HomeಅಂಕಣಗಳುKarnataka against SIRASDDO ಪಟ್ಟಿ ಸಾರ್ವಜನಿಕ ಪ್ರಕಟಣೆ ಬಗ್ಗೆ ಚುನಾವಣಾ ಆಯೋಗ ನಿರ್ಲಕ್ಷ್ಯ! ಆರೋಪ

ASDDO ಪಟ್ಟಿ ಸಾರ್ವಜನಿಕ ಪ್ರಕಟಣೆ ಬಗ್ಗೆ ಚುನಾವಣಾ ಆಯೋಗ ನಿರ್ಲಕ್ಷ್ಯ! ಆರೋಪ

- Advertisement -
- Advertisement -

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬರೋಬ್ಬರಿ 1.08 ಕೋಟಿ ಮತದಾರರ ಹೆಸರನ್ನು ಎಎಸ್‌ಡಿಡಿಒ (ASDDO) ಪಟ್ಟಿಗೆ ಸೇರಿಸಿ ಆತಂಕ ಸೃಷ್ಟಿಸಿದ್ದ ಚುನಾವಣಾ ಆಯೋಗ, ಈಗ ಆ ಪಟ್ಟಿಯ ಸಾರ್ವಜನಿಕ ಪ್ರಕಟಣೆಯ ವಿಷಯದಲ್ಲೂ ಸರಿಯಾದ ಕ್ರಮ ವಹಿಸಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆಯೋಗ ನೀಡಿರುವ ಅಧಿಕೃತ ಹೇಳಿಕೆ ಮತ್ತು ವಾಸ್ತವ ಸ್ಥಿತಿಯ ನಡುವೆ ಅಜಾಗಜಾಂತರ ವ್ಯತ್ಯಾಸವಿರುವುದು ಗೋಚರಿಸಿದೆ.

ಆಗಸ್ಟ್ 12ರಂದು ನಡೆದ ಚುನಾವಣಾಧಿಕಾರಿಗಳ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ಅನ್ಬುಕುಮಾರ್, “ಎಎಸ್‌ಡಿಡಿಒ ಪಟ್ಟಿಯನ್ನು ಎಲ್ಲ ಬೂತ್ ಮಟ್ಟದ ಅಧಿಕಾರಿಗಳು (BLO), ಇಆರ್‌ಒ ಮತ್ತು ನೋಂದಾಯಿತ ರಾಜಕೀಯ ಪಕ್ಷಗಳಿಗೆ ತಲುಪಿಸಲಾಗಿದೆ. ಅಷ್ಟೇ ಅಲ್ಲದೆ, ಪ್ರತಿಯೊಂದು ಗ್ರಾಮ ಪಂಚಾಯತ್ ಭವನಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಈ ಪಟ್ಟಿಯನ್ನು ಕಡ್ಡಾಯವಾಗಿ ಪ್ರಕಟಿಸುವಂತೆ ಸೂಚಿಸಲಾಗಿದೆ” ಎಂದು ತಿಳಿಸಿದ್ದರು.

ಕ್ಷೇತ್ರ ಮಟ್ಟದಲ್ಲಿ ಪ್ರಕಟವಾಗಲೇ ಇಲ್ಲ ಪಟ್ಟಿ!

ಮುಖ್ಯ ಚುನಾವಣಾಧಿಕಾರಿಗಳ ಈ ಹೇಳಿಕೆಯ ಬೆನ್ನಲ್ಲೇ ‘ನಾಗರಿಕ ಮತಕಾವಲು ಸಮಿತಿ’ ಸೇರಿದಂತೆ ವಿವಿಧ ಜಾಗೃತ ಸಂಘಟನೆಗಳು ಪ್ರತ್ಯಕ್ಷ ಪರಿಶೀಲನೆಗೆ ಇಳಿದಿದ್ದವು. ಬೆಂಗಳೂರಿನ ಪದ್ಮನಾಭನಗರ, ಶಾಂತಿನಗರ ಸೇರಿದಂತೆ ತುಮಕೂರು, ಹಾಸನ, ಚಿಕ್ಕಮಗಳೂರು, ರಾಯಚೂರು ಸಹಿತ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಸಿದ ಈ ಪರಿಶೀಲನೆ ವೇಳೆ ಇದುವರೆಗೆ ಯಾವುದೇ ಪಂಚಾಯತ್‌ನಲ್ಲಾಗಲಿ ಅಥವಾ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಾಗಲಿ ಎಎಸ್‌ಡಿಡಿಒ ಪಟ್ಟಿಯನ್ನು ಸಾರ್ವಜನಿಕ ಪ್ರದರ್ಶನಕ್ಕೆ ಪ್ರಕಟಿಸಿಲ್ಲ ಎಂಬುದು ಸ್ಪಷ್ಟವಾಗಿದೆ.

