Homeಮುಖಪುಟಭ್ರಷ್ಟಾಚಾರವನ್ನು ಶರವೇಗದಲ್ಲಿ ಬೆಳೆಸುತ್ತಿರುವ ಅಮಿತ್ ಶಾ ಮತ್ತು ಬಿಜೆಪಿ...

ಭ್ರಷ್ಟಾಚಾರವನ್ನು ಶರವೇಗದಲ್ಲಿ ಬೆಳೆಸುತ್ತಿರುವ ಅಮಿತ್ ಶಾ ಮತ್ತು ಬಿಜೆಪಿ…

ಸ್ಥಿರ ಸರ್ಕಾರಕ್ಕಾಗಿ ಲೋಕಸಭೆಯಲ್ಲಿ ಜನತೆ ಕೊಟ್ಟ ಭಾರೀ ಬಹುಮತವನ್ನು ಬಿಜೆಪಿ, ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸಲು ಮತ್ತು ಭ್ರಷ್ಟಾಚಾರ ಹೆಚ್ಚು ಮಾಡಲು ಬಳಸುತ್ತಿರುವುದು ದುರಂತ

- Advertisement -
- Advertisement -

ಚುನಾವಣಾ ಅಫಿಡವಿಟ್‍ನಲ್ಲಿ ಘೋಷಿಸಿಕೊಂಡಂತೆ ಭಾರತದ ಅತ್ಯಂತ ಶ್ರೀಮಂತ ಎಂ.ಎಲ್.ಎ ಇವರು. ಅದು ಬರೋಬ್ಬರಿ 1015 ಕೋಟಿ ರೂಗಳ ಒಡೆಯ. ಇವರು ಕರ್ನಾಟಕದವರೆಂಬ ಹೆಮ್ಮೆ ಪಡುವ ವಿಷಯವೇನಲ್ಲ… ಅವರೇ ಶ್ರೀಮಂತ ರಾಜಕಾರಣಿ ಎಂಟಿಬಿ ನಾಗರಾಜ್.. ಹೊಸಕೋಟೆಯ ಶಾಸಕ ಮತ್ತು ಕರ್ನಾಟದ ವಸತಿ ಸಚಿವರಾಗಿದ್ದ ಇವರು ಸದ್ಯಕ್ಕೆ ಅತೃಪ್ತರ ಗ್ಯಾಂಗ್ ನಲ್ಲಿದ್ದಾರೆ.

ಇನ್ನು ಸಚಿವ ಸ್ಥಾನಕ್ಕೆ ಸಮಾನವಾದ ಬಿಡಿಎ ಅಧ್ಯಕ್ಷ ಸ್ಥಾನ ಸೋಮಶೇಖರ್‍ರಿಗೆ ಮತ್ತು ಹೊಸ ಸರ್ಕಾರ ಬಂದರೂ ಕದಲಿಸಲಾಗದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಸುಧಾಕರ್‍ರಿಗೆ ಸಿಕ್ಕಿದೆ.

