Homeಕರ್ನಾಟಕಹಾದರವೋ, ಹನಿಟ್ರ್ಯಾಪೋ, ಅಸಹ್ಯವೋ?..

ಹಾದರವೋ, ಹನಿಟ್ರ್ಯಾಪೋ, ಅಸಹ್ಯವೋ?..

- Advertisement -
- Advertisement -

ಈ ಹನಿಟ್ರ್ಯಾಪ್ ಪ್ರಕರಣದಿಂದ ಹಲವು ಪ್ರಶ್ನೆಗಳು ಎದ್ದಿವೆ. ಹನಿಟ್ರ್ಯಾಪ್‍ಗೆ ಒಳಗಾದ ಶಾಸಕರಲ್ಲಿ ಐದು ಜನ ಡಿಸೆಂಬರ್ 5ರಂದು ನಡೆಯಲಿರುವ ಚುನಾವಣೆಯನ್ನು ಎದುರಿಸುತ್ತಿರುವ ಆಡಳಿತ ಪಕ್ಷದವರಾಗಿದ್ದಾರೆ ಎನ್ನಲಾಗಿದೆ. ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳಿಗೆ ಇದರಿಂದ ಯಾವುದಾದರೂ ನಷ್ಟ ಉಂಟಾಗಲಿದೆಯೇ?

ಕೋರ್ಟಿನಿಂದ ನಿರ್ಬಂಧ ಬರುವ ಮುಂಚೆ ಎಲ್ಲೆಡೆ ಓಡಾಡಿದ್ದು ಮಧ್ಯ ಕರ್ನಾಟಕದ ಹಾಲಿ ಶಾಸಕರೊಬ್ಬರ ರಾಸಲೀಲೆಯ ವಿಡಿಯೋ. ಆ ನಂತರ ಎಲ್ಲರಿಗೂ ಲಭ್ಯವಾಗಿದ್ದು ಸಾಹುಕಾರರೊಬ್ಬರ ಆಡಿಯೋ. ಅವರ ದನಿ ಪರಿಚಯ ಇರುವ ಯಾರಿಗೂ ಸಂದೇಹ ಉಳಿದಿಲ್ಲ. ಗುಟ್ಟಾಗಿ ಕೆಲವರಿಗೆ ಮಾತ್ರ ಲಭ್ಯವಾಗಿರುವುದು ಮಹಿಳೆಯೊಬ್ಬರು ಯಲ್ಲಮ್ಮನ ಜಾತ್ರೆ ನಂತರ ಸಿಗುತ್ತೇನೆ ಎಂದು ಹೇಳಿದ ‘ಅವರು’ ತನ್ನನ್ನು ಪಟಾಯಿಸಲು ಮಾಡಿದ ಯತ್ನದ ಕುರಿತಾದ ಆಡಿಯೋ. ಆದರೆ, ಎಲ್ಲಿಯೂ ಯಾವ ಆಡಿಯೋ ಅಥವಾ ವಿಡಿಯೋ ಸಿಗದೇ ಇದ್ದರೂ ಕೋರ್ಟಿಗೆ ಹೋಗಿ ಇನ್ನೊಬ್ಬ ಶಾಸಕರೂ ನಿರ್ಬಂಧಕಾಜ್ಞೆ ತಂದುಬಿಟ್ಟರು. ಅಲ್ಲಿಗೆ ಪತ್ರಕರ್ತರ ವಲಯದಲ್ಲಿ ವಿಪರೀತ ವದಂತಿಗಳು ಓಡಾಡಲು ಶುರು ಮಾಡಿದವು.

