Homeಮುಖಪುಟಹಿಂಡೆನ್‌ಬರ್ಗ್ ವರದಿ ಬೆನ್ನಲ್ಲೇ ಅದಾನಿ ಒಪ್ಪಂದವನ್ನು ಪರಿಷ್ಕರಿಸಲು ಮುಂದಾದ ಬಾಂಗ್ಲಾ

ಹಿಂಡೆನ್‌ಬರ್ಗ್ ವರದಿ ಬೆನ್ನಲ್ಲೇ ಅದಾನಿ ಒಪ್ಪಂದವನ್ನು ಪರಿಷ್ಕರಿಸಲು ಮುಂದಾದ ಬಾಂಗ್ಲಾ

- Advertisement -
- Advertisement -

ಕಲ್ಲಿದ್ದಲು ಬೆಲೆಯಲ್ಲಿನ ಏರುಪೇರಿನಿಂದಾಗಿ ಬಾಂಗ್ಲಾದೇಶವು ಅದಾನಿ ಪವರ್‌ನೊಂದಿಗೆ ಮಾಡಿಕೊಂಡಿದ್ದ ವಿದ್ಯುತ್ ಒಪ್ಪಂದವನ್ನು ಪರಿಷ್ಕರಿಸಲು ಪ್ರಯತ್ನಿಸಿದೆ.

ನವೆಂಬರ್ 2017ರಲ್ಲಿ ಬಾಂಗ್ಲಾದೇಶ ಪವರ್ ಡೆವಲಪ್‌ಮೆಂಟ್ ಬೋರ್ಡ್(BPDB), ಅದಾನಿ ಕಂಪನಿಯೊಂದಿಗೆ ‘25 ವರ್ಷಗಳ ವಿದ್ಯುತ್ ಖರೀದಿ ಒಪ್ಪಂದ’ಕ್ಕೆ (PPA) ಸಹಿ ಹಾಕಿದೆ. ಬಾಂಗ್ಲಾ ದೇಶಕ್ಕೆ ವಾರ್ಷಿಕ 1,496 ಮೆಗಾವ್ಯಾಟ್ ವಿದ್ಯುತ್‌ನ್ನು ಭಾರತದ ಜಾರ್ಖಾಂಡ್‌‌ ರಾಜ್ಯದಲ್ಲಿರುವ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರದಿಂದ ಸರಬರಾಜು ಮಾಡುವ ಒಪ್ಪಂದ ಒಳಗೊಂಡಿದೆ.

ಬಾಂಗ್ಲಾದೇಶ ಪವರ್ ಡೆವಲಪ್‌ಮೆಂಟ್ ಬೋರ್ಡ್ ಇತ್ತೀಚೆಗೆ ಅದಾನಿ ಪವರ್‌ಗೆ ಒಪ್ಪಂದದ ಪರಿಷ್ಕರಣೆ ಸಂಬಂಧ ಪತ್ರ ಬರೆದಿದೆ. ಈ ಒಪ್ಪಂದವು ಇತರ ಖಾಸಗಿ ವಿದ್ಯುತ್ ಪೂರೈಕೆದಾರರು ಪಾವತಿಸುವುದಕ್ಕಿಂತ ಹೆಚ್ಚಿನ ಸುಂಕವನ್ನು ದೇಶದ ಮೇಲೆ ವಿಧಿಸುತ್ತಿದೆ ಎಂದು ಪತ್ರದಲ್ಲಿ ಹೇಳಿರುವುದಾಗಿ ಯುನೈಟೆಡ್ ನ್ಯೂಸ್ ಆಫ್ ಬಾಂಗ್ಲಾದೇಶ (UNB) ವರದಿ ಮಾಡಿದೆ.

ಈ ಬಗ್ಗೆ ಬಿಪಿಡಿಬಿ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, “ಜಾರ್ಖಂಡ್‌ನ 1,600 ಮೆಗಾವ್ಯಾಟ್ ಸ್ಥಾವರಕ್ಕೆ ಇಂಧನವಾಗಿ ಬಳಸಲಾಗುವ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲು ಎಲ್‌ಸಿಗಳನ್ನು (ಭಾರತದಲ್ಲಿ) ತೆರೆಯಲು ಅದಾನಿ ಗ್ರೂಪ್‌ಗೆ ಪತ್ರವನ್ನು ಕಳುಹಿಸಿದ್ದೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅದಾನಿ ಸಮೂಹದ ಬಗ್ಗೆ ಎದ್ದಿರುವ ಆರೋಪಗಳಿಗೆ ಉತ್ತರಿಸುವ ಉತ್ತರದಾಯಿತ್ವ ಯಾರದ್ದು?