ಅ (ತೃಪ್ತ) ರಾಜಕಾರಣಿ, ಬಹುದೊಡ್ಡ ಸಿನಿಮಾ ನಿರ್ಮಾಪಕ, ಅಗರ್ಭ ಶ್ರೀಮಂತ, ಹಗರಣಗಳ ಸರದಾರ ಮುನಿರತ್ನ.. ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ. ಇವರಿಗೂ ಯಾವ ರೀತಿಯ ಅತೃಪ್ತಿಯೋ ಗೊತ್ತಿಲ್ಲ, ಕ್ಷೇತ್ರ ಬಿಟ್ಟು ರಾಜಿನಾಮೆ ಕೊಟ್ಟು ಮುಂಬೈ ಸೇರಿಕೊಂಡಿದ್ದಾರೆ. ಇವರಿಬ್ಬರಷ್ಟೇ ಅಲ್ಲ, ಇದೇ ರೀತಿ ಅಗರ್ಭ ಶ್ರೀಮಂತರಾದ ಹೆಬ್ಬಾಳ ಶಾಸಕ ಭೈರತಿ ಸುರೇಶ್, ಯಶವಂತಪುರದ ಶಾಸಕ ಎಸ್.ಟಿ ಸೋಮಶೇಖರ್, ಮಾಜಿ ಸಚಿವ ಬಿಟಿಎಂ ಲೇಔಟ್‍ನ ರಾಮಲಿಂಗಾರೆಡ್ಡಿ ಸಹ ಕಾಂಗ್ರೆಸ್ ನೊಂದಿಗೆ ಮುನಿಸಿಕೊಂಡು ರಾಜೀನಾಮೆ ನೀಡಿದ್ದಾರೆ ಮತ್ತು ಬಿಜೆಪಿಯ ಸಂಪೂರ್ಣ ಬೆಂಬಲದಿಂದ ಬದುಕುತ್ತಿದ್ದಾರೆ.

ಇವರೇಕೆ ಹೀಗೆ ಮಾಡಿದರು? ಇವರಿಗೆ ಹಣದ ಕೊರತೆಯಿಲ್ಲ ಹಾಗಾಗಿ ಬಿಜೆಪಿ ಇವರನ್ನು ಹಣದಿಂದ ಕೊಳ್ಳಲು ಸಾಧ್ಯವಿಲ್ಲ. ಇನ್ನು ಅಧಿಕಾರದ ಆಸೆಯ ಸೆಳೆಯುವಿಕೆಯೂ ಸಾಧ್ಯವಿಲ್ಲ. ಆದರೂ ಸಹ ಇವರೆಲ್ಲರೂ ಪಕ್ಷ ಬಿಟ್ಟು ಹೋಗಲಿಕ್ಕೆ ಕಾರಣವೇನು? ಉಳಿದವರು ಬಿಟ್ಟುಬಿಡೋಣ ಎಂಟಿಬಿ ನಾಗರಾಜ್ ರವರಿಗೆ ಸಾವಿರಾರು ಕೋಟಿ ಘೋಷಿತ ಆಸ್ತಿ ಇದೆ. ವಸತಿ ಸಚಿವ ಸ್ಥಾನವೂ ಇದೆ. ಸಿದ್ದರಾಮಯ್ಯನವರ ಆಪ್ತ ಬಳಗದವರು. ಅವರೇಕೆ ಪಕ್ಷ ಬಿಟ್ಟು ಹೋಗುತ್ತಿದ್ದಾರೆ? ಅವರಿಗೆ ಬಿಜೆಪಿಯವರು ಏನು ಕೊಡಲಿಕ್ಕೆ ಸಾಧ್ಯ? ಬಿಜೆಪಿ ಇವರಿಗೆ ಯಾವುದೇ ಆಮಿಷ ಒಡ್ಡಿಲ್ಲದಿದ್ದರೂ ಏಕೆ ಹೋದರು?

ಬಿಜೆಪಿ ಮಾಡಿದ್ದು ಇಷ್ಟೆ.

