Homeಮುಖಪುಟಭಾರತ್ ಜೋಡೋ ಯಾತ್ರೆ; ಬೋಣಿ ಅಂತೂ ಚೆನ್ನಾಗಾಯ್ತು, ಆದರೆ ಮುಂದಿನ ದಾರಿ ದೊಡ್ಡದಿದೆ!

ಭಾರತ್ ಜೋಡೋ ಯಾತ್ರೆ; ಬೋಣಿ ಅಂತೂ ಚೆನ್ನಾಗಾಯ್ತು, ಆದರೆ ಮುಂದಿನ ದಾರಿ ದೊಡ್ಡದಿದೆ!

- Advertisement -
- Advertisement -

ಯಾತ್ರೆ ಹೇಗೆ ನಡೀತಿದೆ? ಏನಾದರೂ ಪರಿಣಾಮ ಆಯ್ತಾ? ಚುನಾವಣೆಯಲ್ಲಿ ಲಾಭ ಆಗಲುಂಟಾ? ಏನಾದರೂ ಸಾಧಿಸ್ತೀರೋ ಇಲ್ವೋ? ಯಾವಾಗ ಕನ್ಯಾಕುಮಾರಿಯಿಂದ ’ಭಾರತ ಜೋಡೊ ಯಾತ್ರಾ’ ಶುರುವಾಯ್ತೋ, ಆವಾಗಿನಿಂದ ಕರೆಗಳು ಬರುತ್ತಲೇ ಇವೆ. ಇಂತಹ ಪರಿಚಿತ ಪ್ರಶ್ನೆಗಳ ಸುರಿಮಳೆಯೇ ಆಗುತ್ತಿದೆ. ಟಿವಿಯಲ್ಲೂ ಕೋಳಿಜಗಳ ಶುರುವಾಗಿದೆಯಂತೆ. ಯಾತ್ರೆಯ ಹಿಂದಿನ ಇರಾದೆ ಏನಿದೆ ಎಂಬುದರ ಮೇಲೆ ಈ ಯಾತ್ರೆ ಏನು ಸಾಧಿಸುವುದು ಎಂಬುದು ನಿಂತಿದೆ. ಪಾದಯಾತ್ರೆಗಳ ಅನೇಕ ರೀತಿಯದ್ದಾಗಬಹುದು; ಕೆಲವರಿಗೆ ನಡಿಗೆಯಾದರೆ, ಕೆಲವರಿಗೆ ಕಸರತ್ತು. ಅಲೆಮಾರಿ ಸಮಾಜದವರಿಗೆ ಜೀವನಶೈಲಿ; ಹಾಗೂ ಬೀದಿ ಸುತ್ತಿ ಸರಕು ಮಾರಾಟ ಮಾಡುವವರಿಗೆ ವ್ಯಾಪಾರ. ಕೆಲವರು ಹರಕೆ ಹೊತ್ತು ನಡೆದರೆ, ಕೆಲವರು ದೇವರ ದರ್ಶನದ ಆಕಾಂಕ್ಷೆಯಿಟ್ಟು ನಡೆಯುತ್ತಾರೆ. ಕೆಲವೇ ಕೆಲವರು ತನ್ನೊಳಗಿನ ದೇವರನ್ನು ಹುಡುಕುತ್ತ ಕಾಲ್ನಡಿಗೆಯ ಯಾತ್ರೆ ಮಾಡುತ್ತಾರೆ.

