Homeಮುಖಪುಟಇತ್ತ ಲಸಿಕೆ ಇಲ್ಲದೆ ರಾಜ್ಯಗಳ ಪರದಾಟ, ಅತ್ತ ಗುಜರಾತ್‌ನಲ್ಲಿ ಬಿಜೆಪಿಯಿಂದ 1000 ರೆಮ್‌ಡೆಸಿವಿರ್‌ ಲಸಿಕೆ ವಿತರಣೆ

ಇತ್ತ ಲಸಿಕೆ ಇಲ್ಲದೆ ರಾಜ್ಯಗಳ ಪರದಾಟ, ಅತ್ತ ಗುಜರಾತ್‌ನಲ್ಲಿ ಬಿಜೆಪಿಯಿಂದ 1000 ರೆಮ್‌ಡೆಸಿವಿರ್‌ ಲಸಿಕೆ ವಿತರಣೆ

ಇತ್ತಿಚೆಗೆ ಗುಜರಾತ್‌ನ ಗಾಂಧಿನಗರದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ)ಯ 25 ವರ್ಷದ ಒಳಗಿರುವ 900 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೊರೊನಾ ಲಸಿಕೆ ಪಡೆದಿದ್ದರು

- Advertisement -
- Advertisement -

ದೇಶದಲ್ಲಿ ಕೊರೊನಾ ಉಲ್ಬಣಕ್ಕಿಂತ ಕೊರೊನಾ ಲಸಿಕೆ ಕೊರತೆಯದ್ದೇ ಸುದ್ದಿ ಹೆಚ್ಚಾಗಿದೆ. ದೇಶಕ್ಕೆ ಲಸಿಕೆ ಅಗತ್ಯವಿದ್ದರೂ ವಿದೇಶಗಳಿಗೆ ಲಸಿಕೆ ರಫ್ತು ಮಾಡಿರುವ ಕೇಂದ್ರದ ವಿರುದ್ಧ ವಿರೋಧ ಪಕ್ಷಗಳು ಮುಗಿಬಿದ್ದಿವೆ. ಇವುಗಳ ನಡುವೆಯೇ ಗುಜರಾತ್‌ನ ಸೂರತ್‌ನಲ್ಲಿ ಬಿಜೆಪಿ ಕಚೇರಿಯಲ್ಲಿ 900 ರೆಮ್‌ಡೆಸಿವಿರ್‌ ಇಂಜೆಕ್ಷನ್‌ಗಳನ್ನು ವಿತರಿಸಲಾಗಿದೆ.

ಜೊತೆಗೆ 100 ಚುಚ್ಚುಮದ್ದನ್ನು ನವಸರಿ ಬಿಜೆಪಿ ಕಚೇರಿಯಿಂದ ಅದೇ ದಿನ ಅಗತ್ಯವಿರುವ ಕೊರೊನಾ ರೋಗಿಗಳ ಸಂಬಂಧಿಕರಿಗೆ ವಿತರಿಸಲಾಗಿದೆ. ಈ ವಿಷಯ ದೇಶದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಆಮ್ ಆದ್ಮಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ಸರ್ಕಾರದ ಈ ನಡೆಯನ್ನು ಖಂಡಿಸಿದೆ.

ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್ ಪಾಟೀಲ್, ’ಸೂರತ್ ಬಿಜೆಪಿ ಇಂತಹ 5,000 ಚುಚ್ಚುಮದ್ದಿನ ವ್ಯವಸ್ಥೆ ಮಾಡಿದ್ದು, ಅಗತ್ಯವಿರುವವರು ವೈಯಕ್ತಿಕವಾಗಿ ಸೂರತ್ ಬಿಜೆಪಿ ಕಚೇರಿಗೆ ಬಂದು ತೆಗೆದುಕೊಳ್ಳಬಹುದು. ಕೊರೊನಾ ಸೋಂಕಿತ ರೋಗಿಗಳ ವೈದ್ಯಕೀಯ ಚಿಕಿತ್ಸಾ ದಾಖಲೆಗಳು, ಆಧಾರ್ ಕಾರ್ಡ್ ಮತ್ತು ರೆಮ್‌ಡೆಸಿವಿರ್‌ ಚುಚ್ಚುಮದ್ದಿನ ವೈದ್ಯರ ಚೀಟಿಯೊಂದಿಗೆ ಬರಬೇಕು’ ಎಂದು ಶುಕ್ರವಾರ ಘೋಷಿಸಿದ್ದರು.