ಬಿಜೆಪಿ ಕೆಲ ಆಯ್ದ ಶಾಸಕರಿಗೆ ಕೊಟ್ಟ ಸೂಚನೆ ಇಷ್ಟೇ. ಕೇವಲ ಒಂದೇ ಮಾತು ಹೇಳದ್ದು. ಅದೇಂದರೆ 4 ದಿನದಲ್ಲಿ ರಾಜೀನಾಮೆ ಕೊಟ್ಟು ಬರಬೇಕು ಅಷ್ಟೇ. ಬಿಜೆಪಿ ಇವರಿಗೆ ಧಮಕಿ ಕೂಡ ಹಾಕಿಲ್ಲ. ಆ ಬಿಜೆಪಿಯವರ ಮಾತನ್ನು ಶಿರಾವಹಿಸಿ ಪಾಲಿಸಿದವರು ಈ ಶಾಸಕರು. ಇಲ್ಲದಿದ್ದರೆ ಈ ಶ್ರೀಮಂತ ಎಮ್ಮೆಲ್ಲೆಗಳಿಗೆ ಇಡಿ ಐಟಿ ಸಿಬಿಐ ರೈಡ್ ನಂತಹ ಅಸ್ತ್ರಗಳು ಕಾದು ಕುಳಿತಿದ್ದವು. ಮೊದಲೇ ಸಾಕಷ್ಟು ಸಂಪತ್ತಿನ ಒಡೆಯರಾದ ಇವರಿಗೆ ತಮ್ಮ ಸಂಪತ್ತನ್ನು ಉಳಿಸಿಕೊಳ್ಳಬೇಕಾದರೆ ಇದ್ದ ಮಾರ್ಗ ಒಂದೇ ಅದು ರಾಜೀನಾಮೆ ಕೊಡುವುದು.

ಇದರ ಕುರಿತು ರಾಮಲಿಂಗರೆಡ್ಡಿ ಸೂಚ್ಯವಾಗಿ ಹೇಳಿದ್ದಾರೆ. ನನ್ನನ್ನು ಸೇರಿದಂತೆ ನಮ್ಮ ಶಾಸಕರ ಮೇಲಿನ ದಾಳಿಗಳನ್ನು ತಡೆಯಲು ಪಕ್ಷ ಏನು ಮಾಡಿದೆ? ನಮಗೆ ಯಾವ ರೀತಿಯ ರಕ್ಷಣೆ ನೀಡಿದೆ ಎಂದು ಕೇಳಿದರು. ಅದಕ್ಕೆ ಕಾಂಗ್ರೆಸ್ಸಿನ ಯಾವ ನಾಯಕನ ಬಳಿಯೂ ಉತ್ತರವಿರಲಿಲ್ಲ. ಇದರ ಸುಳಿವ ಅರಿತ ಮತ್ತು ಈ ದಾಳಿಗಳನ್ನು ಮೂರು ವರ್ಷಗಳಿಂದಲೂ ಎದುರಿಸುತ್ತಿರುವ ಡಿ.ಕೆ ಶಿವಕುಮಾರ್ ಎಂಟಿಬಿ ನಾಗಾರಾಜ್‍ರನ್ನು ಮನವೊಲಿಸುತ್ತಾ ನನ್ನ ಮೇಲೆಯೂ ಐಟಿ ಇಡಿ ದಾಳಿ ಆಗಿದೆ. ಹಾಗಂತ ಹೆದರೋಕೆ ಆಗುತ್ತಾ ಎಂದು ಹೇಳಿಯೇ ಸ್ವಲ್ಪ ಮಟ್ಟಿಗೆ ಕನ್ವಿನ್ಸ್ ಮಾಡಿದ್ದರು. ಆದರೆ ಹಲವು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿರುವುದು, ಕೇಂದ್ರದಲ್ಲಿ ಬಿಜೆಪಿ ಭಾರೀ ಅಂತರದಲ್ಲಿ ಗೆದ್ದಿರುವುದನ್ನು ಕಂಡಿರುವ ಎಂಟಿಬಿ ನಾಗರಾಜ್‍ಗೆ ಧೈರ್ಯ ಸಾಲಲಿಲ್ಲ. ಅವರು ಡಿಕೆಶಿ ಕಣ್ತಪ್ಪಿಸಿ ಮುಂಬೈಗೆ ವಿಮಾನ ಹತ್ತಿದರು.

