Homeಕರ್ನಾಟಕ'ಬಹುಜನ' ಎಂದರೆ ಬಿಜೆಪಿಗೆ ಹಿಂದೂಗಳು, ನಮಗೆ ದುಡಿಯುವ ಜನ: ಮೀನಾಕ್ಷಿ ಸುಂದರಂ

‘ಬಹುಜನ’ ಎಂದರೆ ಬಿಜೆಪಿಗೆ ಹಿಂದೂಗಳು, ನಮಗೆ ದುಡಿಯುವ ಜನ: ಮೀನಾಕ್ಷಿ ಸುಂದರಂ

- Advertisement -
- Advertisement -

“ಬಹುಜನರೆಂದರೆ ಬಿಜೆಪಿಗೆ ಹಿಂದೂಗಳು; ನಮಗೆ ಬಹುಜನರೆಂದರೆ ಈ ದೇಶದ ದುಡಿಯುವ ಜನ. ಮಧ್ಯಮ ವರ್ಗದ ಹಿಂದೂಗಳನ್ನು ಕೇಂದ್ರ ಬಜೆಟ್‌ ಮೂಲಕ ಓಲೈಸಲಾಗುತ್ತಿದೆ, ಮಾಧ್ಯಮಗಳಲ್ಲೂ ಅದೇ ರೀತಿ ಬಿಂಬಿಸಲಾಗುತ್ತಿದೆ” ಎಂದು ಕಾರ್ಮಿಕ ಮುಖಂಡರಾದ ಮೀನಾಕ್ಷಿ ಸುದರಂ ಹೇಳಿದರು.

ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುತ್ತಿರುವ ‘ಜನ ಚಳವಳಿಗಳ ಬಜೆಟ್ ಅಧಿವೇಶನ’ದ ಎರಡನೇ ದಿನದ ಮೊದಲ ಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೇಂದ್ರ ಹಾಗೂ ರಾಜ್ಯದ ಬಜೆಟ್ ಎರಡೂ ನಮ್ಮ ಮುಂದಿವೆ; ದೇಶದ ಶ್ರಮಜೀವಿಗಳು ಹಾಗೂ ದುಡಿಯುವ ಜನರ ಪರವಾಗಿ ಒಕ್ಕೂಟ ಸರ್ಕಾರ-ಕರ್ನಾಟಕ ಬಜೆಟ್‌ನಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಹಲವು ವರ್ಷಗಳಿಂದ ಮಾತನಾಡುತ್ತಿದ್ದೇವೆ. ಬಜೆಟ್ ಪೂರ್ವ ಸಭೆಗಳಲ್ಲಿ ನಮ್ಮ ಸಲಹೆಗಳನ್ನು ಸರ್ಕಾರಕ್ಕೆ ಕೊಟ್ಟಿದ್ದೇವೆ. ದೇಶದ ಎಲ್ಲರನ್ನೂ ಒಳಗೊಂಡ ಬಜೆಟ್ ಹಾಗೂ ನೀತಿಗಳು ಬಿಂಬಿತ ಆಗಬೇಕು ಎಂಬುದು ನಮ್ಮ ಉದ್ದೇಶ. ಆದರೆ, ಆಗುತ್ತಿಲ್ಲ” ಎಂದರು.

“ಕೇಂದ್ರದ ಬಜೆಟ್ ದೇಶದ ದುಡಿಯುವ ಜನರಲ್ಲಿ ಬದಲಾವಣೆ ತರುತ್ತದೆ ಎಂಬ ನಿರೀಕ್ಷೆ ಏನೂ ಇರಲಿಲ್ಲ. ದೇಶದ ಬಹುಜನರಿಗೆ ಮಾನ್ಯತೆ ನೀಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಏಕೆಂದರೆ, ಬಿಜೆಪಿ ಪಾಲಿಗೆ ಬಹುಜನರೆಂದರೆ ಹಿಂದೂಗಳು, ನಮಗೆ ಬಹುಜನರೆಂದರೆ ಈ ದೇಶದ ದುಡಿಯುವ ಜನ. ಮಾಧ್ಯಮಗಳಲ್ಲಿ ಕೂಡ ಇದೇ ರೀತಿ ಬಿಂಬಿಸಲಾಗುತ್ತಿದೆ” ಎಂದು ಹೇಳಿದರು.

