ರಾಜ್ಯ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ‘ಪಿ.ಮಣಿವಣ್ಣನ್’ ರವರ ಏಕಾಏಕಿ ವರ್ಗಾವಣೆ ವಿರುದ್ಧ ಪ್ರತಿರೋಧ ಭುಗಿಲೆದ್ದಿದೆ. ಕಾರ್ಮಿಕ ಸಂಘಟನೆಗಳು ವರ್ಗಾವಣೆಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿರುವ ಬೆನ್ನಿಗೆ ಟ್ವಿಟ್ಟರ್‌ನಲ್ಲಿ ಮಣಿವಣ್ಣನ್‌ರವರನ್ನು ವಾಪಸ್ ಕರೆತನ್ನಿ #BringBackCaptain ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ.
ಪ್ರೀತಿಯ ಬಿ.ಎಸ್ ಯಡಿಯೂರಪ್ಪನವರೆ, ಶ್ರೀಮಂತ ಕೈಗಾರಿಕೋದ್ಯಮಿಗಳ ಒತ್ತಡಗಳಿಗೆ ನೀವು ಏಕೆ ಬಲಿಯಾಗುತ್ತೀರಿ? ರಾಜ್ಯದ ಅತ್ಯಂತ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯನ್ನೇಕೆ ಶಿಕ್ಷಿಸುತ್ತೀರಿ?
ಬಡವರ ಪರ ಕೆಲಸ ಮಾಡುವುದು ನಿಮ್ಮ ಸರ್ಕಾರದ ಅಡಿಯಲ್ಲಿ ಅಪರಾಧವೇ? ಯಾವುದೇ ಕಾರ್ಮಿಕನು ಹಸಿವಿನಿಂದ ಬಳಲಬಾರದು ಅಥವಾ ತನ್ನ ಕೆಲಸವನ್ನು ಕಳೆದುಕೊಳ್ಳಬಾರದೆಂದು ಮಣಿವಣ್ಣನ್‌ರವರು ಕೆಲಸ ಮಾಡಿದ್ದಾರೆ. ಅವರನ್ನು ವಾಪಸ್ ಕರೆತನ್ನಿ ಎಂಬ ಸಂದೇಶ ಕೂಡ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ.
Dear @BSYBJP why are u succumbing to the pressures of rich industrials and punish one of the most efficient and honest officer of the state.
Is it a crime under your govt to work for the poor?All he did was to ensure no labourer goes hungry or looses his job #BringBackCaptain pic.twitter.com/2AAfB7Ghbl
— Arjun (@arjundsage) May 12, 2020
ಇದೇ ಸಂದರ್ಭದಲ್ಲಿ ವರ್ಗಾವಣೆಯ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ಹಲವರು ಚರ್ಚೆ ನಡೆಸುತ್ತಿದ್ದಾರೆ.
ಮಣಿವಣ್ಣನ್‌ರವರ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಆನ್‌ಲೈನ್ ಪಿಟಿಷನ್ ಆರಂಭಿಸಿದ್ದು ಈಗಾಗಲೇ 2000 ಕ್ಕೂ ಹೆಚ್ಚು ಜನರು ಸಹಿ ಹಾಕುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಉದ್ಯಮಿಗಳ ಲಾಬಿಗೆ ಸರ್ಕಾರ ಮಣಿದಿದೆ: ಮಣಿವಣ್ಣನ್ ವರ್ಗಾವಣೆಗೆ ತೀವ್ರ ವಿರೋಧ