ಕರ್ನಾಟಕದ ಈ ಎಲ್ಲಾ ನಾಟಕದ ಹಿಂದೆ ಕೇಂದ್ರ ಸಚಿವ ಪಿಯೂಶ್ ಗೋಯಲ್ ಕೈವಾಡವಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಬರೆಯಿತು. ಆನಂತರ ಟೈಮ್ಸ್ ಪತ್ರಿಕೆ ತನ್ನ ಬರವಣಿಗೆಯಿಂದ ಹಿಂದೆ ಸರಿಯಿತು. ಕಾರಣ ಯಾರಾದರೂ ಊಹಿಸಿಕೊಳ್ಳಬಹುದು.

ಅಧಿಕಾರ ದುರುಪಯೋಗ

ಈ ಎಲ್ಲಾ ಬೆಳವಣಿಗೆಗಳ ಹಿಂದಿರುವ ನಿಜವಾದ ಸೂತ್ರದಾರ ಅಮಿತ್ ಶಾ ಎಂದು ಹೇಳಲಾಗುತ್ತಿದೆ. ಅಮಿತವಾದ ಅವಕಾಶವಿರುವಾಗ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುವುದನ್ನು ಬಿಟ್ಟು ಗೊಂದಲ ಸೃಷ್ಟಿಸುತ್ತಾ ಸಾಗಿರುವ ಶಾ ನ ಮುಂದಿನ ನಡೆಯ ಬಗ್ಗೆ ಲೆಕ್ಕಾ ಹಾಕುವುದು ಕಷ್ಟ ಸಾಧ್ಯವಾಗಿದೆ. ಆದರೆ ಲೋಕಸಭೆಯಲ್ಲಿ ಬಿಜೆಪಿಗೆ ಜನತೆ ನೀಡಿರುವ ಬಹುಮತವನ್ನು ದುರುಪಯೋಗಮಾಡಿಕೊಂಡು ಈ ರೀತಿ ಶಾಸಕರನ್ನು ಎದುರಿಸುತ್ತಿದ್ದಾರೆ ಎನ್ನುವುದು ಮಾತ್ರ ಸೂರ್ಯನಷ್ಟೇ ಸ್ಪಷ್ಟವಾಗಿದೆ.

 

ಇದೇ ಸಂದರ್ಭದಲ್ಲಿ ಗೋವಾದಲ್ಲಿಯೂ ಸಹ ಕಾಂಗ್ರೆಸ್ ನ ಹತ್ತು ಶಾಸಕರು ಕಾಂಗ್ರೆಸ್ ತೊರೆದು ಸಾಮೂಹಿಕವಾಗಿ ಬಿಜೆಪಿ ಸೇರಿದ್ದಾಗಿದೆ. ಅದರಲ್ಲಿ ಕೆಲವರಿಗೆ ಸಚಿವ ಸ್ಥಾನ, ಉಪಮುಖ್ಯಮಂತ್ರಿ ಹುದ್ದೆಗಳು ಸಹ ದೊರೆತಿವೆ. ಸಮಸ್ಯೆ ಇರುವುದು ಇಲ್ಲಿಯೇ.. ಶಾಸಕರು ಅಕ್ರಮ/ಬೇನಾಮಿ ಆಸ್ತಿ ಮಾಡಿದ್ದರೆ, ಜನರ ಹಣವನ್ನು ಲೂಟಿ ಮಾಡಿದ್ದರೆ, ತೆರಿಗೆ ವಂಚನೆ ಮಾಡಿದ್ದರೆ ಅವರ ಮೇಲೆ ಖಂಡಿತ ಈಡಿ ಐಟಿ ಸಿಬಿಐ ದಾಳಿ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಅಕ್ರಮ ಸಂಪತ್ತನ್ನು ಸರ್ಕಾರ ಬೊಕ್ಕಸಕ್ಕೆ ಸೇರಿಸಬೇಕು. ಅದು ಸಾಂವಿಧಾನಿಕ ಕ್ರಮ. ಆದರೆ ಬಿಜೆಪಿ ಹಾಗೆ ಮಾಡುತ್ತಿಲ್ಲ. ಬದಲಿಗೆ ಆ ಬೆದರಿಕೆ ಒಡ್ಡಿ ಅವರನ್ನು ತಮ್ಮ ಪಕ್ಷಗಳತ್ತ ಸೆಳೆದುಕೊಂಡು ಅಕ್ರಮ ಮಾರ್ಗದಲ್ಲಿ ಸರ್ಕಾರ ರಚಿಸುತ್ತಿದೆ. ಅವರಿಗೆ ಮಂತ್ರಿ ಪದವಿ ಜೊತೆಗೆ ಮತ್ತಷ್ಟು ಹಣದ ಹೊಳೆ ಹರಿಸುತ್ತಿದೆ. (ಆ ಹಣದ ಮೂಲ ಕೆದಕಿದರೆ ಅದು ಜನಸಾಮಾನ್ಯರ ತೆರಿಗೆ ಎಂಬುದು ಸ್ಪಷ್ಟವಾಗುತ್ತದೆ) ಆ ಮೂಲಕ ಭ್ರಷ್ಟರನ್ನು ಮತ್ತಷ್ಟು ಕೊಬ್ಬಿಸುವುದರ ಜೊತೆಗೆ ಭ್ರಷ್ಟಾಚಾರಕ್ಕೆ ಮತ್ತಷ್ಟು ಪ್ರೋತ್ಸಾಹ ಕೊಡುತ್ತಿದೆ. ಸ್ಥಿರ ಸರ್ಕಾರ ರಚಿಸುವ ಸಲುವಾಗಿ ಜನರು ಕೊಟ್ಟ ಬಹುಮತವನ್ನು ಈ ರೀತಿ ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರ ಸ್ಥಾಪನೆಗೆ ಮುಂದಾಗುತ್ತಿದೆ.