“ಅವರು ಉಲ್ಲೇಖಿಸಿದ ಕಲ್ಲಿದ್ದಲು ಬೆಲೆ ($400/MT) ವಿಪರೀತವಾಗಿದೆ. ಇದು $250/MT ಗಿಂತ ಕಡಿಮೆಯಿರಬೇಕು. ಏಕೆಂದರೆ ನಮ್ಮ ಇತರ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಆಮದು ಮಾಡಿಕೊಂಡ ಕಲ್ಲಿದ್ದಲಿಗೆ ನಾವು ಈಗಾಗಲೇ ಕಡಿಮೆ ಪಾವತಿಸುತ್ತಿದ್ದೇವೆ” ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

“ಸರ್ಕಾರ ಮತ್ತು ಭಾರತೀಯ ಕಂಪನಿಯ ನಡುವಿನ ಒಪ್ಪಂದವನ್ನು ಉಲ್ಲೇಖಿಸುತ್ತಿದ್ದೀರಿ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ನಾವು ಇದರಲ್ಲಿ ಭಾಗಿಯಾಗಿದ್ದೇವೆ ಎಂದು ನಾನು ಭಾವಿಸುವುದಿಲ್ಲ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅದಾನಿ ವಿರುದ್ಧ ವಂಚನೆಯ ಆರೋಪ ಮಾಡಿರುವ ಹಿಂಡನ್‌ಬರ್ಗ್ ರಿಸರ್ಚ್‌ನಿಂದ ಬಿಕ್ಕಟ್ಟು ಉಂಟಾದ ಬಳಿಕ ಈ ಬೆಳವಣಿಗೆಯಾಗಿದೆ. ಬಾಂಗ್ಲಾದೇಶ ಇಂಧನ ಖರೀದಿ ಒಪ್ಪಂದದಲ್ಲಿ ಪರಿಷ್ಕರಣೆ ಬಯಸಿದೆ.

ಯುಎಸ್ ಮೂಲದ ಹಣಕಾಸು ವಿಶ್ಲೇಷಣಾ ಸಂಸ್ಥೆಯಾದ ಹಿಂಡನ್‌ಬರ್ಗ್ ಜನವರಿಯಲ್ಲಿ ಅದಾನಿ ಗುಂಪಿನ ಮೇಲೆ ವರದಿಯನ್ನು ಪ್ರಕಟಿಸಿದಾಗಿನಿಂದ, ಅದಾನಿ ಕಂಪನಿ ಪಾತಾಳ ಕುಸಿಯುತ್ತಿದೆ. ಷೇರು ಮಾರುಕಟ್ಟೆ ಮೌಲ್ಯದಲ್ಲಿ $100 ಶತಕೋಟಿಯವರೆಗೂ ಕಳೆದುಕೊಂಡಿದೆ.

ಅದಾನಿ ಗುಂಪಿನ ಷೇರುಗಳ ಕುಸಿತದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಮಾಧ್ಯಮದ ಒಂದು ವಿಭಾಗವು, ಈಗ ಅದಾನಿ ಜೊತೆಗಿನ BPDB ಒಪ್ಪಂದದ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. “ಅದಾನಿಗೆ ಇನ್ನೂ ತೊಂದರೆಗಳು ಎದುರಾಗುತ್ತವೆ‘. ಏಕೆಂದರೆ, ಹಿಂಡೆನ್‌ಬರ್ಗ್‌ನ ವರದಿಯ ಸರಣಿ ಇನ್ನೂ ಮುಂದುವರೆಯಲಿದೆ” ಎಂದು ಎಚ್ಚರಿಸಲಾಗುತ್ತಿದೆ.

ಫೆಬ್ರವರಿ 7 ರಿಂದ ಅದಾನಿ ಎಂಟರ್‌ಪ್ರೈಸಸ್ ಅನ್ನು ತನ್ನ ಸುಸ್ಥಿರತೆಯ ಸೂಚ್ಯಂಕಗಳಿಂದ ತೆಗೆದುಹಾಕುವುದಾಗಿ ಎಸ್&ಪಿ ಡೌ ಜೋನ್ಸ್ ಸೂಚ್ಯಂಕ ಹೇಳಿದೆ. ಇದರ ನಡುವೆ ಭಾರತದ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರವು ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್ ಮತ್ತು ಅಂಬುಜಾ ಸಿಮೆಂಟ್ಸ್ (ಅದಾನಿ ಸಮೂಹದ ಮಾಲೀಕತ್ವದ) ಷೇರುಗಳ ಮೇಲೆ ಕಣ್ಗಾವಲಿರಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...