ಯಾರ ವಿಡಿಯೋ ಓಡಾಡಿತೋ, ಉತ್ತರ ಕರ್ನಾಟಕದ ಆ ಶಾಸಕರು ಹನಿಟ್ರ್ಯಾಪ್‍ಗೆ ಬಲಿಯಾಗಿದ್ದೇನೆಂದು ದೂರು ಕೊಟ್ಟು ಹೀಗೆ ಹೇಳಿದರಂತೆ. ಅವರಿಗೆ ಹಲವಾರು ಕೋಟಿ ದುಡ್ಡಿನ ಬೇಡಿಕೆಯಿಟ್ಟು, ಆ ದುಡ್ಡನ್ನು ಕೊಡದಿದ್ದರೆ ತಮ್ಮಲ್ಲಿರುವ ವಿಡಿಯೋ ಅನ್ನು ಬಹಿರಂಗ ಪಡಿಸುವುದಾಗಿ ಬ್ಲ್ಯಾಕ್ ಮಾಡಲಾಯಿತು. ಆಗ ಶಾಸಕರು ಪೊಲೀಸ್ ಮೊರೆ ಹೊಕ್ಕು, ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ ಹಾಗೂ ಆ ವಿಡಿಯೊ ಮತ್ತು ಆಡಿಯೊ ತುಣುಕಗಳು ಬಹಿರಂಗಪಡಿಸದಂತೆ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ ತಂದಿದ್ದಾರೆ.

ಈ ದೂರಿನ ಮೇಲೆ ಕ್ರಮ ಕೈಗೊಳ್ಳುತ್ತ ಪೊಲೀಸರು ರಾಘವೇಂದ್ರ ಎಂಬ ವ್ಯಕ್ತಿಯನ್ನು ಮತ್ತು ಆತನ ಇಬ್ಬರು ಮಹಿಳಾ ಸಹಚರರನ್ನು ಬಂಧಿಸಿದ್ದಾರೆ. ಬಂಧನದ ಜೊತೆಗೆ ಒಂದು ಹಾರ್ಡ್ ಡಿಸ್ಕ್, ಕೆಲವು ಪೆನ್ ಡ್ರೈವ್, ಕೆಲವು ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಇವರು ವಶಪಡಿಸಿಕೊಂಡದ್ದರಲ್ಲಿ ದೂರು ನೀಡಿದ ಶಾಸಕರಷ್ಟೇ ಅಲ್ಲದೇ ಇನ್ನೂ ಹತ್ತು ಶಾಸಕರ ವಿಡಿಯೋಗಳು ಇವೆ ಎನ್ನಲಾಗಿದೆ. ಬಂಧಿತನಾದ ರಾಘವೇಂದ್ರ ಶಿವಮೊಗ್ಗೆ ಜಿಲ್ಲೆಯವನಾಗಿದ್ದು, ಈಗಾಗಲೇ ಸೈಬರ್ ಅಪರಾಧ ಪ್ರಕರಣಗಳಲ್ಲಿ ಇವನ ವಿರುದ್ಧ ಅನೇಕ ಪ್ರಕರಣಗಳಿವೆ.

ಇಷ್ಟರಲ್ಲಿ ಆಡಿಯೋ ತುಣುಕು ವೈರಲ್ ಆಗಿದೆ. ಅದಕ್ಕೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ತಾವೂ ಆ ಆಡಿಯೊ ಅನ್ನು ಕೇಳಿಸಿಕೊಂಡಿದ್ದಾಗಿ ಹೇಳಿ, ಆ ಆಡಿಯೊದಲ್ಲಿನ ಧ್ವನಿ ಸಾಹುಕಾರರ ಧ್ವನಿ ಇದ್ದಂತಿದೆ ಎಂದರು. ಆ ಸಾಹುಕಾರ ಯಾರು ಎಂದು ಅವರು ಬಹಿರಂಗಪಡಿಸದಿದ್ದರೂ, ವಲಯದ ಎಲ್ಲರಿಗೂ ಆ ಸಾಹುಕಾರ ಯಾರು ಎಂಬುದು ಸ್ಪಷ್ಟವಾಗಿ ತಿಳಿದಿದೆ. ಈ ಹನಿಟ್ರ್ಯಾಪ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ, ನಿಷ್ಪಕ್ಷಪಾತವಾದ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ. ಈ ಮಧ್ಯೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ‘ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಅಥವಾ ಉದ್ದೇಶಪೂರ್ವಕ ಬಲಿ ಹಾಕುವ ಪ್ರಯತ್ನ ತಮ್ಮದಲ್ಲ’ ಎಂದು ಹೇಳಿಕೆ ನೀಡಬೇಕಾಗಿ ಬಂದಿತು.