“ಮಧ್ಯಮ ವರ್ಗಕ್ಕೆ ಸ್ವರ್ಗವನ್ನೇ ತಂದಿದ್ದೇವೆ ಎಂದು ಮಾಧ್ಯಮಗಳಲ್ಲಿ ಕೇಂದ್ರ ಬಜೆಟ್ ಬಗ್ಗೆ ಚರ್ಚೆಯಾಗುತ್ತಿದೆ. ಎಲ್ಲ ವೇದಿಕೆಗಳಲ್ಲಿ ಈ ಬಗ್ಗೆ ವ್ಯವಸ್ಥಿತವಾಗಿ ಚರ್ಚೆ ಮಾಡುತ್ತಿದ್ದಾರೆ. ಆದರೆ, ಕೇಂದ್ರದ ಬಜೆಟ್‌ನಲ್ಲಿ, ನಮ್ಮ ದೇಶದ ದುಡಿಯುವ ಜನ ಹಾಗೂ ಸ್ವ-ಉದ್ಯೋಗಿಗಳ ವೇತನ ಮಟ್ಟ ಕೋವಿಡ್ ಪೂರ್ವದಲ್ಲಿ ಇದ್ದಷ್ಟೇ 2025 ರಲ್ಲೂ ಇದೆ ಎಂದು ಹೇಳುತ್ತದೆ. ಆದರೆ, ಕಳೆದ 15 ವರ್ಷಗಳಲ್ಲಿ ಕಾರ್ಪೊರೇಟ್ ಕಂಪನಿಗಳ ಆದಾಯ ಹೆಚ್ಚಾಗಿದೆ.. ಅದಕ್ಕೆ ಕಾರಣ ಏನಿರಬಹುದು? ಅವರ ‘ವಿಕಸಿತ ಭಾರತ’ದಲ್ಲಿ ಯಾರು ಅಭಿವೃದ್ಧಿ ಆಗಿದ್ದಾರೆ ಎಂಬ ಪ್ರಶ್ನೆ ಮೂಡುತ್ತದೆ” ಎಂದು ಕೇಂದ್ರ ಬಜೆಟ್ ಕುರಿತು ವಿಶ್ಲೇಷಿಸಿದರು.

“ಸಾರ್ವಜನಿಕ ನಿಧಿಯ ಮೂಲಕ ಖಾಸಗಿ ಕಂಪನಿಗಳ ಲಾಭ ಖಾತ್ರಿಪಡಿಸುವುದಕ್ಕೆ ಸಾಕಷ್ಟು ಕಾರ್ಯಕ್ರಮ ಜಾರಿ ಮಾಡಿ, ಅದಕ್ಕೆ ಬೇರೆಬೇರೆ ಹೆಸರು ಇಟ್ಟಿದ್ದಾರೆ. ಅದರಲ್ಲಿ ಸಾರ್ವಜನಿಕ ಆಸ್ತಿಯನ್ನು ಖಾಸಗಿಯವರಿಗೆ ಉಚಿತವಾಗಿ ನೀಡುವುದು ಸೇರಿದೆ. ಕೇವಲ ಸ್ಥಿರ ಆಸ್ತಿಗಳು ಮಾತ್ರವಲ್ಲ, ಅದರಲ್ಲಿ ನಾವು ಕೊಡುವ ತೆರಿಗೆ ಹಣವೂ ಸೇರಿದೆ. ನಾವು ದುಡಿಯುವ ಒಂದು ರೂಪಾಯಿಯಲ್ಲಿ ಕನಿಷ್ಠ 20 ಪೈಸೆ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಕೊಡುತ್ತಿದ್ದೇವೆ. ಪಬ್ಲಿಕ್ ಫಂಡ್ಸ್‌ ಫಾರ್ ಪ್ರೈವೇಟ್ (ಪಿಪಿಪಿ) ಮತ್ತು ಹಣಕಾಸಿನ ಶಿಸ್ತು ಹೆಸರಿನಲ್ಲಿ ಇದನ್ನೆಲ್ಲಾ ಮಾಡಲಾಗುತ್ತಿದೆ. ಆದಾಯಕ್ಕಿಂತ ಖರ್ಚಿನ ಪ್ರಮಾಣ ಶೇ.3ಕ್ಕೆ ಇಳಿದರೆ ಮಾತ್ರ ಶಿಸ್ತುಬದ್ಧ ಆರ್ಥಿಕತೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದು, ಕಳೆದ ಬಜೆಟ್‌ನಲ್ಲಿ ನಮ್ಮ ಆದಾಯಕ್ಕಿಂತ ಖರ್ಚಿನ ಪ್ರಮಾಣ ಶೇ.5ರಷ್ಟಿತ್ತು. ಅದನ್ನು ಈ ಬಜೆಟ್‌ನಲ್ಲಿ ಸರಿದೂಗಿಸಲಾಗಿದೆ ಎಂದು ಕೇಂದ್ರ ಹೇಳಿದೆ” ಎಂದರು.