ಇದೇ ಮಾತು ರಾಜಕೀಯ ಪಾದಯಾತ್ರೆಗಳಿಗೂ ಅನ್ವಯಿಸುತ್ತದೆ. ಇಲ್ಲಿಯೂ ಕೆಲವರು ಪ್ರವಾಸಿಗಳಿದ್ದಾರೆ, ಕೆಲವರಿಗೆ ದರ್ಶನದ ಆಕಾಂಕ್ಷೆಯಿದ್ದರೆ ಕೆಲವರಿಗೆ ಟಿಕೆಟ್‌ದ್ದು. ನಮ್ಮಲ್ಲಿ ಚುನಾವಣಾ ಪಾದಯಾತ್ರೆಗಳ ಇತಿಹಾಸವೂ ತುಂಬಾ ಹಳೆಯದು. ನಮ್ಮಲ್ಲಿ ಆದ ಕೆಲವು ಪಾದಯಾತ್ರೆಗಳಿಂದ ದೇಶವು ತನ್ನನ್ನು ತಾನು ಗುರುತಿಸಿಕೊಂಡಿದೆ, ಕಳೆದುಕೊಂಡ ತನ್ನ ಆತ್ಮಬಲವನ್ನು ಪಡೆದುಕೊಂಡಿದೆ.

ಸ್ವಾಭಾವಿಕವಾಗಿಯೇ ’ಭಾರತ ಜೋಡೊ ಯಾತ್ರೆ’ಯಲ್ಲಿ ಇವೆಲ್ಲವುಗಳ ಒಂದಿಷ್ಟು ಅಂಶಗಳಿವೆ. ಹಾಗಾಗಿ ದೇಶದ ಒಂದು ದೊಡ್ಡ ಪಕ್ಷದಿಂದ ಪ್ರಾಯೋಜಿತವಾದ ಇಂತಹ ಯಾತ್ರೆಗಳಲ್ಲಿ ಪ್ರವಾಸಿಗರೂ ಇರುತ್ತಾರೆ, ಅವರೊಂದಿಗೆ ಪೈಲ್ವಾನರೂ ಇರುತ್ತಾರೆ, ಟಿಕೆಟ್ ಆಕಾಂಕ್ಷಿಗಳೂ ಇರುತ್ತಾರೆ ಹಾಗೂ ದರ್ಶನಾರ್ಥಿಗಳೂ ಇರುತ್ತಾರೆ. ಈ ಯಾತ್ರೆಯ ಯಶಸ್ಸು, ವಿಫಲತೆಗಳನ್ನು ಈ ಸಣ್ಣ ಆಕಾಂಕ್ಷೆಗಳ ತಕ್ಕಡಿಯಲ್ಲಿ ಅಳೆಯಲು ಸಾಧ್ಯವಿಲ್ಲ. ಎಂದಿನಂತೆಯೇ ರಾಜಕೀಯ ಪಂಡಿತರು ಇದನ್ನು ಕಾಂಗ್ರೆಸ್ ಪಕ್ಷ ಅಥವಾ ರಾಹುಲ್ ಗಾಂಧಿಯ ಲಾಭ-ನಷ್ಟಗಳ ಲೆಕ್ಕದಲ್ಲಿ ಒರೆಗೆ ಹಚ್ಚಲಿದ್ದಾರೆ. ಆದರೆ, ಒಂದು ಪಕ್ಷದ ಅಥವಾ ಒಬ್ಬ ನಾಯಕನ ಲಾಭವು ರಾಷ್ಟ್ರದ ಹಿತಾಸಕ್ತಿಯ ಅಳತೆಗೋಲಾಗಲು ಸಾಧ್ಯವಿಲ್ಲ.

