೊ ಕೂಡ ಶೇರ್‌ ಮಾಡಿಕೊಂಡಿರುವ ಅವರು ಅವರು, ರಾತ್ರಿ ವೇಳೆ ಕರೆ ಮಾಡಿರುವ ವ್ಯಕ್ತಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. “ರಾತ್ರಿ ವೇಳೆ ಏಕೆ ಕರೆ ಮಾಡುತ್ತಿದ್ದೀರಿ. ಪ್ರತಿದಿನ ಹೀಗೆ ಆಗುತ್ತಿದೆ. ಕುಡಿದು ಕರೆ ಮಾಡ್ತೀರಾ?” ಎಂದು ಸಂಜನಾ ಕೇಳುತ್ತಾರೆ. “ನಾನು ಕುಡಿಯಲ್ಲ ಮೇಡಂ, ಮಿಸ್ಸಾಗಿ ಕರೆ ಬಂದಿದೆ” ಎಂದು ವ್ಯಕ್ತಿಯು ಸಮಜಾಯಿಷಿ ನೀಡುತ್ತಾನೆ. “ಮಿಸ್ಸಾಗಿ ಹೇಗೆ ಕರೆ ಬರುತ್ತದೆ. ಪದೇ ಪದೇ ಕರೆ ಹೇಗೆ ಬರುತ್ತದೆ” ಎಂದು ಸಂಜನಾ ಪ್ರಶ್ನಿಸಿದ್ದಾರೆ. ಜೊತೆ ಆ ವ್ಯಕ್ತಿಯು ಮಾತನಾಡುತ್ತಾ ತನ್ನನ್ನು ಕ್ಯಾಬ್‌ ಡ್ರೈವರ್‌ ಎಂದು ಹೇಳಿಕೊಳ್ಳುತ್ತಾನೆ. “ನಿಮ್ಮ ಡಿ.ಎಲ್‌. ಕಳುಹಿಸಿ” ಎಂದು ಸಂಜನಾ ಕೇಳುತ್ತಾರೆ. ಜೊತೆಗೆ ಆ ವ್ಯಕ್ತಿಯು ಕ್ಷಮೆಯನ್ನು ಕೇಳುವುದನ್ನು ಈ ಆಡಿಯೊದಲ್ಲಿ ಕೇಳಬಹುದು.

ಮಹಿಳೆಯರು ಹಾಗೂ ಮಹಿಳಾ ಕಲಾವಿದರ ಮೇಲೆ ಆಗುವ ದೌರ್ಜನ್ಯಗಳನ್ನು ಮೊದಲಿನಿಂದಲೂ ಖಂಡಿಸುತ್ತ ಬಂದಿರುವ ನಟಿ ಸಂಜನಾ ಈಗ ತುಂಬು ಗರ್ಭಿಣಿಯೂ ಹೌದು. ಮಾಧ್ಯಮ ಸಂಸ್ಥೆಯೊಂದು ಇಲ್ಲಸಲ್ಲದ ಸುದ್ದಿ ಬರೆದಿದ್ದಾಗ, ಕಟುವಾಗಿಯೇ ಪ್ರತಿಕ್ರಿಯಿಸಿದ್ದ ಸಂಜನಾ ಸ್ಪೆಷಲ್‌ ಕ್ಲಾಸ್‌ ತೆಗೆದುಕೊಂಡಿದ್ದರು.

ಸಂಜನಾ ಅವರು ಹಂಚಿಕೊಂಡಿರುವ ನಂಬರ್‌ಗೆ ಕರೆ ಮಾಡಿದಾಗ, 19 ವರ್ಷದ ಯುವಕ ಕರೆ ಮಾಡಿರುವುದೆಂದು ತಿಳಿದುಬಂದಿದೆ. ಮಿಸ್ಸಾಗಿ ಕರೆ ಹೋಗಿದೆ. ಇವರು ಯಾರೆಂಬುದು ನನಗೆ ಗೊತ್ತಿಲ್ಲ. ತಪ್ಪಾಗಿದ್ದಕ್ಕೆ ಕ್ಷಮೆ ಇರಲಿ ಎಂದಿದ್ದಾನೆ.


ಇದನ್ನೂ ಓದಿರಿ: ನಿಮ್ಮಿಂದಾಗಿ ನಾನು ನೇಣು ಹಾಕಿಕೊಳ್ಬೇಕಾ? ಸುವರ್ಣ ಟಿ.ವಿ. ವಿರುದ್ಧ ನಟಿ ಸಂಜನಾ ಕಿಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...