“ಕಾರ್ಪೊರೇಟ್ ಕಂಪನಿಗಳು ಕೇಂದ್ರಕ್ಕೆ ಪಾವತಿಸುತ್ತಿರುವ ತೆರಿಗೆ ಕೇವಲ ಶೇ.10 ಮಾತ್ರ. ಆದರೆ, ಜನರ ಪರೋಕ್ಷ ತೆರಿಗೆ ಮೂಲಕ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುತ್ತಿದೆ. ಬಡವರಮೇಲೆ ತೆರಿಗೆ ಹೊರೆ ಹೆಚ್ಚಿಸಿ, ಶ್ರೀಮಮಂತರಿಗೆ ವಿನಾಯಿತಿ ನೀಡಲಾಗುತ್ತಿದೆ” ಎಂದು ಹೇಳಿದರು.

“ರಾಷ್ಟ್ರದ ಅಭಿವೃದ್ಧಿ ಉದ್ದೇಶದಿಂದ ಹಲವು ಹೊಸ ಸ್ವರೂಪದ ನಿಧಿಗಳನ್ನು ಸ್ಥಾಪನೆ ಮಾಡಬೇಕು ಎಂದು ಸರ್ಕಾರ ಹೇಳುತ್ತಿದೆ. ಸರ್ಕಾರದ ಹಣ ಹೂಡಿ, ಅದರ ಮೂಲಕ ದೇಶದ ಅಭಿವೃದ್ಧಿ ಮಾಡುವುದು ಇದರ ಉದ್ದೇಶ. ಅದರಲ್ಲಿ ನಾಗರೀಕರ ಸವಾಲುಗಳ ನಿಧಿ, ಮೂಲಭೂತ ಸೌಕರ್ಯ ನಿಧಿ ಸೇರಿದಂತೆ ಹಲವು ನಿಧಿಗಳಿಗೆ ಕೇಂದ್ರ ಸರ್ಕಾರ ಹಣ ನೀಡುತ್ತದೆ. ಈ ಫಂಡ್ ನಿರ್ವಹಣೆ ಮಾಡುವುದು ‘ಪ್ರೈವೇಟ್ ಪಬ್ಲಿಕ್’ ಸಹಯೋಗದಲ್ಲಿ. ಅಂದರೆ, ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವುದು ಇದರ ಉದ್ದೇಶ” ಎಂದು ವಿವರಿಸಿದರು.

“ಕೇಂದ್ರದ ಬಜೆಟ್‌ನಲ್ಲಿ ಉತ್ಪಾದಕರಿಗೆ ಕೊಡುವ ಪ್ರೋತ್ಸಾಹ ವಾರ್ಷಿಕ ಧನ ₹2 ಲಕ್ಷ ಕೋಟಿ. ಆದರೆ, ಅದನ್ನು ಕಾರ್ಮಿಕರಿಗೆ ಕೊಡುವುದಿಲ್ಲ, ಹೊಸದಾಗಿ ಕಾರ್ಮಿಕರನ್ನು ನೇಮಿಸಿಕೊಳ್ಳುವ ಉದ್ಯೋಗದಾತರಿಗೆ ನೀಡಲಾಗುತ್ತದೆ. ಸರ್ಕಾರ ನೇರವಾಗಿ ಬಡವರಿಗೆ ಹಣ ಕೊಡುವುದಕ್ಕೆ ತಯಾರಿಲ್ಲ. ಮನರೇಗಾ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಹಣ ಹೆಚ್ಚಿಸಿಲ್ಲ. ಬಂಡವಾಳ ಹೂಡಿದವರಿಗೆ ರಿಯಾಯಿತಿ ನೀಡುವುದಕ್ಕಾಗಿ ಕೇಂದ್ರ ಸರ್ಕಾರ ₹76 ಸಾವಿರ ಕೋಟಿ ನಿಗದಿ ಮಾಡಿದೆ” ” ಎಂದರು.

