Homeಕರ್ನಾಟಕಸಿ.ಡಿ. ಪುರಾಣ: ಕರ್ನಾಟಕದ ವಿಕೃತ ರಾಜಕೀಯ 2.0: ಎ ನಾರಾಯಣ

ಸಿ.ಡಿ. ಪುರಾಣ: ಕರ್ನಾಟಕದ ವಿಕೃತ ರಾಜಕೀಯ 2.0: ಎ ನಾರಾಯಣ

- Advertisement -
- Advertisement -

ಇಡೀ ಪ್ರಪಂಚವನ್ನೇ ಒಂದು ಸಾಂಕ್ರಾಮಿಕ ಕಾಡುತಿದ್ದರೆ ಕರ್ನಾಟಕದಲ್ಲಿ ಕೊರೊನಾದ ಜತೆಗೆ ಸರಕಾರವೂ ತನ್ನದೇ ಆದ ರೀತಿಯಲ್ಲಿ ರೋಗಗ್ರಸ್ತವಾದಂತಿದೆ ಅಧಿಕಾರವಹಿಸಿಕೊಂಡಂದಿನಿಂದ ಇಂದಿನವರೆಗೆ ಒಂದು ಆರೋಗ್ಯಪೂರ್ಣ ಚುನಾಯಿತ ಸರ್ಕಾರದಂತೆ ಈ ಸರಕಾರ ಕಂಡುಬರಲೇ ಇಲ್ಲ. ಮೊದಲಿಗೆ ಆಪರೇಷನ್ ಕಮಲ ಎಂಬ ಅರ್ಬುದವನ್ನು ಆಶ್ರಯಿಸಿ ಸರಕಾರ ರಚಿಸಿದಾಗಲೇ ಈ ಸರಕಾರದ ಆರೋಗ್ಯದ ಬಗ್ಗೆ ಸಂಶಯ ಎದ್ದಿತ್ತು. ಈಗ ಊಹಿಸಿದ್ದಕ್ಕಿಂತ ಹೆಚ್ಚೇ ಆಪರೇಷನ್ ಕಮಲದ ಪರಿಣಾಮಗಳು ಸರಕಾರವನ್ನು ಕಾಡುತ್ತಿರುವಂತಿದೆ.

ಅಶ್ಲೀಲತೆಯೂ ನಿಗೂಢತೆಯೂ ಒಂದಕ್ಕಿಂತ ಒಂದು ಹೆಚ್ಚು ಎನ್ನುವ ರೀತಿಯಲ್ಲಿ ಬೆರೆಸಿಕೊಂಡು ಕರ್ನಾಟಕದ ಜನರನ್ನು ಸದ್ಯಕ್ಕೆ ರಂಜಿಸುತ್ತಿರುವ ಆಳುವ ಪಕ್ಷದ ಪ್ರಭಾವಿ ರಾಜಕಾರಣಿಯೊಬ್ಬರ ವಿವಾಹೇತರ ಖಾಸಗಿ ಕ್ಷಣಗಳ ದೃಶ್ಯಾವಳಿಗಳ ಸಿ.ಡಿ.ಯ ಮೂಲ ಇನ್ನೂ ರಹಸ್ಯವಾಗಿಯೇ ಉಳಿದಿದ್ದರೂ, ಆಪರೇಷನ್ ಕಮಲಕ್ಕೂ ಈ ಸಿ.ಡಿ.ಗೂ ಒಂದು ನಂಟು ಇದ್ದಂತೆ ಈ ತನಕದ ಬೆಳವಣಿಗೆಗಳು ಸೂಚಿಸುತ್ತವೆ. ಇನ್ನೂ ಇವೆ ಎನ್ನಲಾದ ಹಲವು ಸಚಿವರುಗಳನ್ನೂ, ಪ್ರಭಾವಿಗಳನ್ನೂ ಒಳಗೊಂಡ ಸಿ.ಡಿ.ಗಳಿಗೂ ಈ ನಂಟನ್ನು ವಿಸ್ತರಿಸಬಹುದು ಅನ್ನಿಸುತ್ತದೆ. ಒಂದೆಡೆ, ಜನಸಮೂಹಕ್ಕೆ ಕೊರೊನಾ ವೈರಸ್ಸು ಬಾಧಿಸುತಿದ್ದರೆ, ಇನ್ನೊಂದೆಡೆ ಸರಕಾರದ ಬಹುಭಾಗವನ್ನು ಆಪರೇಷನ್ ಕಮಲದ ಉತ್ತರಾರ್ಧದಲ್ಲಿ ಅದ್ಯಾವುದೋ ವಿಕೃತಿ (perversion) ಆವರಿಸಿದಂತಿದೆ.