ಶಾಶ್ವತವಾಗಿ ಒಂದೇ ವಿಳಾಸದಲ್ಲಿ ವಾಸಿಸುತ್ತಿರುವವರನ್ನೂ ‘ಶಾಶ್ವತ ಸ್ಥಳಾಂತರ’ ಅಥವಾ ‘ಗೈರು’ ಎಂದು ತಪ್ಪಾಗಿ ಎಎಸ್‌ಡಿಡಿಒ ಪಟ್ಟಿಗೆ ಸೇರಿಸಿರುವ ದೂರುಗಳು ರಾಜ್ಯಾದ್ಯಂತ ವ್ಯಾಪಕವಾಗಿವೆ. ಇಂತಹ ಸಂದರ್ಭದಲ್ಲಿ ಆ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವುದು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಲ್ಲ, ಬದಲಿಗೆ ಮತದಾರರು ತಮ್ಮ ಹೆಸರು ಪರಿಶೀಲಿಸಿಕೊಂಡು ಆಕ್ಷೇಪಣೆ ಸಲ್ಲಿಸಲು ಇರುವ ಮೂಲಭೂತ ಹಕ್ಕು. ಆದರೆ ಪಟ್ಟಿಯೇ ಸಿಗದಿದ್ದ ಮೇಲೆ ಸಾಮಾನ್ಯ ಮತದಾರ ತನ್ನ ಹೆಸರು ಕಡಿತಗೊಂಡಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದಾದರೂ ಹೇಗೆ?  ಅಯೋಗದ ವೆಬ್‌ಸೈಟ್‌ನಲ್ಲಿ ನೋಡಲು ಎಲ್ಲರಿಗೂ ಸಾಧ್ಯವಿಲ್ಲ ಎಂಬುದು ಆಯೋಗಕ್ಕೆ ತಿಳಿದಿಲ್ಲವೇ?

ಆಯೋಗ ಸೂಚನೆ ನೀಡಿರುವುದಕ್ಕೂ, ಅದು ವಾಸ್ತವದಲ್ಲಿ ಜಾರಿಯಾಗಿರುವುದಕ್ಕೂ ಅಂತರವಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಸಾರ್ವಜನಿಕವಾಗಿ ಕೆಲವು ಪ್ರಶ್ನೆಗಳಿಗೆ ತಕ್ಷಣ ಸ್ಪಷ್ಟನೆ ನೀಡಬೇಕಿದೆ:

  • ರಾಜ್ಯದ ಎಷ್ಟು ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಟ್ಟಿಯನ್ನು ಪ್ರಕಟಿಸಲಾಗಿದೆ?
  • ಪಟ್ಟಿ ಪ್ರಕಟಿಸಲು ನಿಗದಿಪಡಿಸಿದ್ದ ಅಂತಿಮ ದಿನಾಂಕ ಯಾವುದು?
  • ಪ್ರಕಟಿಸದ ಅಧಿಕಾರಿಗಳ ವಿರುದ್ಧ ಆಯೋಗ ಕೈಗೊಂಡ ಕ್ರಮವೇನು?
  • ಈ ಸೂಚನೆ ಕೇವಲ ಕಾಗದದ ಮೇಲಷ್ಟೇ ಉಳಿದಿದೆಯೇ?

“ರಾಜಕೀಯ ಪಕ್ಷಗಳಿಗೆ ಪಟ್ಟಿ ಕೊಟ್ಟ ತಕ್ಷಣವೇ ಆಯೋಗ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. SIR ಪ್ರಕ್ರಿಯೆಯ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ರಾಜಕೀಯ ಪಕ್ಷಗಳ ಕೆಲಸವಲ್ಲ, ಅದು ಚುನಾವಣಾ ಆಯೋಗದ ಮೂಲಭೂತ ಕರ್ತವ್ಯ. ಆ.12ರಂದು ನೀಡಿದ ಸೂಚನೆಗಳು ತಳಮಟ್ಟಕ್ಕೆ ತಲುಪಿವೆಯೇ ಎಂಬುದನ್ನು ಆಯೋಗ ಬಹಿರಂಗಪಡಿಸಬೇಕು” ಎಂದು ನಾಗರಿಕ ಮತಕಾವಲು ಸಮಿತಿಯ ವರದರಾಜೇಂದ್ರ ಆಗ್ರಹಿಸಿದ್ದಾರೆ.

