Homeಮುಖಪುಟಉಪ ಚುನಾವಣೆ: ಕಾಂಗ್ರೆಸ್, ಬಿಜೆಪಿ ತಲಾ 2, ಮತ್ತು ಆರ್‌ಎಲ್‌ಡಿ, ಬಿಜೆಡಿ ತಲಾ ಒಂದು ಕ್ಷೇತ್ರಗಳಲ್ಲಿ...

ಉಪ ಚುನಾವಣೆ: ಕಾಂಗ್ರೆಸ್, ಬಿಜೆಪಿ ತಲಾ 2, ಮತ್ತು ಆರ್‌ಎಲ್‌ಡಿ, ಬಿಜೆಡಿ ತಲಾ ಒಂದು ಕ್ಷೇತ್ರಗಳಲ್ಲಿ ಗೆಲುವು

ಸಮಾಜವಾದಿ ಪಕ್ಷದ ಅಭ್ಯರ್ಥಿ ಡಿಂಪಲ್ ಯಾದವ್ ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.  

- Advertisement -
- Advertisement -

ಐದು ರಾಜ್ಯಗಳಲ್ಲಿನ ಆರು ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರದಲ್ಲಿ ನಡೆದಿದ್ದ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಕೆಲವೆಡೆ ಫಲಿತಾಂಶ ಪ್ರಕಟವಾಗಿದೆ.

ಉತ್ತರ ಪ್ರದೇಶದ ರಾಮ್‌ಪುರ ಮತ್ತು ಖತೌಲಿ, ಒಡಿಶಾದ ಪದಂಪುರ, ರಾಜಸ್ಥಾನದ ಸರ್ದರ್ಶಹರ್, ಬಿಹಾರದ ಕುರ್ಹಾನಿ ಮತ್ತು ಛತ್ತೀಸ್‌ಗಢದ ಭಾನುಪ್ರತಾಪುರ್ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು.

ರಾಜಸ್ಥಾನದ ಸರ್ದರ್ಶಹರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯ ಸಾಧಿಸಿದ್ದಾರೆ.

ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಕುರ್ಹಾನಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದೆ.

ಉತ್ತರ ಪ್ರದೇಶದ ಖತೌಲಿ ಕ್ಷೆತ್ರದಲ್ಲಿ ಆರ್‌ಎಲ್‌ಡಿ ಪಕ್ಷದ ಅಭ್ಯರ್ಥಿ ಜಯಗಳಿಸಿದ್ದಾರೆ.

ಉತ್ತರ ಪ್ರದೇಶದ ರಾಂಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದಾರೆ.

ಛತ್ತೀಸ್‌ಗಢದ ಭಾನುಪ್ರತಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾವಿತ್ರಿ ಮನೋಜ್ ಮಾಂಡವಿ ಮುನ್ನಡೆ ಸಾಧಿಸಿದ್ದಾರೆ.

ಓರಿಸ್ಸಾದ ಪದಾಂಪುರ್ ಕ್ಷೇತ್ರದಲ್ಲಿ ಬಿಜೆಡಿ ಗೆಲುವು ಸಾಧಿಸಿದೆ.

ಮೈನ್ ಪುರಿ ಲೋಕಸಭಾ ಕ್ಷೇತ್ರ

ಸಮಾಜವಾದಿ ಪಕ್ಷದ ಅಭ್ಯರ್ಥಿ ಡಿಂಪಲ್ ಯಾದವ್ ಅವರು ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ಈ ಮೊದಲು ಸರ್ದರ್ಶಹರ್ ಮತ್ತು ಭಾನುಪ್ರತಾಪುರ್ ಕಾಂಗ್ರೆಸ್ ವಶದಲ್ಲಿದ್ದರೆ, ಖತೌಲಿಯಲ್ಲಿ ಬಿಜೆಪಿ ಮತ್ತು ರಾಂಪುರದಲ್ಲಿ ಎಸ್‌ಪಿ ಗೆದ್ದಿತ್ತು. ಪದಾಂಪುರ್ ಬಿಜೆಡಿಯಲ್ಲಿದ್ದು, ಕುರ್ಹಾನಿ ಆರ್‌ಜೆಡಿಯಲ್ಲಿತ್ತು.

ಇದನ್ನೂ ಓದಿ: ಭರ್ಜರಿ ಜಯ ಸಾಧಿಸಿದ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆ್ಯನಿಮೇಟೆಡ್ ವಿಡಿಯೋ ಹಂಚಿಕೆ: ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲು

0
ಕಾಂಗ್ರೆಸ್ ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲಿದೆ ಎಂಬ ಸಂದೇಶ ಸಾರುವ ಆ್ಯನಿಮೇಟೆಡ್ ವಿಡಿಯೋ ಪೋಸ್ಟ್ ಮಾಡಿರುವುದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ದ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ. ಮೇ 4,...