ಭಾರತದಲ್ಲಿ ಸೋಂಕಿತರ ಚೇತರಿಕೆ ಪ್ರಮಾಣ 67.19% ಕ್ಕೆ ಏರಿಕೆ
PC: Google

ಕರ್ನಾಟಕದ ಈಗಿನ ಆಳುವ ಪಕ್ಷ 2008ರಲ್ಲಿ ಮೊದಲ ಬಾರಿಗೆ ಅಪೂರ್ಣ ಬಹುಮತ ಪಡೆದು ಸರ್ಕಾರ ರಚಿಸಿದ ಸಂದರ್ಭದಲ್ಲಿ ಆಪರೇಷನ್ ಕಮಲದ ಮೂಲಕ ಖರೀದಿಸಿದ ವಿರೋಧಿ ಬಣದ ಶಾಸಕರು ಕೊಟ್ಟದ್ದನ್ನು ಪಡೆದು ತೆಪ್ಪಗೆ ಇರುವ ಜಾಯಮಾನದವರಾಗಿದ್ದರು. ಆದಕಾರಣ ಆಪರೇಷನ್ ಕಮಲದ ಆ ಮೊದಲ ಆವೃತ್ತಿ ’ಯಶಸ್ವಿ’ ಎನ್ನುವಂತೆಯೇ ಆಗಿಹೋಯಿತು. ಈ ಬಾರಿ ಆಪರೇಷನ್ ಕಮಲದ ಮೂಲಕ ಆಳುವ ಪಕ್ಷಕ್ಕೆ ಖರೀದಿಸಲು ಸಿಕ್ಕಿದ್ದು ಹೋದ ಬಾರಿ ಸಿಕ್ಕಂತಹ ನೀರೊಳ್ಳೆ ಹಾವುಗಳಲ್ಲ. ಈ ಬಾರಿ ಬಲೆಗೆ ಬಿದ್ದದ್ದು ಘಟಸರ್ಪಗಳು. ಅವು ಕೊಟ್ಟದ್ದನ್ನು ಗಿಟ್ಟಿಸಿಕೊಂಡು ಸುಮ್ಮನಿರುವ ಜಾಯಮಾನದವುಗಳಲ್ಲ. ಅವು ಖಾತೆಗಾಗಿ ನಡೆಸಿದ ಚೌಕಾಸಿಯನ್ನು ನೆನಪಿಸಿಕೊಳ್ಳಿ. ಈಗಲೂ ಆಳುವ ಪಕ್ಷದ ಮೂಲ ಹಳೆಯ ತಲೆಗಳಿಗಿಂತ ಸರಕಾರದಲ್ಲಿ ಹೆಚ್ಚು ಮಿಂಚುತ್ತಿರುವುದು ಆಪರೇಷನ್ ಕಮಲದ ಮೂಲಕ ಖರೀದಿಯಾದ ಮುಖಗಳೇ.

ಆಪರೇಷನ್ ಕಮಲವನ್ನು ಈ ಬಾರಿ ನಿರ್ದೇಶಿಸದವರಿಗೆ ಇದೆಲ್ಲಾ ಮೊದಲೇ ಗೊತ್ತಿತ್ತು. ಅವರು ಬಹು ಚಾಣಾಕ್ಷರೇ ಇರಬೇಕು. ಅವರು ಬಹಳ ಮುಂದಾಲೋಚನೆಯಿಂದಲೇ ಕಾರ್ಯಪ್ರವೃತ್ತರಾಗಿದ್ದಾರೆ. ಬಲೆಗೆ ಬಿದ್ದ ಸರ್ಪಗಳ ಹಲ್ಲಿನ ಹರಿತವನ್ನೂ, ವಿಷದ ಚೀಲದ ಗಾತ್ರವನ್ನು ಅವರು ಪೂರ್ವಭಾವಿಯಾಗಿಯೇ ಲೆಕ್ಕಹಾಕಿ ಮುಂದೊಂದು ದಿನ ಭಾರಿಯಾಗಿ ಹೆಡೆ ಬಿಚ್ಚಿದರೆ ಏನೇನು ಮಾಡಬೇಕು ಅಂತ ಸರಿಯಾದ ಮುನ್ನೆಚ್ಚರಿಕೆ ವಹಿಸಿದ್ದಾರೆ. ಗುಟ್ಟಾಗಿ ಎಲ್ಲರ ಜುಟ್ಟನ್ನು ಕೈಗೆ ತೆಗೆದುಕೊಂಡೇ ಈ ಬಾರಿ ಆಪರೇಷನ್ ಕಮಲದ ದಾಳ ಉರುಳಿಸಿದ್ದಾರೆ. ಅದರ ಫಲವಾಗಿಯೇ ಈಗ ಆಪರೇಷನ್ ಕಮಲದ ಫಲಾನುಭವಿಗಳ ಕೊರಳಿಗೆ ಸಿ.ಡಿ.ಯ ಮಾಲೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸುತ್ತಿಕೊಂಡಿರುವುದು ಎನ್ನುವುದು ಜನರು ತಮ್ಮ ಸಾಮಾನ್ಯ ಜ್ಞಾನದಿಂದ ಹಾಕಿಕೊಂಡ ಲೆಕ್ಕಾಚಾರ.