ಇಂದಿನ ಸಂದರ್ಭದಲ್ಲಿ ಭಾರತ ಜೋಡೊ ಯಾತ್ರೆಯ ಸಫಲತೆಯ ಒಂದೇ ಒಂದು ಅಳತೆ ಆಗಿರಬಹುದು. ಅದು, ದೇಶದ ಭವಿಷ್ಯದ ಮೇಲೆ ಕವಿದಿರುವ ಕಾರ್ಮೋಡಗಳನ್ನು ಇಲ್ಲವಾಗಿಸುವಲ್ಲಿ ಈ ಯಾತ್ರೆ ಸಹಕಾರಿಯಾಗುವುದೇ? ನಮ್ಮ ಪ್ರಜಾಪ್ರಭುತ್ವ, ಸಂವಿಧಾನ, ಸ್ವಾತಂತ್ರ್ಯ ಆಂದೋಲನ ಹಾಗೂ ಸಭ್ಯತೆಯ ಪರಂಪರೆಯನ್ನು ಉಳಿಸುವಲ್ಲಿ ಏನಾದರೂ ಯೋಗದಾನ ನೀಡುವುದೇ? ರಾಜಕೀಯ ಶಕ್ತಿಯ ಸಮತೋಲನವನ್ನು ಸ್ವಲ್ಪ ಮಟ್ಟಿಗಾದರೂ, ದೇಶವನ್ನು ಜೋಡಿಸುವ ಕಡೆಗೆ ತಿರುಗಿಸಬಲ್ಲದೇ? ನನ್ನಂತಹ ಜನರು ಇದೇ ನಿರೀಕ್ಷೆಯಲ್ಲಿ ಈ ಯಾತ್ರೆಯಲ್ಲಿ ಸೇರಿಕೊಂಡಿದ್ದೇವೆ. ದೇಶದ ಇತಿಹಾಸದಲ್ಲಿ ಸೂಕ್ಷ್ಮವಾದ ಮತ್ತು ನಿರ್ಣಾಯಕವಾದ ಸಮಯದಲ್ಲಿ ನಡೆಯುತ್ತಿರುವ ಈ ಯಾತ್ರೆಯನ್ನು ಬೇರೆ ಯಾವುದೇ ದೃಷ್ಟಿಕೋನದಲ್ಲಿ ನೋಡುವುದು ಒಂದು ದೊಡ್ಡ ಅಸಡ್ಡೆಯೆನಿಸುತ್ತದೆ.

ಸುಮಾರು 5 ತಿಂಗಳು ನಡೆಯಲಿರುವ ಈ ಯಾತ್ರೆಯ ಬಗ್ಗೆ ಮೊದಲ 5 ದಿನದ ಆಧಾರದ ಮೇಲೆ ಯಾವುದೇ ತೀರ್ಮಾನಕ್ಕೆ ಬರುವುದು ಹಾಸ್ಯಾಸ್ಪದವಾಗುವುದು; ಆದರೆ ಈ ಮೊದಲ ಝಲಕ್‌ನಿಂದ ಕೆಲವು ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು. ಮೊದಲ ವಾರದಲ್ಲಿ ಈ ಯಾತ್ರೆಯು ತಮಿಳುನಾಡಿನ ಕನ್ಯಾಕುಮಾರಿ ಹಾಗೂ ಕೇರಳದ ತಿರುವನಂತಪುರಂ ಜಿಲ್ಲೆಗಳಿಂದ ಹಾದುಹೋಗುತ್ತಿದೆ. ಇವೆರಡೂ ತುಲನಾತ್ಮಕವಾಗಿ ಕಾಂಗ್ರಸ್‌ನ ಪ್ರಬಲ ಕ್ಷೇತ್ರಗಳಾಗಿವೆ. ಹಾಗಾಗಿ ಯಾತ್ರೆಗೆ ಇಷ್ಟು ಬೃಹತ್ತಾಗಿ ಸಿಕ್ಕ ಜನರ ಸಮರ್ಥನೆಯಿಂದ ಅಚ್ಚರಿಯಾಗಲಾರದು. ಆದರೆ, ಗಮನಿಸಬೇಕಾದ ಅಂಶವೇನೆಂದರೆ, ಹೆಚ್ಚುಕಡಿಮೆ ಎಲ್ಲಾ ಸಮಯದಲ್ಲೂ ರಸ್ತೆಯ ಎರಡೂ ಬದಿಗಳಲ್ಲಿ ಈ ಯಾತ್ರೆಯನ್ನು ಸ್ವಾಗತಿಸಲು ಜನರ ನಿಂತಿದ್ದರು, ಹಾಗೂ ಅವರಲ್ಲಿ ಅನೇಕರು ಗಂಟೆಗಳವರೆಗೆ ನಿಂತಿದ್ದರು. ಸ್ವಾಭಾವಿಕವಾಗಿಯೇ, ಈ ಜನಸಮೂಹದಲ್ಲಿ ಹೆಚ್ಚಿನ ಜನರನ್ನು ಪಕ್ಷದ ಕಾರ್ಯಕರ್ತರು ಸೇರಿಸಿರಬಹುದು. ಹಾಗೆ ನೋಡಿದರೂ ಇದೂ ಒಂದು ಸಾಧನೆಯೇ.

