HomeಅಂಕಣಗಳುKarnataka against SIRSIR: ಬೆಂಗಳೂರಿನ ಸರ್ವಜ್ಞನಗರದ ಒಂದೇ ಬೂತ್‌ನಲ್ಲಿ ಶೇ.93.71ರಷ್ಟು ಮತದಾರರ ಹೆಸರು ನಾಪತ್ತೆ

SIR: ಬೆಂಗಳೂರಿನ ಸರ್ವಜ್ಞನಗರದ ಒಂದೇ ಬೂತ್‌ನಲ್ಲಿ ಶೇ.93.71ರಷ್ಟು ಮತದಾರರ ಹೆಸರು ನಾಪತ್ತೆ

- Advertisement -
- Advertisement -

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಹೆಸರಿನಲ್ಲಿ ರಾಜಧಾನಿ ಬೆಂಗಳೂರಿನ ಸರ್ವಜ್ಞನಗರ ಕ್ಷೇತ್ರದ ಒಂದೇ ಮತಗಟ್ಟೆಯಲ್ಲಿ ಬರೋಬ್ಬರಿ ಶೇ. 93.71ರಷ್ಟು ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆಯಲಾಗಿದೆ ಎಂಬ ಆಘಾತಕಾರಿ ಸಂಗತಿಯೊಂದು ‘ಮ್ಯಾಂಡೇಟ್ ಅನಾಲಿಟಿಕ್ಸ್ ಅಂಡ್ ಕನ್ಸಲ್ಟಿಂಗ್’ (MAC) ಸಂಸ್ಥೆಯ ದತ್ತಾಂಶ ವಿಶ್ಲೇಷಣೆಯಿಂದ ಬಯಲಾಗಿದೆ.

ಖಾಸಗಿ ಸಂಶೋಧನಾ ಸಂಸ್ಥೆಯಾದ ಎಂಎಸಿ ತನ್ನ ‘ಮ್ಯಾಕ್ ಇನ್‌ಸೈಟ್ಸ್’ ವೇದಿಕೆಯಲ್ಲಿ ಈ ಸತ್ಯಾಸತ್ಯತೆಯನ್ನು ವರದಿಯ ರೂಪದಲ್ಲಿ ಪ್ರಕಟಿಸಿದೆ. ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಶಾಂತಿ ಚಿಲ್ಡ್ರನ್ ಸ್ಕೂಲ್ ಮತಗಟ್ಟೆಯಲ್ಲಿ ವಾಸಿಸುತ್ತಿರುವ ಬಹುತೇಕ ಎಲ್ಲ ನಾಗರಿಕರನ್ನು ಎಸ್‌ಐಆರ್ ಪ್ರಕ್ರಿಯೆಯ ನೆಪದಲ್ಲಿ ಎಎಸ್‌ಡಿಡಿಒ (ASDDO) ಪಟ್ಟಿಗೆ ಸೇರಿಸಿ ಹೊರಹಾಕಲು ಆಯೋಗ ಮುಂದಾಗಿದೆ.

ವರದಿಯ ಪ್ರಕಾರ, ಶಾಂತಿ ಚಿಲ್ಡ್ರನ್ ಸ್ಕೂಲ್ ಬೂತ್‌ನಲ್ಲಿ 2023ರ ವಿಧಾನಸಭಾ ಚುನಾವಣೆ ವೇಳೆಗೆ ಒಟ್ಟು 1,129 ನೋಂದಾಯಿತ ಮತದಾರರಿದ್ದರು. ಆದರೆ ಪ್ರಸ್ತುತ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಇವರ ಪೈಕಿ ಬರೋಬ್ಬರಿ 1,058 (ಶೇ. 93.71) ಮತದಾರರನ್ನು ಎಎಸ್‌ಡಿಡಿಒ ಪಟ್ಟಿಗೆ ಸೇರಿಸಲಾಗಿದೆ.

ಅದರಲ್ಲೂ ವಿಚಿತ್ರವೆಂದರೆ, ಈ 1,058 ಜನರ ಪೈಕಿ 1,057 ಮಂದಿ ‘ಸ್ಥಳಾಂತರಗೊಂಡಿದ್ದಾರೆ’ (Shifted) ಎಂದು ನಮೂದಿಸಲಾಗಿದೆ. ಅಂದರೆ ಒಂದು ಇಡೀ ಬೂತ್‌ನ ಶೇ. 93ಕ್ಕಿಂತ ಹೆಚ್ಚು ನಾಗರಿಕರು ಒಂದೇ ಬಾರಿಗೆ ಮನೆ ಖಾಲಿ ಮಾಡಿ ಹೋಗಿದ್ದಾರೆ ಎಂಬ ಅಸಂಬದ್ಧ ಕಾರಣ ನೀಡಿ ಅವರ ಮತಹಕ್ಕನ್ನು ಕಸಿಯಲು ಆಯೋಗ ಸಂಚು ರೂಪಿಸಿದೆ ಎಂಬುದು ಸಂಸ್ಥೆಯ ವಿಶ್ಲೇಷಣೆಯಿಂದ ಸ್ಪಷ್ಟವಾಗಿದೆ.