ಈ ನಂಟಿಗೆ ಪುರಾವೆ ಇಲ್ಲ ಎನ್ನುವುದು ನಿಜ. ಆದರೆ, ಎಲ್ಲಾ ಪುರಾವೆಗಿಂತಲೂ ಜನರ ಸಾಮಾನ್ಯ ಜ್ಞಾನವನ್ನೇ ನಂಬಬೇಕಾದ ಕಾಲ ಇದು. ಈ ನಂಟಿಗೆ ಹಲವು ಆಯಾಮಗಳನ್ನು ಊಹಿಸಬಹುದು. ವಾಸ್ತವದಲ್ಲಿ, ಇದನ್ನೆಲ್ಲಾ ಆಪರೇಷನ್ ಕಮಲದ ನೇರ ರೂವಾರಿಗಳೇ ಮಾಡಿರಬೇಕಂತಲೂ ಇಲ್ಲ. ಆಪರೇಷನ್ ಕಮಲದ ಒಟ್ಟು ಯೋಜನೆ ಮತ್ತು ಆ ಮೂಲಕ ಈಗಿನ ಮುಖ್ಯಮಂತ್ರಿಗಳ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬರುವುದೇ ಇಷ್ಟವಿಲ್ಲದ ಆಳುವ ಪಕ್ಷದ ಯಾವುದೋ ಗುಂಪಿನವರೂ ಹೀಗೆ ಎಲ್ಲರ ಜುಟ್ಟನ್ನು ಸಿ.ಡಿ.ಯ ಮೂಲಕ ಹಿಡಿದುಕೊಳ್ಳುವ ಜಾಣತನ ತೋರಿರುವ ಸಾಧ್ಯತೆ ಇದೆ. ಯಾರೇ ಮಾಡಿರಲಿ, ಅವರು ಈ ಜಾಲದ ಒಂದು ತಂತು ವಿರೋಧ ಪಕ್ಷದ ಬುಡಕ್ಕೂ ತಗುಲಿಸಿ ಅವರನ್ನೂ ಇದರಲ್ಲಿ ಭಾಗೀದಾರರನ್ನಾಗಿ ಮಾಡಿದ ರಣತಂತ್ರವಂತೂ ಅದ್ಭುತ. ಆಪರೇಷನ್ ಕಮಲದ ವಿರುದ್ಧ ಸೇಡು ತೀರಿಸಿಕೊಳ್ಳಲೆಂದು ವಿರೋಧ ಪಕ್ಷದ ಯಾರದ್ದಾದರೂ ಕಡೆಯಿಂದಲೇ ಇಡೀ ನಾಟಕ ನಡೆದಿದ್ದರಂತೂ ಅದು ಇನ್ನೂ ಅದ್ಭುತ – ಯಾಕೆಂದರೆ ವಿರೋಧ ಪಕ್ಷಗಳಲ್ಲಿ ಚೈತನ್ಯವೇ ಉಡುಗಿಹೋಗಿದೆ ಎನ್ನುವ ಊಹೆ ಆ ಮೂಲಕ ಸುಳ್ಳಾದಂತೆ ಆಗುತ್ತದೆ. ಸದ್ಯಕ್ಕಂತೂ ನದಿ ಮೂಲ, ಋಷಿ ಮೂಲ ಇತ್ಯಾದಿಗಳಂತೆಯೇ ಈ ಸಿ.ಡಿ. ಮೂಲ ಕೂಡ ನಿಗೂಢ.

ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಮದ್ಯದ ಲಾಬಿ ಸರಕಾರಗಳನ್ನು ನಿಯಂತ್ರಿಸುತ್ತಿದ್ದ ಕತೆ ಕೇಳಿದ್ದೇವೆ, ಕ್ಯಾಪಿಟೇಷನ್ ಲಾಬಿ, ಟಿಂಬರ್ ಲಾಬಿ, ಗಣಿ ಲಾಬಿ ಸರಕಾರಗಳನ್ನು ನಿಯಂತ್ರಿಸುತ್ತಿದ್ದ ಕತೆ ಕೇಳಿದ್ದೇವೆ. ಆ ಲಾಬಿಗಳದ್ದೆಲ್ಲಾ ಹಳೆಯ ಕತೆ. ಇದು ಹೊಸ ಸ್ಟಾರ್ಟ್‌ಅಪ್ ಐಡಿಯಾಗಳ ಕಾಲ. ಯಾವ ಲಾಬಿಯೂ ಬೇಕಾಗಿಲ್ಲ. ಆಯಕಟ್ಟಿನ ಜಾಗದಲ್ಲಿ ಒಂದು ಕ್ಯಾಮರಾ ಇಟ್ಟುಬಿಟ್ಟು ಒಂದು ಸಿ.ಡಿ. ಸೃಷ್ಟಿಸಿಬಿಟ್ಟರೆ ಆರು ಕೋಟಿ ಜನ ಚುನಾಯಿಸಿದ ಸರ್ಕಾರವೊಂದನ್ನು ಬೆರಳ ತುದಿಯಲ್ಲಿ ಆಡಿಸಿಬಿಡಬಹುದು. ಹೋರಾಟಗಳ ಮೂಸೆಯಲ್ಲಿ ರೂಪುಗೊಂಡ ರಾಜಕೀಯ ಹುಲಿಗಳನ್ನು ಬಾಲ ಮುದುಡಿದ ಬೆಕ್ಕುಗಳನ್ನಾಗಿ ಮಾಡಿಬಿಡಬಹುದು. ಒಂದು ದಿನ ಸರಕಾರ ಉರುಳಿಸಿದವರನ್ನು ಮರುದಿನ ಪೊಲೀಸರ ಮುಂದೆ ದೈನೇಸಿ ನಿಲ್ಲುವಂತೆ ಮಾಡಬಹುದು. ಎಲೆಕ್ಟ್ರಾನಿಕ್ಸ್ ಟ್ಯಾಬ್ಲಾಯ್ಡ್‌ಗಳು (ಸುದ್ದಿವಾಹಿನಿ) ಎಲ್ಲವನ್ನೂ ಮರೆತು ಆಡಿದ್ದನ್ನೇ ಆಡುತ್ತಾ, ತೋರಿಸಿದ್ದನ್ನೇ ತೋರಿಸುತ್ತಾ ಜೊಲ್ಲು ಸುರಿಸುವಂತೆ ಮಾಡಬಹುದು.

ಇಲ್ಲಿ ಯಾವುದೇ ರೀತಿಯ ಊಹೆ, ಕಲ್ಪನೆ, ಸುಳ್ಳು ಸುದ್ದಿಯ ಪ್ರಶ್ನೆ ಇಲ್ಲ. ಆಳುವ ಪಕ್ಷದ ಜವಾಬ್ದಾರಿಯುತ ಶಾಸಕರುಗಳು ಕಾಲಕಾಲಕ್ಕೆ ನೀಡಿದ ಸಾರ್ವಜನಿಕ ಹೇಳಿಕೆಗಳನ್ನು ಮತ್ತು ನಮ್ಮ ಕಣ್ಣೆದುರಿಗೆ ನಡೆಯುತ್ತಿರುವ ವಿದ್ಯಮಾನಗಳನ್ನು ಒಟ್ಟಿಗಿಟ್ಟು ಪರಾಮರ್ಶಿಸಿದರೆ ತಿಳಿಯುವ ಕೆಲವು ಸತ್ಯಗಳು ಹೀಗಿವೆ: ಈ ರಾಜ್ಯದ ಮಂತ್ರಿಮಂಡಲದಲ್ಲಿ ಯಾರು ಸೇರುತ್ತಾರೆ, ಯಾರು ಸೇರುವುದಿಲ್ಲ ಎನ್ನುವುದರ ನಿರ್ಣಯವಾಗುವುದು ಯಾರೋ ಯಾರದೋ ಖಾಸಗಿ ಕ್ಷಣಗಳನ್ನೂ ಚಿತ್ರೀಕರಿಸಿ ಇಟ್ಟುಕೊಂಡಿರುವ ’ಸಿ.ಡಿ.’ಗಳ ಆಧಾರದಲ್ಲಿ. ಈ ರಾಜ್ಯದ ವಿಧಾನಮಂಡಲದ ಬಜೆಟ್ ಅಧಿವೇಶನದಲ್ಲಿ ಚರ್ಚೆಯಾಗುವುದೂ ಅಂತಹ ಸಿ.ಡಿ.ಗಳ ವಿಷಯ. ಈ ರಾಜ್ಯದ ಪತ್ರಿಕೆಗಳ ಮುಖಪುಟಗಳನ್ನು ಮತ್ತು ಎಲೆಕ್ಟ್ರಾನಿಕ್ಸ್ ಟ್ಯಾಬ್ಲಾಯ್ಡ್‌ಗಳ ಪ್ರೈಮ್ ಟೈಮ್‌ಅನ್ನು ಆವರಿಸಿಕೊಳ್ಳುತ್ತಿರುವುದು ಅಂತಹ ಸಿ.ಡಿ.ಗಳಲ್ಲಿ ಹುದುಗಿಕೊಂಡಿರುವ ವರ್ಣರಂಜಿತ ದೃಶ್ಯಾವಳಿಗಳ-ಅವುಗಳ ಹಿಂದಿನ ಕಾಣದ ಕೈಗಳ ವಿಚಾರ.