ಕೆಲವರು ಕೇವಲ ನೋಡುಗರಾಗಿಯೂ ಇದ್ದರು. ಆದರೆ ಈ ಜನಸಮೂಹದಲ್ಲಿ ಸಾಧಾರಣ ಜನರು ಒಂದು ಭಾಗವೂ ಇತ್ತು, ಅವರನ್ನು ಯಾವುದೇ ಪಕ್ಷದವರು ಅಲ್ಲಿ ಸೇರಿಸಿದ್ದಲ್ಲ, ಅವರು ಖುದ್ದಾಗಿ ಬಂದಿದ್ದರು. ಕತ್ತಲೆಯಲ್ಲಿ ಒಂದು ಪುಟ್ಟ ಆಸೆಯ ಬೆಳಕನ್ನು ಕಂಡಾಗ ಕಾಣುವ ಒಂದು ಹೊಳಪು ಇವರ ಕಣ್ಣುಗಳಲ್ಲಿತ್ತು. ಇವರನ್ನು ಈಗಾಗಲೇ ಕಾಂಗ್ರೆಸ್ ಸಮರ್ಥಕ ಅಥವಾ ಮತದಾರರೆಂಬ ಹೆಸರು ಕೊಡುವುದು ಬೇಡ. ಒಂದು ಪಾದಯಾತ್ರೆಯ ಬಗ್ಗೆ ಗೌರವ ಭಾವನೆ ಇರಲೂ ಸಾಧ್ಯ ಮತ್ತು ಅದು ನಮ್ಮ ಸಂಸ್ಕೃತಿಯ ಭಾಗವಾಗಿದೆ ಎನ್ನಬಹುದು. ಮುಂದಿನ ಕೆಲವು ದಿನಗಳಲ್ಲೇ ತಿಳಿಯುವುದಾದರೂ, ಈ ಯಾತ್ರೆಯು ಒಂದು ಸಕಾರಾತ್ಮಕವಾದ ಜಾಗೃತಿಯನ್ನು ಮೂಡಿಸುತ್ತಿದೆ ಎಂಬುದನ್ನು ಅಲ್ಲಗಳೆಯಲಾಗದು.

ಚುನಾವಣೆಗಳಲ್ಲಿ ಇದರ ಪರಿಣಾಮ ಏನಾಗುವುದು ಎಂಬುದನ್ನು ಈಗಲೇ ಹೇಳಲು ಬರುವುದಿಲ್ಲ. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆ ಮೇಲೆ ಏನು ಪರಿಣಾಮ ಎಂಬ ಬಗ್ಗೆಯೂ ಸ್ವಲ್ಪವೂ ಅಂದಾಜು ಮಾಡಲಾಗುವುದಿಲ್ಲ. ಆದರೆ ಈ ಸಕಾರಾತ್ಮಕತೆಯಿಂದ ಈಗಿರುವ ವಿಕಲ್ಪವಿಲ್ಲದಿರುವ ರಾಜಕೀಯ ವಾತಾವರಣವನ್ನು ಎಲ್ಲಿಯಾದರೂ ಒಡೆಯುವ ಸಾಮರ್ಥ್ಯವಂತೂ ಇದೆ.

