Homeಕರ್ನಾಟಕ‘ಬಿಜೆಪಿ ರೌಡಿ ಮೋರ್ಚಾ’ ವೆಬ್‌ಸೈಟ್‌ ಓಪನ್‌: ಪ್ರತಿಪಕ್ಷದಿಂದ ವಿನೂತನ ದಾಳಿ!

‘ಬಿಜೆಪಿ ರೌಡಿ ಮೋರ್ಚಾ’ ವೆಬ್‌ಸೈಟ್‌ ಓಪನ್‌: ಪ್ರತಿಪಕ್ಷದಿಂದ ವಿನೂತನ ದಾಳಿ!

- Advertisement -
- Advertisement -

ಬಿಜೆಪಿಗೆ ರೌಡಿ ಶೀಟರ್‌ಗಳು ಸೇರ್ಪಡೆಯಾಗಿರುವ ಬೆನ್ನಲ್ಲೇ ‘ಬಿಜೆಪಿ ರೌಡಿ ಮೋರ್ಚಾ’ ಹೆಸರಲ್ಲಿ ವೆಬ್‌ಸೈಟ್ ತೆರೆದಿರುವ ಪ್ರತಿಪಕ್ಷ ಕಾಂಗ್ರೆಸ್‌ ಬಿಜೆಪಿಯ ಮೇಲೆ ವಿನೂತನವಾಗಿ ದಾಳಿ ನಡೆಸಿದೆ.

‘ಬಿಜೆಪಿರೌಡಿಮೋರ್ಚಾ.ಕಾಂ’ (www.bjprowdymorcha.com) ಎಂದು ವೈಬ್‌ಸೈಟ್ ತೆರೆಯಲಾಗಿದ್ದು, ಅದರಲ್ಲಿ ಕೆಲವು ರೌಡಿ ಶೀಟರ್‌ಗಳ ವಿವರಣೆ ಹಾಕಿ, “2023 ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ” ಎಂದು ಬರೆಯಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬಿಜೆಪಿಯ ಚಿಹ್ನೆಯಾದ ಕಮಲವನ್ನು ಎರಡು ಬದಿಯಲ್ಲಿ ತಲೆಕೆಳಗಾಗಿ ಚಿತ್ರಿಸಿರುವ ಲೋಗೋದೊಂದಿಗೆ ‘ಬಿಜೆಪಿ ರೌಡಿ ಮೋರ್ಚಾ’ ಎಂದು ದೊಡ್ಡದಾದ ಶೀರ್ಷಿಕೆ ನೀಡಿರುವುದನ್ನು ವೆಬ್‌ಸೈಟ್ ತೆರೆದ ತಕ್ಷಣ ಕಾಣಬಹುದು.

“ಚುನಾವಣೆ ಹತ್ತಿರ ಬರುತ್ತಿದೆ, ಜನರು ನಮ್ಮಿಂದ ದೂರ ಹೋಗುತ್ತಿದ್ದಾರೆ. ಆಪರೇಷನ್ ಕಮಲ ಮಾಡಿದರೂ ಗೆಲ್ಲುವುದು ಗ್ಯಾರಂಟಿ ಇಲ್ಲದ ಕಾರಣ ‘ಬಿಜೆಪಿ ರೌಡಿ ಮೋರ್ಚಾ’ ಸ್ಥಾಪಿಸುವುದಕ್ಕಾಗಿ ‘ಆಪರೇಷನ್ ರೌಡಿ ಶೀಟರ್‌’ ಪ್ರಾರಂಭಿಸಿದ್ದೇವೆ” ಎಂದು ನಂತರದಲ್ಲಿ ವಿವರಣೆ ನೀಡಲಾಗಿದೆ.

ಇದಾದ ಬಳಿಕ ‘2023 ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ’ ಎಂದು ಕೆಲವು ರೌಡಿಗಳ ಫೋಟೋದೊಂದಿಗೆ ಅವರ ಹೆಸರು ಹಾಗೂ ಸಾಧನೆಯನ್ನು ಬರೆಯಲಾಗಿದೆ. ಉದಾಹರಣೆಗೆ: ವಿಲ್ಸನ್‌ ಗಾರ್ಡನ್ ನಾಗ (ಸಾಧನೆಗಳು- ಕೊಲೆ ಕೇಸುಗಳು ಸೇರಿದಂತೆ ಹಲವು ಗ್ಯಾಂಗ್ ವಾರ್‌ಗಳಲ್ಲಿ ಭಾಗಿ), ಸಲೆಂಟ್ ಸುನೀಲ್‌ (ಸಾಧನೆಗಳು- ಪೊಲೀಸ್ ಪೇದೆ ಮರ್ಡರ್‌ ಕೇಸ್ ಸೇರಿದಂತೆ 17 ಕೊಲೆ, ದರೋಡೆ ಮತ್ತು ಸುಲಿಗೆ ಆರೋಪಗಳು), ಬೆತ್ತನಗೆರೆ ಶಂಕರ್‌ (ಸಾಧನೆಗಳು- ವಕೀಲರ ಡಬಲ್ ಮರ್ಡರ್‌ ಕೇಸ್ ಸೇರಿದಂತೆ ಹಲವಾರು ಕೊಲೆ, ಕಿಡ್ನಾಪ್ ಮತ್ತು ಸುಲಿಗೆ ಆರೋಪಗಳು), ಫೈಟರ್‌ ರವಿ (ಸಾಧನೆಗಳು- ಬೆಟ್ಟಿಂಗ್ ದಂಧೆಯಲ್ಲಿ ಪರಿಣಿತ, ರೌಡಿ ಶೀಟರ್‌ ಪೆರೇಡ್‌ನಲ್ಲಿ ಭಾಗಿ)- ಈ ರೀತಿಯಲ್ಲಿ ಬರೆದು ವ್ಯಂಗ್ಯ ಮಾಡಲಾಗಿದೆ.