ಈ ಹನಿಟ್ರ್ಯಾಪ್ ಪ್ರಕರಣದಿಂದ ಹಲವು ಪ್ರಶ್ನೆಗಳು ಎದ್ದಿವೆ. ಹನಿಟ್ರ್ಯಾಪ್‍ಗೆ ಒಳಗಾದ ಶಾಸಕರಲ್ಲಿ ಐದು ಜನ ಡಿಸೆಂಬರ್ 5ರಂದು ನಡೆಯಲಿರುವ ಚುನಾವಣೆಯನ್ನು ಎದುರಿಸುತ್ತಿರುವ ಆಡಳಿತ ಪಕ್ಷದವರಾಗಿದ್ದಾರೆ ಎನ್ನಲಾಗಿದೆ. ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳಿಗೆ ಇದರಿಂದ ಯಾವುದಾದರೂ ನಷ್ಟ ಉಂಟಾಗಲಿದೆಯೇ? ಬರೀ ಹನಿ ಟ್ರ್ಯಾಪ್ ಅಷ್ಟೇ ಅಲ್ಲ. ನಮ್ಮ ಪ್ರತಿನಿಧಿಗಳು ಒಳಗೊಂಡಿದ್ದಾರೆ ಎನ್ನಲಾದ ಲೈಂಗಿಕ ಹಗರಣಗಳು ಈ ಮುಂಚೆಯೂ ಹೊರಬಂದಿವೆ. ವಿಧಾನಸಭೆಯಲ್ಲಿ ನೀಲಿ ಚಿತ್ರವನ್ನು ನೋಡುತ್ತ ಕೆಲವರು ಸಿಕ್ಕಿಹಾಕಿಕೊಂಡಿದ್ದರು. ಅವರೇ ಇಂದು ರಾಜ್ಯದ ಉಪಮುಖ್ಯಮಂತ್ರಿಯಾಗಿ ಬಡ್ತಿ ಪಡೆದಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಸಾರ್ವಜನಿಕರು ಇದೆಲ್ಲದರಿಂದ ತಮಗೆ ಪುಗಸಟ್ಟೆ ಮನರಂಜನೆ ಸಿಕ್ಕಿತು ಎಂದು ಕೃತಜ್ಞರಾಗುವ ಸಂಭವವೇ ಹೆಚ್ಚು ಎಂಬುದಕ್ಕೆ ಮೈಸೂರಿನ ಹಾಲಿ ಸಂಸದರೇ ಸಾಕ್ಷಿ. ಅವರ ಕುರಿತಾದ ಆಡಿಯೋ ಮತದಾನಕ್ಕೆ ಮುಂಚೆ ಯಾವ ಪರಿ ಓಡಿತೆಂದರೆ, ಬಹುಶಃ ಅತ್ಯಂತ ಹೆಚ್ಚು ವೈರಲ್ ಆದ ಧ್ವನಿಮುದ್ರಿಕೆ ಅದು. ಅಂದರೆ, ಜನರು ಈ ಹಗರಣಗಳನ್ನು ಸುಲಭವಾಗಿ ಕ್ಷಮಿಸಿಬಿಡುತ್ತಾರೆಯೇ? ಅಥವಾ ಪುರುಷನ ಲೈಂಗಿಕ ಸ್ವೇಚ್ಛಾಚಾರವು ಎಂದಿಗೂ ಕ್ಷಮಾರ್ಹ ವಿಷಯವೇ ಆಗಿದೆಯೇ? ‘ಶೀಲ’ ಎನ್ನುವುದು ಮಹಿಳೆಯರಿಗೆ ಮೀಸಲಾಗಿಸಲ್ಪಟ್ಟ ವಿಷಯ ಎನ್ನುವುದು ಮುಂಚೆಯಿಂದಲೂ ತಿಳಿದ ವಿಷಯ.