ಬೆಳಗಿನಿಂದ ಸಂಜೆಯವರೆಗೆ ಕಚೇರಿ ಅಲೆಯುವ ಸಾಮಾನ್ಯ ನಾಗರಿಕನ ಮತಹಕ್ಕನ್ನು ಕಸಿಯುವ ಇಂತಹ ಪ್ರಮಾದಗಳ ಬಗ್ಗೆ ಚುನಾವಣಾ ಆಯೋಗವು ತಕ್ಷಣವೇ ಎಚ್ಚೆತ್ತುಕೊಂಡು, ಪ್ರತಿಯೊಂದು ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಪಟ್ಟಿಯನ್ನು ಸಾರ್ವಜನಿಕವಾಗಿ ಲಭ್ಯಗೊಳಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ-ಎನ್‌ಸಿಆರ್‌ನಲ್ಲಿ ಸರಣಿ ಅತ್ಯಾಚಾರ: ‘ವ್ಯವಸ್ಥಿತ ವೈಫಲ್ಯ’ ಎಂದ ಸುಪ್ರೀಂ ಕೋರ್ಟ್, ಸಾರ್ವಜನಿಕ ಸ್ಥಳಗಳು ‘ಅಪಾಯದ ವಲಯ’ವಾಗಲು ಬಿಡಲಾಗದು

ನವದೆಹಲಿ: ದೆಹಲಿ-ಎನ್‌ಸಿಆರ್‌ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿರುವ ಸರಣಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಈ ಪ್ರಕರಣಗಳು ಕೇವಲ ಪ್ರತ್ಯೇಕ ಅಪರಾಧಗಳಾಗಿ ನೋಡಲು ಸಾಧ್ಯವಿಲ್ಲ ಎಂದು...

ಎಲ್‌ಪಿಯು ಕ್ಯಾಂಪಸ್‌ ಹಿಂಸಾಚಾರ: ಹೆಣ್ಣುಮಕ್ಕಳಿಗೆ ‘ಹಾಸ್ಟೆಲ್‌ನೊಳಗೂ ಸುರಕ್ಷತೆ ಇಲ್ಲದಿದ್ದರೆ ಅದು ಗಂಭೀರ ಸಮಸ್ಯೆ’: ಅಭಿಜೀತ್ ದೀಪ್ಕೆ 

ಫಾಗ್ವಾರಾ: ಪಂಜಾಬ್‌ನ ಫಾಗ್ವಾರಾದಲ್ಲಿರುವ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯ (ಎಲ್‌ಪಿಯು) ಕ್ಯಾಂಪಸ್‌ನಲ್ಲಿ ವಾರಾಂತ್ಯದಲ್ಲಿ ನಡೆದ ಪ್ರತಿಭಟನೆ, ಹಿಂಸಾಚಾರ ಮತ್ತು ಬೆಂಕಿ ಹಚ್ಚಿದ ಘಟನೆಗಳ ಬೆನ್ನಲ್ಲೇ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ...

ಉಜ್ಜಯಿನಿ ಶಾಹಿ ಮಸೀದಿ ವಿವಾದ: ರಸ್ತೆ ಅಗಲೀಕರಣಕ್ಕಾಗಿ ಭಾಗಶಃ ಕೆಡವುವಿಕೆಯ ವಿರುದ್ಧದ ಮೇಲ್ಮನವಿ ವಜಾಗೊಳಿಸಿದ ಮಧ್ಯಪ್ರದೇಶ ಹೈಕೋರ್ಟ್ 

ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ಶಾಹಿ ಮಸೀದಿಯ ಒಂದು ಭಾಗವನ್ನು ತೆರವುಗೊಳಿಸುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠ ಸೋಮವಾರ, ಸೆಪ್ಟೆಂಬರ್ 28ರಂದು ವಿಲೇವಾರಿ ಮಾಡಿದೆ. ಮಸೀದಿ...

ಮುಖ್ಯ ಚುನಾವಣಾ ಆಯುಕ್ತ ಹುದ್ದೆಯಿಂದ ಗ್ಯಾನೇಶ್ ಕುಮಾರ್‌ ಅಮಾನತುಗೊಳಿಸಲು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಇತರ ಪರಿಹಾರಗಳ ಜೊತೆಗೆ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಬೇಕು ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಅದರ ಮುಖ್ಯಸ್ಥರು ಏಕಪಕ್ಷೀಯವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬುವುದಾಗಿ ಘೋಷಿಸಬೇಕು...

UPI ವಹಿವಾಟುಗಳ ಮೇಲೆ ಶುಲ್ಕ : ಕೇಂದ್ರದ ಆದೇಶಕ್ಕೆ ಮಧ್ಯಂತರ ತಡೆ ನೀಡಲು ಸುಪ್ರೀಂ ಕೋರ್ಟ್‌ ನಕಾರ

ಯುಪಿಐ ಮೂಲಕ ವ್ಯಕ್ತಿಗಳಿಂದ ವ್ಯಾಪಾರಿಗಳಿಗೆ ರೂ. 2,000ಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟುಗಳಿಗೆ ಶುಲ್ಕ ವಿಧಿಸುವ ಕ್ರಮದ ಆಧಾರವನ್ನು ವಿವರಿಸಿ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ (ಸೆ.28) ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ...