ಈಗಲೇ ಈ ಯಾತ್ರೆಯು ದೇಶದ ಮನಸ್ಥಿತಿಯ ಮೇಲೆ ಬೀರುವ ಪರಿಣಾಮದ ಬಗ್ಗೆ ಮಾತನಾಡುವುದೂ ಹುಚ್ಚುತನವಾಗುತ್ತದೆ. ಆದರೆ ಒಂದಂತೂ ಸತ್ಯ; ಕಾಂಗ್ರೆಸ್ ಪಕ್ಷ ಕೈಗೆತ್ತಿಕೊಂಡಿರುವ ಈ ನಡಿಗೆ ದೇಶದ ಮೌನ ಮತ್ತು ಏಕತಾನತೆಯ ಭಾವನೆಯನ್ನು ಮುರಿದುಹಾಕಿದೆ. ತಾವೆಂದೂ ಕಾಂಗ್ರೆಸ್‌ನ ಬೆಂಬಲ ನೀಡದೇ ಇರುವ ಹಾಗೂ ಬೀದಿಗಳಲ್ಲಿ ಕಾಂಗ್ರೆಸ್‌ಅನ್ನು ವಿರೋಧಿಸಿದ ಅನೇಕರು ಈ ಯಾತ್ರೆಗೆ ಸಮರ್ಥನೆ ಮಾಡುತ್ತಿದ್ದಾರೆ. ದೇಶದ ಜನಾಂದೋಲನಗಳ ಒಂದು ಭಾಗವು ಕನ್ಯಾಕುಮಾರಿಯಿಂದಲೇ ಈ ಯಾತ್ರೆಯಲ್ಲಿ ಕೂಡಿಕೊಂಡಿದೆ.

ಹೊರಗಿನಿಂದ ಬಂದ ಈ ಅನಿರೀಕ್ಷಿತ ಸಮರ್ಥನೆಯಿಂದ ಕಾಂಗ್ರೆಸ್‌ನ ಪಾದಯಾತ್ರಿಗಳ ಆತ್ಮಸ್ಥೈರ್ಯವು ಹೆಚ್ಚಿದೆ. ಕಳೆದ ಇಡೀ ವಾರದಲ್ಲಿ ಈ ಯಾತ್ರೆಯಲ್ಲಿ ಜೊತೆಗೂಡುವ ಆಕಾಂಕ್ಷೆ ಇಟ್ಟುಕೊಂಡವರ ಸಂದೇಶಗಳು ಹೆಚ್ಚುತ್ತಿವೆ. ಕನಿಷ್ಠ ಒಂದು ಮಟ್ಟಕ್ಕಂತೂ ನಾವು ಒಬ್ಬಂಟಿಗಳಲ್ಲ ಎಂಬ ಭಾವನೆ ಮೂಡುತ್ತಿದೆ. ದೇಶ ಬದಲಿಸುವ ಮಾತು ಈಗ ಹೇಳಿದರೆ ದೊಡ್ಡ ಮಾತಾಗುತ್ತದೆ, ಆದರೆ ದೇಶವನ್ನು ಜೋಡಿಸುವ ಇಚ್ಛೆ ಹೊಂದಿದ್ದವರಲ್ಲಿ ತಮ್ಮನ್ನು ತಾವು ಬದಲಿಸಿಕೊಳ್ಳುವ ಪ್ರಕ್ರಿಯೆ ಶುರುವಾಗಿದೆ. ಬೋಣಿ ತುಂಬಾ ಚೆನ್ನಾಗಾಗಿದೆ.

ಯೋಗೇಂದ್ರ ಯಾದವ್

(ಕನ್ನಡಕ್ಕೆ): ರಾಜಶೇಖರ ಅಕ್ಕಿ


ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ; ಭಾರತದ ಬಹುತ್ವದ ಉಳಿವಿಗೆ ದಾರಿ ಮಾಡಿಕೊಡಬಲ್ಲುದೇ?

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ – ಬಿಜೆಪಿ ಮಾಡಿದ ಹಾನಿಯನ್ನು ಸರಿಪಡಿಸುವ ಪ್ರಯತ್ನ: ರಾಹುಲ್ ಗಾಂಧಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...