ಇದನ್ನೂ ಓದಿ: ‘ಟಿಕಾ ಉತ್ಸವ’ ಕ್ಕೆ ನಾಲ್ಕು ವಿನಂತಿ ಎಂದ ಪ್ರಧಾನಿ; ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ

ಸೂರತ್ ನಗರದ ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ್ ಜಂಜ್‌ಮೆರಾ, “ಮುಂದಿನ ಐದು ದಿನಗಳವರೆಗೆ ಪ್ರತಿದಿನ 1,000 ಇಂತಹ ಚುಚ್ಚುಮದ್ದನ್ನು ನಾವು ಪಡೆಯುತ್ತೇವೆ. ಈಂದು ಮೊದಲ ದಿನ 1000 ಚುಚ್ಚುಮದ್ದು ಪಡೆದಿದ್ದೇವೆ. ಅದರಲ್ಲಿ 100 ಅನ್ನು ನವಸರಿ ಬಿಜೆಪಿ ಕಚೇರಿಗೆ ಕಳುಹಿಸಲಾಗಿದೆ. ಸೂರತ್ ನಗರದ ಬಿಜೆಪಿ ಕಚೇರಿಯಿಂದ ನಾವು ಅಂತಹ 900 ಚುಚ್ಚುಮದ್ದನ್ನು ವಿತರಿಸಿದ್ದೇವೆ” ಎಂದಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಪ್ರತಿಪಕ್ಷಗಳಾದ ಕಾಂಗ್ರೆಸ್, ಎನ್‌ಸಿಪಿ ಮತ್ತು ಆಮ್ ಆದ್ಮಿ ಪಕ್ಷ ಬಿಜೆಪಿಯ ಈ ನಡೆಯ್ನು ಖಂಡಿಸಿದೆ. ರೆಮ್‌ಡಿಸಿವಿರ್‌ ಇಂಜೆಕ್ಷನ್‌ಗಳನ್ನು ಸಂಗ್ರಹಣೆ ಮಾಡಿದ ಆರೋಪದ ಮೇಲೆ ಬಿಜೆಪಿಯ ಗುಜರಾತ್ ಘಟಕವನ್ನು ಟ್ವೀಟ್ ಮೂಲಕ ದೂಷಿಸಿದೆ.

ಬಿಜೆಪಿಯ ಸೂರತ್ ಘಟಕವು ರಾಜ್ಯದಲ್ಲಿ ಲಸಿಕೆ ಕೊರತೆಯ ಮಧ್ಯೆ 5000 ರೆಮ್‌ಡೆಸಿವಿರ್ ಚುಚ್ಚುಮದ್ದನ್ನು ಖರೀದಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಗುಜರಾತ್ ಸಿಎಂ ವಿಜಯ್ ರೂಪಾನಿ, ಬಿಜೆಪಿಯ ರೆಮ್‌ಡಿಸಿವಿರ್‌ ಇಂಜೆಕ್ಷನ್‌ಗಳನ್ನು ಸಂಗ್ರಹವು ಸರ್ಕಾರಿ ಷೇರುಗಳ ಭಾಗದಿಂದ ಬಂದಿಲ್ಲ ಎಂದು ಹೇಳಿದ್ದಾರೆ.

ಇತ್ತಿಚೆಗೆ ಗುಜರಾತ್‌ನ ಗಾಂಧಿನಗರದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ)ಯ 25 ವರ್ಷದ ಒಳಗಿರುವ 900 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೊರೊನಾ ಲಸಿಕೆ ಪಡೆದಿದ್ದಾರೆ ಎಂದು ಸ್ಕ್ರೋಲ್.ಇನ್ ವರದಿ ಮಾಡಿತ್ತು. ಪ್ರಸ್ತುತ 45 ವರ್ಷಕ್ಕಿಂತ ಮೇಲಿನವರಿಗೆ ಮಾತ್ರ ಲಸಿಕೆ ನೀಡಬೇಕು ಎಂಬ ಭಾರತ ಸರ್ಕಾರದ ನಿಯಮವನ್ನು ಮೀರಿ ವಿದ್ಯಾರ್ಥಿಗಳು ಕೊರೊನಾ ಲಸಿಕೆ ಪಡೆದಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಇದರ ಜೊತೆಗೆ ಗುಜರಾತ್ ಬಿಜೆಪಿ ಘಟಕದ ಇಂಜೆಕ್ಷನ್ ವಿತರಣೆ ವಿಚಾರ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.


ಇದನ್ನೂ ಓದಿ: ಕೊರೊನಾ ರಾತ್ರಿ ವೇಳೆ ಮಾತ್ರ ಹರಡುತ್ತದೆ ಎಂದು ಯಾವ ವಿಜ್ಞಾನಿ ಹೇಳಿದ: ಡಿ.ಕೆ. ಶಿವಕುಮಾರ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಬಿತ್ತುವ, ವಿಭಜನೀಯ ಶಕ್ತಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು: ಅಡ್ಮಿರಲ್ ರಾಮದಾಸ್ ಅವರ ಕೊನೆಯ ಸಂದೇಶ...

0
ಲೋಕಸಭೆ ಚುನಾವಣೆ ಹೊಸ್ತಿಲ್ಲಲ್ಲಿ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ರಾಮ್‌ದಾಸ್ ಅವರ ಕೊನೆಯ ಕಾಲದ ಸಂದೇಶವನ್ನು ಅವರ ಪತ್ನಿ ಲಲಿತಾ ರಾಮದಾಸ್‌ ಸಾರ್ವಜನಿಕರ ಮುಂದಿಟ್ಟಿದ್ದು, ದ್ವೇಷಿಸುವ, ವಿಭಜನೀಯ, ಸರ್ವಾಧಿಕಾರಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು ಎಂದು...