ಈ ಅಕ್ರಮ ಅಥವಾ ಪ್ರಮಾದ ಕೇವಲ ಸರ್ವಜ್ಞನಗರಕ್ಕಷ್ಟೇ ಸೀಮಿತವಾಗಿಲ್ಲ. ಎಂಎಸಿ ಸಂಸ್ಥೆಯ ಆಳವಾದ ದತ್ತಾಂಶ ವಿಶ್ಲೇಷಣೆಯ ಪ್ರಕಾರ, ಕರ್ನಾಟಕದಾದ್ಯಂತ ಒಟ್ಟು 3,372 ಮತಗಟ್ಟೆಗಳಲ್ಲಿ ಶೇ. 50ಕ್ಕಿಂತಲೂ ಹೆಚ್ಚು ಮತದಾರರ ಹೆಸರುಗಳನ್ನು ಎಎಸ್‌ಡಿಡಿಒ ಅಡಿಯಲ್ಲಿ ಸೇರಿಸಿ ಡಿಲೀಟ್ ಮಾಡಲು ಗುರುತಿಸಲಾಗಿದೆ! ಇದು ವ್ಯವಸ್ಥಿತವಾಗಿ ನೈಜ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಹುನ್ನಾರವೇ ಎಂಬ ಪ್ರಶ್ನೆ ಮೂಡಿಸಿದೆ.

ಇಷ್ಟೆಲ್ಲಾ ಆಘಾತಕಾರಿ ದತ್ತಾಂಶಗಳು ಹೊರಬರುತ್ತಿದ್ದಂತೆಯೇ, ಚುನಾವಣಾ ಆಯೋಗವು ತನ್ನ ಲೋಪದೋಷಗಳನ್ನು ತಿದ್ದಿಕೊಳ್ಳುವ ಬದಲಿಗೆ ಸಾಕ್ಷಿ ಮುಚ್ಚಿಹಾಕುವ ಹಾದಿ ಹಿಡಿದಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಎಂಎಸಿ ಸಂಸ್ಥೆಯ ವರದಿ ಬಹಿರಂಗವಾಗುತ್ತಿದ್ದಂತೆಯೇ, ಚುನಾವಣಾ ಆಯೋಗವು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಎಎಸ್‌ಡಿಡಿಒ ಪಟ್ಟಿಯನ್ನೇ ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಏಕಾಏಕಿ ತೆಗೆದುಹಾಕಿರುವುದು ಈ ಅನುಮಾನಕ್ಕೆ ಇನ್ನಷ್ಟು ಬಲ ತುಂಬಿದೆ.

ದೋಷಮುಕ್ತ ಮತದಾರರ ಪಟ್ಟಿ ಸಿದ್ಧಪಡಿಸುವ ನೆಪದಲ್ಲಿ ಪ್ರಜೆಗಳ ಅಸ್ತಿತ್ವ ಮತ್ತು ಮೂಲಭೂತ ಮತಾಧಿಕಾರವನ್ನೇ ಕಸಿಯುತ್ತಿರುವ ಈ SIR ಪ್ರಕ್ರಿಯೆಯ ವಿರುದ್ಧ ನಾಗರಿಕ ಸಮಾಜ ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆಯೋಗವು ತಕ್ಷಣವೇ ಪಾರದರ್ಶಕ ವಿವರ ನೀಡಬೇಕೆಂದು ಆಗ್ರಹಿಸಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಇಸಿಐನೆಟ್’ ಸಾಫ್ಟ್‌ವೇರ್ ಲೋಪ: ಸ್ಥಳೀಯ ಅಧಿಕಾರಿಗಳ ಶಾಸನಬದ್ಧ ಅಧಿಕಾರ ಹರಣ ಆರೋಪಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ಮಹಾರಾಷ್ಟ್ರ ಸಿಇಒ ಸುದೀರ್ಘ ಪತ್ರ!