ಹಾಗಾಗಿ ಸಾರ್ವಜನಿಕವಾಗಿ ಸದರಿ ಪ್ರಕರಣದಲ್ಲಿ ಉಳಿದುಕೊಂಡಿರುವುದು ಇನ್ನೂ ಯಾರ್ಯಾರ ವೀಡಿಯೋಗಳು ಅಥವಾ ಆಡಿಯೋಗಳು ಸಿಕ್ಕಿವೆಯಂತೆ ಎಂಬ ಕುತೂಹಲ ಬಿಟ್ಟರೆ ಬೇರೇನೂ ಇಲ್ಲ. ಹನಿಟ್ರ್ಯಾಪ್ ಮಾಡಿದವರ ದುರುದ್ದೇಶವೂ ಈಡೇರದೇ ಹೋಗುವ ದುಸ್ಥಿತಿ ಇದೆ. ಏಕೆಂದರೆ ಯಾರಿಗೂ ಮರ್ಯಾದೆ ಹೋಗುತ್ತದೆಂಬ ಭಯ ಕಾಡುತ್ತಿರುವ ಸಾಧ್ಯತೆ ಕಾಣುತ್ತಿಲ್ಲ. ಬೆತ್ತಲೆ ವಿಡಿಯೋಗಳು ಎಲ್ಲೆಡೆ ಕಂಡುಬಂದ ಶಾಸಕರೊಬ್ಬರ ಪತ್ನಿಯ ನಿಗೂಢ ಸಾವೂ ಸಹ ಅವರನ್ನು ಒಂದು ಅವಧಿಗೆ ಮಾತ್ರ ಶಾಸಕಸ್ಥಾನದಿಂದ ವಂಚಿತನನ್ನಾಗಿಸಿತು. ಅದೂ ಸಹಾ ರಾಜ್ಯಾದ್ಯಂತ ಅವರ ಪಕ್ಷದ ಪರವಾದ ಅಲೆ ಇರದಿದ್ದಾಗ. ಈ ಮಧ್ಯೆ ದೇಶಕ್ಕೆಲ್ಲಾ ರಾಮರಾಜ್ಯದ ಕುರಿತು ಪಾಠ ಮಾಡುವ ಸ್ವಾಮೀಜಿಗಳ ಜೊತೆಗೇ ಓಡಾಡುತ್ತಾ ಅವರು ಉಳಿದುಕೊಂಡಿದ್ದರು.

ಇನ್ನು ಸ್ವಾಮೀಜಿಗಳ ವಿಚಾರಕ್ಕೆ ಬರುವುದಾದರೆ, ಅದನ್ನು ಹೇಳದಿರುವುದೇ ಲೇಸು. ಒಪ್ಪಿತ ಲೈಂಗಿಕ ಸಂಬಂಧ ಅಷ್ಟೇ ಅಲ್ಲದೇ ವಿಕೃತ ಲೈಂಗಿಕತೆಗೂ ಮುಂದಾಗಿರುವ ಸ್ವಾಮೀಜಿಗಳು ಸರ್ವಮಾನ್ಯರಾಗಿ ವ್ಯವಹಾರಗಳನ್ನು ನಡೆಸಿಕೊಂಡು ಮುಂದಾಗಿದ್ದಾರೆ. ಶಿಶುಕಾಮಿಯೂ ಇರಬಹುದು ಎನ್ನುವ ಸ್ವಾಮೀಜಿಯ ತೊಡೆಯ ಮೇಲೆ ಹೆಣ್ನುಮಕ್ಕಳನ್ನು ಕುಳ್ಳಿರಿಸಿ ದೀಕ್ಷೆ ಕೊಡಿಸುವ ಸುಶಿಕ್ಷಿತ ತಂದೆ ತಾಯಂದಿರು ಈಗಲೂ ಇದ್ದಾರೆ.