ಕೇಂದ್ರವನ್ನು ಅನುಸರಿಸಿರುವ ಸಿದ್ದರಾಮಯ್ಯ

“ಕೇಂದ್ರದ ಬಜೆಟ್ ಅನ್ನೇ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲೂ ಅನುಕರಿಸಿದ್ದಾರೆ. ಇಡೀ ಬಜೆಟ್‌ನಲ್ಲಿ ಕಾರ್ಮಿಕರಿಗಾಗಿ ಕೊಟ್ಟಿರುವುದು, ಸೆಸ್ ಮೂಲಕ ಸಂಗ್ರಹವಾಗುವ ಹಣದ ಯೋಜನೆಗಳು ಮಾತ್ರ. ಇಡೀ ಬಜೆಟ್‌ನಲ್ಲಿ ಕಾರ್ಮಿಕರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ” ಎಂದು ಹೇಳಿದರು.

“ಕರ್ನಾಟಕದ ಆರ್ಥಿಕ ಸಮೀಕ್ಷೆ ಪ್ರಕಾರ, ನಮ್ಮ ರಾಜ್ಯದ ಸರಾಸರಿ ತಲಾ ಆದಾಯ (ಜಿಡಿಪಿ) ₹3.32 ಲಕ್ಷ ಎಂದು ಹೇಳಿದೆ. ಕೇಂದ್ರ ಸರ್ಕಾರದ ಜಿಡಿಪಿ ₹1.85 ಸಾವಿರ ಇದೆ. ದೇಶಕ್ಕಿಂತ ನಾವು ಹೆಚ್ಚಿನ ತಲಾ ಆದಾಯ ಹೊಂದಿದ್ದೇವೆ ಎಂದು ರಾಜ್ಯ ಸರ್ಕಾರ ಹೇಳುತ್ತದೆ. ಆದರೆ, ಎಲ್ಲರೂ ಇಷ್ಟೇ ಆದಾಯ ಗಳಿಸುತ್ತಿದ್ದಾರೆ ಎಂದು ನಂಬಲು ಸಾಧ್ಯವಿಲ್ಲ” ಎಂದು ಹೇಳಿದರು.

“ಬೆಂಗಳೂರಿನಲ್ಲಿ ವಾಸಿಸುವವರ ಆದಾಯ ಅಂದಾಜು ₹7 ಲಕ್ಷ ಇದ್ದರೆ, ಕಲಬುರಗಿಯಲ್ಲಿ ₹1.6 ಲಕ್ಷ ಇದೆ. ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ಯಾವುದೇ ತಲಾ ಆದಾಯ ₹3 ಲಕ್ಷ ದಾಟುತ್ತಿಲ್ಲ. ಎಲ್ಲಿ ಆದಾಯ ಹೆಚ್ಚಿದೆಯೋ ಅಲ್ಲಿಗೆ ಬಜೆಟ್‌ನಲ್ಲಿ ಹೆಚ್ಚಿನ ಹಣ ಮೀಸಲಿಡಲಾಗಿದೆ. ಆದರೆ, ಅಭಿವೃದ್ಧಿಯನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವ ಪ್ರೋತ್ಸಾಹಕ ಯೋಜನೆಗಳು ಇಲ್ಲ” ಎಂದು ಆರೋಪಿಸಿದರು.

“ಅಸಂಘಟಿತ ಕಾರ್ಮಿಕರನ್ನು ಲೆಕ್ಕ ಮಾಡುವುದಕ್ಕೆ ಇ-ಶ್ರಮ್ ಪೋರ್ಟಲ್‌ನಲ್ಲಿ ನೊಂದಣಿ ಮಾಡಬೇಕು ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ರಾಜ್ಯದಲ್ಲಿ 1.89 ಲಕ್ಷ ಜನ ನೋದದಣಿ ಆಗಿದ್ದಾರೆ. ಇವರಿಗಾಗಿ ಸರ್ಕಾರ ಬಜೆಟ್‌ನಲ್ಲಿ ಮಾಡಿವುದಾದರೂ ಏನು? ಆರು ಕೋಟಿ ಜನರ ಒಂದಲ್ಲ ಒಂದು ಕುಟುಂಬದಲ್ಲಿ ಶ್ರಮಜೀವಿಗಳು ಇದ್ದಾರೆ. ಅವರಿಲ್ಲದೆ ರಾಜ್ಯ ಸರ್ಕಾರ ನಡೆಯುವುದಿಲ್ಲ” ಎಂದರು.