ಕೇಂದ್ರ ಚುನಾವಣಾ ಆಯೋಗವು ದೇಶಾದ್ಯಂತ ಜಾರಿಗೆ ತಂದಿರುವ 'ಇಸಿಐನೆಟ್' (ECINet) ಕೇಂದ್ರೀಕೃತ ಸಾಫ್ಟ್‌ವೇರ್, ಕಾನೂನುಬದ್ಧವಾಗಿ ಸ್ಥಳೀಯ ಮತದಾರ ನೋಂದಣಿ ಅಧಿಕಾರಿಗಳಿಗೆ (ERO) ನೀಡಲಾಗಿರುವ ಶಾಸನಬದ್ಧ ಅಧಿಕಾರಗಳನ್ನು ಕಸಿಯುತ್ತಿದೆ ಎಂಬ ಗಂಭೀರ ಆರೋಪ ಎದುರಾಗಿದೆ....

ಸಂಭಾಲ್ ಹಿಂಸಾಚಾರ ಪ್ರಕರಣ: ಮುಸ್ಲಿಂ ವ್ಯಕ್ತಿಯ NSA ಬಂಧನ ರದ್ದುಪಡಿಸಿದ ಸುಪ್ರೀಂ ಕೋರ್ಟ್; ಯುಪಿ ಸರ್ಕಾರಕ್ಕೆ ₹10 ಲಕ್ಷ ದಂಡ

ನವದೆಹಲಿ: ಸಂಭಾಲ್‌ನಲ್ಲಿ 2024ರ ನವೆಂಬರ್‌ನಲ್ಲಿ ನಡೆದ ಪ್ರತಿಭಟನೆ ಮತ್ತು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಲ್ಲಾ ಅಫ್ರೋಜ್ ಎಂಬುವರ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಜಾರಿಗೊಳಿಸಿದ್ದ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿ ತಡೆಗಟ್ಟುವ...

ಸಂಭಾಲ್ ಹಿಂಸಾಚಾರ | ಮುಲ್ಲಾ ಅಫ್ರೋಝ್ ಎನ್‌ಎಸ್‌ಎ ಬಂಧನ ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ; ಯುಪಿ ಸರ್ಕಾರಕ್ಕೆ 10 ಲಕ್ಷ ರೂ. ದಂಡ

2024ರ ಸಂಭಾಲ್ ಹಿಂಸಾಚಾರದ ರೂವಾರಿ ಎಂದು ಆರೋಪಿಸಲಾದ ಮುಲ್ಲಾ ಅಫ್ರೋಝ್ ಅವರನ್ನು 'ರಾಷ್ಟ್ರೀಯ ಭದ್ರತಾ ಕಾಯ್ದೆ, 1980'ರ ಅಡಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಇಂದು (ಸೆಪ್ಟೆಂಬರ್ 29) ರದ್ದುಗೊಳಿಸಿದೆ....

ಔಷಧ ಬೆಲೆಗಳ ಹೆಸರಲ್ಲಿ ನಡೆಯುತ್ತಿದೆ ಲೂಟಿ: ಆಸ್ಪತ್ರೆ-ಮೆಡಿಕಲ್‌ಗಳ ವಿರುದ್ಧ ಸುಪ್ರೀಂ ಕೋರ್ಟ್ ಗರಂ

ದೇಶದಲ್ಲಿ ಗರಿಷ್ಠ ಚಿಲ್ಲರೆ ಬೆಲೆ (MRP) ಹೆಸರಿನಲ್ಲಿ ಔಷಧಗಳ ಬೆಲೆಯನ್ನು ಮನಬಂದಂತೆ ಹೆಚ್ಚಿಸಿ ಸಾಮಾನ್ಯ ರೋಗಿಗಳನ್ನು ಸುಲಿಗೆ ಮಾಡುತ್ತಿರುವುದನ್ನು ಸುಪ್ರೀಂ ಕೋರ್ಟ್ 'ಅಮಾನವೀಯ ಲೂಟಿ' ಎಂದು ತೀವ್ರವಾಗಿ ಖಂಡಿಸಿದೆ. ಔಷಧಗಳ ನೈಜ ಖರೀದಿ...

ಬಂಗಾಳ ಎಸ್‌ಐಆರ್‌ ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರೀಂ ನಕಾರ; ‘ಇವು ಕೇವಲ ಉಪಚುನಾವಣೆಗಳು’ ಎಂದ ಸಿಜೆಐ ಸೂರ್ಯಕಾಂತ್ ವಿರುದ್ಧ ಜನಾಕ್ರೋಶ

ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ಹೊರಗಿಡಲಾದ ಮತದಾರರಿಗೆ ಸಂಬಂಧಿಸಿದ ಅರ್ಜಿಗಳ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಅರ್ಜಿದಾರರು ಅಕ್ಟೋಬರ್...

