Homeಕರೋನಾ ತಲ್ಲಣಹೊಸ ರೂಪಾಂತರಿ ವೈರಸ್‌ನ 153 ಪ್ರಕರಣ ದಾಖಲು: ಕೇಂದ್ರ ಆರೋಗ್ಯ ಸಚಿವ

ಹೊಸ ರೂಪಾಂತರಿ ವೈರಸ್‌ನ 153 ಪ್ರಕರಣ ದಾಖಲು: ಕೇಂದ್ರ ಆರೋಗ್ಯ ಸಚಿವ

ಬ್ರಿಟನ್‌ನಲ್ಲಿ ಪತ್ತೆಯಾದ ರೂಪಾಂತರಿ ಕೊರೊನಾ ವೈರಸ್‌ ಈಗ ಜಗತ್ತಿನ 70 ರಾಷ್ಟ್ರಗಳಲ್ಲಿ ಹರಡಿದ್ದು, ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ರೂಪಾಂತರಿ ವೈರಸ್‌‌ 31 ರಾಷ್ಟ್ರಗಳಲ್ಲಿ ಪತ್ತೆಯಾಗಿದೆ- WHO

- Advertisement -
- Advertisement -

“ಬ್ರಿಟನ್‌ನಲ್ಲಿ ಪತ್ತೆಯಾದ ರೂಪಾಂತರಿ ಕೊರೊನಾ ವೈರಸ್‌ ಈಗ ಜಗತ್ತಿನ 70 ರಾಷ್ಟ್ರಗಳಲ್ಲಿ ಹರಡಿದೆ” ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ಕಳವಳ ವ್ಯಕ್ತಪಡಿಸಿದ್ದು, ಈ ರೂಪಾಂತರಿ ವೈರಸ್ ತಳಿಯ 153 ಪ್ರಕರಣಗಳು ಭಾರತದಲ್ಲಿ ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

ಈ ಕುರಿತು ಹರ್ಷವರ್ಧನ್ ಅವರ ಹೇಳಿಕೆಯನ್ನು ವರದಿ ಮಾಡಿರುವ ಎಎನ್‌ಐ, “70 % ಕೊರೊನಾ ಪ್ರಕರಣಗಳು ಮಹಾರಾಷ್ಟ್ರ ಮತ್ತು ಕೇರಳದಲ್ಲಿ ವರದಿಯಾಗಿದೆ. ಭಾರತದಲ್ಲಿ ರೂಪಾಂತರಿ ವೈರಸ್‌ನ 153 ಪ್ರಕರಣಗಳು ವರದಿಯಾಗಿದೆ” ಎಂದು ಟ್ವೀಟ್ ಮಾಡಿದೆ.

ಬ್ರಿಟನ್‌ ರೀತಿಯೇ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ರೂಪಾಂತರಿ ವೈರಸ್‌, ಅತಿ ವೇಗವಾಗಿ ಹರಡಬಲ್ಲದಾಗಿದೆ. ಆ ವೈರಸ್‌ 31 ರಾಷ್ಟ್ರಗಳಲ್ಲಿ ಪತ್ತೆಯಾಗಿದೆ ಎಂದು WHO ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಜಗತ್ತಿನಾದ್ಯಂತ ಕೊರೊನಾದಿಂದಾಗಿ 20 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈಗಾಗಲೆ ಕೆಲವು ದೇಶಗಳು ಕೊರೊನಾ ವೈರಸ್‌ಗೆ ಲಸಿಕೆಯನ್ನು ಕಂಡುಹಿಡಿದಿವೆ. ಆದರೆ ಅವು ಇನ್ನೂ ಸಮರ್ಪಕವಾಗಿ ಪೂರಕವಾಗುತ್ತಿಲ್ಲ. ಹೀಗಿರುವಾಗ ಈ ಹೊಸ ರೂಪಾಂತರಿ ಕೊರನಾ ವೈರಸ್ ಮತ್ತೊಂದು ಆತಂಕವನ್ನು ಸೃಷ್ಟಿಸಿದ್ದು, ಇದು ಹರಡದಂತೆ ತಡೆಯುವುದು ಹೇಗೆ ಎಂಬುದು ಮತ್ತಷ್ಟು ಆತಂಕಕ್ಕೀಡು ಮಾಡಿದೆ.

ಇದನ್ನೂ ಓದಿ: ರೂಪಾಂತರಿ ವೈರಸ್‌ ಮೂಲ ವೈರಸ್‌ಗಿಂತ ಶೇ. 50-70 ರಷ್ಟು ವೇಗವಾಗಿ ಹರಡುತ್ತದೆ: WHO ಕಳವಳ

2020ರ ಡಿಸೆಂಬರ್‌ ಮಧ್ಯ ಭಾಗದಲ್ಲಿ ಬ್ರಿಟನ್‌ನಲ್ಲಿ ರೂಪಾಂತರಗೊಂಡ ವೈರಸ್‌ ಪತ್ತೆಯಾಗಿತ್ತು. ಇದು ಮೂಲ ಕೊರೊನಾ ವೈರಸ್‌ಗಿಂತ ಶೇ.50ರಿಂದ ಶೇ.70ರಷ್ಟು ಹೆಚ್ಚು ವೇಗವಾಗಿ ಹರಡುತ್ತದೆ ಎಂದು WHO ಅಭಿಪ್ರಾಯ ಪಟ್ಟಿದೆ.

ಎರಡೂ ರೀತಿಯ ರೂಪಾಂತರಗೊಂಡ ವೈರಸ್‌ ವೇಗವಾಗಿ ಹರಡಬಹುದಾಗಿದ್ದರೂ ಸಹ, ಅವು ಪ್ರಾಣಕ್ಕೆ ಹೆಚ್ಚು ಅಪಾಯಕಾರಿಯಾಗಬಹುದೆಂದು ಪರಿಗಣಿಸಿಲ್ಲ. ಈಗ ಅಭಿವೃದ್ಧಿಪಡಿಸಿರುವ ಲಸಿಕೆಯು ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಬಿ117 ವೈರಸ್‌ ತಡೆಯುವುದರಲ್ಲಿಯೂ ಪರಿಣಾಮಕಾರಿಯಾಗಿದೆ ಎಂದು ಫೈಝರ್‌ ಮತ್ತು ಜರ್ಮನಿಯ ಬಯೊ ಎನ್‌ಟೆಕ್‌ ಹೇಳಿವೆ.


ಇದನ್ನೂ ಓದಿ: ಬ್ರಿಟನ್ ಆಯ್ತು; ಈಗ ಜಪಾನ್‌ನಲ್ಲಿ ಮತ್ತೊಂದು ಹೊಸ ವೈರಸ್ ಪತ್ತೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...