Homeಮುಖಪುಟಮೂರು ಕ್ರಿಮಿನಲ್​ ಕಾನೂನು ವಿಧೇಯಕಗಳನ್ನು ಹಿಂಪಡೆದ ಕೇಂದ್ರ ಸರ್ಕಾರ

ಮೂರು ಕ್ರಿಮಿನಲ್​ ಕಾನೂನು ವಿಧೇಯಕಗಳನ್ನು ಹಿಂಪಡೆದ ಕೇಂದ್ರ ಸರ್ಕಾರ

- Advertisement -
- Advertisement -

ಕಳೆದ ಆಗಸ್ಟ್‌ನಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗಿದ್ದ ಮೂರು ಹೊಸ ಕ್ರಿಮಿನಲ್ ಕಾನೂನು ಮಸೂದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಕೆಲ ತಿದ್ದುಪಡಿಗಳನ್ನು ಮಾಡಿ ಮತ್ತೆ ಮಂಡಿಸುವುದಾಗಿ ತಿಳಿಸಿದೆ.

ಈ ವಿಧೇಯಕಗಳನ್ನು ಆಗಸ್ಟ್ 18 ರಂದು ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಪರಿಗಣನೆಗೆ ಕಳುಹಿಸಲಾಗಿತ್ತು. ಸಂಸದೀಯ ಸಮಿತಿಯ ಕೆಲವು ಶಿಫಾರಸುಗಳನ್ನು ಸೇರಿಸುವ ಸಲುವಾಗಿ ಮಸೂದೆಗಳನ್ನು ಹಿಂಪಡೆಯಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಗೆ ತಿಳಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತಾ ಮಸೂದೆ, ಭಾರತೀಯ ಸಾಕ್ಷಿ ಅಧಿನಿಯಮ್ ಮಸೂದೆ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮಸೂದೆಗಳನ್ನು ಹಿಂಪಡೆಯಲಾಗಿದೆ. ಈ ಮಸೂದೆಗಳು ಕ್ರಮವಾಗಿ ಭಾರತೀಯ ದಂಡ ಸಂಹಿತೆ, ಭಾರತೀಯ ಸಾಕ್ಷ್ಯ ಕಾಯ್ದೆ ಮತ್ತು ಕ್ರಿಮಿನಲ್ ಪ್ರೊಸೀಜರ್ ಕೋಡ್ ಅನ್ನು ಬದಲಿಸುವ ಉದ್ದೇಶಿ ಹೊಂದಿವೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಬಿಜೆಪಿ ಸಂಸದ ಬ್ರಿಜ್ ಲಾಲ್ ನೇತೃತ್ವದ ಸಂಸದೀಯ ಸಮಿತಿಯು, ಸರ್ಕಾರವು ಮೂರು ಮಸೂದೆಗಳಲ್ಲಿ ‘ಮಾನಸಿಕ ಕಾಯಿಲೆ’ ಬದಲಿಗೆ ‘ಅಸ್ವಸ್ಥ ಮನಸ್ಸು’ ಎಂಬ ಪದವನ್ನು ಮರಳಿ ತರಬೇಕು ಎಂದು ಹೇಳಿದೆ. ಈ ಸಂಹಿತೆಯಲ್ಲಿನ ‘ಮಾನಸಿಕ ಕಾಯಿಲೆ’ ಎಂಬ ಪದವು ಎಲ್ಲಿ ಸಂಭವಿಸಿದರೂ ಅದನ್ನು ‘ಅಸ್ವಸ್ಥ ಮನಸ್ಸು’ ಎಂದು ಬದಲಾಯಿಸಬಹುದು ಎಂದು ಸಮಿತಿಯು ಶಿಫಾರಸು ಮಾಡಿದೆ ಎಂದು ತಿಳಿದು ಬಂದಿದೆ.

ಕ್ರಿಮಿನಲ್ ವ್ಯಾಪ್ತಿಗೆ ಸಲಿಂಗಕಾಮ ಮತ್ತು ಸೆಕ್ಸ್‌ ವರ್ಕ್‌ ಅನ್ನು ಸೇರಿಸುವಂತೆ ಸಂಸದೀಯ ಸಮಿತಿ ಸಲಹೆ ನೀಡಿತ್ತು. ಆದರೆ, ಅದನ್ನು ಸರ್ಕಾರ ತಿರಸ್ಕರಿಸಿದೆ.

ಹೊಸ ಮಸೂದೆಗಳು ಮತ್ತು ಅವು ಭಾರತದ ನ್ಯಾಯ ವ್ಯವಸ್ಥೆಯಲ್ಲಿ ತರುವ ಬದಲಾವಣೆಗಳ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ದಿ ವೈರ್‌ಗೆ ಬರೆದ ಲೇಖನದಲ್ಲಿ ವಕೀಲ ಮತ್ತು ಕಾನೂನು ಶಿಕ್ಷಣ ತಜ್ಞ ಜಿ. ಮೋಹನ್ ಗೋಪಾಲ್ ಅವರು, “2023 ಆಗಸ್ಟ್‌ನಲ್ಲಿ ಸಂಸತ್ತಿನಲ್ಲಿ ಮಂಡಿಸಲಾದ ಮೂರು ಮಸೂದೆಗಳಲ್ಲಿ ಕ್ರಿಮಿನಲ್ ಕಾನೂನಿಗೆ ಹನ್ನೆರಡು ಬದಲಾವಣೆಗಳು ತರುವುದು ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ನೀಡಲಿದೆ. ಭಿನ್ನಾಭಿಪ್ರಾಯ ಮತ್ತು ವಿರೋಧವನ್ನು ಇದು ಹತ್ತಿಕ್ಕಲಿದೆ. ಸಾರ್ವಜನಿಕ ಭಾಷಣಕ್ಕೆ ಅಡ್ಡಿಯಾಗಲಿದೆ. ಸಂಘರ್ಷದ ಸುದ್ದಿಗಳನ್ನು ಜನರಿಗೆ ತಿಳಿಸುವ ಸುದ್ದಿ ವಾಹಿನಿಗಳ ಉಸಿರುಗಟ್ಟಿಸಲಿವೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಕ್ರಿಮಿನಲ್ ವ್ಯಾಪ್ತಿಗೆ ಸಲಿಂಗಕಾಮ, ಸೆಕ್ಸ್‌ ವರ್ಕ್‌? ಸಂಸದೀಯ ಸಮಿತಿ ಸಲಹೆ ತಿರಸ್ಕರಿಸಿದ ಪಿಎಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಬದಲಿಗೆ ಮಗನಿಗೆ ಟಿಕೆಟ್ ಕೊಟ್ಟ ಬಿಜೆಪಿ

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಉತ್ತರ ಪ್ರದೇಶದ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೈಬಿಟ್ಟು, ಪುತ್ರ ಕರಣ್ ಭೂಷಣ್ ಸಿಂಗ್‌ಗೆ...