ಈ ಸದ್ಯ ಇದರಲ್ಲೇನಾದರೂ ರಾಜಕೀಯ ಹುನ್ನಾರದ ವಾಸನೆ ಇದೆಯೇ ಎಂಬುದನ್ನು ಪತ್ರಿಕೆ ಕೆದಕಲು ನೋಡಿತು. ಹಾಲಿ (ನಮ್ಮ ಕೈಗೇ ಆಡಿಯೋ, ವಿಡಿಯೋ ಸಿಕ್ಕಿಲ್ಲವಾದರೂ) ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿರುವ ಹೆಚ್ಚಿನವರು ಬಿಜೆಪಿಯಲ್ಲಿ ಇದ್ದಾರಾದರೂ ಒಂದಿಬ್ಬರು ಕಾಂಗ್ರೆಸ್ ಶಾಸಕರೂ ಇದ್ದಾರೆ. ಹೀಗಾಗಿ ಇದನ್ನು ಒಂದು ಪಕ್ಷದವರು ಇನ್ನಾರನ್ನೋ ಸಿಕ್ಕಿ ಹಾಕಿಸಲು ಮಾಡಿದ ತಂತ್ರ ಎನ್ನುವ ಹಾಗಿಲ್ಲ. ಅನರ್ಹ ಶಾಸಕರನ್ನು ಬೆದರಿಸಲು ಬಿಜೆಪಿ ಮೊದಲೇ ಮಾಡಿಸಿತ್ತು ಎಂಬ ವದಂತಿಯೂ ಒಂದಷ್ಟು ಓಡಾಡಿತಾದರೂ, ಬಿಜೆಪಿಯೊಳಗೇ ಇರುವ ಶಾಸಕರು ಮತ್ತು ಸಂಘಪರಿವಾರದ ಮೂಲದ ಶಾಸಕರೂ ಇರುವುದು ಅದನ್ನೂ ಸುಳ್ಳಾಗಿಸಿದೆ. ಯಡಿಯೂರಪ್ಪನವರ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ಅರವಿಂದ ಲಿಂಬಾವಳಿಯ ಸಲಿಂಗರತಿಯ ವಿಡಿಯೋ ಬಹಿರಂಗವಾಗಿದ್ದು ಬಿಜೆಪಿಯವರಿಂದಲೇ ಎಂಬುದರಲ್ಲಿ ಯಾರಿಗೂ ಸಂಶಯವಿಲ್ಲ. ಏಕೆಂದರೆ, ಆಗ ಓಡಾಡಿದ ಆಡಿಯೋಗಳಲ್ಲಿ ಒಂದು ಸದರಿ ‘ಹುಡುಗರು’ ಈಶ್ವರಪ್ಪನವರ ಜೊತೆ ಇದರ ಕುರಿತೇ ಮಾತನಾಡುತ್ತಿದ್ದುದೂ ಇತ್ತು. ಅದಕ್ಕೆ ತಕ್ಕುನಾಗಿ ‘ಪ್ರಭಾವಿ’ಗಳಲ್ಲೊಬ್ಬರಾದ ಲಿಂಬಾವಳಿಯು ನಂತರ ಸಚಿವರೂ ಆಗಲಿಲ್ಲ; ರಾಜ್ಯಾಧ್ಯಕ್ಷರೂ ಆಗಲಿಲ್ಲ.

