Homeಮುಖಪುಟಶಾಲಾ ಶೌಚಾಲಯದಲ್ಲಿ ಸಿಸಿಟಿವಿ ಇಟ್ಟು ಶಿಕ್ಷಕಿಯರಿಗೆ ಬ್ಲಾಕ್‌ಮೇಲ್!

ಶಾಲಾ ಶೌಚಾಲಯದಲ್ಲಿ ಸಿಸಿಟಿವಿ ಇಟ್ಟು ಶಿಕ್ಷಕಿಯರಿಗೆ ಬ್ಲಾಕ್‌ಮೇಲ್!

ಸುಮಾರು 52ಕ್ಕೂ ಹೆಚ್ಚು ಶಿಕ್ಷಕಿಯರನ್ನು ಬ್ಲಾಕ್‌ಮೇಲ್‌ ಮಾಡಿ ಸಂಬಳ ನೀಡದೆ ಹಲವು ತಿಂಗಳು ದುಡಿಸಿಕೊಳ್ಳಲಾಗಿದೆ. ಶಿಕ್ಷಕಿಯರು ಸಂಬಳ ಕೇಳಿದಾಗ ಫೋಟೋ ಮತ್ತು ವಿಡಿಯೋಗಳನ್ನು ತೋರಿಸಿ, ಸಂಬಳ ಕೊಡದೆ ಶಾಲಾ ಆಡಳಿತ ಮಂಡಳಿಯೇ ಬ್ಲಾಕ್‌ಮೇಲ್‌ ಮಾಡಲಾಗುತ್ತಿತ್ತು.

- Advertisement -
- Advertisement -

ಶಾಲೆಯ ಮಹಿಳಾ ಶೌಚಾಲಯದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಶಿಕ್ಷಕಿಯರ ಖಾಸಗಿ ಚಿತ್ರಗಳನ್ನು ಚಿತ್ರಿಸಿ, ಶಾಲಾ ಆಡಳಿತ ಮಂಡಳಿಯೇ ಬ್ಲಾಕ್‌ಮೇಲ್ ಮಾಡಿರುವ ಭೀಕರ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.

ಶಾಲಾ ಮಂಡಳಿ, ಶಾಲೆಯ ಸುಮಾರು 52ಕ್ಕೂ ಹೆಚ್ಚು ಶಿಕ್ಷಕಿಯರನ್ನು ಬ್ಲಾಕ್‌ಮೇಲ್‌ ಮಾಡಿ ಸಂಬಳ ನೀಡದೆ, ಹಲವು ತಿಂಗಳು ದುಡಿಸಿಕೊಂಡಿದೆ. ಶಿಕ್ಷಕಿಯರು ಸಂಬಳ ಕೇಳಿದಾಗ ಫೋಟೋ ಮತ್ತು ವಿಡಿಯೋಗಳನ್ನು ತೋರಿಸಿ, ಸಂಬಳ ಕೊಡದೆ ಬ್ಲಾಕ್‌ಮೇಲ್‌ ಮಾಡಲಾಗುತ್ತಿತ್ತು.

“ಆಕ್ಷೇಪಾರ್ಹ ವೀಡಿಯೊಗಳು ಮತ್ತು ಚಿತ್ರಗಳೊಂದಿಗೆ ಬೆದರಿಕೆ ಹಾಕಿದ್ದಾರೆ” ಎಂದು ಹಲವು ತಿಂಗಳುಗಳ ಬಳಿಕ ಶಿಕ್ಷಕಿಯರು ಶಾಲಾ ಕಾರ್ಯದರ್ಶಿ ಮತ್ತು ಅವರ ಮಗನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕಾರ್ಯದರ್ಶಿ ಮತ್ತು ಅವರ ಮಗನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 (ಉದ್ದೇಶಪೂರ್ವಕ ಅವಮಾನ), 354 (ಎ) (ಲೈಂಗಿಕ ಕಿರುಕುಳ) ಮತ್ತು 354 (ಸಿ) (ವಾಯ್ಯುರಿಸಮ್) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ಇದನ್ನೂ ಓದಿ: ಭಾರತದ ಸಂಸ್ಕೃತಿಯೆಂದರೆ ಕೇವಲ ವೈದಿಕ ಸಂಸ್ಕೃತಿಯೇ?: ಭಾರತೀಯ ಸಂಸ್ಕೃತಿ ಅಧ್ಯಯನದ ಹಿಂದಿನ ಹುನ್ನಾರಗಳು