ಬಿಜೆಪಿಯ ಆಟ ಇಲ್ಲಿಗೆ ನಿಲ್ಲಲ್ಲಿದೆ ಎಂದು ತಿಳಿಯಬೇಡಿ. ಆ ಪಕ್ಷದ ಮುಖುಲ್ ರಾಯ್ ಎಂಬುವವರು ಈಗಾಗಲೇ ಕಾಂಗ್ರೆಸ್, ಟಿಎಂಸಿ ಸೇರಿದಂತೆ ಹಲವು ಪಕ್ಷಗಳಿಂದ ಸುಮಾರು 107 ಜನ ಶಾಸಕರ ತಮ್ಮ ಪಕ್ಷ ತೊರೆದು ನಮ್ಮ ಪಕ್ಷ ಸೇರಲಿದ್ದಾರೆ ಎಂದು ಎರಡು ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಈ ರೀತಿ ಇವರು ಬಹಿರಂಗವಾಗಿಯೇ ಕುದುರೆ ವ್ಯಾಪಾರಕ್ಕೆ ನಿಂತಿದ್ದಾರೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಟಿಎಂಸಿಯ 40 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ, ಅವರೆಲ್ಲಾ ಟಿಎಂಸಿ ತ್ಯಜಿಸಿ ಬಿಜೆಪಿ ಸೇರಲಿದ್ದಾರೆ ಎಂದು ಬಹಿರಂಗ ಬೆದರಿಕೆ ಒಡ್ಡಿದ್ದನ್ನು ನಾವು ಮರೆಯಬಾರದು. ನಿನ್ನೆ ತಾನೇ ಐಎಂಎ ಆರೋಪಿ ರೋಷನ್ ಬೇಗ್ ನನ್ನು ಸಹ ಪಕ್ಷಕ್ಕೆ ಸೇರಿಸಿಕೊಳ್ಳಲು ಯಡಿಯೂರಪ್ಪ ಮುಂದಾಗಿದ್ದರು. ಕೊನೆ ಕ್ಷಣದಲ್ಲಿ ಎಸ್.ಐ.ಟಿ ದಾಳಿಯಿಂದ ವಿಫಲವಾಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...