CWC Meeting : ಮೋದಿ, ಗ್ಯಾನೇಶ್ ಕುಮಾರ್ ರಾಜೀನಾಮೆ ಸೇರಿದಂತೆ 5 ಬೇಡಿಕೆಗಳನ್ನು ಮುಂದಿಟ್ಟ ಕಾಂಗ್ರೆಸ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು ಮತದಾರರ ನೋಂದಣಿ ನಿಯಮಗಳಿಗೆ ಬದಲಾವಣೆಗಳ ಮೂಲಕ ಚುನಾವಣಾ ಆಯೋಗವು ಚುನಾವಣಾ ಪ್ರಕ್ರಿಯೆಯ ಸಮಗ್ರತೆಯನ್ನು ರಾಜಿ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ಸಿಇಸಿ ಗ್ಯಾನೇಶ್ ಕುಮಾರ್ ಅಮಾನತು ಕೋರಿದ ಅರ್ಜಿ: ಶೀಘ್ರ ವಿಚಾರಣೆಗೆ ಸಮ್ಮತಿಸಿದ ಸುಪ್ರೀಂ ಕೋರ್ಟ್!

ಭಾರತೀಯ ಚುನಾವಣಾ ಆಯೋಗದ ಸಾಂವಿಧಾನಿಕ ಅಧಿಕಾರಗಳನ್ನು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಏಕಪಕ್ಷೀಯವಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಿ ಹಾಗೂ ಅವರನ್ನು ಹುದ್ದೆಯಿಂದ ಮಧ್ಯಂತರ ಅಮಾನತುಗೊಳಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ತುರ್ತು...

ಮತದಾರರ ಹಕ್ಕು ಕಸಿಯುತ್ತಿರುವ SIR: ಸೆ.30 ರಂದು ‘SIR ಪರಿಶೋಧನಾ’ ವರದಿ ಬಿಡುಗಡೆ

ಕೇಂದ್ರ ಚುನಾವಣಾ ಆಯೋಗವು ಜಾರಿಗೆ ತಂದಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಿಂದಾಗಿ ಲಕ್ಷಾಂತರ ಬಡ ಹಾಗೂ ಅರ್ಹ ಮತದಾರರ ಹೆಸರುಗಳು ತಾಂತ್ರಿಕ ಕಾರಣ ನೀಡಿ ಪಟ್ಟಿಯಿಂದ ಡಿಲೀಟ್ ಆಗುತ್ತಿದ್ದು, ನಾಗರಿಕರ ಮೂಲಭೂತ...

ಮತದಾರರ ಹಕ್ಕು ಕಸಿಯುತ್ತಿರುವ SIR: ಸೆ.30 ರಂದು ಸರ್ಕಾರಕ್ಕೆ ‘ಪರಿಶೋಧನೆ ಹಾಗೂ ಪ್ರತಿರೋಧ ಜಾಥಾ’ ವರದಿ ಸಲ್ಲಿಕೆ

ಕೇಂದ್ರ ಚುನಾವಣಾ ಆಯೋಗವು ಜಾರಿಗೆ ತಂದಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಿಂದಾಗಿ ಲಕ್ಷಾಂತರ ಬಡ ಹಾಗೂ ಅರ್ಹ ಮತದಾರರ ಹೆಸರುಗಳು ತಾಂತ್ರಿಕ ಕಾರಣಗಳನ್ನು ನೀಡಿ ಪಟ್ಟಿಯಿಂದ ಡಿಲೀಟ್ ಆಗುತ್ತಿದ್ದು, ನಾಗರಿಕರ ಮೂಲಭೂತ...

ಕರ್ನಾಟಕದಲ್ಲಿ ಇಂದಿನಿಂದ ಎಸ್‌ಐಆರ್ ‘ಕಚೇರಿ ವಿಚಾರಣೆ’ ಸ್ಥಗಿತ: ಚುನಾವಣಾ ಆಯೋಗದಿಂದ ಹೊಸ ಮಾರ್ಗದರ್ಶಿ!

ಮತದಾರರ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ' (Special Intensive Revision - SIR) ಪ್ರಕ್ರಿಯೆಯಲ್ಲಿ ನೋಟಿಸ್ ಪಡೆದಿರುವ ಮತದಾರರು ಚುನಾವಣಾ ಕಚೇರಿಗಳಿಗೆ ನೇರವಾಗಿ ಹಾಜರಾಗುವ 'ಕಚೇರಿ ವಿಚಾರಣೆ' (Physical Hearing) ವ್ಯವಸ್ಥೆಯನ್ನು ಕರ್ನಾಟಕದ...