ತೇಜಸ್ವಿ ಸೂರ್ಯರ ‘ಹಗರಣ’ಗಳ ವಿಚಾರದಲ್ಲಿ ‘ಸಂತ್ರಸ್ತೆ’ ಪ್ರತಾಪ್‍ಸಿಂಹರಿಗೆ ದೂರು ಕೊಡುವುದು; ಪ್ರತಾಪ್‍ಸಿಂಹರ ಆಡಿಯೋದಲ್ಲಿ ರಾಮದಾಸ್ ಹೆಸರು ಕೇಳಿಬರುವುದು ಇವೆಲ್ಲವೂ ಬಿಜೆಪಿಯೊಳಗೆ ಇಂಥಾ ಹಲವು ಒಳಸುಳಿಗಳಿರುವ ಸೂಚನೆಯನ್ನಂತೂ ನೀಡುತ್ತಿವೆ. ಕಾಂಗ್ರೆಸ್ ಸರ್ಕಾರವಿದ್ದಾಗ ಸಚಿವ ಎಚ್.ವೈ.ಮೇಟಿ ಇಂಥದ್ದೇ ಒಂದರಲ್ಲಿ ಸಿಕ್ಕಿಕೊಂಡು ರಾಜೀನಾಮೆ ಕೊಟ್ಟರು. ಒಂದೆರಡು ಚಾನೆಲ್ ಬಿಟ್ಟರೆ ಮಿಕ್ಕೆಲ್ಲವೂ ಎಗ್ಗು ಸಿಗ್ಗಿಲ್ಲದೇ ವಿಡಿಯೋವನ್ನೇ ಪ್ರಸಾರ ಮಾಡಿದ್ದವು. ಕಾಂಗ್ರೆಸ್ ನಾಯಕರುಗಳ ಲೈಂಗಿಕ ಸಂಬಂಧಗಳ ಕುರಿತಂತೆ ಗಾಸಿಪ್‍ಗಳಿಗೆ ಕಡಿಮೆಯಿಲ್ಲವಾದರೂ ಮೇಟಿಯವರ ವಿಡಿಯೋ ಬಿಟ್ಟರೆ ಹೊರಬಂದಿದ್ದು ಕಡಿಮೆ. ಆದರೆ, ಬಿಜೆಪಿಯೊಳಗೆ ಸದಾಕಾಲ ಒಂದಲ್ಲಾ ಒಂದು ಕಡೆ ಯಾರದ್ದೋ ರೆಕಾರ್ಡಿಂಗ್ ನಡೆಯುತ್ತಿರಬಹುದು ಇಲ್ಲವೇ ಸಂಚು ರೂಪಿತವಾಗುತ್ತಿರಬಹುದು ಎನ್ನುವ ಮಟ್ಟಿಗೆ ‘ಲೀಲೆಗಳು’ ಇದ್ದಂತಿವೆ. ಇಂತಹ ಲೀಲೆಗಳಲ್ಲಿ ಈಗ ಸಿಕ್ಕಿ ಹಾಕಿಕೊಂಡಿರುವ ಅನರ್ಹರೂ ಕಾಂಗ್ರೆಸ್‍ನಲ್ಲಿದ್ದವರೇ ಆಗಿರುವುದನ್ನೂ ಮರೆಯುವಂತಿಲ್ಲ. ಒಟ್ಟಿನಲ್ಲಿ ಸಾರ್ವಜನಿಕ ಜೀವನದಲ್ಲಿರುವವರಿಗೆ ಇರಬೇಕಾದ ಶಿಸ್ತು, ನೀತಿ ಸಂಹಿತೆಗಳಿಂದ ದೂರ ನಿಂತಿರುವುದಷ್ಟೇ ಅಲ್ಲದೇ, ಸಾರ್ವಜನಿಕರೂ ಇವೆಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳದಿರುವುದು ಒಳ್ಳೆಯ ಬೆಳವಣಿಗೆಯೋ ದುರಂತವೋ ಗೊತ್ತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮೂರೂ ಬಿಟ್ಟವರು ಊರಿಗೆ ದೊಡ್ಡವರು ಎಂಬ ಮಾತಿಗೆ ಅನುಗುಣವಾಗಿ ನಮ್ಮ ರಾಜಕಾರಣಿಗಳು ನಡೆದುಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here

- Advertisment -

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...