Homeಮುಖಪುಟಆಂಧ್ರಪ್ರದೇಶ: ತ್ರಿವರ್ಣದಲ್ಲಿ ಕಂಗೊಳಿಸಿದ ಗುಂಟೂರಿನ ಜಿನ್ನಾ ಟವರ್‌, ಹೆಸರು ಬದಲಾಯಿಸಲು ಬಿಜೆಪಿ ಒತ್ತಾಯ

ಆಂಧ್ರಪ್ರದೇಶ: ತ್ರಿವರ್ಣದಲ್ಲಿ ಕಂಗೊಳಿಸಿದ ಗುಂಟೂರಿನ ಜಿನ್ನಾ ಟವರ್‌, ಹೆಸರು ಬದಲಾಯಿಸಲು ಬಿಜೆಪಿ ಒತ್ತಾಯ

- Advertisement -
- Advertisement -

ಆಂಧ್ರಪ್ರದೇಶದ ಗುಂಟೂರಿನಲ್ಲಿರುವ ಜಿನ್ನಾ ಟವರ್‌ಗೆ ಆಡಳಿತರೂಢ ವೈಎಸ್‌ಆರ್ ಕಾಂಗ್ರೆಸ್ ಶಾಸಕರೊಬ್ಬರು ಮಂಗಳವಾರ ಕೇಸರಿ-ಬಿಳಿ-ಹಸಿರು (ತ್ರಿವರ್ಣ) ಬಣ್ಣ ಬಳಿಸಿದ್ದಾರೆ. ವಿವಾದದಿಂದ ಸುದ್ದಿ ಕೇಂದ್ರಿತವಾಗಿರುವ ಜಿನ್ನಾ ಟವರ್‌ ಹೆಸರು ಬದಲಾಯಿಸಬೇಕು ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಒತ್ತಾಯಿಸುತ್ತಿದೆ.

ಮಂಗಳವಾರ (ಫೆಬ್ರವರಿ 1)ರಂದು ವೈಎಸ್‌ಆರ್‌ಸಿಪಿ ಶಾಸಕ ಮೊಹಮ್ಮದ್ ಮುಸ್ತಫಾ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಜಿನ್ನಾ ಟವರ್‌ಗೆ ರಾಷ್ಟ್ರಧ್ವಜದ ಬಣ್ಣವನ್ನು ಬಳಿಸಿದ್ದಾರೆ. ಈ ಟವರ್‌ ಕಳೆದ ತಿಂಗಳಿನಿಂದ ಆಂಧ್ರಪ್ರದೇಶದಲ್ಲಿ ಬಿಜೆಪಿ ಮತ್ತು ಜಗನ್ ನೇತೃತ್ವದ ಆಡಳಿತಾರೂಢ ವೈಎಸ್‌ಆರ್‌ಸಿಪಿ ಸರ್ಕಾರದ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

ನಿಷೇಧಾಜ್ಞೆಗಳ ಹೊರತಾಗಿಯೂ ಜಿನ್ನಾ ಟವರ್‌ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ಯತ್ನಿಸಿದ ಹಿಂದೂ ವಾಹಿನಿ ಸಂಘಟನೆಯ ಮೂವರನ್ನು ಜನವರಿ 26 ರಂದು ಬಂಧಿಸಲಾಗಿತ್ತು. ಇದರ ಬೆನ್ನಲೇ ಟವರ್‌ಗೆ ಹೊರ ರೂಪ ನೀಡಲಾಗಿದೆ.

ಇದನ್ನೂ ಓದಿ: BJP ಪ್ರತಿ ವರ್ಷ ನೀಡುತ್ತೇವೆ ಎಂದ 2 ಕೋಟಿ ಉದ್ಯೋಗದಲ್ಲಿ ಎಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ?: ಮಲ್ಲಿಕಾರ್ಜುನ ಖರ್ಗೆ

ಮಂಗಳವಾರ ಗುಂಟೂರು ಪೂರ್ವ ಶಾಸಕ ಮೊಹಮ್ಮದ್ ಮುಸ್ತಫಾ ಮಾತನಾಡಿ, “ವಿವಿಧ ಗುಂಪುಗಳ ಮನವಿ ಮೇರೆಗೆ ಗೋಪುರವನ್ನು ತ್ರಿವರ್ಣದಿಂದ ಅಲಂಕರಿಸಲು ಮತ್ತು ಗೋಪುರದ ಬಳಿ ರಾಷ್ಟ್ರಧ್ವಜವನ್ನು ಹಾರಿಸಲು ಕಂಬವನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಗುರುವಾರ ಜಿನ್ನಾ ಟವರ್‌ನಲ್ಲಿ ರಾಷ್ಟ್ರಧ್ವಜಾರೋಹಣಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗುವುದು” ಎಂದು ತಿಳಿಸಿದ್ದಾರೆ.

ಪಿಟಿಐ ವರದಿಯ ಪ್ರಕಾರ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಜೆಪಿಯ ರಾಜ್ಯ ಘಟಕವು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಗೌರವಾರ್ಥವಾಗಿ ಗೋಪುರದ ಹೆಸರನ್ನು ಬದಲಾಯಿಸಬೇಕೆಂದು ಒತ್ತಾಯಿಸಿತ್ತು. ವೈಎಸ್‌ಆರ್‌ಸಿ ಸರ್ಕಾರ ತಮ್ಮ ಬೇಡಿಕೆಗಳಿಗೆ ಕಿವಿಗೊಡದಿದ್ದರೆ ಸ್ಮಾರಕವನ್ನು ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಇದಕ್ಕೆ ಕಿಡಿಕಾರಿರುವ ಶಾಸಕ ಮುಸ್ತಫಾ ಬಿಜೆಪಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೋಮು ಘರ್ಷಣೆಯನ್ನು ಪ್ರಚೋದಿಸುವ ಬದಲು ಕೋವಿಡ್ ಸಾಂಕ್ರಾಮಿಕದಿಂದ ಮಧ್ಯೆ ನಿರ್ಗತಿಕರಿಗೆ ಸಹಾಯ ಮಾಡುವಲ್ಲಿ ಬಿಜೆಪಿ ನಾಯಕರು ಭಾಗವಹಿಸಬೇಕು ಎಂದು ಹೇಳಿದ್ದಾರೆ.

ಗಣರಾಜ್ಯೋತ್ಸವದ ಘಟನೆಯ ನಂತರ, ಕೋಮು ಘರ್ಷಣೆಯನ್ನು ಉಂಟುಮಾಡುವ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ಸ್ಥಳದಲ್ಲಿ ಭದ್ರತೆ ನೀಡಿದ್ದರು.


ಇದನ್ನೂ ಓದಿ: ಆಂಧ್ರ ಪ್ರದೇಶ: ಠಾಣೆಯಲ್ಲಿ ದಲಿತ ಮಹಿಳೆಯನ್ನು ತೀವ್ರವಾಗಿ ಥಳಿಸಿದ ಪೊಲೀಸರು-ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...