Homeಕರ್ನಾಟಕಬೆಂಗಳೂರಿನಲ್ಲಿ ಮತ್ತೊಂದು ದುರಂತ: ಸಿಲಿಂಡರ್‌ ಸ್ಪೋಟಗೊಂಡು ಮೂವರ ಸಾವು

ಬೆಂಗಳೂರಿನಲ್ಲಿ ಮತ್ತೊಂದು ದುರಂತ: ಸಿಲಿಂಡರ್‌ ಸ್ಪೋಟಗೊಂಡು ಮೂವರ ಸಾವು

- Advertisement -
- Advertisement -

ಬೆಂಗಳೂರಿನ ದೇವರಚಿಕ್ಕನಹಳ್ಳಿ ಅಪಾರ್ಟ್ಮೆಂಟ್‌ನಲ್ಲಿ ನಡೆದ ಅಗ್ನಿದುರಂತ ಇನ್ನು ಸಿಲಿಕಾನ್ ಸಿಟಿ ಜನರ ಮನದಿಂದ ಮರೆಯಾಗುವ ಮುನ್ನವೇ ರಾಜಧಾನಿಯಲ್ಲಿ ಮತ್ತೊಂದು ಘೋರ ದುರಂತ ನಡೆದಿದೆ. ಚಾಮರಾಜಪೇಟೆಯ ನಗರ್ತರ್ ಪೇಟೆಯಲ್ಲಿ ಸಿಲಿಂಡರ್‌ ಸ್ಪೋಟಗೊಂಡು ಮೂವರು ಸಜೀವ ದಹನವಾಗಿದ್ದಾರೆ.

ದುರಂತದಲ್ಲಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆ ಆಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ವಿವಿ ಪುರಂ ಪೊಲೀಸರು, ಮೂರು ಅಗ್ನಿಶಾಮಕದಳ ತಂಡಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿವೆ.

ಗುರುವಾರ ಮಧ್ಯಾಹ್ನ 12.05ರ ಸುಮಾರಿಗೆ ರಾಯನ್ ಸರ್ಕಲ್ ಬಳಿಯ ಕಟ್ಟಡದಲ್ಲಿ ಸಿಲಿಂಡರ್ ಸ್ಫೋಟವಾಗಿದೆ. ಗೋದಾಮಿನಿಂದ ದೇಹಗಳು ಛಿದ್ರಗೊಂಡು ಮೇಲೆ ಹಾರಿದ್ದು ರಸ್ತೆಯಲ್ಲಿದ್ದ ಜನರು ಗಾಬರಿಗೊಂಡಿದ್ದಾರೆ.

ಇದನ್ನೂ ಓದಿ: ವೇಶ್ಯಾವಾಟಿಕೆ ಸಂಘಟಿತ ಅಪರಾಧ, ಇದನ್ನು ತಡೆಯಲು ಮುಂದಾಗಬೇಕು- ಸ್ಟ್ಯಾನ್ಲಿ

ಮೃತರನ್ನು ಪಂಚರ್ ಶಾಪ್‌ ಮಾಲೀಕ ಅಸ್ಲಮ್, ತಮಿಳುನಾಡು ಮೂಲದ ಮನೋಹರ್, ಸ್ಥಳದಲ್ಲಿ ಟೀ ಕುಡಿಯುತ್ತಿದ್ದ ಫಯಾಜ್ ಎಂದು ಗುರುತಿಸಲಾಗಿದೆ.

ಪಂಕ್ಚರ್​ ಅಂಗಡಿಯಲ್ಲಿದ್ದ ಕಂಪ್ರೆಸರ್​ ಬ್ಲಾಸ್ಟ್ ಆಗಿರಬಹುದು ಎಂದು ಹೇಳಲಾಗುತ್ತಿದೆ. ನಂತರ ಗೋದಾಮಿನಲ್ಲಿದ್ದ ಪಟಾಕಿಗೆ ಬೆಂಕಿ ತಗುಲಿರಬಹುದು ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಅಕ್ಕಪಕ್ಕದ ಮನೆ, ಕಟ್ಟಡದ ಗಾಜುಗಳು ಸಹ ಒಡೆದು ಹೋಗಿವೆ. 10ಕ್ಕೂ ಹೆಚ್ಚು ಬೈಕ್‌ಗಳಿಗೆ ಬೆಂಕಿ ತಗುಲಿದೆ.

ಗೋದಾಮಿನಲ್ಲಿ 15 ಬಾಕ್ಸ್ ಪಟಾಕಿ ಇತ್ತು ಎಂಬ ಮಾಹಿತಿ ಇದೆ. ಇದರಲ್ಲಿ 2 ಬಾಕ್ಸ್‌ ಮಾತ್ರ ಸ್ಫೋಟವಾಗಿವೆ ಎನ್ನಲಾಗಿದೆ. ಸ್ಥಳಕ್ಕೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಧಾವಿಸಿದ್ದಾರೆ.


ಇದನ್ನೂ ಓದಿ: ಬೆಂಗಳೂರಿನಲ್ಲಿ ಅಗ್ನಿ ಅವಘಡ: ಜನರ ಕಣ್ಣ ಮುಂದೆ ಸಜೀವ ದಹನವಾದ ತಾಯಿ-ಮಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗೆ ಹಲ್ಲೆ ನಡೆಸಿದ ಸ್ವಪಕ್ಷದ ಮುಖಂಡ

0
ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಕೃಷ್ಣಕುಮಾರ್ ಅವರ ಕಣ್ಣಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಪಕ್ಷದ ಸ್ಥಳೀಯ ನಾಯಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕೃಷ್ಣಕುಮಾರ್ ಇತ್ತೀಚೆಗೆ...