“ಕೇಂದ್ರ ಸರ್ಕಾರದ ಜಿಎಸ್‌ಟಿ ಸಂಗ್ರಹಕ್ಕೆ ಕರ್ನಾಟಕದ ಜನ ಹೆಚ್ಚಿನ ಕೊಡುಗೆ ನೀಡುತ್ತಿದ್ದೇವೆ. ಆದರೆ, ನಮಗೆ ನ್ಯಾಯಯುತ ಪಾಲು ಸಿಗುತ್ತಿಲ್ಲ. ಕೇಂದ್ರ ಸರ್ಕಾರ ನಮಗೆ ಕೊಡಬೇಕಾಗಿರುವುದನ್ನು ರಾಜ್ಯ ಸರ್ಕಾರ ಪಟ್ಟಿ ಮಾಡಿದೆ. ತೆರಿಗೆ ಜೊತೆಗೆ ಕೇಂದ್ರ ಸರ್ಕಾರ ಸೆಸ್‌ ಹಾಕಿದ್ದು, ಅದರಲ್ಲಿ ರಾಜ್ಯ ಸರ್ಕಾರಕ್ಕೆ ಪಾಲಿಲ್ಲ. ಕರ್ನಾಟಕ ಸರ್ಕಾರ ಯಾವ ತರ್ಕದಲ್ಲಿ ಪಾಲು ಕೇಳುತ್ತಿದೆಯೋ,  ಅದೇ ತರ್ಕದಲ್ಲಿ ನಾವು ಕಾರ್ಮಿಕರ ಪಾಲು ಕೇಳುತ್ತಿದ್ದೇವೆ. ರಾಜ್ಯದಲ್ಲಿ ದುಡಿಯುತ್ತಿರುವ ರೈತರು ಹಾಗೂ ಕಾರ್ಮಿಕರ ಒಂದು ರೂಪಾಯಿ ಕೂಲಿಯ ಉತ್ಪಾದನೆಯ ಮೌಲ್ಯ ಏಳು ರೂಪಾಯಿ ಇದೆ. ಏಳು ರೂಪಾಯಿ ಮೌಲ್ಯ ಉತ್ಪಾದನೆ ಮಾಡುವ ಕಾರ್ಮಿಕರಿಗೆ ಒಂದು ರೂಪಾಯಿ ಕೊಡುವುದು ಎಷ್ಟು ಸರಿ? ಕೇಂದ್ರದ ತೆರಿಗೆ ಪಾಲಿನ ತರ್ಕವನ್ನೇ ಇಲ್ಲೂ ಪಾಲಿಸಬೇಕು. ನಿಮ್ಮ ತೆರಿಗೆ ತರ್ಕವನ್ನು ನಾವು ಬೆಂಬಲಿಸುತ್ತೇವೆ; ನಮ್ಮ ತರ್ಕವನ್ನೂ ನೀವೂ ಬೆಂಬಲಿಸಬೇಕು” ಎಂದು ಆಗ್ರಹಿಸಿದರು.

ವೇದಿಕೆಯಲ್ಲಿ ಎಐಸಿಸಿಯುಸಿ ರಾಜ್ಯಾಧ್ಯಕ್ಷರಾದ ಪಿಪಿ ಅಪ್ಪಣ್ಣ, ಐಎನ್‌ಟಿಯುಸಿ ರಾಜ್ಯ ಕಾರ್ಯದರ್ಶಿ ರಾಜ್ಯ ಕಾರ್ಯದರ್ಶಿ ಶಾಮಣ್ಣ ರೆಡ್ಡಿ, ಎಐಟಿಯುಸಿ ರಾಜ್ಯ ಉಪಾಧ್ಯಕ್ಷರಾದ ಕೆವಿ ಭಟ್, ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಸತ್ಯಾನಂದ, ಎಐಸಿಸಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್ ಇದ್ದರು.

ಮತಾಂಧತೆಯ ಪರಿಭಾಷೆಯಲ್ಲಿ ಬಜೆಟ್ ವಿಶ್ಲೇಷಣೆ ನಡೆಸುತ್ತಿರುವುದು ದುರಂತ: ಟಿ.ಆರ್.ಚಂದ್ರಶೇಖರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...