ಖಾಸಗಿ ಚಿತ್ರಗಳನ್ನು ಚಿತ್ರೀಕರಿಸಿ ಸಂಬಂಳ ಕೊಡದೆ ಬ್ಲಾಕ್‌ಮೇಲ್‌ ಮಾಡಲಾಗುತ್ತಿದೆ. ಮಾನಕ್ಕೆ ಅಂಜಿ ಹಲವು ತಿಂಗಳು ಉಚಿತವಾಗಿ ದುಡಿದಿದ್ದು, ತಮ್ಮ ಬಾಕಿ ಇರುವ ಸಂಬಳ ತಮಗೆ ಸಿಗುವಂತೆ ಸಹಾಯ ಮಾಡಬೇಕು ಎಂದು ಶಿಕ್ಷಕಿಯರು ಪೊಲೀಸರನ್ನು ಕೇಳಿದ್ದಾರೆ.

ಶಾಲಾ ಕಾರ್ಯದರ್ಶಿ ಲೈಂಗಿಕ ಕಿರುಕುಳ ಆರೋಪವನ್ನು ನಿರಾಕರಿಸಿದ್ದಾರೆ. “ಮಹಿಳಾ ಶೌಚಾಲಯದೊಳಗೆ ಯಾವುದೇ ಸಿಸಿಟಿವಿ ಇಲ್ಲ. ಆದರೆ ಅವುಗಳನ್ನು ಪುರುಷರ ಶೌಚಾಲಯದಲ್ಲಿ ಅಳವಡಿಸಲಾಗಿದೆ. ಕೆಲವು ಶಾಲೆಗಳಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣಗಳ ಹಿನ್ನೆಲೆಯಲ್ಲಿ ಇದನ್ನು ಮಾಡಲಾಗಿದೆ”  ಎಂದಿದ್ದಾರೆ.

ಜೊತೆಗೆ ಕಳೆದ ಕೆಲವು ತಿಂಗಳುಗಳಿಂದ ಕೊರೊನಾ ಕಾರಣದಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಹಿನ್ನೆಲೆ ಶಾಲೆಯು ಶಿಕ್ಷಕರಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಕಾರ್ಯದರ್ಶಿ ಒಪ್ಪಿಕೊಂಡರು.

ಸದ್ಯ ಕಾರ್ಯದರ್ಶಿ ಮತ್ತು ಅವರ ಮಗನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಪೊಲೀಸರಿಗೆ ನೆರವು ನೀಡಲು ವಿಧಿವಿಜ್ಞಾನ ವಿಭಾಗದ ಅಧಿಕಾರಿಗಳ ತಂಡವನ್ನು ರೂಪಿಸಲಾಗಿದೆ ಎಂದು ಸದರ್ ಬಜಾರ್ ಪೊಲೀಸ್ ಠಾಣೆ ಎಸ್‌ಎಚ್‌ಒ ವಿಜಯ್ ಗುಪ್ತಾ ತಿಳಿಸಿದ್ದಾರೆ.


ಇದನ್ನೂ ಓದಿ: ಬೀದಿಬದಿ ಮಲಗಿದ್ದ ನಿರ್ಗತಿಕ ಮಹಿಳೆಯ ಹತ್ಯೆ, ಅತ್ಯಾಚಾರ: ಹಾಸನದಲ್ಲೊಂದು ಅಮಾನುಷ ಕೃತ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...