ನಾರ್ವೆ ಸೋಮಶೇಖರ್‌, ರೌಡಿ ಶೀಟರ್‌ ಉಪ್ಪಿ, ಮಣಿಕಂಠ ರಾಥೋಡ್‌, ರಾಜೇಂದ್ರ, ಸಂಗಾತಿ ವೆಂಕಟೇಶ್‌ ಎಂಬವರ ಪೋಟೋಗಳನ್ನು ಪ್ರಕಟಿಸಿ, ಅವರ ಪರಿಚಯವನ್ನು ಮಾಡಲಾಗಿದೆ.

‘ನಮ್ಮ ಅಭ್ಯರ್ಥಿಗಳ ಅರ್ಹತೆಗಳು’ ಎಂಬ ವಿಭಾಗದಲ್ಲಿ “ಶಿಕ್ಷಣ ಮತ್ತು ಮನುಷ್ಯತ್ವದ ಕೊರತೆ, ಬಡವರ ರಕ್ತ ಹೀರುವ ಕಲೆಗಾರಿಕೆ, ಅಧಿಕಾರಕ್ಕಾಗಿ ಏನಾದರೂ ಮಾಡುವ ಮನಸ್ಥಿತಿ, ಅಪರಾಧ ಮಾಡಿರುವ ಅತ್ಯುತ್ತಮ ಟ್ರಾಕ್ ರೆಕಾರ್ಡ್” ಎಂದು ಬರೆಯಲಾಗಿದೆ.

ಇದನ್ನೂ ಓದಿರಿ: ಬೆಂಗಳೂರು ಸುತ್ತಮುತ್ತ ಚಿರತೆಗಳ ಪ್ರತ್ಯಕ್ಷ; ಮುಂಜಾಗ್ರತೆ ವಹಿಸಲು ಸೂಚನೆ

ರೌಡಿ ಶೀಟರ್‌ಗಳು ಬಿಜೆಪಿಗೆ ಸೇರುತ್ತಿದ್ದಾರೆಂಬ ವಿಚಾರಗಳಿಗೆ ಕೆಲವು ಬಿಜೆಪಿ ನಾಯಕರು ನೀಡಿರುವ ಪ್ರತಿಕ್ರಿಯೆಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಅವುಗಳು ಹೀಗಿವೆ: “ರಾಜಕೀಯದಲ್ಲಿ ಅಚಾತುರ್ಯ ಆಗುತ್ತೆ. ಎಲ್ಲವನ್ನೂ ಕ್ರಿಮಿನಲ್ ಕೇಸ್ ಎಂದು ಹೇಳಲು ಆಗಲ್ಲ- ನಳೀನ್‌ಕುಮಾರ್‌ ಕಟೀಲ್‌”, “ರೌಡಿ ಶೀಟರ್ ಪಟ್ಟಿಯಲ್ಲಿರುವವರನ್ನು ರೌಡಿಗಳೆಂದು ಕರೆಯುವುದು ಸಮಂಜಸವಿಲ್ಲ. ಯಾಕಂದ್ರೆ ನನ್ನ ಹೆಸರೂ ರೌಡಿಗಳ ಪಟ್ಟಿಯಲ್ಲಿತ್ತು- ಸಿ.ಟಿ.ರವಿ”, “ಪಕ್ಷಕ್ಕೆ ಸುಮಾರು ಜನ ಸೇರ್ತಾ ಇರ್ತಾರೆ. ನಾವು ಎಲ್ಲರ ಪೂರ್ವ-ಪರ ವಿಚಾರಿಸೋಕೆ ಆಗಲ್ಲ- ಪ್ರತಾಪ್ ಸಿಂಹ”.

ಬಿಜೆಪಿಗೆ ರೌಡಿ ಶೀಟರ್‌ಗಳು ಸೇರಿರುವ ಕುರಿತ ವಿಡಿಯೊ ಸುದ್ದಿಯನ್ನು ಕೊನೆಯಲ್ಲಿ ಲಗತ್ತಿಸಲಾಗಿದೆ. ಈ ವೆಬ್‌ಸೈಟ್ ಯಾರು ಮಾಡಿದ್ದಾರೆಂದು ಥಟ್ಟನೆ ಗೊತ್ತಾಗುವುದಿಲ್ಲ. ಆದರೆ ಕಾಂಗ್ರೆಸ್ ತೆರೆದಿರುವ “40ಪರ್ಸೆಂಟ್‌.ಕಾಂ” ವೆಬ್‌ಸೈಟ್‌ಗೂ ಈ ವೆಬ್‌ಸೈಟ್‌ಗೂ ಸಾಮ್ಯತೆ ಕಂಡು ಬರುತ್ತಿದೆ. ಜೊತೆಗೆ ಕೊನೆಯಲ್ಲಿ ಚಿಕ್ಕ ಅಕ್ಷರಗಳಲ್ಲಿ “ಹೆಚ್ಚಿನ ವಿವರಗಳಿಗೆ www.40percentsarkara.comಗೆ ಭೇಟಿ ನೀಡಿ (For more information about the candidates log into to www.40percentsarkara.com or dial  844 770 40 40)” ಎಂಬ ಸೂಚನೆಯನ್ನು ನೀಡಿರುವುದರಿಂದ ಇದು ಕಾಂಗ್ರೆಸ್ ಮಾಡಿರುವ ಜಾಲತಾಣವೆಂಬುದು ಸ್ಪಷ್ಟವಾಗುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...