TMC ಪಕ್ಷ ಚಿಹ್ನೆ ಸಂಘರ್ಷ: ಆರು ತಿಂಗಳು ಬೇಕಿಲ್ಲ, ‘ಎಐ’ ಬಳಸಿ 3 ತಿಂಗಳಲ್ಲಿ ಇತ್ಯರ್ಥಗೊಳಿಸಿ ಎಂದ ಸುಪ್ರೀಂ ಕೋರ್ಟ್‌!

ಪಶ್ಚಿಮ ಬಂಗಾಳದ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಹೆಸರು ಹಾಗೂ ಅಧಿಕೃತ 'ಹೂವು ಮತ್ತು ಹುಲ್ಲು' (Flowers & Grass) ಚುನಾವಣಾ ಚಿಹ್ನೆಯ ಹಕ್ಕುಸ್ವಾಮ್ಯಕ್ಕೆ ಸಂಬಂಧಿಸಿದಂತೆ ಸೃಷ್ಟಿಯಾಗಿರುವ ಬಂಡಾಯ ಹಾಗೂ...

‘ದೆಹಲಿ-ಎನ್‌ಸಿಆರ್‌ ಅತ್ಯಾಚಾರ ಪ್ರಕರಣಗಳು ಪೊಲೀಸ್ ಮತ್ತು ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತವೆ’ : ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್

ದೆಹಲಿಯ ಉದ್ಯಾನವನವೊಂದರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಚಲಿಸುತ್ತಿದ್ದ ಸ್ಲೀಪರ್ ಬಸ್‌ನೊಳಗೆ ಅಪ್ರಾಪ್ತೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಸೇರಿದಂತೆ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಇತ್ತೀಚೆಗೆ ವರದಿಯಾದ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್...

ಆಗ್ರಾದಲ್ಲಿ ಸಿಇಸಿ ಗ್ಯಾನೇಶ್ ಕುಮಾರ್ ನಿವಾಸದ ಮೇಲೆ ‘ಗ್ಯಾನೇಶ್ ಗದ್ದರ್, ವೋಟ್ ಚೋರ್’ ಬರಹ; ಎಸ್‌ಐಆರ್ ವಿರುದ್ಧ ತೀವ್ರಗೊಂಡ ಪ್ರತಿಭಟನೆ

ಆಗ್ರಾ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ದೇಶಾದ್ಯಂತ ರಾಜಕೀಯ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆಯೇ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ಆಗ್ರಾದಲ್ಲಿರುವ ನಿವಾಸದ ಹೊರಗೆ...

‘ಇಂತಹ ಸರ್ಕಾರವನ್ನು ಬೆಂಬಲಿಸುವುದಕ್ಕೆ ವಿಷಾದವಿದೆ’: ಬಿಹಾರದ ಕಾನೂನು-ಸುವ್ಯವಸ್ಥೆ ಬಗ್ಗೆ ಚಿರಾಗ್ ಪಾಸ್ವಾನ್ ಬಹಿರಂಗ ಅಸಮಾಧಾನ

ಪಾಟ್ನಾ: ಬಿಹಾರದಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಸೇರಿದಂತೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಎನ್‌ಡಿಎ ಮೈತ್ರಿಕೂಟದ ಪ್ರಮುಖ ನಾಯಕ ಹಾಗೂ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್, ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರದ...

ಕೊಲ್ಕತ್ತಾದ SRFTIನಲ್ಲಿ ಆರ್‌ಎಸ್‌ಎಸ್-ಸಂಯೋಜಿತ ಸಭೆಗೆ ವಿರೋಧ: 150ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಭೀಕರ ಹಲ್ಲೆ ಆರೋಪ!

ಕೊಲ್ಕತ್ತಾದ ಪ್ರತಿಷ್ಠಿತ ‘ಸತ್ಯಜಿತ್ ರೇ ಫಿಲ್ಮ್ ಆಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್’ (SRFTI) ಆವರಣದಲ್ಲಿ ಭಾನುವಾರ ವಿದ್ಯಾರ್ಥಿಗಳು ಮತ್ತು ಆರ್‌ಎಸ್‌ಎಸ್‌ ಜೊತೆ ಸಂಪರ್ಕ ಹೊಂದಿರುವ ‘ಅಖಿಲ ಭಾರತೀಯ ಗ್ರಾಹಕ್ ಪಂಚಾಯತ್’ (ABGP) ಸದಸ್ಯರ ನಡುವೆ...