pe

ತನಿಖೆ ನಡೆಸಲು ಸಾವಿರಗಟ್ಟಲೆ ಪ್ರಕರಣಗಳು ರಾಶಿ ಬಿದ್ದಿರುವಾಗ ಈ ರಾಜ್ಯದ ಪೊಲೀಸರು ತಮ್ಮ ಅಮೂಲ್ಯ ಸಮಯವನ್ನು ಬಳಸುವುದು ಈ ರೀತಿಯ ಸಿ.ಡಿ.ಗಳ ಪಾತ್ರಧಾರಿಗಳ, ಸೂತ್ರಧಾರಿಗಳ ಅಸಲೀಯತ್ತತೆಯನ್ನು ಪತ್ತೆ ಹಚ್ಚುವುದಕ್ಕೋಸ್ಕರ. ಈ ರಾಜ್ಯದ ವಿರೋಧ ಪಕ್ಷಗಳು ಸರಕಾರದ ವಿರುದ್ಧ ಹೋರಾಟ ನಡೆಸಲು ಆದ್ಯತೆಯ ಮೇಲೆ ಆಯ್ದುಕೊಳ್ಳುವುದು ಇಂತಹ ಸಿ.ಡಿ. ಸುತ್ತ ಎದ್ದಿರುವ ಪ್ರಶ್ನೆಗಳನ್ನು. ಈ ರಾಜ್ಯದಲ್ಲಿ ಸಾಮಾಜಿಕ ಕಾರ್ಯಕರ್ತರು ಕಂಡುಕೊಂಡ ಹೊಸ ಸಮಾಜ ಸೇವೆ ಎಂದರೆ ಅದು ಇಂತಹ ಸಿ.ಡಿ.ಗಳ ಸಂಗ್ರಹ ಮತ್ತು ಪ್ರದರ್ಶನ. ಸಿ.ಡಿ. ಪ್ರಕರಣಗಳಲ್ಲಿ ಸಿಲುಕಿದವರನ್ನು-ಸಿಲುಕಿಸಿದವರನ್ನು ಒಟ್ಟುಸೇರಿಸಿ ಸಂಧಾನ ನಡೆಸುವುದು ಈ ರಾಜ್ಯದ ಕೆಲವು ಸ್ವಾಮೀಜಿಗಳು ಮಾಡುವ ಹೊಸ ಆಧ್ಯಾತ್ಮ ಅನುಷ್ಠಾನ.

ರಾಜಕೀಯ ನಾಟಕ ಯಾವತ್ತಿಗೂ ಅಸಂಗತವೇ. ಆದರೆ ನಾವೀಗ ಕಾಣುತ್ತಿರುವುದು ಅಸಂಗತತೆಯ ಅಪರಾವತಾರವನ್ನು. ಅದನ್ನೂ ದಾಟಿದ ಮನೋವಿಕೃತಿಯಾಟಗಳನ್ನು. ಕೊರೊನಾಕ್ಕೆ ಆದರೂ ಲಸಿಕೆ ಬಂದಿದೆ. ಆದರೆ ಈ ಎಲ್ಲಾ ವಿಕೃತಿಗಳಿಗೆ ಲಸಿಕೆ ಎಲ್ಲಿದೆ?


ಇದನ್ನೂ ಓದಿ: ಸಿಡಿ ಹಗರಣ: SIT ನಿಷ್ಪಕ್ಷಪಾತ ತನಿಖೆ ಅನುಮಾನವೆಂದು ಗೃಹಮಂತ್ರಿಗಳಿಗೆ ಪತ್ರ ಬರೆದ ನಾವೆದ್ದು ನಿಲ್ಲದಿದ್ದರೇ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...