Homeಮುಖಪುಟಕಾರ್‌ ಪಾರ್ಕಿಂಗ್ ಮಾಡೋಕೆ ಕಷ್ಟ ಕಷ್ಟಪಡ್ತಿದ್ದೀರಾ..ಇಲ್ಲೋಮ್ಮೆ ನೋಡಿ..!

ಕಾರ್‌ ಪಾರ್ಕಿಂಗ್ ಮಾಡೋಕೆ ಕಷ್ಟ ಕಷ್ಟಪಡ್ತಿದ್ದೀರಾ..ಇಲ್ಲೋಮ್ಮೆ ನೋಡಿ..!

ಪಾರ್ಕಿಂಗ್ ವಿಡಿಯೋ ಮಾಡಿರುವುದು, ಚಾಲಕ ಬಿಜು ಪತ್ನಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ, ಒಂದು ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ.

- Advertisement -
- Advertisement -

ಸಾಮಾನ್ಯವಾಗಿ ದೊಡ್ಡ ಕಾರ್‌ಗಳನ್ನು ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸೋದೆ ಕಷ್ಟ. ಅದರಲ್ಲೂ ಕಿರಿದಾದ ಸ್ಥಳ ಅಂದ್ರೆ ಇನ್ನೂ ಕಷ್ಟ. ಆದರೆ ಇಲ್ಲೊಬ್ಬ ವ್ಯಕ್ತಿ ಪಾರ್ಕಿಂಗ್ ಕೌಶಲ್ಯದಿಂದ ಜನರ ಮನಸ್ಸು ಗೆದ್ದಿದ್ದಾನೆ. ಇತನ ಕೌಶಲ್ಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ ಮತ್ತು ಸಾವಿರಾರು ವೀಕ್ಷಕರನ್ನು ಆಕರ್ಷಿಸಿದೆ.

ಕಾರು ಚಾಲಕನನ್ನು ಕೇರಳದ ಮನಂತವಾಡಿ ಮೂಲದ ಪಿಜೆ ಬಿಜು ಎಂದು ಗುರುತಿಸಲಾಗಿದೆ. ವಿಡಿಯೋ ಮಾಡಿರುವುದು, ಚಾಲಕ ಬಿಜು ಪತ್ನಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ, ಒಂದು ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ.

ವೀಡಿಯೊದಲ್ಲಿ, ಅವರು ಬಿಳಿ ಇನ್ನೋವಾವನ್ನು ಕಿರಿದಾದ ಸ್ಥಳದಲ್ಲಿ ನಿಲ್ಲಿಸುವಲ್ಲಿ ಯಶಸ್ವಿಯಾಗುತ್ತಾರೆ. ಜೊತೆಗೆ ಅಲ್ಲಿಂದ ಅಷ್ಟು ಕಿರಿದಾದ ಸ್ಥಳದಿಂದ ಕಾರನ್ನು ಹೊರ ತೆಗೆದು ಚಾಕಚಕ್ಯತೆ ಪ್ರದರ್ಶಿಸಿದ್ದಾರೆ.

ಇದನ್ನೂ ಓದಿ: ಬಿಹಾರ ಚುನಾವಣೆವರೆಗೂ ಮುಂದುವರೆಯಲಿದೆ ಸುಶಾಂತ್ ಸಿಂಗ್- ಕಂಗನಾ ವಿವಾದಗಳು

ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವ್ಯಕ್ತಿ “ಆ ಮಲಯಾಳಿ ಚಾಲಕ ನಿಮಗಾಗಿ, ಅವರ ಕೌಶಲ್ಯ ಮತ್ತು ಆತ್ಮವಿಶ್ವಾಸಕ್ಕೆ ನಮಸ್ಕರಿಸಿ!” ಎಂದಿದ್ದಾರೆ.

ಹಲವು ಮಂದಿ ಟ್ವಿಟ್ಟರ್ ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋವನ್ನು ಹಂಚಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಚಾಲಕ ಬಿಜು “ಇದು ನನ್ನ ಸ್ನೇಹಿತನ ಕಾರು ಮತ್ತು ಅದರ ಮೇಲೆ ಕೆಲವು ಬಣ್ಣದ ಕೆಲಸಗಳನ್ನು ಮಾಡಬೇಕಾಗಿತ್ತು. ಆದ್ದರಿಂದ ಭಾನುವಾರ ನಾನು ಅದನ್ನು ಸರಿಪಡಿಸಲು ಕರೆದೊಯ್ಯಿದ್ದೆ. ನನ್ನ ಹೆಂಡತಿ ನಾನು ಪಾರ್ಕಿಂಗ್ ಮಾಡುವ ವಿಡಿಯೋವನ್ನು ಚಿತ್ರಿಕರಿಸಿದ್ದಾರೆ.  ವೀಡಿಯೊವನ್ನು ಅವಳು ಮಾಡಿದ್ದಾಳೆಂದು ನನಗೆ ತಿಳಿದಿರಲಿಲ್ಲ. ಅದು ವೈರಲ್ ಆದಾಗ ಮಾತ್ರ ನಾನು ಅದರ ಬಗ್ಗೆ ತಿಳಿದುಕೊಂಡೆ” ಎಂದು ಬಿಜು ಸ್ಥಳೀಯ ಚಾನೆಲ್‌ಗೆ ತಿಳಿಸಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

“ನಾನು ಅನೇಕ ವರ್ಷಗಳಿಂದ ಎರ್ನಾಕುಲಂ – ಕಣ್ಣೂರು ಮಾರ್ಗದಲ್ಲಿ ಬಸ್ಸುಗಳನ್ನು ಓಡಿಸುತ್ತಿದ್ದೇನೆ. ಆ ವಾಹನಗಳು 12.5 ಮೀಟರ್ ಉದ್ದವಿರುತ್ತವೆ. ಆದ್ದರಿಂದ ಇನ್ನೋವಾ ಉದ್ದವು ನನಗೆ ಎಂದಿಗೂ ಹೆಚ್ಚು ತೊಂದರೆಯಾಗಿಲ್ಲ. ಯಾವುದೇ ಕಾರು ಇರಲಿ, ನಮ್ಮ ವಾಹನದ ಗಾತ್ರದ ಮಾನಸಿಕ ಚಿತ್ರ ನಮ್ಮಲ್ಲಿ ಮೂಡಿರುತ್ತದೆ” ಎಂದು ಬಿಜು ಹೇಳುತ್ತಾರೆ.


ಇದನ್ನೂ ಓದಿ: ಸಂಸತ್ತಿನ ಮಾನ್ಸೂನ್ ಅಧಿವೇಶನ: ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದ ಕೇಂದ್ರ !

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...